For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ 2 ಗ್ಲಾಸ್ ರೆಡ್‌ ವೈನ್‌ ಸಾಕು, ಮೈ ಕೊಬ್ಬು ಕರಗಲು

|

ರೆಡ್‌ ವೈನ್‌ ಆರೋಗ್ಯಕರ ಗುಣಗಳ ಬಗ್ಗೆ ನೀವೆಲ್ಲಾ ಸಾಕಷ್ಟು ಕೇಳಿರುತ್ತೀರಿ, ರೆಡ್‌ ವೈನ್‌ ಕುಡಿದರೆ ಆರೋಗ್ಯಕ್ಕೆ ಒಳ್ಲೆಯದು, ಅದರಲ್ಲೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ತ್ವಚೆ ಹೊಳಪು ಹೆಚ್ಚುವುದು ಹೀಗೆ ಇದರ ನಾನಾ ಪ್ರಯೋಜನಗಳ ಬಗ್ಗೆ ಕೇಳಿರುತ್ತೀರಿ. ಆದರೆ ಇವೆಲ್ಲಾ ಮಿತಿಯಲ್ಲಿ ಕುಡಿದರೆ ಮಾತ್ರ ಸಿಗುವುದು ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

Advantages And Disadvantages Of Living In a Joint Family | Boldsky Kannada
Two Glass Red Wine Before Bed Help To Loose Weight

ಇಲ್ಲಿ ನಾವು ರೆಡ್‌ ವೈನ್‌ನ ಮತ್ತೊಂದು ಅದ್ಭುತ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಅದೇನೆಂದರೆ ರೆಡ್‌ ವೈನ್‌ ತೂಕ ಇಳಿಕೆಗೆ ತುಂಬಾ ಸಹಕಾರಿ ಎನ್ನುವುದು. ಎಷ್ಟೋ ಜನರಿಗೆ ಮೈ ತೂಕ ಹೆಚ್ಚಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ರೆಡ್‌ ವೈನ್‌ ಕುಡಿಯುವುದರಿಂದ ಮೈ ತೂಕ ಕಡಿಮೆಯಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ರೆಡ್‌ವೈನ್‌ ಮೈ ತೂಕ ಇಳಿಸಲು ಹೇಗೆ ಸಹಕಾರಿ? ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ರೆಡ್‌ ವೈನ್‌ ಅನ್ನು ಕೋಣೆಯ ಉಷ್ಣತೆಯಲ್ಲಿ ಇಟ್ಟು ಬಳಸಬೇಕೆ?

ರೆಡ್‌ ವೈನ್‌ ಅನ್ನು ಕೋಣೆಯ ಉಷ್ಣತೆಯಲ್ಲಿ ಇಟ್ಟು ಬಳಸಬೇಕೆ?

ರೆಡ್‌ ವೈನ್‌ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟು ಕುಡಿಯಬಾರದು ಎಂಬ ಭಾವನೆ ನಮ್ಮಲ್ಲಿ ಅನೇಕರಲ್ಲಿದೆ. ಆದರೆ ವೈನ್ ಅಕಾಡೆಮಿ ಹೇಳುವ ಪ್ರಕಾರ ವೈನ್‌ ಅನ್ನು ರೂಮ್‌/ಕೋಣೆಯ ಉಷ್ಣತೆಯಲ್ಲಿಯೇ ಇಡಬೇಕೆಂದು ಏನಿಲ್ಲ. ಉಷ್ಣತೆ 12 ರಿಂದ 18 ಡಿಗ್ರಿ ಒಳಗಿದ್ದರೆ ರುಚಿ ಚೆನ್ನಾಗಿರುತ್ತದೆ. ಉಷ್ಣತೆ ಹೆಚ್ಚಾದರೆ ಮದ್ಯದ ರುಚಿಗೆ ತಿರುಗುವುದು.

 ರೆಡ್‌ವೈನ್‌ ಮತ್ತು ಆರೋಗ್ಯ

ರೆಡ್‌ವೈನ್‌ ಮತ್ತು ಆರೋಗ್ಯ

ಆರೋಗ್ಯಕ್ಕೆ ರೆಡ್‌ವೈನ್ ತುಂಬಾ ಒಳ್ಳೆಯದು. ರೆಡ್‌ವೈನ್‌ ಕುಡಿಯುವುದರಿಂದ ದಂತದ ಆರೋಗ್ಯಕ್ಕೂ ಒಳ್ಳೆಯದೆಮದು ಸ್ಪಾನಿಷ್ ನ್ಯಾಷನಲ್ ರಿಸರ್ಚ್‌ ಸೆಂಟರ್‌ ಹೇಳಿದೆ. ಇದರಲ್ಲಿರುವ ಪಾಲಿಫೀನೋಲ್ ಅಂಶ ಹಲ್ಲುಗಳಲ್ಲಿ ಬ್ಯಾಕ್ಟಿರಿಯಾ ಕೂರದಂತೆ ನೋಡಿಕೊಳ್ಳುತ್ತದೆ, ಇದರಿಂದ ದಂತಕ್ಷಯ ಉಂಟಾಗುವುದನ್ನು ತಡೆಗಟ್ಟಬಹುದು.

ಇನ್ನು ತೂಕ ಇಳಿಕೆಗೂ ಇದು ಸಹಕಾರಿ.

ರೆಡ್‌ವೈನ್‌ ತೂಕ ಇಳಿಕೆಗೆ ಹೇಗೆ ಸಹಕಾರಿ?

ರೆಡ್‌ವೈನ್‌ ತೂಕ ಇಳಿಕೆಗೆ ಹೇಗೆ ಸಹಕಾರಿ?

ವಾಷಿಂಗ್ಟನ್ ಸ್ಟೇಟ್‌ ಯೂನಿರ್ವಸಿಟಿಯು ರೆಡ್‌ ವೈನ್ ಕುಡಿಯುವುದರಿಂದ ತೂಕ ಇಳಿಕೆಯಾಗಬಹುದೆಂದು ಅಧ್ಯಯನ ನಡೆಸಿ ಹೇಳಿದೆ. ರೆಡ್‌ ವೈನ್‌ ಅನ್ನು ದ್ರಾಕ್ಷಿಯಿಂದ ಮಾಡಲಾಗುವುಉದ. ಇದರಲ್ಲಿರುವ

ರೆಸ್ವೆರಾಟ್ರೊಲ್ ಎಂಬ ಆ್ಯಂಟಿಆಕ್ಸಿಡೆಂಟ್‌ ತೂಕ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿದೆ.

ರೆಸ್ವೆರಾಟ್ರೊಲ್ ಕಾರ್ಯ

ರೆಸ್ವೆರಾಟ್ರೊಲ್ ಕಾರ್ಯ

ರೆಸ್ವೆರಾಟ್ರೊಲ್ ಎಂಬುವುದು ಕೊಬ್ಬಿನಂಶವಾಗಿದ್ದು ಇದು ಬಿಳಿ ಕೊಬ್ಬು, ಕೊಬ್ಬಿನಂಶವಾಗಿ ಪರಿವರ್ತನೆಯಾದ ಕೊಬ್ಬು ಆಗಿದೆ. ಈ ಕೊಬ್ಬು ಸುಲಭವಾಗಿ ಕರಗುವುದು. ಈ ಅಧ್ಯಯನದಲ್ಲಿ 20,000 ಮಹಿಳೆಯರು ಭಾಗವಹಿಸಿದ್ದರು. ಯಾರು ಪ್ರತಿದಿನ ಮಲಗುವ ಮುನ್ನ 2 ಗ್ಲಾಸ್‌ ವೈನ್‌ ತೆಗೆದುಕೊಳ್ಳುತ್ತಾರೋ ಅವರು ವೈನ್ ಕುಡಿಯದೇ ಇರುವ ಮಹಿಳೆಯರಿಗಿಂತ ಕಡಿಮೆ ತೂಕ ಹೊಂದಿರುವುದು ಈ ಅಧ್ಯಯನದಲ್ಲಿ ತಿಳಿದು ಬಂತು.

ತಿನ್ನ ಬೇಕೆಂಬ ಆಸೆ ಹತ್ತಿಕ್ಕುವ ವೈನ್‌

ತಿನ್ನ ಬೇಕೆಂಬ ಆಸೆ ಹತ್ತಿಕ್ಕುವ ವೈನ್‌

ವೈನ್‌ ಕುಡಿಯುವುದರಿಂದ ಚಾಕೋಲೆಟ್‌ ತಿನ್ನಬೇಕು, ಮತ್ತಿತರ ಸಿಹಿ ತಿನ್ನಬೇಕೆಂಬ ಆಸೆಯೂ ಉಂಟಾಗುವುದಿಲ್ಲ. ಇದು ಕೂಡ ತೂಕ ಇಳಿಕೆಗೆ ಒಂದು ಕಾರಣವಾಗಿದೆ.

 ರೆಡ್‌ವೈನ್ ಮತ್ತು ಬೆಳ್ಳುಳ್ಳಿ

ರೆಡ್‌ವೈನ್ ಮತ್ತು ಬೆಳ್ಳುಳ್ಳಿ

ಇನ್ನು ರೆಡ್‌ವೈನ್‌ಗೆ ಬೆಳ್ಳುಳ್ಳಿ ಹಾಕಿ ಕುಡಿಯುವುದರಿಂದ ಕೂಡ ತೂಕ ಇಳಿಕೆಯಾಗುತ್ತದೆ. ಪ್ರತಿದಿನ ಬೆಳ್ಳುಳ್ಳಿ ಹಾಕಿದ 3 ಚಮಚ ರೆಡ್‌ವೈನ್‌ ಕೂಡ ತೂಕ ಇಳಿಸುವಲ್ಲಿ ಸಹಕಾರಿ. ಅರ್ಧ ಲೀಟರ್‌ ವೈನ್‌ಗೆ 12 ಎಸಳು ಬೆಳ್ಳುಳ್ಳಿ ಹಾಕಿ, ಆ ವೈನ್‌ ತೆಗೆದುಕೊಂಡರೂ ತೂಕ ಇಳಿಕೆಯಾಗುವುದು.

ಸಲಹೆ: ರೆಡ್‌ವೈನ್‌ ಒಳ್ಳೆಯದೆಂದು ಅದನ್ನು ತುಂಬಾ ಕುಡಿದರೆ ಇದರಿಂದ ನಿಮಗೆ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು. ಇದನ್ನು ಔಷಧ ರೀತಿಯಲ್ಲಿ ಬಳಸಲು ಗೊತ್ತಿದ್ದರೆ ಮಾತ್ರ ರೆಡ್‌ವೈನ್‌ ಪ್ರಯೋಜನ ಪಡೆಯಬಹುದು. ಆದ್ದರಿಂದ ರೆಡ್‌ವೈನ್‌ ಕಂಠಪೂರ್ತಿ ಕುಡಿದು ಫಿಟ್ ಆಗುವ ಬದಲು, ಮಿತಿಯಲ್ಲಿ ಕುಡಿದರೆ ಬಾಡಿ ಫಿಟ್‌ ಆಗಿ ಇಟ್ಟುಕೊಳ್ಳಬಹುದು.

English summary

Drinking 2 Glass Wine Before Bed Can Help You Lose Weight

Wine have Resveratrol antioxidants, This is white fat that gets transformed into beige fat. That’s very useful because this type of fat is much easier to burn. How to use red wine to loose weight read on.
X
Desktop Bottom Promotion