For Quick Alerts
ALLOW NOTIFICATIONS  
For Daily Alerts

ಮಂಕಿಪಾಕ್ಸ್: ಮಂಕಿಪಾಕ್ಸ್ ಆರಂಭಿಕ ಲಕ್ಷಣಗಳೇನು? ಇದು ತಗುಲಿದರೆ ಏನು ಮಾಡಬೇಕು? ಬರದಂತೆ ತಡೆಗಟ್ಟವುದು ಹೇಗೆ?

|

ದೇಶದಲ್ಲಿ ಮಂಕಿಪಾಕ್ಸ್ ಆತಂಕ ಹೆಚ್ಚಾಗುತ್ತಿದೆ. ಹೊರದೇಶದಲ್ಲಿ ಕಂಡು ಬಂದಿದ್ದ ಈ ವೈರಸ್‌ ಭಾರತಕ್ಕೆ ಬಂದಿರಲಿಲ್ಲ, ಆದರೆ ಇದೀಗ ನಿಧಾನಕ್ಕೆ ಭಾರತದಲ್ಲಿ ಹೆಚ್ಚಾಗುವ

ಸೂಚನೆ ಕಂಡು ಬರುತ್ತಿದೆ, ಭಾರತದಲ್ಲಿ ಮೊದಲಿಗೆ ಕೇರಳದಲ್ಲಿ ಮೂವರಿಗೆ ಮಂಕಿಪಾಕ್ಸ್ ಲಕ್ಷಣಗಳು ಕಂಡು ಬಂದಿದ್ದೆವು. ಆದರೆ ಅವರು ವಿದೇಶದಿಂದ ಬಂದವರು ಆಗಿದ್ದರು.

ಅದಾದ ಬಳಿಕ ದೆಹಲಿ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವೈರಸ್‌ ತಗುಲಿರುವ ಅಂಶ ತಿಳಿದು ಬಂದಾಗ ದೇಶದಲ್ಲಿ ಆತಂಕ ಹೆಚ್ಚಾಯಿತು, ಏಕೆಂದರೆ ಆ ವ್ಯಕ್ತಿ ವಿದೇಶದಿಂದ ಬಂದಿರಲಿಲ್ಲ, ಅದರಿಂದಾಗಿ ಭಾರತದಲ್ಲಿ ಮಂಕಿಪಾಕ್ಸ್ ಹರಡುತ್ತಿದೆಯೇ ಎಂಬ ಸಂಶಯ ಶುರುವಾಗಿತ್ತು, ಅದಾದ ಬಳಿಕ ಪಾಟ್ನಾದ ವ್ಯಕ್ತಿಯಲ್ಲಿ ಮಂಕಿವೈರಸ್‌ ಕಂಡು ಬಂದಿತ್ತು.

ಮಂಕಿವೈರಸ್ ಲಕ್ಷಣಗಳ ಬಗ್ಗೆ ಈಗಾಗಲೇ ಜನರಿಗೆ ತಿಳಿದಿದೆ. ಮಂಕಿಪಾಕ್ಸ್‌ ವೈರಸ್‌ ತಗುಲಿದಾಗ ಕಂಡು ಬರುವ ಪ್ರಾರಂಭಿಕ ಲಕ್ಷಣಗಳೇನು ಎಂದು ಗೊತ್ತಿದೆಯೇ ? ನಾವಿಲ್ಲಿ ಮಂಕಿಪಾಕ್ಸ್‌ ಲಕ್ಷಣಗಳ ಬಗ್ಗೆ ವಿವರವಾಗಿ ಹೇಳಿದ್ದೇವೆ ನೋಡಿ:

ಮೊದಲು ಮಂಕಿಪಾಕ್ಸ್‌ನ ಲಕ್ಷಣಗಳ ಬಗ್ಗೆ ತಿಳಿಯೋಣ

ಮೊದಲು ಮಂಕಿಪಾಕ್ಸ್‌ನ ಲಕ್ಷಣಗಳ ಬಗ್ಗೆ ತಿಳಿಯೋಣ

* ಚಳಿ- ಜ್ವರ

* ತಲೆನೋವು

* ಮೈಕೈ ನೋವು

* ತಲೆಸುತ್ತು

* ದುಗ್ಧ ರಸಗಳಲ್ಲಿ ಊತ

ಮೈಯಲ್ಲಿ ಈ ರೀತಿಯ ರ‍್ಯಾಶಸ್‌ ಅಥವಾ ಗುಳ್ಳೆಗಳು ಎದ್ದಿದ್ದರೆ ಈ ಲಕ್ಷಣಗಳನ್ನು ಗಮನಿಸಿ

ಮೈಯಲ್ಲಿ ಈ ರೀತಿಯ ರ‍್ಯಾಶಸ್‌ ಅಥವಾ ಗುಳ್ಳೆಗಳು ಎದ್ದಿದ್ದರೆ ಈ ಲಕ್ಷಣಗಳನ್ನು ಗಮನಿಸಿ

* ಪ್ರಾರಂಭದಲ್ಲಿ ಸ್ಮಾಲ್‌ಪಾಕ್ಸ್ ರೀತಿಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡು ಬರುವುದು, ನಂತರ ಅದು ದೊಡ್ಡದಾಗಿ, ಕೀವು ತುಂಬಿಕೊಳ್ಳುತ್ತೆ.

* ಈ ಗುಳ್ಳೆಗಳು ತುಂಬಾ ನೋವಿನಿಂದ ಕೂಡಿರುತ್ತೆ'

* ನಂತರ ಆ ಗುಳ್ಳೆಗಳು ಒಡೆದು ಹೋಗುವುದು

* ಬಾಯಲ್ಲಿ ಹುಣ್ಣುಗಳು ಕೂಡ ಕಂಡು ಬರುವುದು.

 ಮಂಕಿ ಪಾಕ್ಸ್ ತಡೆಗಟ್ಟುವುದು ಹೇಗೆ?

ಮಂಕಿ ಪಾಕ್ಸ್ ತಡೆಗಟ್ಟುವುದು ಹೇಗೆ?

* ಮಂಕಿಪಾಕ್ಸ್ ವೈರಸ್‌ ತಗುಲಿರುವ ಅಥವಾ ಕಾಯಿಲೆ ಇರುವ ಪ್ರಾಣಿಗಳಿಂದ ದೂರವಿರಿ.

* ಮನೆ, ಆಫೀಸ್‌ ಟೇಬಲ್ ಇವುಗಳನ್ನು ಸ್ವಚ್ಛವಾಗಿಡಿ.

* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ.

* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.

* ವೈರಸ್‌ ತಗುಲಿರುವ ವ್ಯಕ್ತಿಗಳ ನೇರ ಸಂಪರ್ಕ ಮಾಡಬೇಡಿ. ಅವರಿಂದ ಅಂತರ ಕಾಯ್ದುಕೊಳ್ಳಿ.

ಮಂಕಿಪಾಕ್ಸ್‌ ತಗುಲಿವರು ಹೇಗೆ ಆರೈಕೆ ಮಾಡಬೇಕು?

ಮಂಕಿಪಾಕ್ಸ್‌ ತಗುಲಿವರು ಹೇಗೆ ಆರೈಕೆ ಮಾಡಬೇಕು?

* ನೀರಿಗೆ ಓಟ್‌ಮೀಲ್‌ ಹಾಕಿ ಅದರಲ್ಲಿ ಸ್ನಾನ ಮಾಡಿ.

* Ibuprofenನಂಥ ನೋವುನಿವಾರಕ ಪಾತ್ರೆಗಳನ್ನು ತೆಗೆದುಕೊಳ್ಳಿ (ವೈದ್ಯರು ಸೂಚಿಸಿರುವ ಪಾತ್ರೆಗಳನ್ನು ಮಾತ್ರ ತೆಗೆದುಕೊಳ್ಳಿ)

* ಓಟ್‌ಮೀಲ್‌ ಸ್ನಾನ, ಅಂದರೆ ಓಟ್‌ ಮೀಲ್‌ ನೆನೆಸಿ ಅನ್ನು ಮೈ ಮೇಲೆ ತಿಕ್ಕಿ ಸ್ನಾನ ಮಾಡಿ.

* ಆ್ಯಂಟಿಬ್ಯಾಕ್ಟಿರಿಯಾ ಸೋಪು ಬಳಸಿ.

* ಗುಳ್ಳೆಗಳ ಮೇಲೆ ತೆಳು ಬ್ಯಾಂಡೇಜ್‌ ಸುತ್ತಿ

* ಒಳ್ಳೆಯ ಆಹಾರ ತೆಗೆದುಕೊಳ್ಳಿ

* ಸಾಕಷ್ಟು ನೀರು ಕುಡಿಯಿರಿ

English summary

Monkeypox Outbreak: Early Signs, How To Prevent Monkeypox Virus, Do's and Don'ts in Kannada

Monkeypox Outbreak: What are early signs of monkeypox, how to prevent this virus, read on,
Story first published: Wednesday, July 27, 2022, 11:15 [IST]
X
Desktop Bottom Promotion