For Quick Alerts
ALLOW NOTIFICATIONS  
For Daily Alerts

ಟೂಥ್ ಬ್ರಶ್ ನಿಂದ ಹಲ್ಲಿನಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗುತ್ತಾ?

|
Tips to Make your Tooth Brush free from Bacteria
ಹಲ್ಲಿನಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾ ನಿವಾರಿಸುವ ನಿಮ್ಮ ಟೂಥ್ ಬ್ರಶ್ ನಲ್ಲಿಯೇ ಬ್ಯಾಕ್ಟೀರಿಯಾಗಳಿರುತ್ತವೆ ಎಂದರೆ ನೀವು ನಂಬುತ್ತೀರಾ? ಆದರೆನಂಬಲೇಬೇಕಾಗುತ್ತೆ.

ಹಲ್ಲುಗಳ ಆರೋಗ್ಯಕ್ಕೆ ಅವಶ್ಯಕವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡರೂ ಹಲ್ಲಿನ ಸಮಸ್ಯೆ ನಿಮ್ಮನ್ನು ಕಾಡುತ್ತಿವೆ ಎಂದಾದರೆ ಅದಕ್ಕೆ ನಿಮ್ಮ ಟೂಥ್ ಬ್ರಶ್ ಕೂಡ ಕಾರಣವಾಗಿರುವ ಸಾಧ್ಯತೆಯಿದೆ. ಒಸಡಿನಲ್ಲಿ ರಕ್ತಸ್ರಾವ, ಬಾಯಿ ದುರ್ನಾತ, ಸೂಕ್ಷ್ಮ ಹಲ್ಲು ಈ ಸಮಸ್ಯೆಗಳಿಗೆಲ್ಲಾ ಟೂಥ್ ಬ್ರಶ್ ಕೂಡ ಕಾರಣವಾಗಿರಬಹುದು.

ಟೂಥ್ ಬ್ರಶ್ ನಲ್ಲಿನ ಕ್ರಿಮಿ ಕೀಟಾಣುಗಳು ಅತಿ ಸುಲಭವಾಗಿ ನಿಮ್ಮ ಬಾಯನ್ನು ಸೇರಿಕೊಳ್ಳಬಹುದು. ಸರಿಯಾಗಿ ನಿರ್ವಹಣೆ ಮಾಡದ ಟೂಥ್ ಬ್ರಶ್ ಬಾಯಿ ಮತ್ತು ಹಲ್ಲಿನ ಗಂಭೀರ ಸಮಸ್ಯೆಗೆ ಈಡುಮಾಡಬಹುದು. ಆದ್ದರಿಂದ ಟೂಥ್ ಬ್ರಶ್ ಶುದ್ಧವಾಗಿರಿಸಲು ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸಿದರೆ ಉತ್ತಮ.

ಟೂಥ್ ಬ್ರಶ್ ಶುದ್ಧವಾಗಿಡಲು ಏನು ಮಾಡಬೇಕು?

1. ಬ್ರಶ್ ಮಾಡಿದ ನಂತರ ಟೂಥ್ ಬ್ರಶ್ ಅನ್ನು ಅಡ್ಡಡ್ಡವಾಗಿಡಬೇಡಿ. ನಿಲ್ಲುವಂತೆ ಬ್ರಶ್ ಗಳನ್ನು ಇಟ್ಟರೆ ಅದರಲ್ಲಿನ ನೀರೂ ಬೇಗ ಹೋಗಿ ತೇವವೂ ಇಲ್ಲದಂತಾಗುತ್ತದೆ. ಇನ್ನೊಬ್ಬರ ಟೂಥ್ ಬ್ರಶ್ ಗೆ ನಿಮ್ಮ ಬ್ರಶ್ ತಾಕದಂತೆ ಇಡಿ.

2. ಹಲ್ಲುಜ್ಜುವ ಮುನ್ನ ಮತ್ತು ನಂತರ ಒಂದು ಅಥವಾ ಎರಡು ನಿಮಿಷ ರಭಸವಾಗಿ ಸುರಿಯುವ ನಲ್ಲಿ ನೀರಿನಡಿಯಲ್ಲಿ ಟೂಥ್ ಬ್ರಶ್ ಅನ್ನು ಇಡಬೇಕು.

3. ವಾರಕ್ಕೊಮ್ಮೆ ನಿಮ್ಮ ಟೂಥ್ ಬ್ರಶ್ ಅನ್ನು ಬಿಸಿ ನೀರಿನಲ್ಲಿ 5 ನಿಮಿಷ ನೆನೆಯಲು ಬಿಡಿ. ಇದು ಬ್ರಶ್ ಬೇಗನೆ ಹಾಳಾಗುವಂತಾದರೂ ಸಹ ತುಂಬಾ ಪರಿಣಾಮಕಾರಿಯಾಗಿ ಕ್ರಿಮಿ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

4. ವಿನೆಗರ್ ನಲ್ಲಿ ಕೆಲವೇ ನಿಮಿಷ ಬ್ರಶ್ ನೆನೆಸಿ ಮತ್ತೆ ಅದನ್ನು ತುಂಬಾ ಬಿಸಿಯಿರುವ ನೀರಿನಿಂದ ಸಂಪೂರ್ಣವಾಗಿ ತೊಳೆದುಬಿಡಬೇಕು. ಆದರೆ ನೀರು ನಿಮ್ಮ ಕೈಗೆ ತಾಕದಂತೆ ಎಚ್ಚರವಹಿಸಿ.

5. ಟೂಥ್ ಬ್ರಶ್ ಅನ್ನು ಆಗಾಗ್ಗೆ ಬದಲಿಸುತ್ತಿರಿ.

English summary

Tips to Make your Tooth Brush free from Bacteria | Oral Hygeine Tips | ಟೂಥ್ ಬ್ರಶ್ ಅನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುವ ವಿಧಾನ | ಬಾಯಿ ಮತ್ತು ಹಲ್ಲಿನ ಸ್ವಾಸ್ಥ್ಯ

If you are suffering from bleeding gums, foul breath or sensitive teeth your toothbrush also can be a reason for this problems. Bacteria's or germs can be easily transferred from your toothbrush to your mouth. Take a look to know how to keep clean your toothbrush.
Story first published: Thursday, November 10, 2011, 14:56 [IST]
X
Desktop Bottom Promotion