For Quick Alerts
ALLOW NOTIFICATIONS  
For Daily Alerts

ಈ ಸಮಸ್ಯೆಗಳಿದ್ದರೆ ಹಾಲು ಕುಡಿಯಬಾರದು!

|

ಪ್ರತಿದಿನ ಒಂದು ಅಥವಾ ಎರಡು ಗ್ಲಾಸ್ ಹಾಲು ಕುಡಿಯುವುದು ಒಳ್ಳೆಯದು. ಆದರೆ ಹಾಲನ್ನು ಕುಡಿದಾಗ ಅಸಿಡಿಟಿ, ಗ್ಯಾಸ್ಟ್ರಿಕ್, ಮಲಬದ್ಧತೆ ಈ ರೀತಿಯ ಸಮಸ್ಯೆ ಇರುವವರಿಗೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಲನ್ನು ಯಾರೆಲ್ಲ ಕುಡಿಯಬಾರದು ಹಾಗೂ ಹಾಲು ಕುಡಿದರೆ ಉಂಟಾಗುವ ಆರೋಗ್ಯದ ಸಮಸ್ಯೆಗಳೇನು ಎಂದು ತಿಳಿಯಲು ಮುಂದೆ ಓದಿ.

ಅಸಿಡಿಟಿ: ಹಾಲನ್ನು ಬರೀ ಹೊಟ್ಟೆಯಲ್ಲಿ ಕುಡಿಯಬಾರದು. ಹಾಲನ್ನು ಬರೀ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯಲ್ಲಿ ಅಧಿಕ ಆಮ್ಲವನ್ನು (ಆಸಿಡ್) ಉತ್ಪತ್ತಿ ಮಾಡುತ್ತದೆ ಇದರಿಂದಾಗಿ ಅಸಿಡಿಟಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಬರೀ ಹೊಟ್ಟೆಯಲ್ಲಿ ಹಾಲು ಕುಡಿದರೆ ತಲೆನೋವು ಬರುವುದು. ಆದ್ದರಿಂದ ಅಸಿಡಿಟಿಯ ಸಮಸ್ಯೆ ಇರುವವರು ಹಾಲನ್ನು ಕುಡಿಯಬಾರದು.

Milk Causes These Health Problem

ಮಲಬದ್ಧತೆ: ಹಾಲು ಕುಡಿದಾಗ ಕೆಲವರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮುಟ್ಟಬಾರದು.

ಮೊಡವೆ: ಹಾಲಿಗೂ ಮತ್ತು ಮೊಡವೆಗೂ ನಿಖಟ ಸಂಬಂಧವಿದೆ. ಹಾಲು ಟೆಸ್ಟೋಸ್ಟಿರಿನ್ (testosterone) ಹಾರ್ಮೋನ್ ನ ಉತ್ಪತ್ತಿಯಲ್ಲಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಮೊಡವೆಗಳು ಉಂಟಾಗುತ್ತದೆ.

ಕೆಮ್ಮು: ಕೆಮ್ಮು ಮತ್ತು ಇತರ ಗಂಟಲಿನ ಸಮಸ್ಯೆ ಇದ್ದರೆ ಹಾಲನ್ನು ಕುಡಿಯದಿದ್ದರೆ ಒಳ್ಳೆಯದು.

ಅಲರ್ಜಿ: ಕೆಲವರಿಗೆ ಹಾಲು ಕುಡಿದರೆ ಅಲರ್ಜಿ, ವಾಂತಿ ಮುಂತಾದ ತೊಂದರೆ ಕಾಣಿಸಿಕೊಳ್ಳುವುದು. ಈ ರೀತಿಯ ತೊಂದರೆ ಇರುವವರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಿನ್ನಬಾರದು.

ಹಾಲು ಕುಡಿದರೆ ಅನಾರೋಗ್ಯ ಸಮಸ್ಯೆ ಉಂಟಾಗುವವರು ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶವಿರುವ ಇತರ ಆಹಾರ ಸಾಮಾಗ್ರಿಗಳನ್ನು ಸೇವಿಸಬೇಕು.

English summary

Milk Causes These Health Problem | Tips For Health | ಹಾಲು ಈ ರೀತಿಯ ಆರೋಗ್ಯ ಸಮಸ್ಯೆಯನ್ನು ತರುತ್ತದೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

We are often advised to drink milk on a regular basis. Dairy products like milk and yogurt are really healthy for the body. But milk causes acidity, gastric problems, constipation and worsens cold and cough.
X
Desktop Bottom Promotion