For Quick Alerts
ALLOW NOTIFICATIONS  
For Daily Alerts

ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

By Super
|
Snoring and Health Problem
ಗೊರಕೆ ಹೊಡೆಯುವುದು ಹಲವರ ಸಾಮಾನ್ಯ ಸಮಸ್ಯೆ. ನಿದ್ದೆಯನ್ನು ಹಾಳುಗೆಡಹುವ ಈ ಗೊರಕೆ ಸಮಸ್ಯೆಯಿಂದ ಅನೇಕರು ಬಳಲುತ್ತಿರುತ್ತಾರೆ. ಆದರೆ ಗೊರಕೆ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದೆ ಉಸಿರಾಟದ ಗಂಭೀರ ತೊಂದರೆಯೂ ಉಂಟಾಗಬಹುದು.

ವಯಸ್ಸಾದಂತೆ ಗೊರಕೆ ಬರುವುದು ಸಹಜ. ಆದರೆ ಗೊರಕೆಗೆ ವಯಸ್ಸೊಂದೇ ಕಾರಣವಾಗಬೇಕಿಲ್ಲ. ಇನ್ನೂ ಅನೇಕ ಕಾರಣಗಳಿವೆ. ಆ ಕಾರಣಗಳನ್ನು ತಿಳಿದುಕೊಂಡರೆ ಗೊರಕೆ ನಿವಾರಣೆಗೆ ಸಹಕಾರಿಯಾಗುತ್ತದೆ. ಅದೇನೆಂದು ಇಲ್ಲಿ ತಿಳಿದುಕೊಳ್ಳಿ.

ಗೊರಕೆಗೆ ಕಾರಣಗಳು ಯಾವುದು?

* ತೂಕ ಹೆಚ್ಚಳ:
ತೂಕ ಹೆಚ್ಚಳವೂ ಗೊರಕೆಗೆ ಸಾಮಾನ್ಯ ಕಾರಣ. ಕೆಲವು ಬಾರಿ ಕುತ್ತಿಗೆಯಲ್ಲಿ ಸೇರಿಕೊಳ್ಳುವ ಕೊಬ್ಬು, ಗಂಟಲಿನ ಎಲುಬನ್ನು ಎಲುಬನ್ನು ಕಿರಿದಾಗಿಸಿ ಗೊರಕೆ ಉಂಟುಮಾಡುತ್ತದೆ. ಇದನ್ನು ಹಾಗೇ ಬಿಟ್ಟರೆ ಉಸಿರಾಟದ ತೊಂದರೆಯೂ ಬರುತ್ತದೆ. ಆದ್ದರಿಂದ ಅನವಶ್ಯಕ ತೂಕವನ್ನು ಕಡಿಮೆಮಾಡಿಕೊಳ್ಳುವುದು ತುಂಬಾ ಮುಖ್ಯ.

* ವಯಸ್ಸು: ದೇಹಕ್ಕೆ ವಯಸ್ಸಾದಂತೆ ಗಂಟಲಿನಲ್ಲಿನ ಎಲುಬುಗಳು ಬಿಗಿ ಕಳೆದುಕೊಂಡು ಗಾಳಿಯಾಡುವ ದಾರಿಯನ್ನು ಕಿರಿದುಗೊಳಿಸುತ್ತದೆ. ಅದಕ್ಕಾಗಿಯೇ ವಯಸ್ಸಾದಂತೆ ಗೊರಕೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

* ಕೆಮ್ಮು, ಶೀತ ಮತ್ತು ಮೂಗಿನ ಸಮಸ್ಯೆ: ಕೆಲವೊಂದು ಬಾರಿ ಮೂಗಿಗೆ ಸೋಂಕು ತಗುಲಿ ಮೂಗಿನ ಒಳ್ಳೆಗಳು ಮುಚ್ಚಿಕೊಳ್ಳುವುದರಿಂದ ಗೊರಕೆ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ತೊಂದರೆ ಉಂಟಾದ ತಕ್ಷಣವೇ ಉಪಶಮನ ಮಾಡಿಕೊಳ್ಳಬೇಕು. ಮೂಗಿನ ಸಮಸ್ಯೆಯಿಂದ ಸೈನಸ್ ಆಪರೇಶನ್ ಮಾಡಿಸಿಕೊಂಡವರಲ್ಲಿ ಕೆಲವು ಬಾರಿ ಗೊರಕೆ ಉಂಟಾಗುತ್ತದೆ. ಈ ಸಮಯದಲ್ಲಿ ವೈದ್ಯರ ಸೂಕ್ತ ಸಲಹೆಯನ್ನು ಪಾಲಿಸುವುದು ಅತಿ ಅವಶ್ಯಕ.

* ವಂಶವಾಹಿ: ವಂಶವಾಹಿಯಿಂದಲೂ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಗುಣಪಡಿಸುವುದು ಸ್ವಲ್ಪ ಕಷ್ಟದ ವಿಚಾರವೇ. ಆದರೆ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಗೊರಕೆ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಸಾಧ್ಯವಿದೆ.

ಗೊರಕೆಗೆ ಮೂಲ ಕಾರಣ ತಿಳಿದುಕೊಂಡು ಅದಕ್ಕೆ ತಕ್ಷಣವೇ ಪರಿಹಾರ ಕಂಡುಕೊಂಡರೆ ಉತ್ತಮ. ವಯಸ್ಸು ಮತ್ತು ವಂಶವಾಹಿಯ ಗೊರಕೆ ಸಮಸ್ಯೆಯಿಂದ ಆರೋಗ್ಯಕ್ಕೆ ಅಷ್ಟು ತೊಂದರೆಯಿಲ್ಲ. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಗೊರಕೆ ಸಮಸ್ಯೆ ಉಂಟಾದರೆ ಗಂಭೀರವಾಗಿ ಪರಿಗಣಿಸಲೇಬೇಕು. ಆದ್ದರಿಂದ ಗೊರಕೆ ಪ್ರಾರಂಭಗೊಂಡ ತಕ್ಷಣವೇ ಪರಿಹಾರ ಕಂಡುಕೊಂಡರೆ ಉತ್ತಮ.

English summary

Reasons of Snoring | Snoring and Health Problem | ಗೊರಕೆ ಹೊಡೆಯಲು ಕಾರಣ | ಗೊರಕೆ ಮತ್ತು ಆರೋಗ್ಯ ಸಮಸ್ಯೆ

Snoring can create sleep hindrance and constant snoring may also lead to nose infection. The reasons of snoring is often thought to be old age but the truth is that it is not the only reason. There are several reasons for snoring. Take a look.
X
Desktop Bottom Promotion