For Quick Alerts
ALLOW NOTIFICATIONS  
For Daily Alerts

ವಿಶ್ವದ ಆರೋಗ್ಯವಂತ ಜನರ ಸಾಮಾನ್ಯ ಜೀವನ ಅಭ್ಯಾಸಗಳು ಗೊತ್ತೆ?

|

ಆರೋಗ್ಯ ಅನ್ನುವುದು ಯಾವುದೇ ಮಾರುಕಟ್ಟೆ ಅಥವಾ ಮಾಲ್ ನಲ್ಲಿ ರೆಡಿಮೇಡ್ ಆಗಿ ಸಿಗುವುದಿಲ್ಲ. ಅದನ್ನು ನಾವು ಸಂಪಾದಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂದು ಹಿರಿಯರು ಹೇಳಿರುವರು. ಅದು ನಿಜ, ಯಾಕೆಂದರೆ ಆರೋಗ್ಯವಿಲ್ಲದೆ ಇದ್ದರೆ ನೀವು ಎಷ್ಟೇ ದುಡಿದರೂ ಅದು ನೀರಿನ ಮೇಲಿಟ್ಟು ಹೋಮದಂತೆ. ದುಡಿದ ಹಣವೆಲ್ಲಾ ವೈದ್ಯರ ಕಿಸೆಗೆ ಹೋಗುವುದು. ಹೀಗಾಗಿ ನಾವು ಆರೋಗ್ಯವಂತರಾಗಿ ಇರಬೇಕು. ಮುಖ್ಯವಾಗಿ ಆರೋಗ್ಯವನ್ನು ಸಂಪಾದಿಸುವುದು ಇಂದಿನ ದಿನಗಳಲ್ಲಿ ಅಷ್ಟು ಸುಲಭದ ಮಾತಲ್ಲ.

ಜಂಕ್ ಫುಡ್ ಹಾಗೂ ಅನಾರೋಗ್ಯಕರ ಜೀವನಶೈಲಿಯಿಂದ ಆವರಿಸಿಕೊಂಡಿರುವಂತಹ ನಾವು ಆರೋಗ್ಯವಂತರಾಗಿ ಇರಬೇಕಾದರೆ ಆಗ ತುಂಬಾ ಕಠಿಣ ಪರಿಶ್ರಮ ಪಡಬೇಕು. ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಜತೆಗೆ, ಒತ್ತಡದ ಜೀವನಶೈಲಿಯಲ್ಲಿ ಸ್ವಲ್ಪ ಸಮಯವನ್ನು ವ್ಯಾಯಾಮ ಮತ್ತು ಯೋಗ ಹಾಗೂ ಧ್ಯಾನಕ್ಕೆ ಮೀಸಲು ಇಡಬೇಕು. ಆಗ ಮಾತ್ರ ನಾವು ಆರೋಗ್ಯ ಸಂಪಾದಿಸಲು ಸಾಧ್ಯವಾಗುವುದು. ಆರೋಗ್ಯವಂತರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವಂತಹ ಕೆಲವೊಂದು ರಹಸ್ಯಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

1. ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ

1. ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ

ಪ್ರತಿನಿತ್ಯವು ಹಲವಾರು ರೀತಿಯ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಹಲವಾರು ರೋಗಗಳನ್ನು ಕೂಡ ಪತ್ತೆ ಮಾಡಲಾಗುತ್ತಾ ಇರುತ್ತದೆ. ಆದರೆ ನೀವು ಈ ರೋಗಗಳ ವಿರುದ್ಧ ಹೋರಾಡಲು ಜೀವನಶೈಲಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಶೇ.80ಕ್ಕೂ ಹೆಚ್ಚಿನ ಸಮಸ್ಯೆಗಳು ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಟೈಪ್ -2 ಮಧುಮೇಹದ್ದಾಗಿದೆ ಮತ್ತು ಶೇ.40ರಷ್ಟು ಕ್ಯಾನ್ಸರ್ ನ್ನು ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ. ವಿಶ್ವದ ಆರೋಗ್ಯವಂತ ಜನರು ಯಾವ ರೀತಿಯ ಜೀವನಶೈಲಿ ಅನುಸರಿಸಿಕೊಂಡು ಹೋಗುವರು ಎನ್ನುವ ಬಗ್ಗೆ ನಾವು ಗಮನಹರಿಸಬೇಕು. ಇದರಿಂದ ನಾವು ಕೂಡ ಜೀವನಶೈಲಿ ಬದಲಾವಣೆ ಮಾಡಿಕೊಂಡು ಆರೋಗ್ಯ ಲಾಭಗಳನ್ನು ಪಡೆಯಬಹುದು.

2. ಸ್ನೇಹಿತರ ಜತೆ ಕಾಲ ಕಳೆಯುವರು

2. ಸ್ನೇಹಿತರ ಜತೆ ಕಾಲ ಕಳೆಯುವರು

ಆರೋಗ್ಯಕರ ಜೀವನದ ಮಂತ್ರವೆಂದರೆ ನೀವು ಯಾವಾಗಲೂ ತುಂಬಾ ಸಂತೋಷವಾಗಿ ಇರುವುದು. ಕುಟುಂಬ ಅಥವಾ ಸ್ನೇಹಿತರ ಜತೆಗೆ ನೀವು ತುಂಬಾ ಖುಷಿಯಿಂದ ಸಮಯ ಕಳೆಯಬೇಕು. ಇದರಿಂದ ದೀರ್ಘಾಯುಷ್ಯ ಪಡೆಯಬಹುದು ಎಂದು ಇದರ ಬಗ್ಗೆ ಸಂಶೋಧನೆ ನಡೆಸಿರುವಂತಹ ವೈದ್ಯರು ಹೇಳುತ್ತಾರೆ. ಏಕಾಂಗಿತನವು ತುಂಬಾ ನೋವುಂಟು ಮಾಡುವುದು ಮಾತ್ರವಲ್ಲದೆ ಅದು ಕೊಲ್ಲುವುದು. ಸಾಮಾಜಿಕವಾಗಿ ಬೆರೆತುಕೊಂಡು, ಸ್ನೇಹಿತರೊಂದಿಗೆ ಖುಷಿಯಾಗಿ ಕಾಲ ಕಳೆಯುವುದರಿಂದ ಹೆಚ್ಚು ಆರೋಗ್ಯ ನೀಡುವುದು ಎಂದು ಅಧ್ಯಯನಗಳು ಹೇಳಿವೆ.

3. ಅವರು ಧೂಮಪಾನ ಮಾಡಲ್ಲ

3. ಅವರು ಧೂಮಪಾನ ಮಾಡಲ್ಲ

ನೀವು ಈವರೆಗೆ ಸಿಗರೇಟ್ ಸೇದುವುದನ್ನು ಬಿಡದೆ ಇದ್ದರೆ ಖಂಡಿತವಾಗಿಯೂ ನೀವು ಈಗಲೇ ಬಿಡಬೇಕು. ಯಾಕೆಂದರೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ ಆಗ ನಮ್ಮ ಆಯುಷ್ಯಕ್ಕೆ ಎಂಟು ವರ್ಷ ಸೇರ್ಪಡೆಯಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಹೇಳಿದೆ. ಕೇವಲ ತಂಬಾಕು ಸೇವನೆ ಮಾತ್ರವಲ್ಲದೆ, ಕೆಲವೊಂದು ದೇಶಗಳಲ್ಲಿ ಕಾನೂನುಬದ್ಧವಾಗಿರುವಂತಹ ಮರಿಜುನಾ ಸೇವನೆ ಕೂಡ ಮಾಡಬಾರದು. ಹೊಗೆಯಿಂದಾಗಿ ಶ್ವಾಸಕೋಶಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತದೆ ಎಂಧು ಅಮೆರಿಕಾದ ಶ್ವಾಸಕೋಶ ಸಂಸ್ಥೆಯು ಹೇಳಿದೆ. ನಿಮಗೆ ಉತ್ತಮ ಆರೋಗ್ಯ ಬೇಕಿದ್ದರೆ ಇವುಗಳನ್ನು ಬಿಟ್ಟುಬಿಡಿ.

4. ಯವಾಗಲೊಮ್ಮೆ ಉಪವಾಸ ಮಾಡುವರು

4. ಯವಾಗಲೊಮ್ಮೆ ಉಪವಾಸ ಮಾಡುವರು

ಉಪವಾಸ ಮಾಡುವುದು ಇಂದಿನ ದಿನಗಳಲ್ಲಿ ಆರೋಗ್ಯಕಾರಿ ಟ್ರೆಂಡ್ ಆಗಿದೆ ಮತ್ತು ಇದು ಒಳ್ಳೆಯ ಕಾರಣಕ್ಕೆ ಕೂಡ. ಯಾವಾಗಲೊಮ್ಮೆ ಉಪವಾಸ ಮಾಡುತ್ತಲಿದ್ದರೆ ಆಗ ದೀರ್ಘಕಾಲ ಬದುಕಬಹುದು ಮತ್ತು ಕಾಯಿಲೆಗಳು ಕಡಿಮೆ ಆಗುವುದು ಎಂದು ಅಧ್ಯಯನ ವರದಿಗಳು ತಿಳಿಸಿವೆ. ನಿಯಮಿತವಾಗಿ ಉಪವಾಸ ಮಾಡುವಂತಹ ಜನರು ಇತರರಗಿಂತ ಶೇ.40ರಷ್ಟು ಹೆಚ್ಚು ಬದುಕುವರು ಎಂಧು ಹೇಳಲಾಗಿದೆ. ಇತ್ತೀಚೆಗೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ 12-24 ಗಂಟೆಗಳ ಕಾಲ ಉಪವಾಸ ಮಾಡಬೇಕು. ಇದರಿಂದ ನೀವು ದೀರ್ಘಕಾಲ ಬಾಳಬಹುದಾಗಿದೆ.

5. ಪ್ರತಿನಿತ್ಯ ವ್ಯಾಯಾಮ ಮಾಡುವರು

5. ಪ್ರತಿನಿತ್ಯ ವ್ಯಾಯಾಮ ಮಾಡುವರು

ದಿನಪತ್ರಿಕೆ ಓದುವವರು, ಇಂಟರ್ನೆಟ್ ಅಥವಾ ಟಿವಿ ನೋಡಿವವರಿಗೆ ವ್ಯಾಯಾಮ ಮಾಡುವುದು ಪ್ರತಿಯೊಬ್ಬರ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂದು ತಿಳಿದೇ ಇದೆ. ಆದರೆ ಕೆಲವರು ಉದಾಸೀನ ಭಾವದಿಂದ ವ್ಯಾಯಾಮ ಮಾಡುವುದೇ ಇಲ್ಲ. ಪ್ರತಿನಿತ್ಯವು ಏನಾದರೂ ವ್ಯಾಯಾಮ ಮಾಡುವವರು ತಮ್ಮ ಆರೋಗ್ಯವನ್ನು ಗಣನೀಯ ಪ್ರಮಾಣದಲ್ಲಿ ಉತ್ತಮಪಡಿಸಿಕೊಳ್ಳುವರು ಮತ್ತು ಬೊಜ್ಜು ಬೆಳೆಸಿರುವಂತಹ ದೇಹವರಿಗಿಂತಲೂ ಇವರು ಎಂಟು ವರ್ಷ ಹೆಚ್ಚು ಭೂಮಿ ಮೇಲಿರುವರು. ಇನ್ನಾದರೂ ನೀವು ವ್ಯಾಯಾಮ ಮಾಡಿ. ಸ್ವಲ್ಪ ನಡೆದಾಡಿ. ಸ್ನೇಹಿತರ ಅಥವಾ ಮನೆಯವರ ಜತೆಗೆ ವ್ಯಾಯಾಮ ಮಾಡಿ. ಬೈಕ್ ಅಥವಾ ಕಾರನ್ನು ಬಿಟ್ಟು ನಡೆಯಲು ಪ್ರಯತ್ನಿಸಿ.

6. ಸುಮ್ಮನೆ ಒತ್ತಡಕ್ಕೆ ಒಳಗಾಗುವುದಿಲ್ಲ

6. ಸುಮ್ಮನೆ ಒತ್ತಡಕ್ಕೆ ಒಳಗಾಗುವುದಿಲ್ಲ

ದೀರ್ಘಕಾಲಿನ ಒತ್ತಡದಿಂದಾಗಿ ಕೆಲವೊಂದು ಗಂಭೀರ ಸಮಸ್ಯೆಗಳಾಗಿರುವಂತಹ ಹೃದಯದ ಕಾಯಿಲೆ, ಮಧುಮೇಹ, ಕ್ಯಾನ್ಸರ್ ಮತ್ತು ಮಾನಸಿಕ ಕಾಯಿಲೆಯು ಬರುವುದು. ಆದರೆ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯವೊಂದು ನಡೆಸಿರುವಂತಹ ಅಧ್ಯಯನದ ಪ್ರಕಾರ ಇದು ಕೇವಲ ಕಾಯಿಲೆಗಳನ್ನು ನೀಡುವುದು ಮಾತ್ರವಲ್ಲದೆ, ಜೀವನದ ಕೆಲವು ವರ್ಷಗಳನ್ನು ಕಡಿತಗೊಳಿಸುವುದು. ಒತ್ತಡ ನಿಭಾಯಿಸುವುದು ಹೇಗೆ ಎಂದು ನೀವು ತಿಳಿಯಿರಿ. ಇದರಿಂದ ನೀವು ದೈನಂದಿನ ಜೀವನದಲ್ಲಿ ಬರುವಂತಹ ಒತ್ತಡ ನಿವಾರಣೆ ಮಾಡಬಹುದು.

7. ಮದ್ಯಪಾನ ಮಾಡುವುದಿಲ್ಲ

7. ಮದ್ಯಪಾನ ಮಾಡುವುದಿಲ್ಲ

ಮದ್ಯಪಾನ ಮಾಡಿದರೆ ಆರೋಗ್ಯಕ್ಕೆ ಹಾನಿಕರವೇ ಅಥವಾ ಅಲ್ಲವೇ ಎನ್ನುವ ಬಗ್ಗೆ ವೈದ್ಯಕೀಯ ಜಗತ್ತು ಕೂಡ ಇಬ್ಭಾಗವಾಗಿದೆ. ದಿನಕ್ಕೆ ಒಂದು ಅಥವಾ ಅದಕ್ಕಿಂತ ಕಡಿಮೆ ಡ್ರಿಂಕ್ ಮಾಡಿದರೆ ಅದರಿಂದ ಹೃದಯದ ಕಾಯಿಲೆಯು ಕಡಿಮೆ ಆಗುವುದು ಎಂದು ಹೇಳಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದರೆ ಅದರಿಂದ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು. ಅತ್ಯಧಿಕ ಮದ್ಯಪಾನ ಮಾಡುವಂತಹ ಜನರು ಬೇರೆಯವರಿಗಿಂತ ಬೇಗನೆ ಸಾಯುವರು. ಆದರೆ ತುಂಬಾ ಮಿತ ಹಾಗೂ ಕಡಿಮೆ ಮದ್ಯಪಾನ ಮಾಡುವಂತಹ ಜನರು ಇವರಿಂತ ಹೆಚ್ಚು ಸಮಯ ಬದುಕುವರು. ದಿನಕ್ಕೆ ನಿಗದಿ ಮಾಡಿರುವ(ಮಹಿಳೆಯರಿಗೆ ಒಂದು, ಪುರುಷರಿಗೆ ಎರಡು ಡ್ರಿಂಕ್) ಪ್ರಮಾಣಕ್ಕಿಂತ ಹೆಚ್ಚು ಕುಡಿದರೆ ನಿಮ್ಮ ಆಯುಷ್ಯದಲ್ಲಿ 30 ನಿಮಿಷ ಪ್ರತಿನಿತ್ಯ ಕಡಿಮೆ ಆಗುವುದು.

8. ಆರೋಗ್ಯಕಾರಿ ತೂಕ

8. ಆರೋಗ್ಯಕಾರಿ ತೂಕ

ಬೊಜ್ಜು ದೇಹವನ್ನು ಹೊಂದಿರುವುದು ಯಾವಾಗಲೂ ದೊಡ್ಡ ದೊಡ್ಡ ಕಾಯಿಲೆಗಳಿಗೆ ಆಹ್ವಾನ ನೀಡುವುದು. ಆರೋಗ್ಯಕಾರ ತೂಕ(ಬಾಡಿ ಮಾಸ್ ಇಂಡೆಕ್ಸ್ 18.5-24 ಮಧ್ಯೆ ಇರಬೇಕು) ತುಂಬಾ ಪರಿಣಾಮಕಾರಿ ಆರೋಗ್ಯ ಹವ್ಯಾಸಗಳಲ್ಲಿ ಒಂದಾಗಿದೆ ಮತ್ತು ಇದು ನಿಮ್ಮ ಆಯುಷ್ಯಕ್ಕೆ ಹತ್ತು ವರ್ಷ ಸೇರ್ಪಡೆ ಮಾಡುವುದು. ನೀವು ಅತಿಯಾದ ತೂಕ ಹೊಂದಿದ್ದರೆ ಆಗ ಶೇ.10-15ರಷ್ಟು ತೂಕ ಇಳಿಸಿದರೆ ಆರೋಗ್ಯವಾಗಿ ಇರಬಹುದು.

9. ಪ್ರತಿನಿತ್ಯ ಶಾಂತ ವಾತಾವರಣದಲ್ಲಿ ಇರುವರು

9. ಪ್ರತಿನಿತ್ಯ ಶಾಂತ ವಾತಾವರಣದಲ್ಲಿ ಇರುವರು

ಆಧುನಿಕ ಜೀವನವು ಎಷ್ಟು ಸುತ್ತಲಿನ ಸದ್ದಿನಿಂದ ಕೂಡಿದೆ ಎಂದು ನಿಮಗೆ ತಿಳಿದಿರಬಹುದು. ಆದರೆ ಶಾಂತವಾದ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು ಮತ್ತು ಅಲ್ಲಿ ಸಮಯ ಕಳೆಯಬೇಕು. ಧ್ಯಾನದಿಂದಾಗಿ ರಕ್ತದೊತ್ತಡ ತಗ್ಗುವುದು, ಏಕಾಗ್ರತೆ ಹೆಚ್ಚಾಗುವುದು, ನಿದ್ರಾಹೀನತೆ ನಿವಾರಿಸುವುದು, ಆತಂಕ ಕಡಿಮೆ ಆಗುವುದು ಮತ್ತು ಖಿನ್ನತೆ ದೂರವಾಗುವುದು. ನೀವು ಧ್ಯಾನ ಮಾಡಬಹುದು, ಮಾರ್ಗದರ್ಶಿ ಧ್ಯಾನ ಮಾಡಬಹುದು ಅಥವಾ ಹಾಗೆ ಕುಳಿತುಕೊಂಡು ನಿಧಾನವಾಗಿ ಉಸಿರಾಡಬಹುದು. ಇದೆಲ್ಲವೂ ಒಂದು ರೀತಿಯ ಧ್ಯಾನವಾಗಿದೆ ಮತ್ತು ನಿಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುವುದು.

10. ಹೊರಗಡೆ ಸಮಯ ಕಳೆಯುವರು

10. ಹೊರಗಡೆ ಸಮಯ ಕಳೆಯುವರು

ಕೇವಲ ವ್ಯಾಯಾಮ ಮಾಡುವುದು ಮಾತ್ರವಲ್ಲದೆ, ಹೊರಗಡೆ ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆದರೆ ಅದರಿಂದ ಉತ್ತಮ ಆರೋಗ್ಯ ಸಿಗುವುದು. ಕಾಡಿನ ಮಧ್ಯೆ ಇರುವಂತಹ ಜಲಪಾತದಲ್ಲಿ ಸ್ನಾನ ಮಾಡುವುದು ಒಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುವುದು. ಅರಣ್ಯದಲ್ಲಿ ಸುತ್ತಾಡುವುದರಿಂದ ಒತ್ತಡದ ಹಾರ್ಮೋನ್ ಗಳು ಕಡಿಮೆ ಆಗುವುದು ಮತ್ತು ಹೃದಯ ಬಡಿತ ಕಡಿಮೆ ಮಾಡುವುದು, ರಕ್ತದೊತ್ತಡ ತಗ್ಗಿಸುವುದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು, ಸುರಕ್ಷಿತ ಹಾಗೂ ಉತ್ತಮ ಭಾವನೆ ಉಂಟು ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಪ್ರಕೃತಿಯು ಮೆದುಳಿಗೆ ಪವಾಡವನ್ನು ಉಂಟು ಮಾಡುವ ಔಷಧಿ ಎಂದು ಪರಿಗಣಿಸಲಾಗಿದೆ.

11. ರಾತ್ರಿ 10 ಗಂಟೆ ಮೊದಲು ಅವರು ಮಲಗುವರು

11. ರಾತ್ರಿ 10 ಗಂಟೆ ಮೊದಲು ಅವರು ಮಲಗುವರು

ಹೆಚ್ಚಾಗಿ ಫಿಟ್ನೆಸ್ ಗುರುಗಳು ನಿಮಗೆ ವ್ಯಾಯಮ ಹಾಗೂ ಆಹಾರದ ಬಗ್ಗೆ ಹೇಳುವರು. ಆದರೆ ಒಂದು ವಿಚಾರವನ್ನು ಅವರು ಕಡಗಣಿಸುವರು. ಅದೇ ನಿದ್ರೆ. ನಿದ್ರೆಯು ಆರೋಗ್ಯದಲ್ಲಿ ತುಂಬಾ ಮಹತ್ವದ ಪರಿಣಾಮ ಬೀರುವುದು. ಎಂಟು ಗಂಟೆಗಳ ಕಾಲ ನಿದ್ರಿಸದೆ ಇದ್ದರೆ ಆಗ ದೇಹವು ಒತ್ತಡದ ಹಾರ್ಮೋನ್ ಕಾರ್ಟಿಸಲ್ ನ್ನು ಬಿಡುಗಡೆ ಮಾಡುವುದು. ಇದರಿಂದ ಹಸಿವು ಮತ್ತು ಬಯಕೆ ಹೆಚ್ಚಾಗುವುದು. ಇದರಿಂದ ಜಂಕ್ ಫುಡ್ ಸೇವಿಸುವಂತೆ ಆಗುವುದು. ಹೀಗಾಗಿ ಹೊಟ್ಟೆಯ ಭಾಗದಲ್ಲಿ ಕೊಬ್ಬು ಆವರಿಸುವುದು. ನಿದ್ರೆ ಕೂಡ ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯವಾಗಿ ಬೇಕು. ಮಧ್ಯರಾತ್ರಿಗೆ ಮೊದಲು ನಿದ್ರಿಸಿ ಮತ್ತು ಎಂಟು ಗಂಟೆಗಳ ಕಾಲ ನಿದ್ರೆ ಮಾಡಿ.

12. ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ವ್ಯಯಿಸಲ್ಲ

12. ಫೇಸ್ ಬುಕ್ ನಲ್ಲಿ ಹೆಚ್ಚು ಸಮಯ ವ್ಯಯಿಸಲ್ಲ

ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆದಷ್ಟು ನಿಮ್ಮ ಸಂತೋಷವು ಕಡಿಮೆ ಆಗುವುದು. ಸ್ನೇಹಿತರು ಹಾಕಿರುವಂತಹ ಫೋಟೊಗಳು ಮತ್ತು ಪೋಸ್ಟ್ ಗಳನ್ನು ನೀವು ನೋಡಿ, ಅವರಿಗೆ ಹೋಲಿಕೆ ಮಾಡಿಕೊಂಡು ನಿಮ್ಮ ಮನಸ್ಸಿನ ಶಾಂತಿ ಕೆಡಿಸಿಕೊಳ್ಳುವಿರಿ. ಆರೋಗ್ಯವಂತ ಜನರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಮಯವನ್ನು ಮಿತವಾಗಿಟ್ಟು, ನಿಜ ಜೀವನದಲ್ಲಿ ತಮ್ಮ ಪ್ರೀತಿಪಾತ್ರರ ಜತೆಗೆ ಸಮಯ ವಿನಿಯೋಗಿಸುವರು. ಸಾಮಾಜಿಕ ಜಾಲತಾಣದಲ್ಲಿನ ಕೆಲವೊಂದು ಪೋಸ್ಟ್ ಗಳನ್ನು ಕಳಕೊಳ್ಳಬಹುದು. ಆದರೆ ನೀವು ಅವರಿಗಿಂತಲೂ ಹೆಚ್ಚು ಸಂತೋಷವಾಗಿ ಇರುವಿರಿ.

13. ಅವರು ಪೋಷಕರಾಗಿರುವರು

13. ಅವರು ಪೋಷಕರಾಗಿರುವರು

ಒಂದು ಮಗುವಿಗಾದರೂ ಪೋಷಕರಾಗಿರುವಂತಹವರು ಯಾವಾಗಲೂ ಬೇರೆಯವರಿಗಿಂತ ಎರಡು ವರ್ಷ ಕಾಲ ಹೆಚ್ಚು ಬದುಕುವರು ಎಂದು ಅಧ್ಯಯನಗಳು ಹೇಳಿವೆ. ಆರ್ಥಿಕ ಸ್ವಾತಂತ್ರ್ಯ ಕಡಿಮೆ ಇರುವ, ನಿದ್ರೆ ಕಡಿಮೆ ಮಾಡುವರು ಮತ್ತು ಪೋಷಕರಲ್ಲದೆ ಇರುವವರಿಗಿಂತ ಹೆಚ್ಚು ಕಾಯಿಲೆ ಒಳಗಾಗುವರು. ಮಕ್ಕಳು ಸಣ್ಣವರು ಇರುವಾಗ ಹೆಚ್ಚು ದುಡಿಯುವರು ಮತ್ತು ಅವರು ಬೆಳೆದ ವೇಳೆ ತಮ್ಮ ಸಂಸಾರೊಂದಿಗೆ ತುಂಬಾ ಖುಷಿಯಿಂದ ಜೀವನ ಸಾಗಿಸುವರು ಎಂದು ಅಧ್ಯನಗಳು ತಿಳಿಸಿವೆ.

14. ಬೇರೆಯವರಲ್ಲೂ ಒಳ್ಳೆಯದನ್ನು ಕಾಣುವರು

14. ಬೇರೆಯವರಲ್ಲೂ ಒಳ್ಳೆಯದನ್ನು ಕಾಣುವರು

ಬೇರೆಯವರಲ್ಲೂ ಅವರು ಒಳ್ಳೆಯದನ್ನು ಕಾಣುವವರು ಯಾವಾಗಲೂ ಜಗತ್ತಿನಲ್ಲಿ ತುಂಬಾ ಸಂತೋಷವಾಗಿ ಇರುವರು ಮತ್ತು ಆರೋಗ್ಯವು ಅವರ ಜತೆಗೆ ಇರುವುದು. ಆಶಾವಾದಿಯಾಗಿ ಇರುವುದು ರೋಗಗಳಿಂದ ಗುಣಮುಖವಾಗಲು, ಶಸ್ತ್ರಚಿಕಿತ್ಸೆಯಿಂದ ಚೇತರಿಕೆ ಪಡೆಯಲು ಮತ್ತು ಮಾನಸಿಕ ಅನಾರೋಗ್ಯವನ್ನು ತಡೆಯಲು ನೆರವಾಗುವುದು.

English summary

Things the World’s Healthiest People Have in Common

Happiness, gratitude. A nice walk. These things are easy enough—yet they can tack years onto your life. Learn the real secrets to healthy living. Your health is in your hands There’s a lot of doom and gloom in the health world. Every week a new study comes out about something else that can kill you or some new disease to be on the watch for. But did you know that you can prevent the vast majority of the most lethal illnesses simply by tweaking your lifestyle? At least 80 percent of all cases of heart disease, stroke, and type 2 diabetes—and over 40 percent of cancers—are preventable, according to the World Health Organization.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X