For Quick Alerts
ALLOW NOTIFICATIONS  
For Daily Alerts

20-30 ವಯಸ್ಸಿನ ಪುರುಷರಲ್ಲಿ ಹೆಚ್ಚುತ್ತಿದೆಯೇ ಲೈಂಗಿಕ ಕಾರ್ಯಕ್ಷಮತೆಯ ಆತಂಕ? ಏಕೆ?

|

ಲೈಂಗಿಕತೆ.. ಎಲ್ಲರಿಗೂ ಇಷ್ಟವಾಗುವ ವಿಚಾರ. ಅದರಲ್ಲೂ ದಂಪತಿ ನಡುವೆ ಲೈಂಗಿಕ ಸಂಪರ್ಕ ಅತೀ ಮುಖ್ಯ. ಅನೇಕ ಬಾರಿ ಲೈಂಗಿಕತೆ ಸಮಸ್ಯೆಯಿಂದ ಸಂಬಂಧಗಳೇ ಹಾಳಾಗುವುದುಂಟು. ಇಂದು ನಾವು ಇಂತಹುದೇ ಒಂದು ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅದುವೇ, ಲೈಂಗಿಕ ಕಾರ್ಯಕ್ಷಮತೆಯ ಆತಂಕ. ಹೌದು, 20 ರಿಂದ 30 ವಯಸ್ಸಿನ ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯ ಆತಂಕ ಹೆಚ್ಚುತ್ತಿದೆ. ಇದು ಅನೇಕ ಸಂಬಂಧಗಳ ವಿರಸಕ್ಕೂ ಕಾರಣವಾಗುತ್ತಿದೆ. ಜಾಗತಿಕವಾಗಿ ಶೇ. 9 ರಿಂದ ಶೇ. 25 ಪುರುಷರು ಮತ್ತು ಶೇ. 6 ರಿಂದ ಶೇ.16 ಮಹಿಳೆಯರುಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಾಗ್ಯೂ ಈ ಸಮಸ್ಯೆ ಅಥವಾ ಆತಂಕದಿಂದ ಬಳಲುತ್ತಿರುವವರು ಪುರುಷರೇ ಜಾಸ್ತಿ ಎಂದು ವರದಿಗಳು ತಿಳಿಸಿವೆ.

1. ಏನಿದು ಕಾರ್ಯಕ್ಷಮತೆಯ ಆತಂಕ..?

1. ಏನಿದು ಕಾರ್ಯಕ್ಷಮತೆಯ ಆತಂಕ..?

ಹಲವು ರೀತಿಯಲ್ಲಿ ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆ ಉಂಟಾಗುತ್ತಿದೆ ಎಂದು ಸಂಶೋಧನೆ ತಿಳಿಸಿದೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಲೈಂಗಿಕ ಅಸ್ವಸ್ಥತೆಗಳ ಬೆಳವಣಿಗೆಗಳು, ಕಾರ್ಯಕ್ಷಮತೆ ಮತ್ತು ಅತೃಪ್ತಿಕರ ಅನುಭವಗಳ ಲೈಂಗಿಕ ತೊಂದರೆಗಳು, ಭವಿಷ್ಯದ ಕಾರ್ಯಕ್ಷಮತೆ ಬಗ್ಗೆ ಭಯ ಹೀಗೆ ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಹಲವಾರು ಮತಿಭ್ರಮಣೆಯನ್ನು ಹೊಂದಿರುತ್ತಾರೆ ಇದುವೇ ಕಾಯಕ್ಷಮತೆಯ ಆತಂಕವಾಗಿದೆ. ಇದಕ್ಕೆ ಏನು ಕಾರಣ ಎಂಬುವುದು ಈವರೆಗೆ ತಿಳಿದುಬಂದಿಲ್ಲ. ಅದರೂ ಕೆಲವೊಂದು ಸಾಮಾನ್ಯ ಕಾರಣವನ್ನು ಪಟ್ಟಿ ಮಾಡಲಾಗಿದೆ. ಹಾಗಾದರೆ ಲೈಂಗಿಕ ಕಾರ್ಯಕ್ಷಮತೆಯ ಆತಂಕಕ್ಕೆ ಕಾರಣವೇನು..? ಈ ತೊಂದರೆಯನ್ನು ನಿವಾರಿಸುವುದು ಹೇಗೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

2. ಕಾರಣಗಳೇನು?

2. ಕಾರಣಗಳೇನು?

ಲೈಂಗಿಕ ಕಾರ್ಯಕ್ಷಮತೆಗೆ ಹಲವಾರು ಆತಂಕಗಳು ಇದೆ ಎಂದು ವೈದ್ಯರು ಹೇಳುತ್ತಾರೆ. ವಿವಿಧ ಒತ್ತಡಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು ಅಥವಾ ಇತರ ಲೈಂಗಿಕ ಅಪಸಾಮಾನ್ಯ ಕ್ರಿಯೆಗಳಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ರೋಗದಿಂದ ಅಥವಾ ಈ ಆತಂಕ ಎಂಬ ಸಮಸ್ಯೆಯಿಂದ ಅನ್ಯೋನ್ಯತೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಸಂಬಂಧವೇ ಮುರಿದು ಬೀಳುವ ಸಾಧ್ಯತೆಯು ಇದೆ. ಹಾಗಾದರೆ ಕಾರಣಗಳು ಏನು..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

3. ಲೋವರ್ ಬಾಡಿ ಇಮೇಜ್ ಕಾನ್ಫಿಡೆನ್ಸ್ ಮತ್ತು ಸಮಸ್ಯೆಗಳು!

3. ಲೋವರ್ ಬಾಡಿ ಇಮೇಜ್ ಕಾನ್ಫಿಡೆನ್ಸ್ ಮತ್ತು ಸಮಸ್ಯೆಗಳು!

ಲೈಂಗಿಕ ಕಾರ್ಯಕ್ಷಮತೆಯ ಆತಂಕಕ್ಕೆ ಹಲವಾರು ಕಾರಣವಿದ್ದು, ಲೋವರ್ ಬಾಡಿ ಇಮೇಜ್ ಕಾನ್ಫಿಡೆನ್ಸ್ ,ಮುಖ್ಯ ಕಾರಣ. ಕೆಲವರು ಲೈಂಗಿಕ ಕ್ರಿಯೆ ನಡೆಸುವ ತಮ್ಮ ಕೆಳಗಿನ ಅಂಗ ಚಿಕ್ಕದಾಗಿದೆ ಎಂದು ಅಂದುಕೊಳ್ಳುತ್ತಾರೆ. ಇದು ಅವರ ಆತಂಕಕ್ಕೆ ಕಾರಣವಾಗಿರುತ್ತದೆ. ಇನ್ನು ಕೆಲವರಿಗೆ ತಮಗೆ ವಯಸ್ಸಾಯ್ತು, ತಮ್ಮ ದೈಹಿಕ ಚಿಹ್ನೆಗಳ ತೂಕದಲ್ಲಿ ಏರಿಳಿತವಾಗಿದೆ ಎಂದು ಯೋಚಿಸಿಕೊಂಡು ಲೈಂಗಿಕ ಕಾರ್ಯಕ್ಷಮತೆ ಬಗ್ಗೆ ಆತಂಕ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

4. ಕಡಿಮೆ ತ್ರಾಣ ಮತ್ತು ವ್ಯಾಯಾಮದ ಕೊರತೆ!

4. ಕಡಿಮೆ ತ್ರಾಣ ಮತ್ತು ವ್ಯಾಯಾಮದ ಕೊರತೆ!

ಕಡಿಮೆ ತ್ರಾಣ ಮತ್ತು ವ್ಯಾಯಾಮದ ಕೊರತೆಯು ಇನ್ನೊಂದು ಕಾರಣವಾಗಿದೆ. ಹೌದು, ಬಯಸಿದ ರೀತಿಯಲ್ಲಿ ಅಥವಾ ಹಿಂದೆ ಮಾಡುತ್ತಿದ್ದ ರೀತಿಯಲ್ಲಿ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಅಸಮರ್ಥತೆ ಹೊಂದುವುದು ಕೂಡ ನಿಮ್ಮನ್ನು ಲೈಂಗಿಕ ಕಾರ್ಯಕ್ಷಮತೆ ಆತಂಕಕ್ಕೆ ದೂಡಬಹುದು. ತ್ರಾಣ ಇಲ್ಲದೆ ಇರಲು ಕಾರಣ ವ್ಯಾಯಾಮದ ಕೊರತೆ ಹೀಗಾಗಿ ವ್ಯಾಯಾಮದ ಕೊರತೆಯು ನಿಮ್ಮನ್ನು ಆತಂಕಕ್ಕೆ ದೂಡಬಹುದು.

5. ಕೀಳರಿಮೆ!

5. ಕೀಳರಿಮೆ!

ತನ್ನ ದೇಹದ ಬಗ್ಗೆಗ್ಗಿನ ಜಾಸ್ತಿ ಯೋಚನೆ ಕೂಡ ಲೈಂಗಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ ಪರಿಣಾಮ ಬೀರಿರುವುದಿಲ್ಲ. ಆದರೂ ಈ ಬಗ್ಗೆ ಯೋಚನೆ ಮಾಡುತ್ತಲೇ ಇರುವುದರಿಂದ ಆತಂಕ ಹೆಚ್ಚಾಗಿ ತನಗೆ ಕಾರ್ಯಕ್ಷಮತೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಮಸ್ಯೆ ಬೆಳೆದಿರುತ್ತದೆ.

6. ಕಡಿಮೆ ಪ್ರೀತಿ, ಹೆಚ್ಚು ಜಗಳಗಳು!

6. ಕಡಿಮೆ ಪ್ರೀತಿ, ಹೆಚ್ಚು ಜಗಳಗಳು!

ಸಂಬಂಧದಲ್ಲಿ ಸಂವಹನದ ಕೊರತೆ ಅಥವಾ ಹೆಚ್ಚಿನ ಪ್ರಮಾಣದ ಘರ್ಷಣೆ ಇದ್ದಾಗ, ಸಂಬಂಧವು ಈಗಾಗಲೇ ಅಪಶ್ರುತಿಯನ್ನು ಅನುಭವಿಸುತ್ತಿರುವಾಗ ದೈಹಿಕ ಅನ್ಯೋನ್ಯತೆಯು ಸಂಬಂಧಿತ ತೊಂದರೆಯ ಮತ್ತೊಂದು ಕ್ಷೇತ್ರವಾಗಿದೆ. ನೀವು ಗಮನಿಸಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅನ್ಯೋನ್ಯತೆ ಇಲ್ಲದೆ ಸೆಕ್ಸ್ ನಡೆದಾಗ ಅದರಲ್ಲಿ ಮಜಾ ಇರುವುದಿಲ್ಲ ಅಥವಾ ಸಂಗಾತಿ ಸರಿಯಾಗಿ ಸಹಕರಿಸುವುದಿಲ್ಲ. ಇದು ನಿಮ್ಮ ಕಾರ್ಯಕ್ಷಮತೆಯ ಮೇಲಿನ ಸಂಶಯವನ್ನು ಹೆಚ್ಚಿಸುತ್ತದೆ.

7. ಇತರ ಒತ್ತಡಗಳು!

7. ಇತರ ಒತ್ತಡಗಳು!

ಆತಂಕದ ಚಿಂತನೆ ಮತ್ತು ಜೀವನ ಒತ್ತಡಗಳು ಕಾರ್ಯಕ್ಷಮತೆಯ ಆತಂಕವನ್ನು ಉಲ್ಬಣಗೊಳಿಸಬಹುದು. ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳು ಜನನಾಂಗಗಳಿಗೆ ರಕ್ತದ ಹರಿವನ್ನು ಬದಲಾಯಿಸಬಹುದು, ಇದು ನಿಮಿರುವಿಕೆ ಅಥವಾ ಯೋನಿ ನಯಗೊಳಿಸುವಿಕೆಯನ್ನು ನಿರ್ವಹಿಸುವುದು ಹೆಚ್ಚು ಕಷ್ಟಕರವಾಗುತ್ತದೆ.

8. ಇದಕ್ಕೆ ಚಿಕಿತ್ಸೆ ಹೇಗೆ..?

8. ಇದಕ್ಕೆ ಚಿಕಿತ್ಸೆ ಹೇಗೆ..?

ಆಸಕ್ತಿ ಕಳೆದುಕೊಳ್ಳಬೇಡಿ!

ಲೈಂಗಿಕ ಕ್ರಿಯೆ ಅನ್ನುವುದು ಅತೀ ಮುಖ್ಯ ವಿಚಾರ ಹೀಗಾಗಿ ಈ ಬಗ್ಗೆ ನೀವು ಆಸಕ್ತಿ ಕಳೆದುಕೊಳ್ಳಬೇಡಿ. ನಿರಂತರವಾಗಿ ಲೈಂಗಿಕತೆ ಬಗ್ಗೆ ಆಸಕ್ತರಾಗಿರಿ. ಇದರಿಂದ ನಿಮ್ಮ ಕಾರ್ಯಕ್ಷಮತೆ ಬಗ್ಗೆ ನಿಮಗೆ ಇನ್ನಷ್ಟು ಖುಷಿ ಮತ್ತು ಧೈರ್ಯ ಇರುತ್ತದೆ.

9. ಲೈಂಗಿಕತೆಗೆ ತಯಾರಾಗಿ!

9. ಲೈಂಗಿಕತೆಗೆ ತಯಾರಾಗಿ!

ಮದುವೆಯ ಮೊದಲ ದಿನ ಅಥವಾ ಹನಿಮೂನ್ ನಲ್ಲಿನ ನಿಮ್ಮ ಲೈಂಗಿಕತೆಗೆ ನೀವು ಮೊದಲೇ ತಯಾರಾಗಬೇಕು. ಏನು ಮಾಡಬೇಕು? ಹೇಗೆ ಮಾಡಬೇಕು..? ಮತ್ತೆ ಹೇಗೆ ತನ್ನ ಸಂಗಾತಿಯನ್ನು ಖುಷಿ ಪಡಿಸಬೇಕು ಎನ್ನುವ ಬಗ್ಗೆ ಯೋಚನೆಯ ಮೂಲಕವೇ ತಯಾರಾಗಿ. ಇದರಿಂದ ನಿಮ್ಮ ಕಾರ್ಯಕ್ಷಮತೆ ಬಗ್ಗೆ ನಿಮಗೆ ವಿಶ್ವಾಸವಿರುತ್ತದೆ.

10. ನಿಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಇರಲಿ!

10. ನಿಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಇರಲಿ!

ನಾನು ಈ ಲೈಂಗಿಕತೆಯಲ್ಲಿ ಯಶಸ್ಸು ಪಡೆಯುತ್ತೇನೆ ಎನ್ನುವ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಧೈರ್ಯವಿರಲಿ. ಹೀಗಿದ್ದಾಗ ನೀವು ಮಾಡುವ ಕೆಲಸ ಸಂಪೂರ್ಣಗೊಳ್ಳುತ್ತದೆ. ಮತ್ತು ಅದು ಸರಿಯಾಗಿ ಇರುತ್ತದೆ.

11. ವ್ಯಾಯಾಮ ಮಾಡಿ!

11. ವ್ಯಾಯಾಮ ಮಾಡಿ!

ಕೆಲವೊಂದು ಬಾರಿ ನಿಮಗೆ ವ್ಯಾಯಾಮಗಳಿಂದ, ಮಾನಸಿಕ ಆರೋಗ್ಯಗಳಿಂದ ಉಂಟಾಗಬಹುದು. ಇದಕ್ಕಾಗಿ ನೀವು ಚೆನ್ನಾಗಿ ವ್ಯಾಯಾಮ ಮಾಡಿ, ದೇಹದ ಸಾಮರ್ಥ್ಯವನ್ನು ಹೆಚ್ಚಿಸಿ, ಆರೋಗ್ಯವಾಗಿರಿ.

12. ಉತ್ತಮ ಆಹಾರ ಸೇವಿಸಿ!

12. ಉತ್ತಮ ಆಹಾರ ಸೇವಿಸಿ!

ನಿಮಗೆ ನಿಮ್ಮ ಲೈಂಗಿಕ ಕಾರ್ಯುಕ್ಷಮತೆ ಬಗ್ಗೆ ಅನುಮಾನವಿದ್ದರೆ ಅದನ್ನು ಹಲವಾರು ಮಾರ್ಗಗಳ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. ಮುಖ್ಯವಾಗಿ, ಉತ್ತಮ ಆಹಾರ ಸೇವನೆ ಮೂಲಕ. ಉತ್ತಮ ನಿದ್ದೆ ಮೂಲಕ, ಉತ್ತಮ ಆರೋಗ್ಯದ ಮೂಲಕ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

English summary

Performance anxiety among 20s-30s age group men ; Know causes and treatment in kannada

Here we are discussing about Performance anxiety among 20s-30s age group men ; Know causes and treatment in kannada. Read more.
Story first published: Thursday, November 17, 2022, 13:00 [IST]
X
Desktop Bottom Promotion