For Quick Alerts
ALLOW NOTIFICATIONS  
For Daily Alerts

ಮೂಳೆಗಳು ಗಟ್ಟಿಮುಟ್ಟಾಗಿರಲು 8 ಟಿಪ್ಸ್

|

ಈಗೆಲ್ಲಾ ವಯಸ್ಸು 30 ದಾಟಿದರೆ ಸಾಕು ಬೆನ್ನು ನೋವು, ಸೊಂಟ ನೋವು, ಮೊಣ ಕೈ ನೋವು, ಮೊಣ ಕಾಲು ನೋವು ಹೀಗೆ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಇವಕ್ಕೆಲ್ಲಾ ಮುಖ್ಯ ಕಾರಣ ಜೀವನಶೈಲಿ ಹಾಗೂ ಆಹಾರಕ್ರಮ.

ಆದರೆ ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ. ಮೂಳೆಗಳು ಗಟ್ಟಿಮುಟ್ಟಾಗಿ ಇದ್ದರೆ ಮಾತ್ರ ದೇಹ ಗಟ್ಟಿಮುಟ್ಟಗಿರಲು ಸಾಧ್ಯ. ದೇಹದಲ್ಲಿ ಕ್ಯಾಲ್ಷಿಯಂ ಖನಿಜಗಳ ಅಂಶ ಕಡಿಮೆಯಾಗುವುದೂ ಸಹ ಈ ಸಮಸ್ಯೆಗೆ ಕಾರಣವಾಗಿದೆ. ಕೇವಲ ಔಷಧಿಗಳಿಂದ ಈ ಸಮಸ್ಯೆಗಳನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದರೆ ನಿಯಮಿತ ವ್ಯಾಯಾಮ ಹಾಗೂ ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಪೌಷ್ಟಿಕ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು..

ಅದರಲ್ಲೂ ಮಹಿಳೆಯರಿಗೆ ಹೆರಿಗೆಯ ನಂತರ ಸ್ವಲ್ಪ ಅಧಿಕ ಕ್ಯಾಲ್ಸಿಯಂ ಬೇಕಾಗುತ್ತದೆ. ಮುಟ್ಟು ನಿಂತ ನಂತರ ಬೆನ್ನು ನೋವು, ಸೊಂಟ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಈ ರೀತಿ ಮೂಳೆ ಸಮಸ್ಯೆ ಬರುವುದನ್ನು ತಪ್ಪಿಸಬಹುದು. ಮುನ್ನೆಚ್ಚರಿಕೆಯ ಕ್ರಮಗಳೆಂದರೆ ಪ್ರತಿದಿನ ನಡೆಯುವ ವ್ಯಾಯಾಮ, ಈಜುವುದು, ಯೋಗ, ಕ್ಯಾಲ್ಸಿಯಂ ಇರುವ ಆಹಾರಗಳ ಸೇವನೆ ಮಾಡಿದರೆ ಮೂಳೆಗಳು ಸವೆಯುವುದನ್ನು ತಪ್ಪಿಸಬಹುದು.

ಮೂಳೆಗಳ ಆರೋಗ್ಯ ಕಾಪಾಡಲು ಕೆಲವೊಂದು ಸರಳವಾದ ಸೂಪರ್ ಟಿಪ್ಸ್ ಇಲ್ಲಿ ನೀಡಲಾಗಿದೆ ನೋಡಿ:

1. ಗಾಢ ಹಸಿರು ಬಣ್ಣದ ತರಕಾರಿ:

1. ಗಾಢ ಹಸಿರು ಬಣ್ಣದ ತರಕಾರಿ:

ಗಾಢ ಹಸಿರು ಬಣ್ಣದ ತರಕಾರಿ ಹಾಗೂ ಸೊಪ್ಪು: ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶವಿರುವುದರಿಂದ ಇವುಗಳನ್ನು ಪ್ರತಿನಿತ್ಯದ ಆಹಾರಕ್ರಮದಲ್ಲಿ ಸೇರಿಸಿದರೆ ಮೂಳೆಯ ಆರೋಗ್ಯ ಹೆಚ್ಚಿಸಿಕೊಳ್ಳಬಹುದು.

2. ಈರುಳ್ಳಿ:

2. ಈರುಳ್ಳಿ:

ಮೂಳೆಗಳ ಆರೋಗ್ಯಕ್ಕೆ ಸಲ್ಫರ್ ಕೂಡ ಅವಶ್ಯಕ. ಈ ಸಲ್ಫರ್ ಅಂಶ ಈರುಳ್ಳಿ ಹಾಗೂ ಬೆಳ್ಳುಳ್ಳಿಯಲ್ಲಿ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3. ತಂಪು ಪಾನೀಯಗಳು:

3. ತಂಪು ಪಾನೀಯಗಳು:

ತಂಪು ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಅಲ್ಲದೆ ಇದನ್ನು ಹೆಚ್ಚಾಗಿ ಕುಡಿಯುತ್ತಿದ್ದರೆ ಈ ಪಾನೀಯಾದಲ್ಲಿರುವ ರಾಸಾಯನಿಕಗಳು ಮೂಳೆಯ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಅಧಿಕ ಕೊಬ್ಬಿನಂಶವಿರುವ ಆಹಾರ:

ಅಧಿಕ ಕೊಬ್ಬಿನಂಶವಿರುವ ಆಹಾರ:

ಅಧಿಕ ಕೊಬ್ಬಿನಂಶವಿರುವ ಮಾಂಸಾಹಾರದಲ್ಲಿ ಪ್ರೊಟೀನ್ ಅಧಿಕವಿರುತ್ತದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡಿ ಮೂಳೆಯ ಆರೋಗ್ಯವನ್ನು ಕಡಿಮೆ ಮಾಡುತ್ತದೆ.

5. ಹಾಲು:

5. ಹಾಲು:

ಹಾಲಿನಲ್ಲಿ ಪೊಟಾಷ್ಯಿಯಂ, ರಂಜಕ ಹಾಗೂ ಕ್ಯಾಲ್ಸಿಯಂ ಇದೆ. ಈ ಅಂಶಗಳು ಮೂಳೆಯ ಆರೋಗ್ಯಕ್ಕೆ ತುಂಬಾ ಅವಶ್ಯಕ. ಆದ್ದರಿಂದ ದಿನದಲ್ಲಿ ಒಂದು ಲೋಟ ಹಾಲು ಕುಡಿಯುವುದು ಒಳ್ಳೆಯದು.

6. ದೇಹದ ತೂಕ ಕಡಿಮೆ ಮಾಡುವುದು

6. ದೇಹದ ತೂಕ ಕಡಿಮೆ ಮಾಡುವುದು

ದೇಹದ ತೂಕ ಹೆಚ್ಚಾದರೆ ಮಂಡಿ ನೋವು ಕಾಣಿಸಿಕೊಳ್ಳುವುದು. ಆದ್ದರಿಂದ ವ್ಯಾಯಾಮ ಮಾಡಿ ಸಮತೂಕದಲ್ಲಿದ್ದರೆ ಕಾಯಿಲೆಗಳು ದೂರವಾಗುತ್ತವೆ.

7. ಫಿಶ್ ಆಯಿಲ್:

7. ಫಿಶ್ ಆಯಿಲ್:

ಮೂಳೆಯ ಆರೋಗ್ಯಕ್ಕೆ ಫಿಶ್ ಆಯಿಲ್ ತುಂಬಾ ಒಳ್ಳೆಯದು. ಈ ರೀತಿಯ ಮಾತ್ರೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ.

8. ಫುಟ್ ಬಾಲ್:

8. ಫುಟ್ ಬಾಲ್:

ಫುಟ್ ಬಾಲ್ ಆಡಿದಾಗ ಸ್ನಾಯುಗಳು ಬಲವಾಗುತ್ತದೆ ಹಾಗೂ ದೇಹದ ಆರೋಗ್ಯ ಹೆಚ್ಚಾಗುವುದು. ಈ ಆಟವನ್ನು ಚಿಕ್ಕ ವಯಸ್ಸಿನಿಂದಲೇ ಆಡುತ್ತಾ ಬಂದವರಿಗೆ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವ ಸಾಧ್ಯತೆ ಕಡಿಮೆ.

English summary

Top 10 Tips For Strong Bones | Tips For Health | ಮೂಳೆ ಬಲಪಡಿಸಲು 10 ಟಿಪ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you want stronger body your bone should be strong. So with a daily intake of calcium through in the diet you can improve your bone health.
X
Desktop Bottom Promotion