For Quick Alerts
ALLOW NOTIFICATIONS  
For Daily Alerts

ಹರಳೆಣ್ಣೆಯಲ್ಲಿದೆ ಹಲವು ಪ್ರಯೋಜನ

|
Benefit Of Castroil
ಹರಳೆಣ್ಣೆ ಕಹಿ ಆಗಿರುವುದರಿಂದ ಆಹಾರದಲ್ಲಿ ಸೇವಸಲು ಇಷ್ಟಪಡುವುದಿಲ್ಲ, ಇದು ಸುವಾಸನೆಯನ್ನು ಹೊಂದಿಲ್ಲ. ಆದರೆ ಇದೊಂದು ಔಷಧೀಯ ಗುಣವಿರುವ ಎಣ್ಣೆಯಾಗಿದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ, ಸೋಪಿನಲ್ಲಿ, ಔಷಧಿಗಳಲ್ಲಿ ಮಸಾಜ್ ಮಾಡುವಾಗ ಹೀಗೆ ನಾನಾ ರೀತಿಯಲ್ಲಿ ಬಳಸಬಹುದು. ಈ ಪ್ರಯೋಜನಕಾರಿ ಎಣ್ಣೆ ಎಷ್ಟೊಂದು ಪ್ರಯೋಜಕಾರಿ ಎಂದು ತಿಳಿಯಲು ಮುಂದೆ ಓದಿ.

1. ಹೊಟ್ಟೆನೋವು: ಮಲಬದ್ಧತೆ ಅಥವಾ ಡಯೆರಿಯಾ ಕಾಯಿಲೆಗೆ ತುಂಬಾ ಪ್ರಯೋಜಕಾರಿಯಾದ ಔಷಧಿಯಾಗಿದೆ. ಹರಳೆಣ್ಣೆ ಕಹಿಯಾಗಿರುವುದರಿಂದ ಈ ಎಣ್ಣೆಯನ್ನು ಹಾಗೆ ಸೇವಿಸುವ ಬದಲು ಜ್ಯೂಸ್ ಜೊತೆ ಮಿಶ್ರ ಮಾಡಿ ಸೇವಿಸಿದರೆ ಕಹಿ ಕಡಿಮೆಯಾಗುತ್ತದೆ.

2 ಮುಟ್ಟಿನ ತೊಂದರೆ: ಈ ಎಣ್ಣೆಯಲ್ಲಿರುವ ರಿಸಿನೋಲಿಕ್ ಆಸಿಡ್ ಮುಟ್ಟು ತಡವಾಗಿ ಆಗುವುದು ಅಥವಾ ಅಧಿಕ ದಿನಗಳ ರಕ್ತಸ್ರಾವ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಇದನ್ನು ಹೆರಿಗೆ ನೋವನ್ನು ಕಡಿಮೆ ಮಾಡಲು ಸಹ ಬಳಸಬಹುದು. ಹೆರಿಗೆಯ ನಂತರ ಎದೆ ಹಾಲನ್ನು ಹೆಚ್ಚಿಸಲು ಈ ಎಣ್ಣೆಯನ್ನು 1/4 ಚಮಚದಷ್ಟು ಹರಳೆಣ್ಣೆಯನ್ನು ಕುಡಿಯುವುದು ಒಳ್ಳೆಯದು.

3. ತ್ವಚೆ ಸಮಸ್ಯೆ: ಹರಳೆಣ್ಣೆಯನ್ನು ಚಿಕ್ಕ ಗಾಯಗಳಾದಾಗ, ಸೂರ್ಯನ ಕಿರಣಗಳಿಂದ ಮುಖ ಕಪ್ಪಡರಿದಾಗ , ಮೊಡವೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಈ ಹರಳೆಣ್ಣೆ ತುಂಬಾ ಪ್ರಯೋಜನಕಾರಿ. ಹರಳೆಣ್ಣೆಯನ್ನು ಮಲಗುವ ಮುಂಚೆ ಮುಖಕ್ಕೆ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕೆಲೆಯನ್ನು ಹೋಗಲಾಡಿಸಬಹುದು ಅಲ್ಲದೆ ನೆರಿಗೆ ಬರುವುದನ್ನು ತಡೆಯಬಹುದು.

4. ಕೂದಲು: ಹರಳೆಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಬರುವುದಿಲ್ಲ, ಕೂದಲು ಸಹ ದಪ್ಪವಾಗಿ ಬೆಳೆಯುತ್ತದೆ. ಕಣ್ಣಿನ ರೆಪ್ಪೆ ತುಂಬಾ ತೆಳುವಾಗಿದ್ದರೆ ಇದನ್ನು ಹಚ್ಚುವುದರಿಂದ ರೆಪ್ಪೆ ಆಕರ್ಷಕವಾಗಿ ಕಾಣುವುದು. ಇದರಲ್ಲಿರುವ ಕೊಬ್ಬಿನಂಶ ಕೂದಲಿನ ಬುಡವನ್ನು ತೇವವಾಗಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ.

ಈ ಎಣ್ಣೆಯಲ್ಲಿ ನ್ಯೂಟ್ರಿಷಿಯಸ್ ಅಂಶ ಇಲ್ಲದಿರುವುದರಿಂದ ಇದನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದಿಲ್ಲ.

English summary

Benefit Of Castroil | Usage Of Castro Oil | ಹರಳೆಣ್ಣೆಯ ಪ್ರಯೋಜನಗಳು | ಹರಳೆಣ್ಣೆಯ ಬಳಕೆ

Even after its strong unpleasant taste, castor oil benefits is utilized in cosmetics, soaps, textiles, medicines, massage oils and many other everyday products.
Story first published: Wednesday, December 7, 2011, 11:12 [IST]
X
Desktop Bottom Promotion