For Quick Alerts
ALLOW NOTIFICATIONS  
For Daily Alerts

ಈ ಜೀವನಶೈಲಿಯಿಂದ ಮೈಗ್ರೇನ್‌ ದೂರ ಮಾಡಬಹುದು

|

" ಮನುಷ್ಯನಿಗೆ ರೋಗ ಬಾರದೆ ಮರಗಳಿಗೆ ಬಂದೀತೆ? " ಎಂಬ ಮಾತಿನಂತೆ ಮನುಷ್ಯನಾಗಿ ಹುಟ್ಟಿದ ಮೇಲೆ ಹಲವಾರು ಕ್ಲಿಷ್ಟ ಪರಿಸ್ಥಿತಿಗಳನ್ನು ಎದುರಿಸುವುದರ ಜೊತೆಗೆ ರೋಗ ರುಜಿನಗಳನ್ನು ಸ್ವೀಕರಿಸಿ ಅದರಿಂದ ಹೊರಬರಲೇ ಬೇಕಾದಂತಹ ಸಂದರ್ಭ ಪ್ರತಿ ಕ್ಷಣದಲ್ಲೂ ಇದ್ದೇ ಇರುತ್ತದೆ. ಒಮ್ಮೆ ಯಾವುದಾದರೂ ಸಣ್ಣ ಪುಟ್ಟ ಕಾಯಿಲೆ ನಮ್ಮ ದೇಹಕ್ಕೆ ಅಂಟಿಕೊಂಡರೂ, ನಮ್ಮ ದೇಹದ ಶಕ್ತಿ ಮತ್ತು ಚೈತನ್ಯ ಒಮ್ಮೆಲೇ ಕುಗ್ಗಿ ಹೋಗುತ್ತದೆ. ನಮ್ಮ ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅಷ್ಟಾಗಿ ಸಾಧ್ಯವಾಗುವುದಿಲ್ಲ.

reduce migraine naturally

ಕೆಲವರು ತಲೆ ನೋವಿನ ಸಮಸ್ಯೆಯಿಂದ ಬಳಲಿದರೆ, ಇನ್ನು ಕೆಲವರು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಾರೆ. 40 ವರ್ಷ ವಯಸ್ಸು ದಾಟಿದ ಮೇಲೆ ಬಿಪಿ, ಶುಗರ್ ಬೇಡವೆಂದರೂ ಬರುತ್ತದೆ. ಇವುಗಳಿಗೆ ಕಾರಣ ನಮ್ಮ ಈಗಿನ ಜೀವನ ಶೈಲಿ ಆಗಿರಬಹುದು ಅಥವಾ ನಮ್ಮ ಅನುವಂಶೀಯತೆಯೂ ಆಗಿರಬಹುದು. ದೀರ್ಘಕಾಲದ ತಲೆನೋವು ಮನುಷ್ಯನ ಆರೋಗ್ಯಕ್ಕೆ ಬಹಳ ಮಾರಕ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತಾಗುತ್ತದೆ. ಇದಕ್ಕೆ ಮತ್ತೊಂದು ಹೆಸರೇ ಮೈಗ್ರೇನ್.

ಮೈಗ್ರೇನ್ ತಲೆ ನೋವಿನ ಲಕ್ಷಣಗಳನ್ನು ಕಡಿಮೆ ಮಾಡಲು ನೈಸರ್ಗಿಕ ಮನೆ ಮದ್ದುಗಳು ಬಹಳ ಉತ್ತಮವೆಂದು ಸಾಬೀತು ಪಡಿಸಿವೆ. ರಾಸಾಯನಿಕ ರಹಿತವಾದ ಈ ಮನೆ ಮದ್ದುಗಳು ತಲೆ ನೋವಿನ ತೀವ್ರತೆಯನ್ನು ಅಥವಾ ಸಮಯವನ್ನು ಆ ಕ್ಷಣಕ್ಕೆ ಕಡಿಮೆಗೊಳಿಸಿ ಮನಸ್ಸಿಗೆ ನೆಮ್ಮದಿ ಕೊಡುತ್ತವೆ. ಬನ್ನಿ ಮುಂದೆ ಲೇಖನದಲ್ಲಿ ನೈಸರ್ಗಿಕ ವಿಧಾನಗಳ ಮೂಲಕ ಹೇಗೆಲ್ಲಾ ಮೈಗ್ರೇನ್‌ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ನೋಡೋಣ.

 1. ಕೆಲವು ಆಹಾರಗಳ ಸೇವನೆ ಬೇಡ

1. ಕೆಲವು ಆಹಾರಗಳ ಸೇವನೆ ಬೇಡ

ನೀವು ಅನುಸರಿಸುವ ಡಯಟ್ ಪದ್ಧತಿ ನಿಮ್ಮ ಮೈಗ್ರೇನ್ ತಲೆ ನೋವಿನ ಮೇಲೆ ಪರಿಣಾಮ ಬೀರುತ್ತದೆ. ಬಹಳಷ್ಟು ಆಹಾರಗಳು ಮತ್ತು ಪಾನೀಯಗಳು ಮೈಗ್ರೇನ್ ತಲೆ ನೋವನ್ನು ಹೆಚ್ಚಿಸುವ ಗುಣ ಲಕ್ಷಣಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಕೆಲವುಗಳನ್ನು ಹೆಸರಿಸುವುದಾದರೆ:

* ನೈಟ್ರೇಟ್ ಅಂಶ ಹೊಂದಿರುವ ಆಹಾರಗಳಾದ hot dogs, deli meats, bacon and sausage, tyramine ಎಂಬ ನೈಸರ್ಗಿಕ ಸಂಯುಕ್ತ ಹೊಂದಿರುವ ಚೀಸ್ ಪದಾರ್ಥಗಳಾದ ಬ್ಲೂ, ಫೆಟ, ಚೇಡ್ಡರ್, ಪರ್ಮೇಸನ್ ಮತ್ತು ಸ್ವಿಸ್, ಆಲ್ಕೋಹಾಲ್ ವಿಶೇಷವಾಗಿ ಕೆಂಪು ವೈನ್.

* ರುಚಿಯನ್ನು ಹೆಚ್ಚಿಸುವ ಮೋನೋಸೋಡಿಯಂ ಗ್ಲುಟಾಮೇಟ್ (MSG ) ಹೊಂದಿರುವ ಆಹಾರಗಳು.

* ತುಂಬಾ ತಂಪಾದ ಆಹಾರಗಳಾದ ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್ಸ್ ಇತ್ಯಾದಿಗಳು.

* ಸಂಸ್ಕರಿಸಿದ ಆಹಾರಗಳು

* ಉಪ್ಪಿನಕಾಯಿ ಪದಾರ್ಥಗಳು

* ಬೀನ್ಸ್

* ಒಣಗಿದ ಹಣ್ಣುಗಳು

* ಬ್ಯಾಕ್ಟೀರಿಯಾಗಳು ಬೆಳೆಯಲೆಂದು ವಾತಾವರಣ ನಿರ್ಮಿಸಿದ ಡೈರಿ ಉತ್ಪನ್ನಗಳಾದ ಕೆನೆಭರಿತ ಹಾಲು, ಹುಳಿ ಕ್ರೀಮ್ ಮತ್ತು ಗಟ್ಟಿ ಮೊಸರು.

* ಸಣ್ಣ ಪ್ರಮಾಣದ ಕೆಫಿನ್ ಅಂಶ ಕೆಲವು ಜನರಲ್ಲಿ ಮೈಗ್ರೇನ್ ತಲೆನೋವನ್ನು ಹೆಚ್ಚಿಸುತ್ತದೆ. ಇನ್ನು ಕೆಲವು ಮೈಗ್ರೇನ್ ತಲೆ ನೋವಿನ ಔಷಧಿಗಳಲ್ಲಿ ಕೂಡ ಕೆಫಿನ್ ಅಂಶ ಕಂಡು ಬರುತ್ತದೆ. ಆದರೆ ಅತಿ ಹೆಚ್ಚಿನ ಕೆಫಿನ್ ಅಂಶ ಮಾತ್ರ ಮೈಗ್ರೇನ್ ತಲೆ ನೋವನ್ನು ಹೆಚ್ಚಿಸುತ್ತದೆ. ಅಂತಹ ತಲೆ ನೋವಿಗೆ ಕೆಫಿನ್ ಅಂಶ ಹೊಂದಿರುವ ಕಾಫಿ ಕುಡಿದರೆ ಮಾತ್ರ ನೋವು ನಿಯಂತ್ರಣಕ್ಕೆ ಬರುತ್ತದೆ.

ಈ ಮೇಲಿನ ಆಹಾರ ಪದಾರ್ಥಗಳು ನಾವು ಸೂಚಿಸಿದ ತಲೆ ನೋವನ್ನು ಉಂಟು ಮಾಡುವಂತಹ ಸಾಮಾನ್ಯ ಆಹಾರ ಪದಾರ್ಥಗಳು. ನಿಜವಾದ ಚಿತ್ರಣ ನಿಮಗೆ ತಿಳಿಯಬೇಕಾದರೆ ನೀವು ಸೇವಿಸುವ ಆಹಾರದ ಪ್ರತಿಯೊಂದು ಮಾಹಿತಿಯನ್ನು ಒಂದು ಕಿರು ಪುಸ್ತಕದಲ್ಲಿ ಪ್ರತಿ ದಿನ ದಾಖಲಿಸುತ್ತಾ ಹೋಗಿ. ಆಗ ನಿಮಗೇ ತಿಳಿಯುತ್ತದೆ. ಯಾವ ಆಹಾರ ತಲೆ ನೋವಿಗೆ ಸೂಕ್ತ ಮತ್ತು ಅಲ್ಲ ಎಂದು.

2. ಲ್ಯಾವೆಂಡರ್ ಎಣ್ಣೆಯ ಉಪಯೋಗ

2. ಲ್ಯಾವೆಂಡರ್ ಎಣ್ಣೆಯ ಉಪಯೋಗ

ಮೈಗ್ರೇನ್ ತಲೆ ನೋವನ್ನು ದೂರ ಮಾಡಲು ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಬಹಳ ಉಪಯುಕ್ತ ಎಂದು ಈಗಾಗಲೇ ಸಾಬೀತಾಗಿದೆ. 2012 ರ ಒಂದು ಸಂಶೋಧನೆಯಲ್ಲಿ ಮೈಗ್ರೇನ್ ಬಂದಂತಹ ಕ್ಷಣದಲ್ಲಿ ಯಾರು ಸುಮಾರು 15 ನಿಮಿಷಗಳ ಕಾಲ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ಉಸಿರಾಟದ ಮೂಲಕ ಸೇವನೆ ಮಾಡಿದ್ದರೋ ಅವರಿಗೆ ಪ್ಲೇಸ್ಬೋ ಸೇವನೆ ಮಾಡಿದ್ದ ಜನರಿಗಿಂತ ಬಹು ಬೇಗನೆ ಮೈಗ್ರೇನ್ ತಲೆ ನೋವು ವಾಸಿಯಾಯಿತು. ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ಬೇಕಿದ್ದರೆ ನೇರವಾಗಿ ಉಸಿರಾಟದ ಮೂಲಕ ಸೇವಿಸಬಹುದು ಅಥವಾ ಅದಕ್ಕೆ ಸ್ವಲ್ಪ ನೀರು ಬೆರೆಸಿ, ಹಣೆಯ ಅಕ್ಕಪಕ್ಕದಲ್ಲಿ ಹಚ್ಚಬಹುದು.

3. ಆಕ್ಯುಪ್ರೆಶರ್ ಒಮ್ಮೆ ಪ್ರಯತ್ನಿಸಿ

3. ಆಕ್ಯುಪ್ರೆಶರ್ ಒಮ್ಮೆ ಪ್ರಯತ್ನಿಸಿ

ಕೈ ಮತ್ತು ಬೆರಳುಗಳ ಸಹಾಯದಿಂದ ದೇಹದ ನಿರ್ದಿಷ್ಟ ಭಾಗಗಳ ಮೇಲೆ ಒತ್ತಡವನ್ನು ಹಾಕಿ ನೋವು ಮತ್ತು ಇನ್ನಿತರ ಗುಣ ಲಕ್ಷಣಗಳನ್ನು ನಿವಾರಣೆ ಮಾಡುವಂತಹ ಒಂದು ಅಪರೂಪದ ಪದ್ಧತಿಯೆಂದರೆ ಅದು ಆಕ್ಯುಪ್ರೆಷರ್. 2014 ರ ಸಿಸ್ಟಮ್ಯಾಟಿಕ್ ರಿವ್ಯೂ ಟ್ರಸ್ಟ್ ರೇಟೆಡ್ ಸೋರ್ಸ್ ನ ಪ್ರಕಾರ ದೀರ್ಘ ಕಾಲದ ತಲೆ ನೋವುಗಳಿಂದ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಇದೊಂದು ನಂಬಿಕೆಯ ವಿಧಾನವಾಗಿದ್ದು, ನೋವು ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೊಂದು ಅಧ್ಯಯನದ ಪ್ರಕಾರ ಆಕ್ಯುಪ್ರೆಶರ್ ಪದ್ಧತಿಯಿಂದ ವಾಕರಿಕೆ ವಾಂತಿಯನ್ನು ಒಳಗೊಂಡ ಮೈಗ್ರೇನ್ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು.

4. ಫೆವರ್ಫ್ಯೂ ಪ್ರಯತ್ನಿಸಿ

4. ಫೆವರ್ಫ್ಯೂ ಪ್ರಯತ್ನಿಸಿ

ಫೆವರ್ಫ್ಯೂ ಎಂಬುದು ಒಂದು ಹೂವಿನ ಗಿಡಮೂಲಿಕೆ ಆಗಿದ್ದು ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ಸಿಗುತ್ತದೆ. ಇದು ಅನಾದಿಕಾಲದಿಂದಲೂ ಮೈಗ್ರೇನ್ ತಲೆನೋವಿಗೆ ರಾಮಬಾಣವಾಗಿ ಆಯುರ್ವೇದ ಪದ್ಧತಿಯಲ್ಲಿ ಉಪಯೋಗಿಸಲ್ಪಡುತ್ತಿದೆ ಎಂದು 2004 ರ ಸಿಸ್ಟಮ್ಯಾಟಿಕ್ ರಿವ್ಯೂ ರೇಟೆಡ್ ಸೋರ್ಸ್ ಹೇಳಿದೆ. ಆದರೆ ವೈಜ್ಞಾನಿಕವಾಗಿ ಈ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಹಲವಾರು ಸ್ಥಳೀಯ ಜನರು ನಂಬಿಕೆ ವ್ಯಕ್ತಪಡಿಸಿರುವಂತೆ ಇದು ಮೈಗ್ರೇನ್ ಸಮಸ್ಯೆಗಳನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದಂತೆ ಸುಲಭವಾಗಿ ಬಗೆಹರಿಸುತ್ತದೆ.

5. ಪೆಪ್ಪರ್‌ ಮಿಂಟ್ ಆಯಿಲ್ ಉಪಯೋಗಿಸಿ

5. ಪೆಪ್ಪರ್‌ ಮಿಂಟ್ ಆಯಿಲ್ ಉಪಯೋಗಿಸಿ

ಪೆಪ್ಪರ್ ಮೆಂಟ್ ಆಯಿಲ್ ನಲ್ಲಿರುವ ಮೆಂಥಾಲ್ ಅಂಶ ಮೈಗ್ರೇನ್ ತಲೆ ನೋವನ್ನು ಮತ್ತೊಮ್ಮೆ ಬಾರದಂತೆ ತಡೆಯುತ್ತದೆ ಎಂದು 2010 ರ ಒಂದು ಅಧ್ಯಯನ ಹೇಳಿದೆ. ಈ ಅಧ್ಯಯನದಲ್ಲಿ ಸಂಶೋಧಕರು ಕಂಡು ಹಿಡಿದಿರುವಂತೆ ಮೆಂಥಾಲ್ ದ್ರವವನ್ನು ಹಣೆ ಮತ್ತು ಹಣೆಯ ಅಕ್ಕ ಪಕ್ಕಗಳಲ್ಲಿ ಹಚ್ಚುವುದರಿಂದ ಲೈಟ್ ಸೆನ್ಸಿಟಿವಿಟಿ, ವಾಂತಿ, ವಾಕರಿಕೆ ಮತ್ತು ಮೈಗ್ರೇನ್ ತಲೆನೋವನ್ನು ಪ್ಲೇಸ್ಬೋ ಗಿಂತ ಬಹಳ ಚೆನ್ನಾಗಿ ನಿವಾರಣೆ ಮಾಡುತ್ತದೆ.

6. ಮೈಗ್ರೇನ್ ನಲ್ಲಿ ಶುಂಠಿಯ ಪಾತ್ರ

6. ಮೈಗ್ರೇನ್ ನಲ್ಲಿ ಶುಂಠಿಯ ಪಾತ್ರ

ಶುಂಠಿ ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಜೀರ್ಣಾಂಗಕ್ಕೆ ಸಂಬಂಧಪಟ್ಟ ಔಷಧಿಯಾಗಿ ಕೆಲಸ ಮಾಡುತ್ತದೆ. ಅಂದರೆ ಅಜೀರ್ಣತೆಯ ದೃಷ್ಟಿಯಿಂದ ಎದುರಾದ ವಾಕರಿಕೆ ಜೊತೆಗೆ ತಲೆ ನೋವುಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ. ಶುಂಠಿ ಪುಡಿ ಮೈಗ್ರೇನ್ ತೀವ್ರತೆಯನ್ನು ಮತ್ತು ದೀರ್ಘಕಾಲದ ತಲೆ ನೋವನ್ನು ನಿವಾರಣೆ ಮಾಡಿದ ಉದಾಹರಣೆ ಇದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಒಂದು ಆಯುರ್ವೇದ ಪದಾರ್ಥವೆಂದರೆ ಅದು ಶುಂಠಿ.

7. ಯೋಗದಲ್ಲಿದೆ ಮೈಗ್ರೇನ್ ಗೆ ಮದ್ದು

7. ಯೋಗದಲ್ಲಿದೆ ಮೈಗ್ರೇನ್ ಗೆ ಮದ್ದು

ಯೋಗ ಹಲವಾರು ಆಯಾಮಗಳನ್ನು ಏಕಕಾಲದಲ್ಲಿ ಉಪಯೋಗಿಸಿಕೊಂಡು ಮಾಡುವ ಒಂದು ದೈಹಿಕ ತಂತ್ರಗಾರಿಕೆ. ಇದರಲ್ಲಿ ಒಮ್ಮೆಲೆ ಉಸಿರಾಟ, ಧ್ಯಾನ ಮತ್ತು ದೈಹಿಕ ಭಂಗಿಗಳು ಬದಲಾಗುತ್ತವೆ. ಯೋಗಭ್ಯಾಸದಿಂದ ಆಗಾಗ ಬರುವ ತಲೆ ನೋವು, ದೀರ್ಘಕಾಲದಿಂದ ಸಮಸ್ಯೆಯಲ್ಲಿ ಸಿಲುಕಿರುವ ದೇಹದ ಯಾವುದೇ ಭಾಗ ಮತ್ತು ತೀವ್ರ ತರದ ಮೈಗ್ರೇನ್ ಸಮಸ್ಯೆಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದು ಮನಸ್ಸಿನ ಆತಂಕ, ಒತ್ತಡ ಮತ್ತು ಶ್ವಾಸನಾಳದ ಆರೋಗ್ಯವನ್ನು ವೃದ್ಧಿಗೊಳಿಸುವುದರ ಜೊತೆಗೆ ಮೈಗ್ರೇನ್ ಸಮಸ್ಯೆಗಳಿಗೆ ಕಾರಣವಾದ ದೇಹದ ಭಾಗಗಳನ್ನು ವಿಶ್ರಾಂತಗೊಳಿಸಿ ಔಷಧದ ರೀತಿ ಕೆಲಸ ಮಾಡುತ್ತದೆ.

8. ಬಯೋಫೀಡ್ಬ್ಯಾಕ್ ಒಮ್ಮೆ ಪ್ರಯತ್ನಿಸಿ

8. ಬಯೋಫೀಡ್ಬ್ಯಾಕ್ ಒಮ್ಮೆ ಪ್ರಯತ್ನಿಸಿ

ಬಯೋಫೀಡ್ಬ್ಯಾಕ್ ಪದ್ಧತಿ ಎಂಬುದು ಒಂದು ನೋವು ಉಪಶಮನಕಾರಿ ಪದ್ಧತಿಯಾಗಿದ್ದು ಒತ್ತಡಕ್ಕೆ ಸ್ವನಿಯಂತ್ರಿತ ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ನಿಮಗೆ ಕಲಿಸುತ್ತದೆ. ಬಯೋಫೀಡ್ಬ್ಯಾಕ್ ಪದ್ಧತಿಯಲ್ಲಿ ಸ್ನಾಯುಗಳ ಒತ್ತಡದಂತಹ ಒತ್ತಡಕ್ಕೆ ದೈಹಿಕ ಪ್ರತಿಕ್ರಿಯೆಗಳಿಂದ ಪ್ರಚೋದಿಸಲ್ಪಟ್ಟ ಮೈಗ್ರೇನ್ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು.

9. ನಿಮ್ಮ ಆಹಾರ ಪದ್ಧತಿಯಲ್ಲಿ ಮೆಗ್ನೀಷಿಯಂ ಬಳಸಿ

9. ನಿಮ್ಮ ಆಹಾರ ಪದ್ಧತಿಯಲ್ಲಿ ಮೆಗ್ನೀಷಿಯಂ ಬಳಸಿ

ಕೆಲವರಿಗೆ ಆಹಾರದಲ್ಲಿ ಮೆಗ್ನೀಷಿಯಂ ಖನಿಜಾಂಶದ ಕೊರತೆಯುಂಟಾಗಿ ತಲೆ ನೋವು ಮತ್ತು ಮೈಗ್ರೇನ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ. ಕೆಲವೊಂದು ಅಧ್ಯಯನಗಳು ಹೇಳುವ ಪ್ರಕಾರ ಮೆಗ್ನಿಶಿಯಂ ಆಕ್ಸೈಡ್ ಪೂರಕಗಳು ಮೈಗ್ರೇನ್ ಸಮಸ್ಯೆಗಳನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿವೆ. ಮಹಿಳೆಯರಿಗೆ ಮುಟ್ಟಿಗೆ ಸಂಬಂಧಪಟ್ಟ ಮೈಗ್ರೇನ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇನ್ನು ಮೆಗ್ನೀಷಿಯಂ ಅಂಶಗಳನ್ನು ನೀವು ಈ ಕೆಳಕಂಡ ಆಹಾರ ಪದಾರ್ಥಗಳಲ್ಲಿ ಪಡೆದುಕೊಳ್ಳಬಹುದು.

ಬಾದಾಮಿ

ಎಳ್ಳು

ಸೂರ್ಯಕಾಂತಿ ಬೀಜಗಳು

ಗೋಡಂಬಿ

ಬ್ರೆಜಿಲ್ ನೆಟ್

ಪೀನಟ್ ಬಟರ್

ಓಟ್ ಮೀಲ್

ಕೋಳಿ ಮೊಟ್ಟೆ

ಹಾಲು

10. ಮಸಾಜ್ ತೆರಪಿ

10. ಮಸಾಜ್ ತೆರಪಿ

2006 ರ ಒಂದು ಅಧ್ಯಯನ ಹೇಳಿರುವ ಪ್ರಕಾರ ವಾರಕ್ಕೊಂದು ಬಾರಿ ಮಸಾಜ್ ಗೆ ಮೊರೆ ಹೋಗುವುದರಿಂದ ಮೈಗ್ರೇನ್ ತೀವ್ರತೆಯನ್ನು ಕಡಿಮೆ ಮಾಡಬಹುದು. ಜೊತೆಗೆ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಒಂದು ಸಂಶೋಧನೆ ಸೂಚಿಸಿರುವ ಹಾಗೆ ಮಸಾಜ್ ಪ್ರಕ್ರಿಯೆಯಿಂದ ದೇಹದ ಒತ್ತಡ ಮತ್ತು ಮಾನಸಿಕ ಆತಂಕ ದೂರಾಗಿ ದೇಹದಲ್ಲಿ ಕಾರ್ಟಿಸಾಲ್ ಮಟ್ಟ ಕಡಿಮೆಯಾಗಿ ಹೃದಯದ ಬಡಿತ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ನಿಮಗೆ ಒಂದು ವೇಳೆ ಆಗಾಗ ಮೈಗ್ರೇನ್ ಸಮಸ್ಯೆ ಎದುರಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಉಂಟು ಮಾಡುತ್ತಿದ್ದರೆ, ಈ ಮೇಲಿನ ಮನೆ ಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಮೈಗ್ರೇನ್ ಗುಣ ಲಕ್ಷಣಗಳು ತೀರಾ ಹೆಚ್ಚಿದ್ದು ಕಡಿಮೆಯಾಗುವ ಯಾವುದೇ ಸಂಭವ ಇಲ್ಲದಿದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ.

ಸೂಚನೆ

ಒಂದು ವೇಳೆ ನೀವು ಬಹಳ ದಿನಗಳಿಂದ ವಿಪರೀತ ತಲೆನೋವು ಸಮಸ್ಯೆಯಿಂದ ಬಳಲುತ್ತಿದ್ದರೆ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ವೈದ್ಯರನ್ನು ಸಂಪರ್ಕಿಸಿ ಅವರು ಸೂಚಿಸಿದ ಔಷಧಿಗಳನ್ನು ಅಥವಾ ಓವರ್ ದಿ ಕೌಂಟರ್ (ಓ ಟಿ ಸಿ) ಔಷಧಿಗಳನ್ನು ತೆಗೆದುಕೊಂಡು ನಿಮ್ಮ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಸಂಪೂರ್ಣ ತಲೆ ನೋವಿನ ಇತಿಹಾಸವನ್ನು ವೈದ್ಯರ ಮುಂದೆ ಹೇಳಿ ನಿಮಗೆ ಸೂಕ್ತವಾದ ಚಿಕಿತ್ಸೆಯನ್ನು ಕೇಳಿ ಪಡೆದುಕೊಳ್ಳಿ.

English summary

Natural Ways to Reduce Migraine Symptoms

Here we are discussing about These are the natural ways to reduce migraine symptoms. Natural remedies are a drug-free way to reduce migraine symptoms. These at-home treatments may help prevent migraines, or at least help reduce their severity and duration.
X
Desktop Bottom Promotion