Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಕಷಾಯ ಅಡ್ಡಪರಿಣಾಮಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ಕೊರೊನಾವೈರಸ್ ಬಂದಾಗಿನಿಂದ ಕಷಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ. ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮಾಡಿ ಕುಡಿಯುತ್ತಿದ್ದಾರೆ. ಇನ್ನು ಅನೇಕ ಆಯುರ್ವೇದ ಕಂಒನಿಗಳು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ಕಷಾಯ ಆರೋಗ್ಯಕ್ಕೆ ಒಳ್ಳೆಯದೇ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಕೂಡ ಹೌದು. ಆದರೆ ಈ ಕಷಾಯ ಹೇಗೆ ತೆಗೆದುಕೊಳ್ಳಬೇಕು, ಹೆಚ್ಚು ತೆಗೆದುಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು ಎಂಬುವುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಈ ಹಿಂದಿನ ಲೇಖನದಲ್ಲಿ ಯಾವ ಶರೀರದ ಗುಣದವರಿಗೆ ಯಾವಾಗ ಕಷಾಯ ಕುಡಿಯಬೇಕು ಎಂಬ ಮಾಹಿತಿ ನೀಡಿದ್ದೆವು. ಈ ಲೇಖನದಲ್ಲಿ ಕಷಾಯ ಹೆಚ್ಚಾಗಿ ಕುಡಿದರೆ ಶರೀರದ ಮೇಲಾಗುವ ಅಡ್ಡಪರಿಣಾಮಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕಷಾಯ ಹೆಚ್ಚು ಕುಡಿದರೂ ಆರೋಗ್ಯ ಹಾಳಾಗುವುದು
ಹೆಚ್ಚಾದರೆ ಅಮೃತವೂ ವಿಷ ಎಂಬಂತೆ ಕಷಾಯ ಆರೋಗ್ಯಕ್ಕೆ ತುಂಬಾ ಒಳ್ಳೆಯದೇ ಆಗಿದ್ದರೂ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಾದರೂ ಅತಿಯಾಗಿ ಕುಡಿದರೆ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಕಷಾಯದಲ್ಲಿ ಬಳಸುವ ಸವ್ತುಗಳು ದೇಹದಲ್ಲಿನ ಉಷ್ಣಾಂಶ ಹೆಚ್ಚು ಮಾಡುತ್ತದೆ ಹಾಗೂ ಈ ಸಮಸ್ಯೆಗಳು ಕಂಡು ಬರಬಹುದು.
- ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಬಾಯಲ್ಲಿ ಗುಳ್ಳೆಗಳು ಏಳುವುದು
- ಮೂಗಿನಲ್ಲಿ ರಕ್ತ ಸೋರುವುದು
- ಅಸಿಡಿಟಿ ಸಮಸ್ಯೆ ಹೆಚ್ಚಾಗುವುದು
- ಮಲವಿಸರ್ಜನೆಗೆ ಕಷ್ಟವಾಗುವುದು
- ಮೂತ್ರ ಮಾಡುವಾಗ ಉರಿ
- ಅಜೀರ್ಣ ಸಮಸ್ಯೆ

ಕಷಾಯ ಕುಡಿಯುವುದರಿಂದ ಮೂಗಿನಿಂದ ರಕ್ತ ಸೋರುವುದು ಏಕೆ?
ಕಷಾಯ ಮಾಡುವಾಗ ಅಶ್ವಗಂಧ, ಏಲಕ್ಕಿ, ಚಕ್ಕೆ, ತುಳಸಿ, ಶುಂಠಿ, ಜೇನು ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಸಲಾಗುವುದು. ಇವೆಲ್ಲಾ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುತ್ತದೆ. ಈ ಕಾರಣದಿಂದಾಗಿ ಮೂಗಿನಲ್ಲಿ ರಕ್ತ ಸೋರುವುದು. ಇನ್ನು ಅಸಿಡಿಟಿ ಸಮಸ್ಯೆ ಹೆಚ್ಚಾಗಲು ಇದು ಪ್ರಮುಖ ಕಾರಣವಾಗಿದೆ.

ವಾತ ಹಾಗೂ ಪಿತ್ತ ದೋಷ ಇರುವವರು ಕಷಾಯ ತೆಗೆದುಕೊಳ್ಳುವಾಗ ಎಚ್ಚರ
ವಾತ ಹಾಗೂ ಪಿತ್ತ ದೋಷ ಇರುವವರು ಸಂಜೆ ಹೊತ್ತಿನಲ್ಲಿ ಕಷಾಯ ಕುಡಿಯುವುದು ಒಳ್ಳೆಯದು. ಇನ್ನು ತುಂಬಾ ಬಿಸಿ ಕುಡಿಯಬೇಡಿ. ದಿನದಲ್ಲಿ ಒಂದು ಲೋಟ ಕಷಾಯ ಕುಡಿದರೆ ಸಾಕು. ಇನ್ನು ಏನಾದರೂ ಕೆಮ್ಮು, ಶೀತ ಇಂತಹ ಲಕ್ಷಣಗಳು ಕಂಡು ಬಂದರೆ ಮಾತ್ರ ಕಷಾಯ ತೆಗೆದುಕೊಳ್ಳಿ. ಇಲ್ಲದಿದ್ದರೆ ವಾರದಲ್ಲಿ ಒಂದು ಎರಡು ಬಾರಿ ತೆಗೆದುಕೊಂಡರೆ ಸಾಕು, ಪ್ರತಿದಿನ ತೆಗೆದುಕೊಳ್ಳುವುದು ಬೇಕಾಗಿಲ್ಲ.

ಕಷಾಯ ಮಾಡುವ ಸಾಮಗ್ರಿ
ಕಷಾಯ ಮಾಡುವಚಾಗ ಕೆಲವರು ಅದಕ್ಕೆ ಬಳಸುವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂದು ಗಮನ ಕೊಡುವುದೇ ಇಲ್ಲ. 10 ಎಲೆ ತುಳಸಿ ಹಾಕುವಲ್ಲಿ ಒಂದು ಹಿಡಿಯಷ್ಟು ತುಳಸಿ, ಅಧಿಕ ಶುಂಠಿ, ಕಾಳು ಮೆಣಸು ಎಲ್ಲಾ ಹಾಕಿ ತಯಾರಿಸುತ್ತಾರೆ. ಇದರಿಂದ ದೇಹದಲ್ಲಿ ಉಷ್ಣಾಂಶ ತುಂಬಾ ಹೆಚ್ಚಾಗುವುದು. ಆದ್ದರಿಂದ ಕಷಾಯಕ್ಕೆ ಬಳಸುವ ಸಾಮಗ್ರಿ ಮಿತಿಯಲ್ಲಿ ಬಳಸಿ ತಯಾರಿಸಿ.
ಇನ್ನು ಕೆಲವೊಂದು ಸಾಮಗ್ರಿ ನಿಮ್ಮ ಶರೀರಕ್ಕೆ ಆಗಿ ಬರುವುದಿಲ್ಲ, ಅಂತಹ ವಸ್ತುಗಳನ್ನು ಕಷಾಯದಲ್ಲಿ ಬಳಸಬೇಡಿ.

ಎಷ್ಟು ಪ್ರಮಾಣದಲ್ಲಿ ಕಷಾಯ ತೆಗೆದುಕೊಳ್ಳುವುದು ಒಳ್ಳೆಯದು?
ದಿನದಲ್ಲಿ 15-30mlಕಷಾಯ ತೆಗೆದುಕೊಳ್ಳಬಹುದು ಎಂದು ಆಯುರ್ವೇದ ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕಷಾಯವನ್ನು ಜೇನು ಅಥವಾ ಬೆಲ್ಲ ಹಾಕಿ ಸೇವಿಸಿ

ಇತರ ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಕೇಳಿ
ನೀವು ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೆ ನೀವು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಕಷಾಯ ತೆಗೆದುಕೊಳ್ಳಿ. ಮೊದಲು ಔಷಧಿ ತೆಗೆದುಕೊಂಡು ಒಂದು ಗಮಟೆಯ ಬಳಿಕ ಕಷಾಯ ತೆಗೆದುಕೊಳ್ಳಿ. ಇನ್ನು ಮಧುಮೇಹಿಗಳು ಕಷಾಯ ತೆಗೆದುಕೊಳ್ಳುವುದಾದರೆ ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಲು ಹೋಗಲೇಬಾರದು.



Click it and Unblock the Notifications
