For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ತಡೆಯೋದಕ್ಕೆ ಏನು ಮಾಡಬಹುದು?

|
Preventing Migraine is Easy
ಮೈಗ್ರೇನ್ ತಲೆನೋವು ಕಾಣಿಸಿಕೊಂಡರೆ ಉಪಶಮನ ಮಾಡೋದು ಅಷ್ಟು ಸುಲಭವಲ್ಲ. ಮಾತ್ರೆ ತೆಗೆದುಕೊಂಡರೂ ಮೈಗ್ರೇನ್ ಬೇಗ ಹೋಗೋದಿಲ್ಲ. ಆದರೆ ನಮ್ಮ ಜೀವನಶೈಲಿಯಲ್ಲಿ ಸ್ವಲ್ಪವೇ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಮೈಗ್ರೇನ್ ಎಂಬ ತಲೆನೋವು ಕಾಡುವುದರಿಂದ ತಪ್ಪಿಸಿಕೊಳ್ಳಬಹುದು.

ಮೈಗ್ರೇನ್ ತಡೆಯುವ ಮಾರ್ಗಗಳು:

* ಮೈಗ್ರೇನ್ ಕಾರಣ ತಿಳಿಯಿರಿ: ನಿಮಗೆ ಮೈಗ್ರೇನ್ ಉಂಟು ಮಾಡುವ ಕಾರಣ ಮತ್ತು ಪ್ರಚೋದಕಗಳನ್ನು ಮೊದಲು ಗುರುತಿಸಿ. ಒಬ್ಬೊಬ್ಬರಿಗೆ ಒಂದೊಂದು ರೀತಿಯಿಂದ ಮೈಗ್ರೇನ್ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿಮಗೆ ಯಾವುದು ಮೂಲ ಕಾರಣ ಎಂಬುದನ್ನು ಮೊದಲು ತಿಳಿದುಕೊಳ್ಳಿ.

* ಪ್ರಚೋದಕಗಳಿಂದ ತಪ್ಪಿಸಿಕೊಳ್ಳಿ: ಮೈಗ್ರೇನ್ ಪ್ರಚೋದಿಸುವ ಅಂಶಗಳಿಂದ ನಿಮ್ಮನ್ನು ದೂರವಿರಿಸಿಕೊಳ್ಳಲು ಪ್ರಯತ್ನಿಸಿ. ಕೆಲವು ಆಹಾರ, ಶಬ್ದ, ಸುಗಂಧಗಳೂ ಕೂಡ ಮೈಗ್ರೇನ್ ಗೆ ಕಾರಣವಾಗಬಹುದು. ಇವುಗಳಿಂದ ತಪ್ಪಿಸಿಕೊಂಡರೆ ಮೈಗ್ರೇನ್ ತಲೆ ಹತ್ತುವುದನ್ನು ತಡೆಯಬಹುದು.

* ನಿಯಮಿತ ಸಮಯಕ್ಕೆ ಊಟ ಮತ್ತು ನಿದ್ದೆ: ದಿನವೂ ಒಂದೇ ಸಮಯಕ್ಕೆ ಮಲಗುವುದು, ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. 7-8 ಗಂಟೆ ನಿದ್ದೆ ನಿಮ್ಮದಿರಲಿ. ಸರಿಯಾದ ಸಮಯಕ್ಕೆ ಊಟ ಮತ್ತು ಬೆಳಗ್ಗಿನ ತಿಂಡಿಯನ್ನು ಮುಗಿಸಿಬಿಡಿ.

* ಒತ್ತಡ ಕಡಿಮೆಮಾಡಿಕೊಳ್ಳಿ: ಒತ್ತಡವೂ ಮೈಗ್ರೇನ್ ಗೆ ಮುಖ್ಯ ಕಾರಣ. ಆದ್ದರಿಂದ ಕೆಲಸದಲ್ಲಿ, ಮನೆಯಲ್ಲಿ ಯಾವುದೇ ಒತ್ತಡವಿದ್ದರೂ ಅದನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಒತ್ತಡ ನಿವಾರಿಸಲು ಸಹಾಯ ಮಾಡುವ ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ರಿಲ್ಯಾಕ್ಸ್ ಗೊಳಿಸುತ್ತೆ. ನೀವು ಒತ್ತಡಕ್ಕೊಳಗಾದಾಗ ಅದರಿಂದ ಹೊರಬರುವಂತಹ, ನಿಮಗೆ ಸುಲಭವೆನಿಸುವ ಮಾರ್ಗವನ್ನು ಅನುಸರಿಸಿ.

* ನಡಿಗೆಯಿರಲಿ: ದಿನವೂ ಒಂದಿಷ್ಟು ವ್ಯಾಯಾಮ ನಿಮ್ಮದಾಗಿರಲಿ. ನಡಿಗೆ, ಸೈಕ್ಲಿಂಗ್, ಸ್ವಿಮ್ಮಿಂಗ್ ಮುಂತಾದುವು ನಿಮ್ಮ ಒತ್ತಡ ಕಡಿಮೆಮಾಡುವುದರೊಂದಿಗೆ ದೇಹವನ್ನೂ ಚೈತನ್ಯದಿಂದಿರಿಸುತ್ತೆ. ಈ ಮೂಲಕ ಮೈಗ್ರೇನ್ ಬರುವುದನ್ನೂ ತಡೆಗಟ್ಟುತ್ತದೆ.

English summary

Preventing Migraine is Easy | Depression and Migraine | ಮೈಗ್ರೇನ್ ತಡೆಗೆ ಕೆಲವು ಸಲಹೆ | ಒತ್ತಡ ಮತ್ತು ಮೈಗ್ರೇನ್

If you are experiencing a continuous migraine, it is necessary to take some preventive steps to avoid it. Some preventive steps can help you to reduce the severity of the migraine. See here to know what steps you can take to prevent migraine.
Story first published: Friday, October 7, 2011, 14:20 [IST]
X
Desktop Bottom Promotion