For Quick Alerts
ALLOW NOTIFICATIONS  
For Daily Alerts

ಹೊಟ್ಟೆ ತಳಮಳ ಆದ್ರೆ ಹೀಗೆ ಮಾಡಿ...

|
How to Cure Diarrhea
ಆಹಾರದಲ್ಲಿ ವ್ಯತ್ಯಾಸವಾದರೆ, ತುಂಬಾ ತಿಂದರೆ ಅಥವಾ ಅಲರ್ಜಿಯಾದರೆ ಜೀರ್ಣಕ್ರಿಯೆಯಲ್ಲಿ ತೊಂದರೆ ಕಾಣಿಸಿಕೊಳ್ಳುತ್ತೆ. ಇದರಿಂದ ಹೊಟ್ಟೆ ತಳಮಳಗೊಂಡು ಭೇದಿಯಾಗುತ್ತೆ. ಈ ಸಮಸ್ಯೆಗೆ ಮನೆಯಲ್ಲೇ ತಕ್ಷಣದ ಪರಿಹಾರ ಹೇಗೆ ಕಂಡುಕೊಳ್ಳಬಹುದು ಎಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಹೊಟ್ಟೆ ತಳಮಳಗೊಂಡರೆ ಏನು ಮಾಡಬೇಕು?

1. ಸಕ್ಕರೆ ಉಪ್ಪಿನ ನೀರು: ಹೊಟ್ಟೆ ಕೆಟ್ಟಿದಂತೆ ಕಂಡರೆ ಮೊದಲು ಒಂದು ಗ್ಲಾಸ್ ಬಿಸಿ ನೀರಿಗೆ ಉಪ್ಪು ಸಕ್ಕರೆ ಮಿಶ್ರಣ ಮಾಡಿ ಕುಡಿಯಿರಿ. ಇದು ಸುಸ್ತಾಗುವುದನ್ನು ತಡೆಯುತ್ತದೆ. ಮಸಾಲೆ ರಹಿತ ಆಹಾರ ಮತ್ತು ಎಳನೀರನ್ನು ಈ ಸಮಯದಲ್ಲಿ ಸೇವಿಸಬೇಕು.

2. ಮಜ್ಜಿಗೆ, ಮೆಂತ್ಯೆ: ಮಜ್ಜಿಗೆಯೊಂದಿಗೆ ಮೆಂತ್ಯೆಕಾಳನ್ನು ಬೆರೆಸಿ ಸೇವಿಸಿದರೆ ಭೇದಿ ಬೇಗನೆ ನಿಯಂತ್ರಣಕ್ಕೆ ಬರುತ್ತದೆ. ಮಜ್ಜಿಗೆಯನ್ನು 3 ಬಾರಿ ಕುಡಿಯಿರಿ.

3. ಗ್ರೀನ್, ಬ್ಲಾಕ್ ಟೀ: ಗ್ರೀನ್ ಅಥವಾ ಬ್ಲಾಕ್ ಟೀ ಸೇವನೆಯಿಂದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇದು ದೇಹಕ್ಕೆ ಶಕ್ತಿ ನೀಡಿ, ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ.

4. ನಿಂಬೆ, ಕಿತ್ತಳೆ ಜ್ಯೂಸ್: ಕಿತ್ತಳೆ ಜ್ಯೂಸ್ ಈ ಸಮಯಕ್ಕೆ ತುಂಬಾ ಒಳ್ಳೆಯದು. ನಿಂಬೆಜ್ಯೂಸ್ ಕೂಡ ಉತ್ತಮ ಪರಿಹಾರ.

5. ಬೆಳ್ಳುಳ್ಳಿ: ಬೆಳ್ಳುಳ್ಳಿ ಪೇಸ್ಟ್ ಹೊಟ್ಟೆಯಲ್ಲಿನ ಕ್ರಿಮಿ ಕೀಟಾಣುಗಳನ್ನು ಕೊಂದು ಹೊಟ್ಟೆ ಇನ್ನಿತರ ಅಲರ್ಜಿಗೆ ಒಳಗಾಗುವುದನ್ನು ತಪ್ಪಿಸುತ್ತದೆ.

6. ಹಾಗಲಕಾಯಿ: ಹಾಗಲಕಾಯಿ ರಸ ಅನೇಕ ಕಾಯಿಲೆಗಳಿಗೆ ಒಳ್ಳೆ ಮದ್ದು. ಇಂತಹ ಸಮಯದಲ್ಲಿ ಸೇವಿಸಿದರೆ ದಾಹವನ್ನು ನೀಗಿಸುವುದಲ್ಲದೆ ದೇಹ ಇನ್ನಷ್ಟು ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ.

7. ನೀರು: ತಣ್ಣನೆಯ ನೀರನ್ನು ಕುಡಿಯುವುದು ಮತ್ತು ತಿನ್ನುವ ಆಹಾರದಲ್ಲಿ ಸಮತೋಲನ ಕಾಪಾಡಿಕೊಳ್ಳುವುದೂ ಈ ಸಮಯದಲ್ಲಿ ಅಷ್ಟೇ ಮುಖ್ಯವಾಗುತ್ತದೆ.

English summary

How to Cure Diarrhea | Diarrhea Healthy Diet | ಹೊಟ್ಟೆ ತಳಮಳ ಕಡಿಮೆ ಮಾಡುವುದು ಹೇಗೆ? | ಭೇದಿಯಾದರೆ ಈ ಆಹಾರ ಸೇವಿಸಿ

Food poisoning, overeating or allergies may be the common causes for the digestive problem. Today, we will share some diarrhea home remedies that will come to use the next time you suffer from it. Take a look.
Story first published: Friday, October 14, 2011, 16:14 [IST]
X
Desktop Bottom Promotion