For Quick Alerts
ALLOW NOTIFICATIONS  
For Daily Alerts

ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಚೋದಕವೇನು?

|
Sleep Disorder and Insomnia
ನಿದ್ದೆಯಲ್ಲಿ ಓಡಾಡುವ ಅಭ್ಯಾಸವಿದ್ದವರು ನಿಯಮಿತವಾಗಿ ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಡಿ ಮಾಂಟ್ರಿಯಲ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ನಿದ್ದೆಯಲ್ಲಿ ನಡೆಯುವ ಅಭ್ಯಾಸವನ್ನು ಸೊಮ್ನಾಂಬಲಿಸಂ ಎಂದು ಕರೆಯುತ್ತಾರೆ. ಅರೆ ನಿದ್ರಾವಸ್ಥೆಯಲ್ಲಿ ತಮಗೇ ಅರಿವಿಲ್ಲದಂತೆ ಎದ್ದು ಕೆಲಸ ಮಾಡುವುದು, ನಡೆಯುವುದು ನಿದ್ದೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದು ಶೇಕಡಾ 4 ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಅಭ್ಯಾಸದಿಂದ ಮನೋಸ್ಥಿತಿಯಲ್ಲಿ ಗೊಂದಲ ಮಾಡುವುದಷ್ಟೇ ಅಲ್ಲ, ಇದರಿಂದ ತಮ್ಮ ವಾತಾವರಣವನ್ನು ತಕ್ಷಣವೇ ಗುರುತಿಸದಷ್ಟು ಮರೆವಿನ ಸಮಸ್ಯೆಯೂ ತಲೆದೋರಬಹುದು.

ಈ ಅಧ್ಯಯನವನ್ನು ನಡೆಸಿದ ಆಂಟೊನಿಯೊ ಝಾದ್ರಾ, ನಿದ್ದೆಯಲ್ಲಿ ನಡೆಯುವ ಸಮಸ್ಯೆಯಿರುವ 40 ಜನರನ್ನು ಆಗಸ್ಟ್ 2003 ರಿಂದ 2007 ರವರೆಗೆ ಡಿ ಮಾಂಟ್ರಿಯಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಒಳಪಡಿಸಿ ಪರಿಶೀಲನೆ ನಡೆಸಿದರು.

ಅಧ್ಯಯನಕ್ಕೆ ಒಳಪಡಿಸಿದ ಈ ಜನರಲ್ಲಿ ನಿದ್ದೆ ಕೊರತೆ ಮತ್ತು ನಿದ್ದೆ ಸಮಸ್ಯೆಯೇ ನಿದ್ದೆಯಲ್ಲಿ ನಡೆಯುವ ಅಭ್ಯಾಸಕ್ಕೆ ಪ್ರಚೋದಕವಾಗಿರುವುದಾಗಿ ತಿಳಿದುಬಂದಿದೆ. ಈ ಅಭ್ಯಾಸದಿಂದ ತಪ್ಪಿಸಿಕೊಳ್ಳಬೇಕೆಂದರೆ ನಿಯಮಿತವಾಗಿ ಮಲಗುವ ಸಮಯವನ್ನು ಮತ್ತು ಸರಿಯಾದ ಸಮಯಕ್ಕೆ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಝಾದ್ರಾ ತಿಳಿಸಿದ್ದಾರೆ.

ನಿಯಮಿತ ನಿದ್ದೆಯೊಂದಿಗೆ ಯೋಗಾಭ್ಯಾಸ, ಒಳ್ಳೆಯ ಆಹಾರ ಕ್ರಮ ಮತ್ತು ಮನೋಸ್ಥಿತಿಯ ಸದೃಢತೆ ಕೂಡ ಈ ಸಮಸ್ಯೆಯನ್ನು ಹೋಗಲಾಡಿಸುವುದರಲ್ಲಿ ಸಹಾಯ ಮಾಡುತ್ತದೆ.

English summary

Sleep Disorder and Insomnia, Sleep Walking, ನಿದ್ದೆ ಸಮಸ್ಯೆ ಮತ್ತು ನಿದ್ರಾಹೀನತೆ, ನಿದ್ದೆಯಲ್ಲಿ ನಡೆಯುವುದು

People predisposed to sleepwalking should keep a regular bedtime to avoid unwanted evening strolls, according to researchers at the Universite de Montreal.
Story first published: Monday, December 12, 2011, 12:35 [IST]
X
Desktop Bottom Promotion