For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುವವರ ಮಾನಸಿಕ ಯಾತನೆ ಹೇಗಿರುತ್ತೆ ಗೊತ್ತಾ?

|

ಹಿಂದೆಲ್ಲ ಕ್ಯಾನ್ಸರ್ ಅಂದರೆ ಜನರು ಭಯಭೀತಗೊಳ್ಳುತ್ತಿದ್ದರು ಆದರೆ ಇದೀಗ ಕ್ಯಾನ್ಸರ್ ಅನ್ನುವ ಪದ ಸಾಮಾನ್ಯವಾಗಿದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಅಂಟಿಕೊಳ್ಳುತ್ತಿದೆ. ವೈದ್ಯಕೀಯ ಲೋಕದಲ್ಲಿ ಇದಕ್ಕೆ ಚಿಕಿತ್ಸೆ ಕೂಡ ದೊರಕುತ್ತಿದೆ. ಆದರೂ ಕ್ಯಾನ್ಸರ್ ರೋಗಿಗಳ ಜೀವನ ನರಕದಂತೆ ಇರುವುದು ಸತ್ಯ.

123

ಇನ್ನು ಕ್ಯಾನ್ಸರ್ ರೋಗಿಗಳನ್ನು ನೋಡಿಕೊಳ್ಳುವ ಆರೈಕೆದಾರರ ಜೀವನವೂ ಸುಖಕರವಾಗಿಲ್ಲ ಎಂದು ವಿವಿಧ ಅಧ್ಯಯನಗಳಿಂದ ತಿಳಿದುಬಂದಿದೆ. ಕ್ಯಾನ್ಸರ್ ರೋಗಿಗಳನ್ನು ಆರೈಕೆ ಮಾಡುವವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತಿವೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

ಕ್ಯಾನ್ಸರ್ ರೋಗಿಗಳ ಆರೈಕೆದಾರರ ಮಾನಸಿಕ ಯಾತನೆಯನ್ನು ಕಡೆಗಣಿಸಲಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ. ಹಾಗಾದರೆ ಆರೈಕೆದಾರರ ಬಗ್ಗೆ ಅಧ್ಯಯನ ಹೇಳುವುದೇನು? ಆರೈಕೆದಾರರ ಮಾನಸಿಕ ಆರೋಗ್ಯದ ಪರಿಣಾಮದಿಂದ ಕ್ಯಾನ್ಸರ್ ರೋಗಿಯ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಅಧ್ಯಯನ ನಡೆಸಿದ್ದು ಹೇಗೆ?

ಅಧ್ಯಯನ ನಡೆಸಿದ್ದು ಹೇಗೆ?

ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುವವರ ಜೀವನದ ಗುಣಮಟ್ಟವನ್ನು ತಿಳಿಯುವ ಸಂಬಂಧ ಪಾಟ್ನಾದ ಏಮ್ಸ್ ನ ರೆಡಿಯೇಷನ್ ಆಂಕೊಲಾಜಿ ವಿಭಾಗವು 2021ರಲ್ಲಿ ಅಧ್ಯಯನವೊಂದನ್ನು ನಡೆಸಿತು.

ಇದಕ್ಕಾಗಿ ದೇಶದ ಒಟ್ಟು 350 ಕ್ಯಾನ್ಸರ್ ಆರೈಕೆದಾರರನ್ನು ಸಂಪರ್ಕಿಸಲಾಯಿತು. ಈ ಪೈಕ್ 264 ಆರೈಕೆದಾರರು ಅಂತಿಮ ವಿಶ್ಲೇಷಣೆಗೆ ಅರ್ಹರಾಗಿದ್ದಾರೆ. ಹೀಗೆ ಆಯ್ಕೆಯಾದ 264 ಆರೈಕೆದಾರರಿಗೆ ಒಟ್ಟು 31 ಪ್ರಶ್ನೆಗಳನ್ನು ಕೇಳಲಾಗಿತ್ತು.

ಈ ಪೈಕಿ ಏಳು ಪ್ರಶ್ನೆ ಆರೈಕೆದಾರರ ಮೇಲಿನ ಹೊರೆ, 13 ಪ್ರಶ್ನೆಗಳು ದೈನಂದಿನ ದಿನಚರಿಗೆ ಸಮಸ್ಯೆ, 8 ಒಟ್ಟಾರೆ ಪರಿಸ್ಥಿತಿಗೆ ಹೇಗೆ ಧನಾತ್ಮಕವಾಗಿ ಹೊಂದಿಕೊಳ್ಳು ಬಗ್ಗೆ, 3 ಪ್ರಶ್ನೆ ಆರೈಕೆದಾರರ ಆರ್ಥಿಕ ಸಮಸ್ಯೆ ಬಗ್ಗೆ ಕೇಳಲಾಗಿದೆ. ಇನ್ನು ಇದರಲ್ಲಿ ಬಂದಿರುವ ಸಮೀಕ್ಷೆಯನ್ನು ಕ್ಯಾನ್ಸರ್ ಗೆ ಸಂಬಂಧಪಟ್ಟ ಅಂತರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನದಲ್ಲಿ ಸಿಕ್ಕ ಅಂಶವೇನು?

ಅಧ್ಯಯನದಲ್ಲಿ ಸಿಕ್ಕ ಅಂಶವೇನು?

ಹೀಗೆ ನಡೆಸಿದ ಸಮೀಕ್ಷೆಯಲ್ಲಿ ಆರೈಕೆದಾರರ ಪೈಕಿ 54 ಪ್ರತಿಶತದಷ್ಟು ಜನರು ಕ್ಯಾನ್ಸರ್ ರೋಗಿಯನ್ನು ಹೊರೆ ಎಂದು ಪರಿಗಣಿಸಿದ್ದಾರೆ. ಹೊರೆ ಸಂಬಂಧ ಕೇಳಲಾದ ಪ್ರಶ್ನೆಗೆ 54 ಪ್ರತಿಶತದಷ್ಟು ಜನರು ಈ ರೀತಿ ಉತ್ತರಿಸಿದ್ದಾರೆ. ಇನ್ನು ಆರ್ಥಿಕ ಕಾಳಜಿ ಬಗ್ಗೆ ಕೇಳಲಾದ ಪ್ರಶ್ನೆಗೆ 55 ಪ್ರತಿಶತದಷ್ಟು ಜನರು ಆರ್ಥಿಕ ಪರಿಸ್ಥಿತಿ ಹಿನ್ನೆಲೆ ಕ್ಯಾನ್ಸರ್ ರೋಗಿಯ ಆರೈಕೆದಾರರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಕ್ಯಾನ್ಸರ್ ರೋಗಿಯ ಆರೈಕೆಗೆ ಉತ್ತಮ ವೇತನ ಸಿಗುತ್ತಿರುವ ಹಿನ್ನೆಲೆ ಈ ಕೆಲಸಕ್ಕೆ ಹೋಗುತ್ತಿದ್ದಾರೆ ಎನ್ನುವುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ. ಇನ್ನು ದಿನಚರಿಗೆ ಸಂಬಂಧಪಟ್ಟ ಪ್ರಶ್ನೆಗೆ ಸುಮಾರು 62 ಪ್ರತಿಶತ ಜನರು ತಮ್ಮ ದಿನಚರಿ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಂದರೆ ಕ್ಯಾನ್ಸರ್ ರೋಗಿಯ ಆರೈಕೆಯಲ್ಲಿ ತಮ್ಮ ಖಾಸಗಿ ಜೀವನವನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ನೀವು ಕ್ಯಾನ್ಸರ್ ರೋಗಿಯ ಕೆಲಸಗಳಿಗೆ ಒಗ್ಗಿಕೊಂಡಿದ್ದೀರಾ ಎಂಬ ಪ್ರಶ್ನೆಗೆ 38 ಪ್ರತಿಶತದಷ್ಟು ಜನರು ಬದಲಾದ ಪರಿಸ್ಥಿತಿಗೆ ಧನಾತ್ಮಕವಾಗಿ ಹೊಂದಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಹೀಗೆ ಸಮೀಕ್ಷೆ ಮೂಲಕ ಹಲವು ಆರೈಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆರ್ಥಿಕ ಕಾಳಜಿ ಹಿನ್ನೆಲೆ ಈ ಕೆಲಸಕ್ಕೆ ಬಂದಿದ್ದಾರೆ ಎಂದು ಹೇಳಿದರೆ ತಮ್ಮ ಖಾಸಗಿ ಜೀವನದ ಬಗ್ಗೆಯೂ ನೋವು ತೋಡಿಕೊಂಡಿದ್ದಾರೆ.

ಅಧ್ಯಯನದ ತಿರುಳೇನು?

ಅಧ್ಯಯನದ ತಿರುಳೇನು?

ಅಧ್ಯಯನದಲ್ಲಿ ಹಲವು ಅಂಶಗಳು ಹೊರಬಿದ್ದಿದ್ದು, ಆರೈಕೆದಾರರ ಜೀವನ ಗುಣಪಟ್ಟ ಕಳಪೆಯಾಗುತ್ತಿದೆ ಮತ್ತು ಅವರು ತೀವ್ರವಾಗಿ ಮಾನಸಿಕ ಯಾತನೆಗೆ ಒಳಗಾಗುತ್ತಿದ್ದಾರೆ. ಇದರಿಂದ ಆರೈಕೆದಾರರ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುತ್ತಿದೆ.

ಅಲ್ಲದೇ ಆರೈಕೆದಾರರ ಈ ರೀತಿಯ ಸಮಸ್ಯೆಯಿಂದ ಕ್ಯಾನ್ಸರ್ ರೋಗಿಗಳ ಮೇಲೆಯೂ ಗಂಭಿರ ಪರಿಣಾಮಗಳು ಬೀರುತ್ತಿವೆ ಎನ್ನುವುದು ತಿಳಿದುಬಂದಿದೆ. ಹೀಗಾಗಿ ಯಾವ ರೀತಿ ಕ್ಯಾನ್ಸರ್ ಪೀಡಿತರನ್ನು ಅತೀ ಪ್ರೀತಿಯಿಂದ ನೋಡಿಕೊಳ್ಳಲು ಆಗುತ್ತಿದೆ.

ಅದೇ ರೀತಿ ಆರೈಕೆದಾರರನ್ನು ನೋಡಿಕೊಳ್ಳಬೇಕಿದೆ. ಅದೇ ಕಾಳಜಿ ಹಾಗೂ ಪ್ರೀತಿ ನೀಡಬೇಕಿದೆ. ಯಾಕೆಂದರೆ ಆರೈಕೆದಾರರು ಚೆನ್ನಾಗಿದ್ದರೆ ಕ್ಯಾನ್ಸರ್ ರೋಗಿಯು ಚೆನ್ನಾಗಿ ಇರುತ್ತಾನೆ. ಆರೈಕೆದಾರರು ಚೆನ್ನಾಗಿಲ್ಲದಿದ್ದರೆ ಕ್ಯಾನ್ಸರ್ ರೋಗಿಯು ಸಮಸ್ಯೆ ಅನುಭವಿಸುತ್ತಾನೆ.

ನಾವು ಏನು ಮಾಡಬೇಕು!

ನಾವು ಏನು ಮಾಡಬೇಕು!

ಒಂದು ವೇಳೆ ನಮ್ಮ ಮನೆಗಳಲ್ಲಿ ಕ್ಯಾನ್ಸರ್ ಪೀಡಿತ ವ್ಯಕ್ತಿ ಇದ್ದರೆ ಅವರನ್ನು ಆರೈಕೆ ಮಾಡುವ ವ್ಯಕ್ತಿ ನಿಜಕ್ಕೂ ಚೆನ್ನಾಗಿದ್ದಾನಾ? ಆ ವ್ಯಕ್ತಿಯ ಮಾನಸಿಕ ಆರೋಗ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಅವರ ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ಅವರು ಸರಿಯಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು. ಅವರಿಗೆ ಬೇಕಾದ ಬೆಂಬಲ ನೀಡಬೇಕು.

ಕ್ಯಾನ್ಸರ್ ಎಂದರೇನು?

ಕ್ಯಾನ್ಸರ್ ಎಂದರೇನು?

ಕ್ಯಾನ್ಸರ್ ಎನ್ನುವುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು ಅದು ನಿಯಂತ್ರಣವನ್ನು ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆಯುತ್ತದೆ. ಅಂದರೆ, ಇದು ಅಂಗಾಂಶಗಳ ಗುಂಪು. ಹೀಗೆ ಹೊಸ ಕೋಶಗಳು ಗುಂಪಾಗಿ ರೂಪುಗೊಳ್ಳುತ್ತವೆ. ಇವುಗಳನ್ನು ಗೆಡ್ಡೆಗಳು ಎಂದು ಕರೆಯಲಾಗುತ್ತದೆ. ಇದು ಎರಡು ವಿಧಗಳಾಗಿರಬಹುದು.

ಒಂದು ಮಾರಣಾಂತಿಕ ಗೆಡ್ಡೆ ಮತ್ತು ಇನ್ನೊಂದು ಹಾನಿಕರವಲ್ಲದ ಗೆಡ್ಡೆ. ಮೊದಲನೆಯದು ತುಂಬಾ ಅಪಾಯಕಾರಿ. ಇದು ಬೆಳೆಯುತ್ತದೆ ಮತ್ತು ದೇಹದಾದ್ಯಂತ ಹರಡುತ್ತದೆ ಮತ್ತು ಇತರ ಅಂಗಾಂಶಗಳು ಸಹ ಕ್ಯಾನ್ಸರ್ ಅನ್ನು ಹರಡುತ್ತವೆ. ಆದರೆ ಮತ್ತೊಂದು ಗೆಡ್ಡೆ ಹಾಗಲ್ಲ.

ಇದು ಹರಡುವುದಿಲ್ಲ ಮತ್ತು ಬೇರೆ ಅಂಗಾಂಶಗಳ ಮೇಲೆ ದಾಳಿ ಮಾಡುವುದಿಲ್ಲ. ಇವು ಸಾಂದರ್ಭಿಕವಾಗಿ ದೊಡ್ಡದಾಗುತ್ತವೆ. ಇವುಗಳನ್ನು ಆಪರೇಷನ್ ಮಾಡಿ ತೆಗೆದರೆ ಮತ್ತೆ ಬೆಳೆಯುವುದಿಲ್ಲ. ಆದರೆ, ಮಾರಣಾಂತಿಕ ಗೆಡ್ಡೆ ಮತ್ತೆ ಬೆಳೆಯುವ ಸಾಧ್ಯತೆ ಹೆಚ್ಚು.

English summary

Mental distress of cancer patients' caregivers often overlooked says Study

Here we are discussing about Mental distress of cancer patients' caregivers often overlooked says Study. Read more.
Story first published: Tuesday, August 23, 2022, 7:57 [IST]
X
Desktop Bottom Promotion