For Quick Alerts
ALLOW NOTIFICATIONS  
For Daily Alerts

ದಿನವೂ ಹಾಲು ಕುಡಿಯಬೇಕು ಏಕೆ?

|

ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಎನ್ನುವುದು ಗೊತ್ತಿರುವ ವಿಷಯ. ಆದರೆ ಹಾಲಿನಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲದೆ ಇತರ ಮುಖ್ಯವಾದ ಪೋಷಕಾಂಶಗಳಿದ್ದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಹಾಲಿನಲ್ಲಿ ಮುಖ್ಯವಾಗಿ 9 ಅಂಶಗಳಿದ್ದು ಅವುಗಳು ಈ ಕೆಳಗಿನ ಪ್ರಯೋಜನಕಾರಿ ಗುಣಗಳನ್ನು ಹೊಂದಿವೆ. ಆದ್ದರಿಂದ ಆರೋಗ್ಯಕರವಾಗಿರಲು ದಿನದಲ್ಲಿ 1-2 ಲೋಟ ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು.

take a glass of Milk Everyday

ಕ್ಯಾಲ್ಸಿಯಂ: ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದರಿಂದ ದೇಹಕ್ಕೆ ಕೆಲಸ ಮಾಡಲು ಅಧಿಕ ಸಾಮರ್ಥ್ಯ ದೊರೆಯುತ್ತದೆ.

ಪ್ರೊಟೀನ್: ದೇಹದಲ್ಲಿ ಹಾಳಾದ ಸ್ನಾಯುಗಳನ್ನು ಸರಿಪಡಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.

ಪೊಟ್ಯಾಷಿಯಂ: ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ರಂಜಕ:ರಂಜಕವು ಮೂಳೆಗಳನ್ನು ಬಲಪಡಿಸಿ ದೇಹಕ್ಕೆ ಶಕ್ತಿಯನ್ನು ತುಂಬುವುದು.

ವಿಟಮಿನ್ ಡಿ: ವಿಟಮಿನ್ ಡಿ ಕೂಡ ಮಳೆಗಳನ್ನು ಬಲಪಡಿಸುವಲ್ಲಿ ಸಹಕಾರಿಯಾಗಿದೆ.

ವಿಟಮಿನ್ ಬಿ12: ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯು ಮತ್ತು ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ವಿಟಮಿನ್ ಎ: ಇದು ಕಣ್ಣು ಮತ್ತು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಅಲ್ಲದೆ ದೇಹದಲ್ಲಿ ರೋಗನಿರೋಧಕ ಸಾಮರ್ಥ್ಯವನ್ನು ನಿಯಂತ್ರಿಸುತ್ತದೆ.

ರೈಬೊಪ್ಲೇವಿನ್ ಬಿ2: ಈ ಪೋಷಕಾಂಶವು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುವ ಕಾರ್ಯವನ್ನು ಮಾಡುತ್ತದೆ.

ನಿಯಾಸಿನ್: ದೇಹಕ್ಕೆ ಅಗತ್ಯವಾದ ಸಕ್ಕರೆ ಅಂಶ ಮತ್ತು ಕೊಬ್ಬಿನಂಶವನ್ನು ನೀಡುತ್ತದೆ.

English summary

Why you should take a glass of Milk Everyday ? | Tips For Health | ದಿನವೂ ಹಾಲು ಕುಡಿಯಬೇಕು ಏಕೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

As we are all know drinking a glass of milk will add health benefit. You will get energy from this healthy drink. So don't forget to take a cup of milk everyday.
Story first published: Monday, May 7, 2012, 10:28 [IST]
X
Desktop Bottom Promotion