For Quick Alerts
ALLOW NOTIFICATIONS  
For Daily Alerts

ಕಿಡ್ನಿ ಸಮಸ್ಯೆಯಿದ್ದರೆ ಈ ಆಹಾರ ಮುಟ್ಟಲೇಬೇಡಿ

|
Foods to avoid for Healthy Kidney
ರೋಗ ಬಂದ ಮೇಲೆ ಅದನ್ನು ನಿವಾರಿಸಲು ಪರಿತಪಿಸುವುದಕ್ಕಿಂತ ಮುನ್ನವೇ ಪರಿಹರಿಸುವುದು ಲೇಸು. ಆದರೆ ಅಸಮರ್ಪಕ ಜೀವನಶೈಲಿ ಕಿಡ್ನಿ ಆರೋಗ್ಯವನ್ನು ಹಾಳುಗೆಡಹಿದ್ದರೆ ಇನ್ನಾದರೂ ಎಚ್ಚರವಹಿಸಲೇಬೇಕು. ಇಲ್ಲದಿದ್ದರೆ ಸಮಸ್ಯೆ ಇನ್ನೂ ಮಾರಕವಾಗಬಹುದು.

ಸಮಸ್ಯೆ ದ್ವಿಗುಣಗೊಳ್ಳುವುದನ್ನು ತಪ್ಪಿಸಲು ಇರುವ ಮಾರ್ಗವೆಂದರೆ ಕಿಡ್ನಿಗೆ ಮಾರಕವಾಗಬಹುದಾದ ಕೆಲವು ಆಹಾರಗಳ ಸೇವನೆಯನ್ನು ತ್ಯಜಿಸುವುದು. ಕಿಡ್ನಿ ಸಮಸ್ಯೆಯಿದ್ದವರು ನಿರ್ದಿಷ್ಟ ಆಹಾರವನ್ನು ದೂರವಿಡಲೇಬೇಕು. ಅಂತಹ ಆಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ.

ಕಿಡ್ನಿ ಸಮಸ್ಯೆಯಿದ್ದವರು ದೂರವಿಡಬೇಕಾದ ಆಹಾರ:
1. ಮಾಂಸಾಹಾರ ಸೇವನೆ: ಕಿಡ್ನಿ ತೊಂದರೆಗೆ ಒಳಗಾಗಿದೆ ಎಂದು ತಿಳಿಯುತ್ತಿದ್ದಂತೆ ಅಂತಹವರಿಗೆ ಮೊದಲು ಮಾಂಸಾಹಾರ ನಿಲ್ಲಿಸುವಂತೆ ಸಲಹೆ ನೀಡಲಾಗುತ್ತೆ. ಮಾಂಸ ಮತ್ತು ಮೀನಿನಲ್ಲಿ ಫಾಸ್ಪರಸ್ ಇರುವುದರಿಂದ ಕಿಡ್ನಿಗೆ ಒಳ್ಳೆಯದಲ್ಲ. ಕಿಡ್ನಿ ಮೊದಲೇ ಹಾಳಾಗಿರುವುದರಿಂದ ಇದರ ಸೇವನೆ ಇನ್ನಷ್ಟು ಆರೋಗ್ಯವನ್ನು ಕೆಡಿಸುತ್ತದೆ. ಇದು ರಕ್ತದಲ್ಲಿ ಯುರಿಕ್ ಆಸಿಡ್ ಹೆಚ್ಚಾಗಿಸಿ ಇದರಿಂದ ಕೀಲು ನೋವನ್ನೂ ತರುತ್ತದೆ.

2. ಟೀ, ಕಾಫಿ, ದ್ರಾಕ್ಷಿ:
ಆಕ್ಸಾಲಿಕ್ ಆಸಿಡ್ ಹೊಂದಿರುವ ಆಹಾರ ಕಿಡ್ನಿ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಆಕ್ಸಲೇಟ್ ಎಂಬ ಅಂಶ ಕಿಡ್ನಿಯ ಆರೋಗ್ಯವನ್ನು ಕೆಡಿಸುತ್ತದೆ. ಟೀ, ಕಾಫಿ, ದ್ರಾಕ್ಷಿ, ಕಿತ್ತಳೆ ಮುಂತಾದ ಆಹಾರಗಳು ಆಕ್ಸಲೇಟ್ ಉತ್ಪತ್ತಿ ಮಾಡುತ್ತದೆ. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ತರುವುದರಿಂದ ಇವುಗಳಿಂದ ದೂರವುಳಿಯುವುದು ಒಳ್ಳೆಯದು.

3. ಉಪ್ಪು, ಉಪ್ಪಿನ ಕಾಯಿ: ಕಿಡ್ನಿ ತೊಂದರೆಯಿದ್ದವರು ಹೆಚ್ಚು ಉಪ್ಪನ್ನು ತಿನ್ನಬಾರದು. ಕಿಡ್ನಿ ಅಸಮರ್ಪಕ ಕಾರ್ಯನಿರ್ವಹಣೆಗೂ ಮತ್ತು ರಕ್ತದೊತ್ತಡಕ್ಕೂ ನಡುವೆ ಸಂಬಂಧವಿದೆ. ಆದ್ದರಿಂದ ಉಪ್ಪನ್ನು ಆದಷ್ಟು ಕಡಿಮೆ ತಿನ್ನಬೇಕು. ಶೇಖರಿಸಿಟ್ಟ ಆಹಾರ ಮತ್ತು ಉಪ್ಪಿನಕಾಯಿಯನ್ನೂ ತಿನ್ನಬಾರದು. ಏಕೆಂದರೆ ಶೇಖರಿಸಿಟ್ಟ ಆಹಾರದಲ್ಲಿ ಕಿಡ್ನಿಗೆ ಮಾರಕವಾಗುವ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ.

* ಹಣ್ಣುಗಳು: ಕಿಡ್ನಿ ಸ್ವಾಸ್ಥ್ಯ ಹದಗೆಟ್ಟಿದ್ದರೆ ಪೊಟಾಶಿಯಂ ಹೆಚ್ಚಿರುವ ಆಹಾರ ಒಳ್ಳೆಯದಲ್ಲ. ಹಣ್ಣುಗಳನ್ನು ಮತ್ತು ಕೆಲವು ಹಸಿರು ಎಲೆಗಳುಳ್ಳ ತರಕಾರಿಗಳನ್ನು ಇಂತಹವರು ತಿನ್ನಬಾರದು. ಪೊಟಾಶಿಯಂ ಹೆಚ್ಚಿರುವ ಆಹಾರ ಸೇವಿಸಿದರೆ ದೇಹದಲ್ಲಿ ನೀರು ಅಧಿಕ ಮಟ್ಟದಲ್ಲಿ ಸೇರಿಕೊಂಡು ತೊಂದರೆಯುಂಟಾಗುತ್ತದೆ.

* ಚಾಕಲೇಟ್, ಹಾಲು:
ನೀವು ಚಾಕಲೇಟ್ ಪ್ರಿಯರಾಗಿದ್ದರೆ ನಿಮಗೆ ಕಹಿ ಸುದ್ದಿ. ಎಲ್ಲಾ ಕೊಕೊ ಉತ್ಪನ್ನಗಳು, ಚಾಕಲೇಟ್, ಹಾಲು, ಹಾಲಿನ ಉತ್ಪನ್ನ, ಬೀಜ, ಡ್ರೈ ಫ್ರೂಟ್ಸ್ ಇವೆಲ್ಲವೂ ಕಿಡ್ನಿಗೆ ತೊಂದರೆಯುಂಟು ಮಾಡುತ್ತದೆ. ಕಿಡ್ನಿಯಲ್ಲಿ ಹೆಚ್ಚು ಫಾಸ್ಪರಸ್ ಅಂಶ ಸೇರಿಕೊಂಡರೆ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಈ ಮೇಲೆ ತಿಳಿಸಿದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಕಿಡ್ನಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.

English summary

Foods to avoid for Healthy Kidney | Kidney Disease Diet | ಕಿಡ್ನಿ ಆರೋಗ್ಯಕರವಾಗಿರಲು ತ್ಯಜಿಸಬೇಕಾದ ಆಹಾರ

Prevention is always better than cure and thus it is better to keep your kidneys in a healthy functioning condition instead of treating it latter. However, if you or your lifestyle has caused damage to your kidneys then you need to wake up and take stock of the situation one way of doing this is avoiding foods bad for the kidneys. Here is a list of 'must avoid' foods if you have a kidney disease. Take a Look.
Story first published: Saturday, December 17, 2011, 15:18 [IST]
X
Desktop Bottom Promotion