For Quick Alerts
ALLOW NOTIFICATIONS  
For Daily Alerts

ನ್ಯೂಮೋನಿಯಾ: ಶ್ವಾಸಕೋಶದ ಸೋಂಕು ಇದ್ದಾಗ ಏನು ತಿನ್ನಬೇಕು, ಏನು ತಿನ್ನಬಾರದು?

|

ಶ್ವಾಸಕೋಶ(ದ)ಗಳ ಉರಿಯೂತ ಅಥವಾ ನ್ಯುಮೋನಿಯಾ ಎಂಬುದು ಬ್ಯಾಕ್ಟೀರಿಯಾ, ಫ಼ಂಗಸ್, ಹಾಗೂ ವೈರಾಣುಗಳ ಕಾರಣದಿಂದ ಒಂದು ಅಥವಾ ಎರಡೂ ಶ್ವಾಸಕೋಶಗಳಲ್ಲಿ ಉಂಟಾಗುವ ಸೋಂಕು. ಸರ್ವೇಸಾಮಾನ್ಯವಾಗಿ ಅಲ್ವೆಯೋಲೈ ಎಂದು ಕರೆಯಲ್ಪಡುವ, ಶ್ವಾಸಕೋಶಗಳಲ್ಲಿನ ಪುಟ್ಟ ಪುಟ್ಟ ಗಾಳಿಚೀಲಗಳಲ್ಲಿ ಈ ಸೋಂಕು ಉರಿಯನ್ನುಂಟು ಮಾಡುತ್ತದೆ. ಸೋಂಕು ತಲೆದೋರಿದಾಗ ಅಲ್ವೆಯೋಲೈಗಳಲ್ಲಿ ದ್ರವ ಅಥವಾ ಕೀವು ತುಂಬಿಕೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ರೋಗಿಗೆ ಉಸಿರಾಟವು ಕಷ್ಟವಾಗುತ್ತದೆ ಹಾಗೂ ಜೊತೆಗೆ ಜ್ವರ, ಕೆಮ್ಮು, ಹಾಗೂ ವಿಪರೀತ ಚಳಿಯ ಅನುಭವವೂ ಉಂಟಾಗುತ್ತದೆ.

ನ್ಯುಮೋನಿಯಾ ಖಾಯಿಲೆಯು ಸಾಮಾನ್ಯವಾಗಿ ಶಿಶುಗಳಲ್ಲಿ ಅಥವಾ 65 ವರ್ಷಗಳಿಗಿಂತಲೂ ಮೇಲ್ಪಟ್ಟ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಅವರ ದುರ್ಬಲ ರೋಗನಿರೋಧಕ ಶಕ್ತಿ. ನ್ಯುಮೋನಿಯಾವು ಮಾರಣಾಂತಿಕ ರೋಗವಾಗಿದ್ದು, ರೋಗ ಲಕ್ಷಣಗಳಾದ ಎದೆನೋವು, ದಮ್ಮು ಕಟ್ಟುವುದು, ಕೆಮ್ಮು, ಆಯಾಸ, ಜ್ವರ, ಹಾಗೂ ಚಳಿ, ವಾಕರಿಕೆ ಹಾಗೂ ವಾಂತಿಯಂತಹವು ಕಂಡುಬಂದಲ್ಲಿ ತಡಮಾಡದೇ ಕೂಡಲೇ ವೈದ್ಯರನ್ನು ಕಾಣಬೇಕು.

ಈಗ ನ್ಯುಮೋನಿಯಾದ ಕೆಲವು ಅತ್ಯಂತ ಸಾಮಾನ್ಯ ಲಕ್ಷಣಗಳಾವುವು ಅನ್ನೋದರ ಬಗ್ಗೆ ಗಮನಹರಿಸೋಣ. ಅವು ಈ ಕೆಳಗಿನವುಗಳಾಗಿರುತ್ತವೆ:

ಈಗ ನ್ಯುಮೋನಿಯಾದ ಕೆಲವು ಅತ್ಯಂತ ಸಾಮಾನ್ಯ ಲಕ್ಷಣಗಳಾವುವು ಅನ್ನೋದರ ಬಗ್ಗೆ ಗಮನಹರಿಸೋಣ. ಅವು ಈ ಕೆಳಗಿನವುಗಳಾಗಿರುತ್ತವೆ:

ಮಾಂಸಖಂಡಗಳಲ್ಲಿ ನೋವು

ವಾಕರಿಕೆ ಮತ್ತು ವಾಂತಿ

ಹೆಚ್ಚಳಗೊಂಡ ಉಸಿರಾಟದ ದರ

ದಮ್ಮು ಕಟ್ಟುವುದು

ನ್ಯುಮೋನಿಯಾ ರೋಗಿಯು ಯಾವ ಆಹಾರವನ್ನ ಸೇವಿಸಬೇಕು ?

ನ್ಯುಮೋನಿಯಾ ರೋಗಿಯು ಯಾವ ಆಹಾರವನ್ನ ಸೇವಿಸಬೇಕು ?

ನ್ಯುಮೋನಿಯಾ ಎಂದರೆ ಕೋವಿಡ್ - 19 ನ ಗಂಭೀರ ಸ್ವರೂಪದ ಒಂದು ಸಂಕೀರ್ಣ ಖಾಯಿಲೆಯೂ ಹೌದು. ಸಾರ್ಸ್- ಕೋವ್-2 ಎಂದು ಕರೆಯಲ್ಪಡುವ ವಿನೂತನ ಕೊರೊನಾ ವೈರಸ್ ನ ಕಾರಣದಿಂದ ತಲೆದೋರುವ ರೋಗವಿದು. ಕೋವಿಡ್ - 19 ನ್ಯುಮೋನಿಯಾಗೆ ತುತ್ತಾದ ಕೆಲವರು, ಉಸಿರಾಡುವುದಕ್ಕೇ ಸಾಧ್ಯವಾಗದಂತಹ, ತೀವ್ರ ಸ್ವರೂಪದ ಉಸಿರಾಟದ ತೊಂದರೆಗೆ (ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ - ಎ.ಆರ್.ಡಿ.ಎಸ್) ಸಿಲುಕಿಕೊಳ್ಳುವರು. ಅಂತಹ ಪ್ರಕರಣಗಳಲ್ಲಿ, ರೋಗಿಗಳ ಉಸಿರಾಟಕ್ಕೆ ನೆರವಾಗುವುದಕ್ಕಾಗಿ ಯಾಂತ್ರಿಕ ವೆಂಟಿಲೇಷನ್ ನ ಅವಶ್ಯಕತೆ ಉಂಟಾಗುತ್ತದೆ.

ಯಾವುದೇ ಮನೆಮದ್ದುಗಳೇ ಆಗಲೀ ಇಲ್ಲವೇ ಆಹಾರ ಪದಾರ್ಥಗಳಾಗಲೀ ನ್ಯುಮೋನಿಯಾವನ್ನ ಗುಣಪಡಿಸಲಾರವು ಎಂಬ ಅಂಶವನ್ನ ನೆನಪಿನಲ್ಲಿಟ್ಟುಕೊಳ್ಳಿ. ಸರಿಯಾದ ಜೌಷಧೋಪಚಾರಗಳೊಂದಿಗೆ ಆಸ್ಪತ್ರೆಯ ಚಿಕಿತ್ಸೆಯ ಅಗತ್ಯ ನ್ಯುಮೋನಿಯಾ ರೋಗಿಗೆ ಇರುತ್ತದೆ. ಆದಾಗ್ಯೂ, ಆರಂಭದ ಗಂಭೀರ ಹಂತದ ಬಳಿಕ, ಪೋಷಕಾಂಶಗಳನ್ನು ಒಳಗೊಂಡಿರುವ ಕೆಲವು ನಿರ್ಧಿಷ್ಟ ಆಹಾರವಸ್ತುಗಳನ್ನ ರೋಗಿಯ ಆಹಾರ ಪದ್ಧತಿಯಲ್ಲಿ ಒಳಗೊಳ್ಳುವುದರ ಮೂಲಕ, ರೋಗಿಯ ಚೇತರಿಕೆಯ ವೇಗವನ್ನ ಹೆಚ್ಚಿಸಬಹುದು. ಅಂತಹ ಆಹಾರವಸ್ತುಗಳು ಯಾವುವೆಂಬುದನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ:

ಬಹುಧಾನ್ಯಗಳು

ಬಹುಧಾನ್ಯಗಳು

ನವಣೆ, ಕಂದು ಅಕ್ಕಿ, ಓಟ್ಸ್, ಬಾರ್ಲಿಯಂತಹ ಬಹುಧಾನ್ಯಗಳಲ್ಲಿರುವ ಕಾರ್ಬೋಹೈಡ್ರೇಟ್ ನ ಅಂಶವು ನ್ಯುಮೋನಿಯಾ ರೋಗಿಯ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

ಪ್ರೋಟೀನ್ ನಿಂದ ಸಮೃದ್ಧವಾಗಿರುವ ಆಹಾರವಸ್ತುಗಳು

ಪ್ರೋಟೀನ್ ನಿಂದ ಸಮೃದ್ಧವಾಗಿರುವ ಆಹಾರವಸ್ತುಗಳು

ನ್ಯುಮೋನಿಯಾದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರೋಟೀನ್ ನಿಂದ ಸಮೃದ್ಧವಾಗಿರುವ ಆಹಾರಪದ್ಧತಿಯು ಪ್ರಯೋಜನಕಾರಿಯಾಗಿರುತ್ತದೆ. ಕಾಳುಗಳು, ಬೀಜಗಳು, ಬೀನ್ಸ್, ಸಾಲ್ಮನ್ ಹಾಗೂ ಸಾರ್ಡೈನ್ ಗಳಂತಹ ತಂಪು ನೀರಿನ ಮೀನುಗಳು - ಇವೇ ಮೊದಲಾದ ಆಹಾರ ವಸ್ತುಗಳು ಉರಿಶಾಮಕ ಗುಣಲಕ್ಷಣಗಳುದ್ದವುಗಳಾಗಿವೆ.

ಹಸಿರು ಸೊಪ್ಪುಯುಕ್ತ ತರಕಾರಿಗಳು

ಹಸಿರು ಸೊಪ್ಪುಯುಕ್ತ ತರಕಾರಿಗಳು

ಲೆಟ್ಯೂಸೆ, ಪಾಲಕ್ ನಂತಹ ತರಕಾರಿ ಸೊಪ್ಪುಗಳು ಅತ್ಯಧಿಕ ಪೋಷಕ ತತ್ತ್ವಗಳನ್ನು ಒಳಗೊಂಡವುಗಳಾಗಿದ್ದು, ಇವು ಶ್ವಾಸಕೋಶಗಳ ಸೋಂಕಿನ ಉಪಶಮನದ ಪ್ರಕ್ರಿಯೆಯಲ್ಲಿ ನೆರವಾಗುತ್ತವೆ. ಸೋಂಕುಕಾರಕಗಳ ವಿರುದ್ಧ ರಕ್ಷಣೆಯನ್ನೊದಗಿಸುವ ಆ್ಯಂಟಿ-ಆಕ್ಸಿಡೆಂಟ್ ಗಳನ್ನು ಇವು ಒಳಗೊಂಡಿವೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಕಿತ್ತಳೆಗಳು, ಬೆರ್ರಿಗಳು, ಕಿವಿಯಂತಹ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗಿ ಆ ಮೂಲಕ ರೋಗಿಯ ಚೇತರಿಕೆಯಲ್ಲಿ ಗಮನಾರ್ಹ ಸುಧಾರಣೆಯನ್ನುಂಟು ಮಾಡುತ್ತವೆ. ಇವುಗಳಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಗಳು ಸೋಂಕುಗಳನ್ನುಂಟು ಮಾಡುವ ರೋಗಕಾರಕಗಳ ವಿರುದ್ಧ ದೇಹವನ್ನ ರಕ್ಷಿಸಬಲ್ಲವು.

ನ್ಯುಮೋನಿಯಾದ ಆರೈಕೆಯಲ್ಲಿ ಜೇನುತುಪ್ಪದ ಪಾತ್ರ

ನ್ಯುಮೋನಿಯಾದ ಆರೈಕೆಯಲ್ಲಿ ಜೇನುತುಪ್ಪದ ಪಾತ್ರ

ಆಯುರ್ವೇದ ಶಾಸ್ತ್ರದಲ್ಲಿ, ತನ್ನ ಉಪಶಾಮಕ ಗುಣಧರ್ಮಗಳಿಗಾಗಿಯೇ ಜೇನುತುಪ್ಪವು ಪ್ರಸಿದ್ಧವಾಗಿದೆ. ನ್ಯುಮೋನಿಯಾದ ರೋಗಲಕ್ಷಣಗಳಾಗಿರುವ ಕೆಮ್ಮು ಮತ್ತು ಶೀತಗಳ ನಿವಾರಣೆಗೆ ನೆರವಾಗಬಲ್ಲ ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಧರ್ಮಗಳು ಜೇನುತುಪ್ಪದಲ್ಲಿವೆ.

ಅರಿಶಿನ

ಅರಿಶಿನ

ನ್ಯುಮೋನಿಯಾದ ಪ್ರಾಥಮಿಕ ಲಕ್ಷಣಗಳಲ್ಲಿ ಒಂದಾಗಿರುವ ಎದೆನೋವನ್ನ ತಗ್ಗಿಸಬಲ್ಲ ಉರಿಶಾಮಕ ಗುಣಧರ್ಮಗಳು ಅರಿಶಿನದಲ್ಲಿವೆ. ಕಫ಼ವನ್ನು ನೀರಾಗಿಸುವ ಸಾಮರ್ಥ್ಯ ಅರಿಶಿನಕ್ಕಿರುವುದರಿಂದ, ಶ್ವಾಸನಾಳಗಳಲ್ಲಿ ತಡೆಯೊಡ್ಡುತ್ತಿರಬಹುದಾದ ಕಫ಼ವನ್ನ ನೀರಾಗಿಸಿ ನಿವಾರಿಸುವಲ್ಲಿ ಅರಿಶಿನವು ನೆರವಾಗುತ್ತದೆ ಹಾಗೂ ಆ ಮೂಲಕ ರೋಗಿಗೆ ಸರಾಗ ಉಸಿರಾಟಕ್ಕೆ ದಾರಿಯನ್ನು ಸುಗಮವಾಗಿಸುತ್ತದೆ.

ನ್ಯುಮೋನಿಯಾವನ್ನ ಹತ್ತಿಕ್ಕುವಲ್ಲಿ ಶುಂಠಿಯ ಪಾತ್ರ

ನ್ಯುಮೋನಿಯಾವನ್ನ ಹತ್ತಿಕ್ಕುವಲ್ಲಿ ಶುಂಠಿಯ ಪಾತ್ರ

ತನ್ನ ಉರಿಶಾಮಕ ಹಾಗೂ ಆ್ಯಂಟಿ-ಬ್ಯಾಕ್ಟೀರಿಯಲ್ ಗುಣಧರ್ಮಗಳಿಗೆ ಚಿರಪರಿಚಿತವಾಗಿರುವ ವಸ್ತುವೇ ಶುಂಠಿ. ನ್ಯುಮೋನಿಯಾ ಸೋಂಕಿನ ಲಕ್ಷಣವಾಗಿರುವ ಎದೆನೋವನ್ನ ಕಡಿಮೆ ಮಾಡುವಲ್ಲಿ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ.

ಇದುವರೆಗೂ ನ್ಯುಮೋನಿಯ ರೋಗಿಗಳು ಏನನ್ನು ಸೇವಿಸಿದರೆ ಒಳ್ಳೆಯದು ಎಂಬುದರ ಬಗ್ಗೆ ತಿಳಿದುಕೊಂಡೆವು. ಈಗ ನ್ಯುಮೋನಿಯಾ ರೋಗಿಗಳು ತಿನ್ನಬಾರದ ವಸ್ತುಗಳ ಕುರಿತು ಒಮ್ಮೆ ಅವಲೋಕಿಸೋಣ. ಏಕೆಂದರೆ, ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲೀನ ರೋಗವಾಗಿರುವ ನ್ಯುಮೋನಿಯಾದಂತಹ ರೋಗದಿಂದ ಬಳಲುವ ರೋಗಿಗಳು, ರೋಗಲಕ್ಷಣಗಳನ್ನು ಇನ್ನಷ್ಟು ಹೆಚ್ಚಿಸಬಹುದಾದ ಕೆಲವು ಆಹಾರವಸ್ತುಗಳನ್ನ ವರ್ಜಿಸಬೇಕಾಗುತ್ತದೆ.

ರುಚಿಯೆನಿಸಿದ್ದನ್ನೆಲ್ಲ ನ್ಯುಮೋನಿಯಾ ರೋಗಿಗಳು ತಿನ್ನುವಂತಿಲ್ಲ. ಅಂತಹ ತಿನ್ನಬಾರದ ಆಹಾರವಸ್ತುಗಳ ಪಟ್ಟಿ ಈ ಕೆಳಗಿನಂತಿದೆ:

ರುಚಿಯೆನಿಸಿದ್ದನ್ನೆಲ್ಲ ನ್ಯುಮೋನಿಯಾ ರೋಗಿಗಳು ತಿನ್ನುವಂತಿಲ್ಲ. ಅಂತಹ ತಿನ್ನಬಾರದ ಆಹಾರವಸ್ತುಗಳ ಪಟ್ಟಿ ಈ ಕೆಳಗಿನಂತಿದೆ:

ಅತ್ಯಧಿಕ ಉಪ್ಪು

ಆಹಾರ ಪದಾರ್ಥದಲ್ಲಿ ಚಿಟಿಕೆಯಷ್ಟು ಉಪ್ಪಿರುವುದೇನೋ ಸರಿ ಆದರೆ, ಸಿಕ್ಕಾಪಟ್ಟೆ ಉಪ್ಪುಗೂಡಿರೋ ಆಹಾರಪದ್ಧತಿ ತೊಂದರೆಗೆ ದಾರಿಮಾಡಿಕೊಟ್ಟೀತು. ಉಪ್ಪಿನ ಸೇವನೆಯು ರಕ್ತದಲ್ಲಿ ಜಲಾಂಶವನ್ನ ಹಿಡಿದಿಡುತ್ತದೆ. ಜಲಾಂಶದ ಆಧಿಕ್ಯವು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಉಪ್ಪನ್ನೋ ಇಲ್ಲವೇ ಉಪ್ಪಿನಂತಹದ್ದೇ ಬದಲೀ ವಸ್ತುವನ್ನೋ ಬಳಸುವ ಬದಲು, ನಿಮ್ಮ ಆಹಾರಪದಾರ್ಥದ ಸ್ವಾದವನ್ನ ಹೆಚ್ಚಿಸಲು ಗಿಡಮೂಲಿಕೆಗಳನ್ನ ಅಥವಾ ಸಾಂಬಾರ ವಸ್ತುಗಳನ್ನ ಬಳಸಿರಿ.

ಘನೀಕೃತ ಆಹಾರಪದಾರ್ಥಗಳು ಅಥವಾ ಕೋಲ್ಡ್ ಕಟ್ ಗಳು

ಘನೀಕೃತ ಆಹಾರಪದಾರ್ಥಗಳು ಅಥವಾ ಕೋಲ್ಡ್ ಕಟ್ ಗಳು

ಕೋಲ್ಡ್ ಕಟ್ ಗಳು (ಶೈತ್ಯಾಗಾರದಲ್ಲಿರಿಸಲಾದ ಕತ್ತರಿಸಿಟ್ಟ ಆಹಾರವಸ್ತುಗಳು) ನಿಮ್ಮ ಆರೋಗ್ಯಕ್ಕೆ ಎಂದೆಂದಿಗೂ ಅಪಾಯಕಾರಿ. ಉಪ್ಪು ಹಾಕಿ ಒಣಗಿಸಿದ ಹಂದಿ ಮಾಂಸ, ಕೋಲ್ಡ್ ಕಟ್ ಗಳು, ತೊಡೆಯ ಹಿಂಭಾಗದ ಮಾಂಸ, ಹಾಗೂ ಹಾಟ್ಡಾಗ್ ಗಳು ನೈಟ್ರೇಟ್ ಗಳನ್ನ ಒಳಗೊಂಡಿರುತ್ತವೆ. ನ್ಯುಮೋನಿಯಾದಿಂದ ಬಳಲುತ್ತಿರುವವರು ಘನೀಕೃತ ಆಹಾರಪದಾರ್ಥಗಳನ್ನ ಅಥವಾ ಕೋಲ್ಡ್ ಕಟ್ ಗಳನ್ನ ವರ್ಜಿಸುವುದು ಒಳ್ಳೆಯದು.

ಹೈನುಗಾರಿಕಾ ಉತ್ಪನ್ನಗಳು

ಹೈನುಗಾರಿಕಾ ಉತ್ಪನ್ನಗಳು

ಹೈನುಗಾರಿಕಾ ಉತ್ಪನ್ನಗಳು ನ್ಯುಮೋನಿಯಾದ ರೋಗಿಗಳಲ್ಲಿ ರೋಗಲಕ್ಷಣಗಳನ್ನು ಉಲ್ಬಣಿಸುತ್ತವೆಯಾದ್ದರಿಂದ, ನ್ಯುಮೋನಿಯಾ ರೋಗಿಗಳನ್ನ ಇವುಗಳನ್ನ ಸೇವಿಸಬಾರದು. ಹಾಲು ಪೌಷ್ಟಿಕವಾಗಿದ್ದು ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿದೆ ಅನ್ನೋದೇನೋ ನಿಜ. ಆದರೆ, "ಹಾಲಿನ ವಿಘಟನ ಉತ್ಪನ್ನ" ಎನಿಸಿಕೊಂಡಿರೋ ಕ್ಯಾಸೋಮೋರ್ಫಿನ್ ಎಂಬ ವಸ್ತು ಹಾಲಿನಲ್ಲಿರುತ್ತದೆ. ಈ ವಸ್ತುವು ಶ್ವಾಸಕೋಶಗಳಲ್ಲಿ ಕಫದ ಹೆಚ್ಚಳವನ್ನುಂಟು ಮಾಡುತ್ತದೆ.

ಕರಿದ ಆಹಾರಪದಾರ್ಥಗಳ ಸೇವನೆ ಬೇಡವೇ ಬೇಡ

ಕರಿದ ಆಹಾರಪದಾರ್ಥಗಳ ಅಧಿಕ ಸೇವನೆಯು ಕಾಲಕ್ರಮೇಣ ತೂಕಗಳಿಕೆಗೆ ದಾರಿಮಾಡಿ ಕೊಡುತ್ತದೆ. ದೇಹ ತೂಕದಲ್ಲಾಗುವ ಹೆಚ್ಚಳವು ಶ್ವಾಸಕೋಶಗಳ ಮೇಲಿನ ಒತ್ತಡವನ್ನ ಹೆಚ್ಚಿಸುತ್ತದೆ. "ಇದು ಹೇಗೆ ಸಾಧ್ಯ ?" ಎಂದು ಅಚ್ಚರಿಯಾಗುತ್ತಿದೆಯೇ ?! ಹೇಗೆಂದರೆ, ಕರಿದ ಆಹಾರಪದಾರ್ಥಗಳು ಹೊಟ್ಟೆಯುಬ್ಬರಕ್ಕೆ ಕಾರಣವಾಗಿ ಆ ಮೂಲಕ ವಪೆಯನ್ನು (ಹೊಟ್ಟೆ ಹಾಗೂ ಶ್ವಾಸಕೋಶಗಳ ನಡುವಿನ ಸ್ನಾಯು) ದೂಡುತ್ತವೆ. ಹೀಗಾದಾಗ, ಉಸಿರಾಟವು ಕಠಿಣವಾಗತೊಡಗುತ್ತದೆ.

ಚೆನ್ನಾಗಿ ತಿನ್ನೋದು ಅಂದ್ರೆ ಯಾರಿಗೆ ತಾನೇ ಇಷ್ಟ ಇರೋಲ್ಲ ಹೇಳಿ ? ಆದರೆ ಶ್ವಾಸಕೋಶಗಳ ರೋಗದಂತಹ ದೀರ್ಘಕಾಲೀನ ಸಮಸ್ಯೆಯಿಂದ ಬಳಲುತ್ತಿರುವವರು ಸಿಕ್ಕಸಿಕ್ಕಿದ್ದನ್ನೆಲ್ಲ ತಿನ್ನೋದಕ್ಕಿಂತ ಆರೋಗ್ಯದಾಯಕವಾದದ್ದನ್ನು ತಿನ್ನೋದೇ ಹೆಚ್ಚು ಮುಖ್ಯವಾಗುತ್ತದೆ. ನಿಮ್ಮ ಆಹಾರಪದ್ಧತಿಯನ್ನ ಬದಲಾಯಿಸುವುದಕ್ಕೆ ಮೊದಲು ನಿಮ್ಮ ವೈದ್ಯರೊಡನೆ ಸಮಾಲೋಚಿಸಿ. ಕೇವಲ ಆರೋಗ್ಯದಾಯಕವಾದದ್ದನ್ನ ತಿಂದರಷ್ಟೇ ಸಾಲದು, ಜೊತೆಗೆ ಆರೋಗ್ಯದಾಯಕವಾದ ಜೀವನಶೈಲಿ ಹಾಗೂ ನಿಯಮಿತವಾಗಿ ವ್ಯಾಯಾಮವನ್ನ ಮಾಡುವ ಅಭ್ಯಾಸವನ್ನೂ ಮೈಗೂಡಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ನ್ಯುಮೋನಿಯಾದಂತಹ ಪ್ರಾಣಾಂತಿಕ ರೋಗವನ್ನೂ ಮೆಟ್ಟಿನಿಲ್ಲಲು ಸಾಧ್ಯವಾಗೋದು.

English summary

Pneumonia: What To Eat And Avoid When You Have This Serious Lung Condition

Pneumonia: What to eat and avoid when you have this serious lung condition, have a look,
Story first published: Monday, January 25, 2021, 9:26 [IST]
X
Desktop Bottom Promotion