For Quick Alerts
ALLOW NOTIFICATIONS  
For Daily Alerts

ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ

|
Knee pain
ಕೀಲು ನೋವು ಅಥವಾ ಮಂಡಿ ನೋವು ಅನ್ನೋದು ಈಗ ಸಾಮಾನ್ಯ ಅನ್ನಿಸಿಬಿಟ್ಟಿದೆ. ಮೊದಲು ವಯಸ್ಸಾದವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕೀಲು ನೋವು ಇದೀಗ ಎಲ್ಲ ವಯೋಮಾನದವರಿಗೂ ಹಂಚಿಹೋಗಿದೆ. ನಮ್ಮ ದೇಹ ತೂಕದ ನಾಲ್ಕರಷ್ಟು ಹೆಚ್ಚು ಭಾರ ನಮ್ಮ ಮಂಡಿಯ ಮೇಲೇ ಇರುವ ಕಾರಣ ನೋವು ಆಗಾಗೆ ಹೆಚ್ಚುತ್ತಲೇ ಇರುತ್ತದೆ.

ಆದ್ದರಿಂದ ಮಂಡಿ ನೋವನ್ನು ಕಡಿಮೆ ಮಾಡುವ ಕೆಲವು ವ್ಯಾಯಾಮಗಳನ್ನು ಇಲ್ಲಿ ನೀಡಲಾಗಿದೆ. ನೀವೂ ಮಾಡಿನೋಡಿ..

* ಕುರ್ಚಿಯ ಮೇಲೆ ಕುಳಿತುಕೊಂಡು ಪಾದಕ್ಕೆ ಟವಲನ್ನು ಸುತ್ತಿ ಹಿಡಿಯಬೇಕು. ಎರಡೂ ಕೈಗಳಲ್ಲಿ ಟವಲನ್ನು ಹಿಂದಕ್ಕೆ ಎಳೆದಾಗ ಮಂಡಿ ಮಡಚಿದಂತೆ ಆಗುತ್ತದೆ. ಇದನ್ನು 5-10 ಸೆಕೆಂಡ್ ಹಾಗೆಯೇ ಇರಿಸಬೇಕು. ಪ್ರತಿ ಕಾಲಿಗೆ 5 ಬಾರಿ ಮಾಡದರೆ ನೋವು ನಿಯಂತ್ರಣಕ್ಕೆ ಬರುತ್ತದೆ.

* ನೇರವಾಗಿ ನಿಂತುಕೊಂಡು ಮುಂದೆ ಕುರ್ಚಿಯ ಮೇಲೆ ಕಾಲಿರಿಸಿ ಕೈಯಿಂದ ಕಾಲಿನ ಹೆಬ್ಬರಳನ್ನು ಮುಟ್ಟಿಸಬೇಕು. ಮಂಡಿ ಸ್ವಲ್ಪವೇ ಬಾಗುವಂತೆ ಮಾಡಬೇಕು. ಇದನ್ನು 5 ಬಾರಿ ಮಾಡಬೇಕು. ದಿನನಿತ್ಯ ಈ ವ್ಯಾಯಾಮ ಮಾಡಿದರೆ ಒಳ್ಳೆಯದು.

* ಮೆಟ್ಟಿಲ ಬಳಿ ನಿಂತುಕೊಂಡು ಎಡಗಾಲನ್ನು ಮಾತ್ರ ಕೆಳಗಿನ ಮೆಟ್ಟಲಿಗಿಳಿಸಿ ಎತ್ತಿ ಇಳಿಸಿ ಮಾಡುತ್ತಲೇ ಇರಬೇಕು. ಇದು ಮಂಡಿಗೆ ಸ್ವಲ್ಪ ನಿಧಾನವಾಗಿ ರಿಲೀಫ್ ನೀಡುತ್ತದೆ. 30-40 ಸೆಕೆಂಡ್ ಗಳ ಕಾಲ ಎರಡೂ ಕಾಲನ್ನೂ ಹಾಗೆ ಮಾಡಬೇಕು.

* ಒಂದು ಬಟ್ಟೆ ತುಂಡನ್ನು ತೆಗೆದುಕೊಂಡು ಎರಡೂ ಪಾದಗಳಿಗೂ ಅದನ್ನು ಕಟ್ಟಿ ಒಂದು ಕಾಲನ್ನು ಆದಷ್ಟು ಎಳೆಯಬೇಕು. ಬಟ್ಟೆ ಎಷ್ಟು ಎಳೆಯುತ್ತದೋ ಅಷ್ಟೂ ಸಾಧ್ಯ ಮಾಡಬೇಕು. ಇದರಿಂದ ಮಂಡಿ ನೋವು ಗಣನೀಯವಾಗಿ ಕಡಿಮೆ ಯಾಗುತ್ತದೆ.

ಈ ವ್ಯಾಯಾಮವನ್ನು ಮಾಡುವುದರಿಂದ ಮಂಡಿ ನೋವು ಕಡಿಮೆಗೊಳ್ಳುವುದಲ್ಲದೆ ಪ್ರತಿನಿತ್ಯ ಇದನ್ನು ರೂಢಿಸಿಕೊಂಡರೆ ನೋವು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.

English summary

Knee and joint pain | Exercises to reduce knee pain | ಕೀಲು ಮತ್ತು ಮಂಡಿ ನೋವು | ಮಂಡಿ ನೋವು ಕಡಿಮೆ ಮಾಡಲು ವ್ಯಾಯಾಮ

Knee or joint pain is a common problem among older people. Knees are the most commonly affected and injured joints in the body. These joint or knee pain exercises prevents the knees from stiffening and provide support in making movement easier whilst reducing pain.
Story first published: Wednesday, August 3, 2011, 17:01 [IST]
X
Desktop Bottom Promotion