For Quick Alerts
ALLOW NOTIFICATIONS  
For Daily Alerts

ಬಿಳಿ ರಕ್ತ ಕಣ ಹೆಚ್ಚಿಸುವ ಆಹಾರಗಳಿವು!

|

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಆಗಾಗ ಕಾಯಿಲೆ ಕಾಣಿಸಿಕೊಳ್ಳುವುದು ಹಾಗೂ ಬಂದ ಕಾಯಲೆ ಬೇಗನೆ ಗುಣಮುಖವಾಗುವುದಿಲ್ಲ. ಪೋಷಕಾಂಶಗಳು ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ತುಂಬಾ ಅವಶ್ಯಕ. ಪೋಷಕಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗುವುದು.ಇದರಿಂದ ದೇಹವು ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ಕಾಯಿಲೆ ಬಂದು ಅದು ಕಡಿಮೆಯಾಗಲು ಇಂಜೆಕ್ಷನ್, ಮಾತ್ರೆ ತೆಗೆದುಕೊಂಡು ಕಷ್ಟಪಡುವ ಬದಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಅದಕ್ಕಾಗಿ ನೀವು ದೊಡ್ಡದಾಗಿ ಏನು ಮಾಡಬೇಕಾಗಿಲ್ಲ, ಈ ಕೆಳಗ್ಗೆ ಹೇಳಿರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಸಾಕು ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾಗಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಆಹಾರ ತಿಂದು ರೋಗವನ್ನು ದೂರವಿಡಬಹುದು ಅಂತಾದರೆ ಈ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲವೇ?

1. ಮೊಸರು:

1. ಮೊಸರು:

ಮೊಸರಿನಲ್ಲಿ ವಿಟಮಿನ್ ಡಿ ಇದ್ದು ಇದನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಶೀತ, ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಬರುವುದನ್ನು ತಡೆಯಬಹುದು. 70% ರೋಗನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ. ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ.

2. ಸಿಹಿಗೆಣಸು:

2. ಸಿಹಿಗೆಣಸು:

ಸಿಹಿಗೆಣಸಿನಲ್ಲಿ ಪೋಷಕಾಂಶ ಹಾಗೂ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

3. ಅಣಬೆ:

3. ಅಣಬೆ:

ಅಣಬೆ ತಿಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುವುದು. ಅಣಬೆಯಲ್ಲಿನ ಪ್ರೊಟೀನ್, ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು antioxidants ಅಂಶಗಳು ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುವುದು

4. ಬಾದಾಮಿ:

4. ಬಾದಾಮಿ:

ಬಾದಾಮಿಯಲ್ಲಿ 50% ವಿಟಮಿನ್ ಇ ಅಂಶವಿದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ, ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

 5. ಗ್ರೀನ್ ಟೀ:

5. ಗ್ರೀನ್ ಟೀ:

ಇದು ದೇಹದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸುತ್ತದೆ, ರಕ್ತ ಕಣಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರೋಗ ನಿರೋಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

6. ಬ್ರೊಕೋಲಿ ಮತ್ತು ಪಾಲಾಕ್ ಸೊಪ್ಪು:

6. ಬ್ರೊಕೋಲಿ ಮತ್ತು ಪಾಲಾಕ್ ಸೊಪ್ಪು:

ಹೆಚ್ಚಾಗಿ ಪಾಲಾಕ್ ಸೊಪ್ಪು ತಿನ್ನಬೇಕು, ಬ್ರೊಕೋಲಿಯಿಂದ ಪದಾರ್ಥಗಳನ್ನು ಮಾಡಬಹುದು, ಸೂಪ್ ಮಾಡಿ ಕುಡಿಯಬಹುದು, ಬ್ರೊಕೋಲಿ ಸಲಾಡ್ ಕೂಡ ತಯಾರಿಸಬಹುದು. ಈ ಆಹಾರಗಳನ್ನು ತಿನ್ನುತ್ತಾ ಬಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.

6.ದ್ರಾಕ್ಷಿ ಮತ್ತು ಕಿತ್ತಳೆ:

6.ದ್ರಾಕ್ಷಿ ಮತ್ತು ಕಿತ್ತಳೆ:

ದ್ರಾಕ್ಷಿ, ಕಿತ್ತಳೆ ಹಾಗೂ ಇತರ ಸಿಟ್ರಸ್ ಆಹಾರಗಳನ್ನು ತಿನ್ನುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಬಹುದು.

7. ಬೆಳ್ಳುಳ್ಳಿ:

7. ಬೆಳ್ಳುಳ್ಳಿ:

ಬೆಳ್ಳುಳ್ಳಿ ತಿಂದರೆ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಹಾಗೂ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಾಗುವುದು. ಪ್ರತಿದಿನ ಬೆಳ್ಳುಳ್ಳಿಯ ಒಂದು ಎಸಳಾದರೂ ಹೊಟ್ಟೆ ಸೇರುವುದು ಒಳ್ಳೆಯದು.

8. ಮೀನು:

8. ಮೀನು:

ಮೀನಿನಲ್ಲಿ ಕ್ಯಾಲ್ಸಿಯಂ ಹಾಗೂ ಒಮೆಗಾ 3 ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 9. ರೋಗನಿರೋಧಕ ಮಾತ್ರೆಗಳು:

9. ರೋಗನಿರೋಧಕ ಮಾತ್ರೆಗಳು:

ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಗಳಾದ ಇಮ್ಯೂನೋಟೋನ್ ಪ್ಲಸ್(Immunotone Plus) ಒಮೆಗಾ720, ವಿಟಮಿನ್ ಡಿ ಸುಪ್ರೀಮ್, Tegricel Colostrum, C+Biofizz ಈ ಮಾತ್ರೆಗಳು ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇವುಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ.

English summary

Food Which Increase The Immunity Power | Tips For Health | ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

Nutrition plays an important role in maintaining immune function. If you have low immune power you often fall in sick. So Include these food in your diet and increase the immunu system, be healthy.
X
Desktop Bottom Promotion