For Quick Alerts
ALLOW NOTIFICATIONS  
For Daily Alerts

ನೀವು ಸಿಕ್ಕಾಪಟ್ಟೆ ಕೋಪ ಮಾಡ್ಕೋತೀರಾ ನಿಮ್ಮ ಪ್ರಾಣಕ್ಕೆ ಕುತ್ತು ತರುತ್ತೆ ಮುಂಗೋಪ ಎಚ್ಚರ..!

|

ಆಹಾರ ಹುಡುಕುತ್ತ ಹೋಗಿದ್ದ ಹಾವಿನ ಬಾಲಕ್ಕೆ ಒಂದು ಕಡೆ ಗರಗಸವೊಂದರ ಅಂಚು ತಾಕಿ, ಹಾವಿಗೆ ನೋವಾಗುತ್ತೆ. ಕೋಪಗೊಂಡ ಹಾವು ಗರಗಸವನ್ನು ಬಲವಾಗಿ ಕಚ್ಚುತ್ತೆ. ಹಾವಿನ ಬಾಯಿ ಹರಿದು ರಕ್ತಮಯವಾಯಿತು. ಇದರಿಂದ ಇನ್ನೂ ಕೋಪಗೊಂಡ ಮೂರ್ಖ ಹಾವು ಗರಗಸವನ್ನು ತನ್ನ ಮೈಯಿಂದ ಸುತ್ತು ಹಾಕಿ, ಸಿಟ್ಟಿನಿಂದ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಾ ಹೋಯಿತು.

ಪರಿಣಾಮ ಹಾವು ಸಾವನಪ್ಪಿತು. ಕೋಪದ ಮತ್ತಿನಲ್ಲಿ ಹಾವು ತನ್ನ ಪ್ರಾಣವನ್ನೂ ಸಹ ಲೆಕ್ಕಿಸದೆ, ಗರಗಸದ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲದಲ್ಲಿ ತಾನೇ ಬಲಿಯಾಗಿತ್ತು. ಹೀಗೆ ಕೋಪವು ಮನುಷ್ಯನ ನಿರ್ನಾಮಕ್ಕೆ ಕಾರಣವಾಗಬಹುದು ಅನ್ನೋದು ಈ ಕತೆ ಮೂಲಕ ತಿಳಿಯಬಹುದು. ಹೌದು, ಕೋಪ ಒಂದು ಭಾವನಾತ್ಮಕ ವಿಚಾರ. ಅನೇಕ ಸಂದರ್ಭಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಮಗೂ ಕೋಪ ಬಂದಿರುತ್ತದೆ.

ಆದರೆ, ಇದು ಅತಿಯಾದರೆ ತುಂಬಾ ಅಪಾಯಕಾರಿ. ಕೋಪ ನಿಜಕ್ಕೂ ಅಪಾಯಕಾರಿ ಅನ್ನೋಕೆ ಅನೇಕ ಉದಾಹರಣೆಗಳಿವೆ. ಕೋಪವನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲ ಎಂದ ಮೇಲೆ ಅದು ತುಂಬಾನೇ ಡೇಂಜರಸ್ ಆಗಿ ಬಿಡುತ್ತದೆ. ಕೆಲವರಿಗೆ ಕೋಪ ಬಂದು ತಕ್ಷಣ ಕಡಿಮೆಯಾಗಿ ಬಿಡುತ್ತದೆ. ಇನ್ನು ಕೆಲವರಿಗೆ ಒಮ್ಮೆ ಬಂದ ಕೋಪ ದೀರ್ಘವಾಗಿ ಇರುತ್ತದೆ. ಕೆಲವರ ಕೋಪ ಹೇಗೆ ಅಂದರೆ ಅದು ನಿಯಂತ್ರಿಸಲು ಕೂಡ ಆಗುವುದಿಲ್ಲ. ಇನ್ನು ಕೋಪ ಎನ್ನುವ ಭಾವನಾತ್ಮಕ ವಿಚಾರ ಒತ್ತಡ, ಖಿನ್ನತೆ, ಹಣಕಾಸಿನ ಸಮಸ್ಯೆ, ನೋವು ಹೀಗೆ ವಿವಿಧ ಕಾರಣಗಳಿಂದ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಬರುವುದುಂಟು.ಹಾಗಾದ್ರೆ ಕೋಪದಿಂದ ಮನುಷ್ಯನ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ. ಆರೋಗ್ಯದ ಮೇಲಿನ ಪರಿಣಾಮಕ್ಕೂ ಮೊದಲು ಕೋಪದಲ್ಲಿರುವ ವಿಧಗಳ ಬಗ್ಗೆ ಗಮನಿಸೋಣ.

 ಪ್ಯಾಸಿವ್ ಆಂಗ್ರಿ ಕೋಪ!

ಪ್ಯಾಸಿವ್ ಆಂಗ್ರಿ ಕೋಪ!

ಇದು ಕೋಪದ ಒಂದು ವಿಧವಾಗಿದ್ದು ಯಾವುದೇ ಕಾರಣವಿಲ್ಲದೆ ಸಣ್ಣಪುಟ್ಟ ವಿಚಾರಗಳಿಗೆ ಕೋಪ ಮಾಡವುದಾಗಿದೆ. ಇಂಡೈರೆಕ್ಟ್ ಆಗಿ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ, ಗದ್ದಲ, ನಕರಾತ್ಮಕ ಫೀಲಿಂಗ್ಸ್ ತೋರಿಸುವುದಾಗಿದೆ. ಬಹಿರಂಗವಾಗಿ ಏನು ಹೇಳದೆ ಇನ್ ಡೈರೆಕ್ಟ್ ಆಗಿ ಬೈಯೋದು, ಕೋಪದಲ್ಲಿ ಇರುವುದು, ನೆಗೆಟಿವ್ ಫೀಲಿಂಗ್ಸ್ ತೋರಿಸುವುದಾಗಿದೆ.

ಆರೋಗ್ಯದ ಮೇಲೆ ಕೋಪದ ದುಷ್ಪರಿಣಾಮ!

ಆರೋಗ್ಯದ ಮೇಲೆ ಕೋಪದ ದುಷ್ಪರಿಣಾಮ!

ಎಲ್ಲರೂ ಕೋಪಗೊಳ್ಳಲು ಒಂದೇ ಕಾರಣವಿರುವುದಿಲ್ಲ.ಕಾರಣಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಭಿನ್ನವಾಗಿರಬಹುದು. ಕೆಲವರಿಗೆ, ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ಸಮಸ್ಯೆಗಳು ಮತ್ತು/ಅಥವಾ ಕೆಲಸ ಅಥವಾ ಪ್ರಣಯ ಸಂಬಂಧಕ್ಕೆ ಸಂಬಂಧಿಸಿದ ಒತ್ತಡದಿಂದ ಬರಬಹುದು. ಹೀಗೆ ಬರುವ ಕೋಪ ಒಂದಲ್ಲ ಒಂದು ರೀತಿಯಲ್ಲಿ ಮನು ಷ್ಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಮನುಷ್ಯನ ಜೀವನ ಅಥವಾ ಮೈಂಡ್ ಕಿರಿಕಿರಿಯಿಂದ ಕೂಡಿರುತ್ತದೆ. ಅಲ್ಲದೇ ಕೋಫದಿಂದ ಹತಾಶೆಯ ಭಾವನೆ ಮೂಡುತ್ತದೆ. ಸದಾ ನಕಾರಾತ್ಮಕ ಭಾವನೆಯಿಂದ ತುಂಬಿರುತ್ತದೆ. ಅಲ್ಲದೇ ಅಧಿಕ ರಕ್ತದೊತ್ತಡ, ಅಧಿಕ ಹೃದಯ ಬಡಿತ ಸಮಸ್ಯೆ ಕಾಡುತ್ತದೆ. ತನ್ನ ಮೇಲೆ ತಾನು ಹಾನಿ ಮಾಡಿಕೊಳ್ಳುವುದು ಹೀಗೆ ಅನೇಕ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಕಾಡುತ್ತದೆ.

ಅಗ್ರೆಸಿವ್ ಕೋಪ!

ಅಗ್ರೆಸಿವ್ ಕೋಪ!

ಅಗ್ರೆಸಿವ್ ಕೋಪ ಕೂಡ ಕೋಪದ ಮತ್ತೊಂದು ವಿಧವಾಗಿದೆ ಆಕ್ರಮಣಕಾರಿ ಕೋಪ ಎಂದರೆ ನೇರವಾಗಿ ಕೋಪವನ್ನು ತೋರ್ಪಡಿಸುವುದಾಗಿದೆ. ಭಾವನಾತ್ಮಕವಾಗಿ, ದೈಹಿಕವಾಗಿ ಅಥವಾ ಮಾನಸಿಕವಾಗಿ ವ್ಯಕ್ತಿಯ ಮೇಲೆ ಕೋಪ ತೋರಿಸುವುದು. ಜೋರಾಗಿ ಸದ್ದು ಮಾಡಿ ಬೈಯುವುದು, ಹೊಡೆಯುವುದಾಗಿದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ!

ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ!

ನೀವು ಆಗಾಗೇ ಅನಾರೋಗ್ಯಕ್ಕೀಡಾಗುತ್ತಿದ್ದೀರಾ? ಹಾಗಾದ್ರೆ ನೀವು ಕೋಪದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ಅರ್ಥ. ಹೌದು, ಕೋಪ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಕೋಪ ಬಂದ ಸಮಯಗಳನ್ನು ಒಬ್ಬ ವ್ಯಕ್ತಿ ನೆನೆಸಿಕೊಂಡರೆ ಅಥವಾ ಪದೇ ಪದೇ ಒಬ್ಬ ವ್ಯಕ್ತಿಗೆ ಕೋಪ ಬರುತ್ತದೆ ಅಂದರೆ ಅದು ಆತನ ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಕುಗ್ಗಿಸುತ್ತಂತೆ.

ಹೃದಯ ಸಮಸ್ಯೆ!

ಹೃದಯ ಸಮಸ್ಯೆ!

ನಿಮಗೊಂದು ಗೊತ್ತಾ? ನೀವು ಹೆಚ್ಚೆಚ್ಚು ಕೋಪ ಮಾಡಿಕೊಂಡಂತೆ ನಿಮ್ಮ ಹೃದಯ ಸಮಸ್ಯೆ ಕೂಡ ಜಾಸ್ತಿ ಆಗುತ್ತದೆ. ಹೌದು, ನಿಮಗೆ ಬರುವ ಕೋಪ ಒಂದರಿಂದ ಎರಡು ಗಂಟೆ ಅವಧಿ ಇದ್ದರೆ ಅದು ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆಯನ್ನು ಸೃಷ್ಟಿಸುತ್ತದೆ. ನೀವೆ ಗಮನಿಸರಬಹುದು ಕೋಪ ಬಂದರೆ ಅನೇಕರ ಹೃದಯ ಬಡಿತ ಜೋರಾಗಿರುತ್ತದೆ.

ಶ್ವಾಸಕೋಶಕ್ಕೆ ಸಮಸ್ಯೆ!

ಶ್ವಾಸಕೋಶಕ್ಕೆ ಸಮಸ್ಯೆ!

ಹೌದು ಕೋಪ ಕೂಡ ನಿಮ್ಮ ಶ್ವಾಸಕೋಶದ ಮೇಲೆ ದುಷ್ಟಪರಿಣಾಮ ಬೀರುತ್ತದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಸಿಗರೇಟ್ ಸೇದಿ ಶ್ವಾಸಕೋಶ ಎಷ್ಟು ಹದಗೆಡುತ್ತದೋ? ಅದೇ ರೀತಿಯಲ್ಲಿ ಕೋಪ ನಿಮ್ಮ ಶ್ವಾಸಕೋಶವನ್ನು ಡ್ಯಾಮೇಜ್ ಮಾಡುತ್ತದೆ.

ಮೂರ್ಛೆ ರೋಗ!

ಮೂರ್ಛೆ ರೋಗ!

ಮನುಷ್ಯ ಕೋಪಗೊಂಡಾಗ ಆತನಲ್ಲಿನ ಭಾವನೆಗಳು ನಿಯಂತ್ರಣಕ್ಕೆ ಬರುವುದಿಲ್ಲ.. ಕೋಪ ಬಂದ ಸಂದರ್ಭದಲ್ಲಿ ಮನುಷ್ಯ ಬಹಳ ಆಕ್ರಮಣಕಾರಿಯಾಗಿ ವರ್ತನೆ ಮಾಡುತ್ತಾನೆ.. ಭಾವನೆಗಳ ಮೇಲೆ ಪರಿಣಾಮ ಬೀರುವುದರಿಂದ ಹೆಚ್ಚು ಹೆಚ್ಚು ಕೋಪಗೊಳ್ಳುವ ವ್ಯಕ್ತಿಗಳಿಗೆ ಮೂರ್ಛೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಬೈಪೋಲಾರ್ ಡಿಸಾರ್ಡರ್!

ಬೈಪೋಲಾರ್ ಡಿಸಾರ್ಡರ್!

ಜಾಸ್ತಿ ಕೋಪಗೊಳ್ಳುವ ವ್ಯಕ್ತಿ ಬೈಪೋಲಾರ್ ಡಿಸಾರ್ಡರ್ ಎಂಬ ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.. ಇದ್ದಕ್ಕಿದ್ದಂತೆ ಸಂತೋಷದಿಂದ ಇರುವುದು ಇದ್ದಕ್ಕಿದ್ದಂತೆ ಅತಿ ಕೋಪಗೊಳ್ಳುವುದು ಮತ್ತು ಅತಿ ದುಃಖದಿಂದ ಇರುವಂತೆ ರೋಗ ಕಾಣಿಸಿಕೊಂಡ ವ್ಯಕ್ತಿ ವರ್ತನೆ ಮಾಡಲು ಶುರು ಮಾಡುತ್ತಾನೆ.. ಇನ್ನೂ ಅಪಾಯಕಾರಿ ಅಂದರೆ ಈ ರೋಗ ಕಾಣಿಸಿಕೊಂಡ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಕೂಡ ತೆಗೆದುಕೊಳ್ಳಬಹುದು..

English summary

the effect of anger on health in kannada

Here we are discussing about the effect of anger on health in kannada, read on,
Story first published: Monday, August 1, 2022, 14:00 [IST]
X
Desktop Bottom Promotion