For Quick Alerts
ALLOW NOTIFICATIONS  
For Daily Alerts

ದೈಹಿಕ ಸಾಮರ್ಥ್ಯ ಹೆಚ್ಚಿಸುವ ನಾಲ್ಕು ಆಹಾರವಿದು

By Super
|

4 Foods to Increase Stamina
ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ದೈಹಿಕ ಶಕ್ತಿ ಕಡಿಮೆಗೊಳಿಸಿ ಸುಸ್ತಾಗುವಂತೆ ಮಾಡುತ್ತದೆ. ಇದರಿಂದ ಕ್ರಿಯಾಶೀಲರಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಅನೇಕ ಒತ್ತಡಗಳು ತಲೆಯಲ್ಲಿ ತುಂಬಿಕೊಳ್ಳುವುದರಿಂದ ಆರೋಗ್ಯವೂ ಹದಗೆಡುತ್ತದೆ.

ಆದರೆ ಈ ಸಮಸ್ಯೆಗೆಂದು ಮಾತ್ರೆಗಳ ಮೊರೆಹೋಗುವ ಬದಲು ನೈಸರ್ಗಿಕವಾಗಿ ದೈಹಿಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ನೈಸರ್ಗಿಕವಾಗಿ ಶಕ್ತಿ ಹೆಚ್ಚಿಸುವ ನಾಲ್ಕು ರೀತಿಯ ಆಹಾರ:

* ಓಟ್ ಮೀಲ್: ದಿನದ ಆರಂಭದಕ್ಕೆ ಓಟ್ ಮೀಲ್ ಸೂಕ್ತ ಆಹಾರ. ಓಟ್ ಮೀಲ್ ಬ್ರೇಕ್ ಫಾಸ್ಟ್ ನಿಮ್ಮನ್ನು ಹೆಚ್ಚು ಕಾಲ ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ. ಓಟ್ ಮೀಲ್ ನಲ್ಲಿರುವ ಕಾರ್ಬೊಹೈಡ್ರೇಡ್ ಜೀರ್ಣಕ್ರಿಯೆ ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ ಶಕ್ತಿ ಹೆಚ್ಚು ಕಾಲ ದೇಹದಲ್ಲಿ ಉಳಿಯುವಂತೆ ಮಾಡುತ್ತದೆ.

* ಬಾಳೆಹಣ್ಣು: ಬೆಳಗ್ಗೆ 2 ಬಾಳೆಹಣ್ಣನ್ನು ತಿಂದು ಒಂದು ಲೋಟ ಹಾಲು ಕುಡಿದರೆ ಸಾಕು, ನಿಮ್ಮಲ್ಲಿ 8 ಗಂಟೆಗಳ ಕಾಲ ಚೈತನ್ಯ ತುಂಬಿರುವಂತೆ ನೋಡಿಕೊಳ್ಳುತ್ತದೆ. ಇದು ದೈಹಿಕ ಸುಸ್ತನ್ನೂ ಕಡಿಮೆಮಾಡುತ್ತದೆ. ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶವಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಹೆಚ್ಚಾಗಿ ಶಕ್ತಿ ನೀಡುತ್ತದೆ.

* ಕಡಲೆ ಬೀಜ: ಎಲ್ಲ ರೀತಿಯ ಬೀಜಗಳಲ್ಲಿ ದೇಹಕ್ಕೆ ಅಗತ್ಯವಾದ ಕೊಬ್ಬು, ನಾರಿನಂಶ, ಕ್ಯಾಲೊರಿ, ಪ್ರೊಟೀನ್ ಮತ್ತು ವಿಟಮಿನ್ ಕೊಡುತ್ತವೆ. ಹಸಿವೆನಿಸಿದಾಗಲೆಲ್ಲಾ ಬಾದಾಮಿ, ಕಡಲೆ ಬೀಜಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರೆ ದೇಹಕ್ಕೆ ಬೇಗನೆ ಶಕ್ತಿ ಬರುತ್ತದೆ. ಇವುಗಳನ್ನು ಮೊಸರಿನೊಂದಿಗೂ ತಿಂದರೆ ತ್ವಚೆಯೂ ಹೆಚ್ಚು ಕಾಲ ಸುಂದರವಾಗಿರುತ್ತೆ.

* ಬೀಟ್ ರೂಟ್ : ಬೀಟ್ ರೂಟ್ ದೇಹಕ್ಕೆ ಶಕ್ತಿ ಒದಗಿಸುವ ಆಹಾರ. ಇದರಲ್ಲಿ ವಿಟಮಿನ್ ಎ, ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಇದನ್ನು ಹಸಿಯಾಗೇ ತಿನ್ನಬಹುದು ಅಥವಾ ಜ್ಯೂಸ್ ನಂತೆಯೂ ಸೇವಿಸಬಹುದು. ಇದರಿಂದ ಬಿಪಿ ಕೂಡ ನಿಯಂತ್ರಣಕ್ಕೆ ಬರುತ್ತದೆ.

ಈ ನಾಲ್ಕು ಆಹಾರಗಳನ್ನು ಸೇವಿಸುತ್ತಿದ್ದರೆ ದಿನವಿಡೀ ಚೈತನ್ಯದಿಂದಿರಲು ಸಹಾಯ ಮಾಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷವೆಂಬಂತೆ ಹೆಚ್ಚಾಗಿ ತಿಂದರೆ ಜೀರ್ಣಕ್ರಿಯೆಗೆ ಶಕ್ತಿ ಹೆಚ್ಚು ವ್ಯಯವಾಗಿ ಸೋಮಾರಿಯನ್ನಾಗಿಸುತ್ತದೆ.

English summary

Food to Increase Stamina | 4 Foods to Increase Stamina | ದೈಹಿಕ ಸಾಮರ್ಥ್ಯ ಹೆಚ್ಚಿಸುವ 4 ಆಹಾರ

Mental stress and too much of pressure can spoil your health and make you feel lousy and inactive. Instead of taking active pills, go natural with food! By having the right food, you can increase your body stamina and stay active whole day.
Story first published: Wednesday, January 18, 2012, 12:58 [IST]
X
Desktop Bottom Promotion