For Quick Alerts
ALLOW NOTIFICATIONS  
For Daily Alerts

ಗೌಟ್‌ ವ್ಯಾಧಿ (ಸಂಧಿವಾತ) ನಿವಾರಣೆಗೆ 10 ಬೆಸ್ಟ್ ಆಹಾರ

|

ನಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಪ್ರಕ್ರಿಯೆ ಸರಿಯಾಗಿ ಇಲ್ಲದಿದ್ದಾಗ ಉಂಟಾಗುವ ಕೀಲು ನೋವಿಗೆ ಗೌಟ್‌ ವ್ಯಾಧಿ ಎಂದು ಕರೆಯುತ್ತಾರೆ. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಬೇಗನೆ ಮುಟ್ಟು ನಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.

Gout Diet

ದೇಹದ ರಕ್ತದಲ್ಲಿ ಯೂರಿಕ್‌ ಆಮ್ಲದ ಪ್ರಮಾಣ ಹೆಚ್ಚಾಗಿದ್ದರೆ ಅದು ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ಆಮ್ಲವು ಹರಳು ರೂಪದಲ್ಲಿ ಕೀಲುಗಳಲ್ಲಿ ಮತ್ತು ಕೀಲುಗಳ ಸುತ್ತಲೂ ಇರುವ ಕೋಶಗಳಲ್ಲಿ ಸೇರಿಕೊಂಡು ಕಾಲುಗಳು ಅಲ್ಲಾಡಿಸಲು ಸಾಧ್ಯವಾಗದಷ್ಟು ನೋವು ಉಂಟು ಮಾಡುತ್ತದೆ. ಗೌಟ್ ಆರ್ಥ್ರೈಟಿಸ್ ಎಂದು ಕರೆಯುತ್ತಾರೆ.

ಗೌಟ್ ವ್ಯಾಧಿಗೆ ಕಾರಣಗಳು

ಸಾಮಾನ್ಯವಾಗಿ ರಕ್ತದಲ್ಲಿರುವ ಯೂರಿಕ್‌ ಆಮ್ಲ ಕಿಡ್ನಿಯಿಂದ ಮೂತ್ರದ ಮೂಲಕ ವಿಸರ್ಜನೆಯಾಗುವುದು. ದೇಹದಲ್ಲಿ ಯೂರಿಕ್ ಆಮ್ಲದ ಉತ್ಪತ್ತಿ ಹೆಚ್ಚಾದಾಗ ಅದು ಮೂತ್ರದ ಮೂಲಕ ವಿಸರ್ಜನೆಯಾಗದೆ ದೇಹದ ಕಾಲುಗಳ ಕೀಲುಗಳಲ್ಲಿ ಸಂಗ್ರಹವಾಗಿ ಉಂಟಾಗುತ್ತದೆ. ಮಾಂಸಾಹಾರ, ಮೊಟ್ಟೆ, ಮೀನು, ಸಮುದ್ರಾಹಾರಗಳನ್ನು ಹೆಚ್ಚು ಸೇವಿಸುವುದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.

ಇಲ್ಲಿ ನಾವು ಗೌಟ್‌ವ್ಯಾಧಿಗೆ ಸೇವಿಸಲು ಅತ್ಯುತ್ತಮವಾದ 10 ಆಹಾರಗಳ ಬಗ್ಗೆ ನೀಡಿದ್ದೇವೆ ನೋಡಿ.

1. ಹಣ್ಣುಗಳು

1. ಹಣ್ಣುಗಳು

ಸಾಮಾನ್ಯವಾಗಿ ಗೌಟ್‌ ವ್ಯಾಧಿಗೆ ಎಲ್ಲಾ ಬಗೆಯ ಹಣ್ಣುಗಳು ಕೂಡ ಒಳ್ಳೆಯದು. ಅದರಲ್ಲೂ ಚೆರ್ರಿ ಹಣ್ಣುಗಳು ತುಂಬಾ ಒಳ್ಳೆಯದು. ಇದು ಯೂರಿಕ್ ಆಮ್ಲದ ಆಕ್ರಮಣವನ್ನು ತಡೆಗಟ್ಟುತ್ತದೆ ಹಾಗೂ ಉರಿಯೂತ ಕೂಡ ಕಡಿಮೆ ಮಾಡುವುದು. ವಿಟಮಿನ್ ಸಿ ಇರುವ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ಕಿತ್ತಳೆ, ಹುಣಸೆ ಹಣ್ಣು, ಪಪ್ಪಾಯಿ ಗೌಟ್‌ ವ್ಯಾಧಿಗೆ ತುಂಬಾ ಒಳ್ಳೆಯದು.

2. ತರಕಾರಿ

2. ತರಕಾರಿ

ಹೆಚ್ಚು ತರಕಾತಿಗಳನ್ನು ತಿನ್ನಬೇಕು. ಕಳೆ, ಎಲೆಕೋಸು. ಸೋರೆಕಾಯಿ, ಕೆಂಪು ದುಂಡು ಮೆಣಸಿನಕಾಯಿ, ಬೀಟ್‌ ರೂಟ್ ಇವುಗಳನ್ನು ಹೆಚ್ಚಾಗಿ ಬಳಸಿ. ಈ ತರಕಾರಿಗಳು ಗೌಟ್‌ ಸಮಸ್ಯೆ ಕಡಿಮೆ ಮಾಡುವುದು ಮಾತ್ರವಲ್ಲ, ಯೂರಿಕ್ ಆಮ್ಲ ಉತ್ಪತ್ತಿಯನ್ನೂ ಕಡಿಮೆ ಮಾಡುತ್ತದೆ. ಆಲೂಗಡ್ಡೆ, ಬಟಾಣಿ, ಅಣಬೆ, ಬದನೆ ಇವು ಕೂಡ ಗೌಟ್‌ ಸಮಸ್ಯೆಗೆ ತುಂಬಾ ಒಳ್ಳೆಯದು. ತರಕಾರಿ ಅಡುಗೆ ಮಾಡುವಾಗ ಖಾರ ಸ್ವಲ್ಪ ಕಡಿಮೆ ಬಳಸಿ.

3. ಕಾಳುಗಳು

3. ಕಾಳುಗಳು

ಕಾಳುಗಳು, ಬೀನ್ಸ್, ಸೋಯಾಬೀನ್, ಟೋಫು ಇವುಗಳ ಸೇವನೆ ತುಂಬಾ ಒಳ್ಳೆಯದು. ಇವುಗಳಲ್ಲಿ ಪ್ರೊಟೀನ್ ಹಾಗೂ ನಾರಿನಂಶ ಅಧಿಕವಿದ್ದು, ಧಾನ್ಯಗಳನ್ನು ಆಹಾರದಲ್ಲಿ ಬಳಸುವುದರಿಂದ ಕೀಲು ನೋವು, ಉರಿಯೂತ ಬೇಗನೆ ಕಡಿಮೆಯಾಗುವುದು.

 4. ನಟ್ಸ್

4. ನಟ್ಸ್

ಗೌಟ್‌ ವ್ಯಾಧಿ ಇರುವವರು ನಟ್ಸ್ ತಿಂದರೆ ತುಂಬಾ ಒಳ್ಳೆಯದು. ದಿನಾ ಎರಡು ಚಮಚ ನಟ್ಸ್ ತಿನ್ನುವುದರಿಂದ ಗೌಟ್‌ ವ್ಯಾಧಿ ಬರುವುದಿಲ್ಲ ಎಂದು ಅಧ್ಯಯನ ಕೂಡ ಹೇಳಿದೆ. ಒಣ ಪ್ಲಮ್, ವಾಲ್‌ನಟ್ಸ್, ಬಾದಾಮಿ, ಅಗಸೆ ಬೀಜ, ಗೋಡಂಬಿ ಇವುಗಳನ್ನು ತಿನ್ನಿ. ಇವುಗಳಲ್ಲಿರುವ ಒಳ್ಳೆಯ ಕೊಬ್ಬಿನಂಶ ಯೂರಿಕ್‌ ಆಮ್ಲದ ಉರಿಯೂತ ಕಡಿಮೆ ಮಾಡುತ್ತದೆ.

5. ಧಾನ್ಯಗಳು

5. ಧಾನ್ಯಗಳು

ಗೋಧಿ, ಬಾರ್ಲಿ, ಓಟ್‌ಮೀಲ್ ಇವುಗಳಲ್ಲಿ ಪ್ಯೂರಿನ್‌ ಅಂಶವಿರುತ್ತದೆ. ಪ್ಯೂರಿನ್ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ. ಕೆಂಪಕ್ಕಿ ಅನ್ನ, ಬಾರ್ಲಿ, ಓಟ್ಸ್ ಇವುಗಳನ್ನು ತಿನ್ನುವುದರಿಂದ ಗೌಟ್‌ ವ್ಯಾಧಿಯ ನೋವು ಕಡಿಮೆಯಾಗುವುದು ಹಾಗೂ ಅಧಿಕ ಯೂರಿಕ್ ಆಮ್ಲದ ಸಮಸ್ಯೆ ಕೂಡ ಕಡಿಮೆಯಾಗುವುದು.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ತಿನ್ನುವುದರಿಂದ ಗೌಟ್‌ವ್ಯಾಧಿ ತಡೆಗಟ್ಟುತ್ತದೆ. ಹಾಲಿನಲ್ಲಿರುವ ಪ್ರೊಟೀನ್ ಅಧಿಕ ಯೂರಿಕ್ ಆಮ್ಲ ಉತ್ಪತ್ತಿಯನ್ನು ತಡೆಗಟ್ಟುತ್ತದೆ. ಆದರೆ ಹಾಲಿನ ಉತ್ಪನ್ನಗಳನ್ನು ಸೇವಿಸುವಾಗ ಅಧಿಕ ಕೊಬ್ಬಿನಂಶದ ಉತ್ಪನ್ನಗಳ ಬದಲಿಗೆ ಕಡಿಮೆ ಕೊಬ್ಬಿನಂಶವಿರುವ ಆಹಾರ ಒಳ್ಳೆಯದು.

ಗಿಡಮೂಲಿಕೆಗಳು

ಗಿಡಮೂಲಿಕೆಗಳು

ಶುಂಠಿ, ಚಕ್ಕೆ, ರೋಸ್‌ಮೆರ್ರಿ, ಅರಿಶಿಣ, ಅಶ್ವಗಂಧ ಇವುಗಳು ಉರಿಯೂತವನ್ನು ಕಡಿಮೆ ಮಾಡುವುದರಿಂದ ಇವುಗಳು ಉರಿಯೂತ ಕಡಿಮೆ ಮಾಡಿ ಗೌಟ್‌ ವ್ಯಾಧಿ ಗುಣಪಡಿಸುವಲ್ಲಿ ಸಹಕಾರಿ. ಕಾಳು ಮೆಣಸು, ಚಕ್ಕೆ ಈ ರೀತಿಯ ಸಂಬಾರ ಪದಾರ್ಥಗಳು ಗೌಟ್‌ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಇನ್ನು ಆಲೀವ್‌ ಎಣ್ಣೆ, ತೆಂಗಿನೆಣ್ಣೆ, ಅಗಸೆ ಬೀಜದ ಎಣ್ಣೆ ಇವುಗಳು ಗೌಟ್‌ ವ್ಯಾಧಿ ಕಡಿಮೆ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ.

English summary

10 Best Foods For Gout Diet

Gout is a painful form of arthritis that develops when an excess of uric acid builds up and forms crystals in your joints. Here are foods to control uric amla and get rid from gout problem.
X
Desktop Bottom Promotion