Just In
- 1 hr ago
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- 4 hrs ago
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- 7 hrs ago
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- 10 hrs ago
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
Don't Miss
- Sports
IND vs NZ: ಟಿ20 ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ ಯುಜ್ವೇಂದ್ರ ಚಾಹಲ್
- News
ಡಿಕೆಶಿಯ ಸಂಬಂಧಿ, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಪಿ.ಶರತ್ ಚಂದ್ರ ಎಎಪಿ ಸೇರ್ಪಡೆ
- Technology
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- Movies
Muddumanigalu Serial: ಜಾಹ್ನವಿಯೇ ತನ್ನ ತಾಯಿ ಎಂದು ದೃಷ್ಟಿಗೆ ತಿಳಿಯುತ್ತಾ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Winter tips: ಚಳಿಗಾಲದಲ್ಲಿ ಉಂಟಾಗುವ ಸ್ನಾಯು ಬಿಗಿತ ನಿವಾರಿಸಲು ಈ ಯೋಗಾಸನ ಟ್ರೈ ಮಾಡಿ
ಅಬ್ಬಾ ಎಷ್ಟು ಚಳಿ.... ಬೆಚ್ಚಗೆ ಹೊದ್ದಿಕೊಂಡು ಕುಳಿತಿರೋಣ, ಚುಮು ಚುಮು ಚಳಿಗೆ, ಬಿಸಿ ಬಿಸಿಯಾಗಿ ಏನಾದರೂ ತಿನ್ನೋಣ, ಕುಡಿಯೋಣ ಎಂದು ಪದೇ ಪದೇ ಅನಿಸುತ್ತಿರುತ್ತದೆ ಅಲ್ಲವೇ? ಅದರಲ್ಲೂ ಬೆಳಿಗ್ಗೆ ನಿದ್ದೆಯಿಂದ ಏಳುವಾಗ ಎಂಥಾ ಥಂಡಿ ಹೇಗಪ್ಪಾ ಏಳುವುದು ಅನಿಸಿದೆ ಇರದು. ಬೆಚ್ಚನೆಯ ಹಾಸಿಗೆ ಬಿಟ್ಟು ಏಳುವ ಮನಸೇ ಆಗುವುದಿಲ್ಲ. ಇಂತಹ ಮೈ ಕೊರೆಯುವ ಚಳಿಯು ಎಲ್ಲರ ದಿನನಿತ್ಯದ ಚಟುವಟಿಕೆಗಳ ಮೇಲೂ ಪ್ರಭಾವ ಬೀರಿದೆ. ಚುರುಕಿನಿಂದ ಕೆಲಸ ನಿರ್ವಹಿಸಲು ಅಡ್ಡಿ ಮಾಡುತ್ತಿರುವುದಷ್ಟೇ ಅಲ್ಲದೆ ಎಲ್ಲರನ್ನೂ ಆಲಸಿಗಳನ್ನಾಗಿ ಮಾಡುತ್ತಿದೆ.
ಚಳಿಗೆ ಮುದುರಿ ಕುಳಿತುಕೊಳ್ಳುವುದರ ಬದಲು, ಸಕ್ರಿಯವಾಗಿ ಕೆಲಸಗಳಲ್ಲಿ ಪಾಲ್ಗೊಳ್ಳುವ ಹಾಗಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಪರಿಹಾರ.
ಈ 7 ಯೋಗಾಸನಗಳು ನಿಮ್ಮನ್ನು ಭಾದಿಸುತ್ತಿರುವ ಚಳಿಯಿಂದ ಚುರುಕಾಗಿಡುವುದಷ್ಟೇ ಅಲ್ಲದೆ ನಿಮ್ಮನ್ನು ಪುನಃ ಚೈತನ್ಯಗೊಳಿಸುತ್ತದೆ. ಚಳಿಯಿಂದ ಉಂಟಾಗಬಹುದಾದ ಸ್ನಾಯು ಸೆಳೆತ, ಬಿಗಿತ ಮುಂತಾದ ತೊಂದರೆಗಳಿಂದ ಈ ಯೋಗಾಸನಗಳು ಮುಕ್ತಿ ಕೊಡುತ್ತವೆ. ಈ ಯೋಗಾಸನಗಳು ನಿರಾಸಕ್ತಿಯನ್ನು ಹೋಗಲಾಡಿಸಿ ನಿಮಗೆ ಪ್ರೇರಣೆ ನೀಡುತ್ತದೆ ಹಾಗೂ ಆರೋಗ್ಯವನ್ನು ವೃದ್ಧಿಸುತ್ತದೆ.
ಇದಕ್ಕಾಗಿ ನೀವು ಕನಿಷ್ಠ 20 ನಿಮಿಷಗಳನ್ನು ಮೀಸಲಿಟ್ಟು, ದಿನನಿತ್ಯ ಈ ಯೋಗಾಸನಗಳನ್ನು ತಪ್ಪದೇ ಮಾಡಿದರೆ ಸಾಕಷ್ಟು ಪ್ರಯೋಜನವನ್ನು ಹೊಂದುವಿರಿ.

1. ಸೂಕ್ಷ್ಮ ವ್ಯಾಯಾಮ
ಮೊಟ್ಟ ಮೊದಲು ದೇಹವನ್ನು ಬೆಚ್ಚಗಾಗಿಸಲು ಈ ಯೋಗಾಸನದಿಂದ ಪ್ರಾರಂಭಿಸಿ.ಸೂಕ್ಷ್ಮ ವ್ಯಾಯಾಮದ ಶಾಂತ ಚಲನೆಗಳು ಕೀಲುಗಳು ಮತ್ತು ಸ್ನಾಯುಗಳನ್ನು ಬೆಚ್ಚಗಾಗಿಸುತ್ತವೆ. ಯೋಗದ ತತ್ವಗಳ ಪ್ರಕಾರ ಈ ಕ್ರಿಯೆಯು ಕಾಲ್ಬೆರಳುಗಳಿಂದ ಪ್ರಾರಂಭಗೊಂಡು ಕುತ್ತಿಗೆ ಮತ್ತು ತಲೆಯವರೆಗೂ ಹೋಗಬೇಕು.
• ಹೀಗಾಗಿ ಮೊದಲು ಪಾದಗಳನ್ನು ತಿರುಗಿಸುವುದರ ಮೂಲಕ ಪ್ರಾರಂಭ ಮಾಡಿ.
• ಅಂತೆಯೇ ಮೊಣಕಾಲು, ಮೀನುಖಂಡ, ಸೊಂಟ ತಿರುಗಿಸುತ್ತಾ ಬನ್ನಿ.
• ತದನಂತರ ಎದೆ, ತೋಳುಗಳು, ಮಣಿಕಟ್ಟುಗಳು, ಅಂತಿಮವಾಗಿ ತಲೆ ಮತ್ತು ಕುತ್ತಿಗೆಯನ್ನು ತಿರುಗಿಸುತ್ತಾ ದೇಹವನ್ನು ಬೆಚ್ಚಗಾಗಿಸಿ.

2. ಪಾದ ಹಸ್ತಾಸನ (ಮುಂದಕ್ಕೆ ಬಾಗುವುದು)
• ಸಮ ಸ್ಥಿತಿಯಲ್ಲಿ ನಿಲ್ಲಿ( ಪಾದಗಳನ್ನು ಜೋಡಿಸಿ ನೇರವಾಗಿ ನಿಂತುಕೊಳ್ಳುವುದು)
• ಧೀರ್ಘವಾಗಿ ಉಸಿರು ಬಿಡಿ. ನಿಮ್ಮ ಮೂಗು ಮಂಡಿಯನ್ನು ತಾಕಿಸುವಷ್ಟು ಸೊಂಟದಿಂದ ಕೆಳಗೆ ಬಾಗಿ.
• ನಿಮ್ಮ ಪಾದಗಳ ಅಕ್ಕಪಕ್ಕಕ್ಕೆ ಅಂಗೈಗಳನ್ನು ಇಡಿ.
• ನೀವು ಇದನ್ನು ಇದೇ ಮೊದಲು ಪ್ರಾರಂಭಿಸುತ್ತಿದ್ದಲ್ಲಿ, ಈ ಭಂಗಿಯನ್ನು ಮಾಡುವಾಗ ಮಂಡಿಯನ್ನು ನಿಧಾನವಾಗಿ ಮಡಿಸಿ.

3. ಅಧೋಮುಖ ಶ್ವಾನಾಸನ
ಅಧೋ ಎಂದರೆ ಮುಂದೆ. ಶ್ವಾನ ಎಂದರೆ ನಾಯಿ.ಈ ಭಂಗಿಯನ್ನು ನಾಯಿ ಭಂಗಿ ಎಂದು ಕರೆಯಲಾಗುತ್ತದೆ.
• ಸೊಂಟವನ್ನು ಬಗ್ಗಿಸಿ ಮುಂದಕ್ಕೆ ಬಾಗಿ ಕೈಗಳನ್ನು ನೆಲಕ್ಕೆ ಊರಿಕೊಳ್ಳಿ, ಸೊಂಟ ಮೇಲಕ್ಕೆತ್ತಿರಲಿ.
• ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ.
• ದೇಹವು 'ವಿ' ಆಕಾರದಲ್ಲಿ ಇರಬೇಕು.ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಿ.
• ಹೆಗಲಿನ ಎಲುಬುಗಳನ್ನು ತೆರೆಯುತ್ತಾ, ಅಂಗೈಗಳ ಮೇಲೆ ಒತ್ತಡ ನೀಡಿ.
• ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು,
ನಿಮ್ಮ ನೋಟ ಕಾಲಿನ ಬೆರಳುಗಳ ಕಡೆ ಇರಲಿ.

4. ಧನುರಾಸನ
• ಹೊಟ್ಟೆಯನ್ನು ಕೆಳಗೆ ಹಾಕಿ ಬೋರಲಾಗಿ ಮಲಗಿ.
• ಮಂಡಿಗಳನ್ನು ಬಗ್ಗಿಸಿ ಮತ್ತು ನಿಮ್ಮ ಕೈಗಳಿಂದ ಮುಂಗಾಲಿನ ಗಿಣ್ಣನ್ನು ಹಿಡಿದುಕೊಳ್ಳಿ.
• ನಿಮ್ಮ ಹಿಡಿತದಲ್ಲಿ ಬಿಗಿಯಿರಲಿ.
• ಕಾಲುಗಳು ಮತ್ತು ಕೈಗಳನ್ನು ಎಷ್ಟು ಮೇಲಕ್ಕೆ ಸಾಧ್ಯವೋ ಅಷ್ಟು ಹಿಡಿದೆತ್ತಿ.
• ಮೇಲಕ್ಕೆ ನೋಡುತ್ತಾ, ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಹಾಗೆಯೇ.

5. ಚಕ್ರಾಸನ
* ಬೆನ್ನಿಗೆ ಒರಗಿ ಮಲಗಿಕೊಳ್ಳಿ.
* ಮಂಡಿಗಳ ಕಡೆ ಕಾಲುಗಳನ್ನು ಮಡಿಸಿ, ಪಾದಗಳು ನೆಲದ ಮೇಲೆ ಗಟ್ಟಿಯಾಗಿ ಊರಿರುವಂತೆ ನೋಡಿಕೊಳ್ಳಿ.
* ತೋಳುಗಳು ಮೊಣ ಕೈಗಳ ಕಡೆ ಬಾಗಿರಲಿ.
* ಕಡೆ ತೋಳುಗಳನ್ನು ತಿರುಗಿಸಿ ಮತ್ತು ತಲೆಯ ಅಕ್ಕ ಪಕ್ಕ ಅಂಗೈಗಳು ಬರುವಂತೆ ನೆಲದ ಮೇಲೆ ಊರಿ
ಉಸಿರನ್ನು ಎಳೆದುಕೊಳ್ಳುತ್ತಾ ಕಾಲುಗಳು ಮತ್ತು ಅಂಗೈಗಳ ಮೇಲೆ ಒತ್ತಡ ಹಾಕಿ.
* ಈ ಸ್ಥಿತಿಯಲ್ಲಿ ಶರೀರವು ಬಗ್ಗಿಸಿದ ಬಿಲ್ಲಿನಂತೆ ಇರುವುದು.
* ತಲೆಯನ್ನು ಕೆಳಕ್ಕೆ ಬಾಗಿಸುವುದರಿಂದ ಹಿಂದಕ್ಕೆ ನೋಡುತ್ತಾ ಕುತ್ತಿಗೆಯನ್ನು ನಿಧಾನಕ್ಕೆ ಕೆಳಗೆ ಮಾಡಿ.
* ನಿಮ್ಮ ದೇಹದ ತೂಕ ಕೈಕಾಲುಗಳ ಮೇಲೆ ಸಮವಾಗಿ ಹಂಚಿರುವಂತೆ ನೋಡಿಕೊಳ್ಳಿ.

6. ಪಶ್ಚಿಮೋತ್ತಾನಾಸನ
* ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ.
* ಉಸಿರನ್ನು ಎಳೆದುಕೊಳ್ಳಿ ಮತ್ತು ಬೆನ್ನನ್ನು ನೇರವಾಗಿರಿಸಿ.
* ಕೈಗಳನ್ನು ಮೇಲಕ್ಕೆ ಎತ್ತಿ ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ ನಿಮ್ಮ ಮೇಲ್ಭಾಗದ ದೇಹವನ್ನು ಕೆಳ ಭಾಗದ ದೇಹದ ಮೇಲೆ ಒರಗಿಸಿ.

7. ಉಷ್ಟ್ರಾಸನ
* ಸೊಂಟದ ಮೇಲೆ ಕೈಗಳನ್ನು ಇಟ್ಟು ಮಂಡಿಯೂರಿ ಕುಳಿತುಕೊಳ್ಳಿ.
* ಕೈಗಳನ್ನು ನೇರವಾಗಿರಿಸಿ,ಬಾಗುತ್ತಾ ಅಂಗೈಗಳನ್ನು ಪಾದಗಳ ಮೇಲೆ ಇಡಿ.
* ಉಸಿರನ್ನು ಬಿಡುತ್ತಾ ನಿಧಾನವಾಗಿ ಪ್ರಾರಂಭಿಕ ಸ್ಥಿತಿಗೆ ಬನ್ನಿ.
ಒಟ್ಟಾರೆ ಹೇಳುವುದಾದರೆ...... ವ್ಯಾಯಾಮ, ಧ್ಯಾನ ಯಾವುದಾದರೂ ಮಾಡಿ ಆದರೆ ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವು ಹೆಚ್ಚಿ ಪುನಃ ಚೇತನಗೊಳ್ಳುವುದಲ್ಲಿ ಸಂದೇಹವೇ ಇಲ್ಲ. ಹೀಗಾಗಿ, ನೀವು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಚಳಿಗಾಲದಲ್ಲಿಯೂ ಚುರುಕಾಗಿ ಚಟುವಟಿಕೆಗಳನ್ನು ನಿರ್ವಹಿಸಬಹುದು.