For Quick Alerts
ALLOW NOTIFICATIONS  
For Daily Alerts

ಸಂಧಿವಾತಕ್ಕೆ ಮೀನಿನೆಣ್ಣೆ ಹೇಗೆ ಸಹಕಾರಿ?

|
Omega 3 for Osteoarthritis Patients
ಅಸ್ಥಿ ಸಂಧಿವಾತದಿಂದ ಬಳಲುತ್ತಿದ್ದವರಿಗೆ ಮೀನಿನೆಣ್ಣೆ ತುಂಬಾ ಸಹಕಾರಿ ಎಂದಿದೆ ಇತ್ತೀಚಿನ ಅಧ್ಯಯನ. ಇದರಲ್ಲಿರುವ ಒಮೆಗಾ 3 ಅಂಶ ಅತಿ ಪರಿಣಾಮಕಾರಿಯಾಗಿ ಸಂಧಿವಾತವನ್ನು ತಡೆಯುತ್ತದೆ ಮತ್ತು ಸಂಧಿವಾತ ಸಮಸ್ಯೆ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ ಎಂದೂ ತಿಳಿಸಿದೆ.

ಮೀನೆಣ್ಣೆ ಮತ್ತು ಎಳ್ಳೆಣ್ಣೆ ಅಥವಾ ಹುಚ್ಚೆಳ್ಳೆಣ್ಣೆಯಲ್ಲಿ ಅಧಿಕ ಅಂಶದಲ್ಲಿ ಒಮೆಗಾ-3 ಅಂಶವಿರುವುದರಿಂದ ಇದು ನಿಮ್ಮ ಡಯಟ್ ನೊಂದಿಗಿದ್ದರೆ ನಿಮ್ಮ ಆರೋಗ್ಯ ಸಮಸ್ಯೆಯನ್ನು ಸುಧಾರಿಸಲು ಸಹಕರಿಸುತ್ತದೆ ಎಂದು ತಿಳಿಸಿದೆ.

ಸಾಮಾನ್ಯ ಆಹಾರದ ಡಯಟ್ ಗಿಂತ ಶೇಕಡಾ 50 ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ಸಂಧಿವಾತ ಸಮಸ್ಯೆಯನ್ನು ನಿವಾರಿಸುತ್ತದೆ ಎಂದಿದೆ ಅಧ್ಯಯನ ಕೈಗೊಂಡಿದ್ದ ಬ್ರಿಸ್ಟಲ್ ವಿಶ್ವವಿದ್ಯಾಲಯ.

ಒಮೆಗಾ 3 ಕೇವಲ ಸಮಸ್ಯೆಯನ್ನು ನಿವಾರಿಸುವುದಷ್ಟೇ ಅಲ್ಲ, ಇದನ್ನು ಸಂಧಿವಾತ ಸಮಸ್ಯೆ ಇಲ್ಲದವರು ಸೇವಿಸಿದರೆ, ವಯಸ್ಸಾದಂತೆ ಈ ಸಮಸ್ಯೆ ಅವರಿಗೆ ತಗುಲುವುದನ್ನೂ ತಡೆಯುತ್ತದೆ. ಮತ್ತು ಸ್ನಾಯುಗಳಿಗೆ ಬಲ ನೀಡುತ್ತದೆ ಎನ್ನಲಾಗಿದೆ.

ಒಮೆಗಾ 3 ಇಂದ ಪರೋಕ್ಷವಾಗಿ ಹೃದಯ ತೊಂದರೆ, ಇನ್ನಿತರ ಆರೋಗ್ಯ ಸಮಸ್ಯೆಯನ್ನೂ ತಡೆಗಟ್ಟಬಹುದು ಎಂದು ಅಧ್ಯಯನ ತಿಳಿಸಿದೆ.

English summary

Omega 3 for Osteoarthritis Patients | Osteoarthritis Problem | ಅಸ್ಥಿ ಸಂಧಿವಾತಕ್ಕೆ ಒಮೆಗಾ 3 ಸಹಕಾರಿ | ಅಸ್ಥಿ ಸಂಧಿವಾತ ಸಮಸ್ಯೆ

People who are suffering from osteoarthrisitis may have good benefit from fish oil or flax oil. The omega 3 in this oil significantly reduce the symptoms and progression of osteoarthritis problem.
Story first published: Friday, October 28, 2011, 11:53 [IST]
X
Desktop Bottom Promotion