For Quick Alerts
ALLOW NOTIFICATIONS  
For Daily Alerts

ತ್ವಚೆ ಬಿಳುಚಿಕೊಳ್ಳಲು ವಿಟಮಿನ್ ಡಿ ಕೊರತೆ ಕಾರಣ!

|
Vitamin D deficiency Leads to Pale skin
ನೀವು ತುಂಬಾ ಬಿಳುಚಿಕೊಂಡಂತ್ತಿದ್ದೀರಾ? ಅದಕ್ಕೆ ನಿಮ್ಮ ಬ್ಯೂಟಿ ಪ್ರಾಡಕ್ಟ್ ಕಾರಣ ಎಂದು ನಿಮಗನ್ನಿಸಬಹುದು. ಆದರೆ ನಿರ್ದಿಷ್ಟವಾದ ಒಂದು ವಿಟಮಿನ್ ನಿಮ್ಮ ದೇಹದಲ್ಲಿ ಕಡಿಮೆಯಾದರೆ ಚರ್ಮ ಹೀಗೆ ಬಿಳುಚಿಕೊಳ್ಳುತ್ತೆ ಎಂದಿದೆ ನೂತನ ಸಂಶೋಧನೆ.

ಕ್ಯಾನ್ಸರ್ ಕಾರಣ ಮತ್ತು ನಿಯಂತ್ರಣ ಎಂಬ ಅಧ್ಯಯನವನ್ನು ಸುಮಾರು 1,200 ಜನರ ಮೇಲೆ ನಡೆಸಿದಾಗ, ಅದರಲ್ಲಿ 730 ಮಂದಿಗೆ ವಿಟಮಿನ್ ಡಿ ಮಟ್ಟ ಸರಿಯಾಗಿದ್ದು, ಉಳಿದವರಲ್ಲಿ ವಿಟಮಿನ್ ಡಿ ಕೊರತೆಯಿರುವುದು ಕಂಡುಬಂದಿದೆ. ವಿಟಮಿನ್ ಡಿ ಕಡಿಮೆಯಾಗಿದ್ದವರಲ್ಲಿ ಸುಮಾರು ಮಂದಿ ತುಂಬಾ ಬಿಳುಚಿಕೊಂಡಿದ್ದರು ಎಂದು ಅಧ್ಯಯನ ತಿಳಿಸಿದೆ.

ತುಂಬಾ ಬೆಳ್ಳಗಿರುವ ಮಂದಿಗೆ ವಿಟಮಿನ್ ಡಿ ಹೇರಳವಾಗಿರುವ ಸೂರ್ಯನ ಕಿರಣಗಳಿಗೆ ಮೈಯ್ಯೊಡ್ಡಲು ಸಾಧ್ಯವಾಗದಿರುವುದರಿಂದ ಅವರು ವಿಟಮಿನ್ ಡಿ ಸಾರವಿರುವ ಇನ್ನಿತರ ಆಹಾರವನ್ನು ಸೇವಿಸುವುದು ಅವಶ್ಯ ಎಂದು ಸಂಶೋಧಕ ಜುಲಿಯಾ ನ್ಯೂಟನ್ ಬಿಶಪ್ ತಿಳಿಸಿದ್ದಾರೆ.

ವಿಟಮಿನ್ ಡಿ ದೇಹದಲ್ಲಿ 25 ನಾನೊಮೋಲ್ ಗಿಂತ ಕಡಿಮೆಯಾದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಮೂಳೆಗಳು ಬಲಿಷ್ಠವಾಗಿರಬೇಕೆಂದರೆ ದೇಹಕ್ಕೆ 60 ನಾನೊಮೋಲ್ ವಿಟಮಿನ್ ಡಿ ಅವಶ್ಯಕತೆಯಿದೆ ಎಂದು ಅಧ್ಯಯನ ತಿಳಿಸಿದೆ.

ವಿಟಮಿನ್ ಡಿ ಕೊರತೆಯಿದ್ದವರು ಯಾವ ಆಹಾರ ತೆಗೆದುಕೊಳ್ಳಬೇಕು?
* ಕಾಡ್ ಲಿವರ್ ಆಯಿಲ್
* ಮೊಸರು, ಮೊಟ್ಟೆ, ಟ್ಯೂನಾ, ಹಾಲು ಇವುಗಳೊಂದಿಗೆ ಹಣ್ಣು, ತರಕಾರಿಗಳ ಸೇವನೆ ಇರಲಿ.

English summary

Essential Vitamins for Health | Vitamin D deficiency Leads to Pale skin | ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ | ವಿಟಮಿನ್ ಡಿ ಕೊರತೆ ಚರ್ಮ ಬಿಳುಚಿಕೊಳ್ಳುವಿಕೆಗೆ ಕಾರಣ

A new study suggests the pale color of your skin may be an indication of the low level of vitamin d in your body. So pale-skin colored people should take some vitamin d supplements for their healthy living.
Story first published: Friday, October 7, 2011, 11:41 [IST]
X
Desktop Bottom Promotion