For Quick Alerts
ALLOW NOTIFICATIONS  
For Daily Alerts

ಲಿವರ್ ಗಟ್ಟಿಗೊಳಿಸುವ ರೀತಿ ಇಲ್ಲಿದೆ ನೋಡಿ

|
Foods for Liver Health
ದೇಹದಲ್ಲಿ 500ಕ್ಕೂ ಹೆಚ್ಚು ಕಾರ್ಯ ನಿರ್ವಹಿಸುವ ಲಿವರ್ ವೈಫಲ್ಯಗೊಂಡರೆ ಎಲ್ಲ ಅಂಗಗಳ ಮೇಲೂ ಕೆಟ್ಟ ಪರಿಣಾಮ ಬೀರಿ ಆರೋಗ್ಯ ಸ್ಥಿತಿ ಗಂಭೀರವಾಗುತ್ತದೆ.

ದೇಹದಲ್ಲಿನ ಕಲ್ಮಶವನ್ನು ಹೊರಹಾಕುವುದು, ಜೀರ್ಣಕ್ರಿಯೆ ಸರಾಗಗೊಳಿಸುವುದು, ಮುಂತಾದ ಅತ್ಯಗತ್ಯ ಕಾರ್ಯ ನಿರ್ವಹಿಸುವ ಲಿವರ್ ಗೂ ಕೆಲವೊಮ್ಮೆ ತೊಂದರೆ ಉಂಟಾಗುತ್ತದೆ. ಹಿಪಟೆಟಿಸ್ ಎ, ಬಿ, ಸಿ ಮತ್ತು ಡಿ ಎಂಬ ಸಮಸ್ಯೆ ಲಿವರ್ ಗೆ ತಗುಲುತ್ತದೆ.

ಆದ್ದರಿಂದ ಪಿತ್ತಜನಕಾಂಗವನ್ನು ಆರೋಗ್ಯವಾಗಿಡಲು ಕೆಲವು ಮಾರ್ಗವನ್ನು ಇಲ್ಲಿ ನೀಡಲಾಗಿದೆ. ಮದ್ಯ ತ್ಯಜನೆ ಮತ್ತು ಸೂಕ್ತ ವ್ಯಾಯಾಮದೊಂದಿಗೆ ಕೆಲವು ಆಹಾರ ವಿಧಾನ ಅನುಸರಿಸಿದರೆ ಲಿವರನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಆ ಆಹಾರಗಳಾವುದೆಂದು ಇಲ್ಲಿ ತಿಳಿದುಕೊಳ್ಳಿ.

ಲಿವರ್ ಆರೋಗ್ಯವಾಗಿಡಲು ಯಾವ ಆಹಾರ ಸೇವನೆ ಮುಖ್ಯ?

* ಸೇಬು ಮತ್ತು ಬೀಟ್ ರೂಟ್: ಸೇಬಿನಲ್ಲಿರುವ ಪೆಕ್ಟಿನ್ ಎಂಬ ಅಂಶ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕುವಲ್ಲಿ ಹೆಚ್ಚು ಸಹಕಾರಿ. ಇದು ದೊಡ್ಡ ಕರುಳನ್ನು ಶುದ್ಧಗೊಳಿಸಲೂ ಅನುವಾಗುತ್ತದೆ. ಆದ್ದರಿಂದ ಪ್ರತಿ ದಿನ ಸೇಬನ್ನು ತಿಂದರೆ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ ಜೊತೆಗೆ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಬೀಟ್ ರೂಟ್ ನಲ್ಲಿಯೂ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೀರಿಕೊಳ್ಳುವ ವಿಶೇಷ ಗುಣವಿದೆ.

* ಕಹಿ ತರಕಾರಿ: ಚಿಕೋರಿ, ಕಾಡು ಸೇವಂತಿ, ಹಾಗಲಕಾಯಿ ಮುಂತಾದ ತರಕಾರಿಗಳು ತೇಗನ್ನು ನಿಯಂತ್ರಿಸಿ ಲಿವರನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ.

* ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿನ ಅಲಿಸಿನ್ ಅಂಶ ಲಿವರ್ ನಲ್ಲಿ ಸೇರಿಕೊಳ್ಳುವ ವಿಷಕಾರಿ ಪದಾರ್ಥಗಳನ್ನು ನಿವಾರಿಸುತ್ತದೆ. ಆದ್ದರಿಂದ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಹೆಚ್ಚು ಬಳಸಿದರೆ ಒಳಿತು. ಇದರಿಂದ ದೈಹಿಕ ಸಾಮರ್ಥ್ಯವೂ ಹೆಚ್ಚುತ್ತದೆ ಮತ್ತುರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.

* ನಿಂಬೆ ಪಾನೀಯ: ನಿಂಬೆರಸ ಪಿತ್ತಜನಕಾಂಗವನ್ನು ಆರೋಗ್ಯವಾಗಿಡುವ ಪಾನೀಯ. ಬಿಸಿ ನೀರಿನೊಂದಿಗೆ ನಿಂಬೆ ರಸ ಬೆರೆಸಿ ಬೆಳಗ್ಗಿನ ಜಾವ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊಟ್ಟೆ ಶುದ್ಧವಾಗಿರುತ್ತದೆ ಮತ್ತು ಲಿವರ್ ಕಾರ್ಯ ವೈಖರಿಗೂ ಸಹಾಯ ಮಾಡುತ್ತದೆ.

* ಆಂಟಿಯಾಕ್ಸಿಡಂಟ್: ವಿಷಕಾರಿ ಅಂಶಗಳನ್ನು ದೇಹದಿಂದ ಹೊರಕ್ಕೆ ತೆಗೆದು ಹಾಕುವಲ್ಲಿ ಆಂಟಿಯಾಕ್ಸಿಡಂಟ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಆಂಟಿಯಾಕ್ಸಿಡಂಟ್ ಹೇರಳವಾಗಿರುವ ಸೇಬು, ಸ್ಟ್ರಾಬೆರಿ, ದ್ರಾಕ್ಷಿ, ಖರ್ಬೂಜದ ಹಣ್ಣನ್ನು ತಿನ್ನುತ್ತಿರಬೇಕು.

* ಮೊಳಕೆ ಕಾಳು:
ಎಲೆ ಕೋಸು, ಹೂ ಕೋಸು, ಮೊಳಕೆ ಒಡೆದ ಕಾಳುಗಳು ಸಿಗರೇಟ್ ಸೇವನೆಯಿಂದ ದೇಹದಲ್ಲಿ ಸೇರಿಕೊಳ್ಳುವ ವಿಷಕಾರಿ ಅಂಶಗಳ ಕೆಟ್ಟ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡುತ್ತದೆ. ತರಕಾರಿಗಳಲ್ಲಿ ಲಿವರ್ ಕಾರ್ಯ ವೈಖರಿಗೆ ಸಹಾಯ ಮಾಡುವ ಗ್ಲೂಕೊಸಿನೋಲೇಟ್ ಇರುವುದರಿಂದ ಆಹಾರದಲ್ಲಿ ಹೆಚ್ಚು ತರಕಾರಿಗಳ ಬಳಕೆಯಿರಬೇಕು.

* ನಾರಿನಂಶದ ಆಹಾರ: ಅನ್ನ, ದವಸ ಧಾನ್ಯಗಳು, ಹಣ್ಣು ಮತ್ತು ಕೆಲವು ತರಕಾರಿಗಳಲ್ಲಿ ನಾರಿನಂಶ ಹೇರಳವಾಗಿದೆ. ಆದ್ದರಿಂದ ಹೆಚ್ಚು ಫೈಬರ್ ಅಂಶವನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದಷ್ಟೂ ಒಳ್ಳೆಯದು.

ಲಿವರ್ ಕಾರ್ಯ ವೈಖರಿಗೆ ಸಹಾಯಕವಾಗುವ ಈ ಆಹಾರಗಳ ಹೊರತಾಗಿಯೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರವಾಗಿರಬೇಕೆಂದರೆ ವ್ಯಾಯಾಮವೂ ತುಂಬಾ ಮುಖ್ಯ. ವ್ಯಾಯಾಮದೊಂದಿಗೆ ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ದೇಹ ಸದೃಢವಾಗಿರುತ್ತದೆ.

English summary

Healthy Diet for Liver | Foods for Liver Health | ಲಿವರ್ ಆರೋಗ್ಯವಾಗಿಡುವ ಆಹಾರ

The largest internal organ in our body, performs more than 500 functions and is mandatory for our survival is Liver. If your liver does not function properly, all the other body functions are affected. Therefore, having a healthy liver is essential for a healthy human body. So Let's have a look at healthy liver foods that are beneficial.
Story first published: Tuesday, December 27, 2011, 12:16 [IST]
X
Desktop Bottom Promotion