For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್‌ನಲ್ಲಿ ಸೇರಿಸಿ

|

ಮೈ ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದೀರಾ? ಅದಕ್ಕಾಗಿ ಸ್ಟ್ರಿಕ್ಟ್‌ ಡಯಟ್‌, ವ್ಯಾಯಾಮ ಎಲ್ಲಾ ಮಾಡುತ್ತಿದ್ದೀರಾ? ಹಾಗಾದರೆ ಅದರ ಜೊತೆ ಕೆಲವೊಂದು ಪಾನೀಯಗಳನ್ನು ಕುಡಿದರೆ ನಿಮ್ಮ ಮೈ ತೂಕ ಬೇಗನೆ ಕರಗಿಸಬಹುದು. ತೂಕ ಇಳಿಕೆಗೆ ಸಹಾಯ ಮಾಡುವ ಆ ಪಾನೀಯಗಳಾವುವು ಎಂದು ನೋಡೋಣ ಬನ್ನಿ:

Homemade Drinks To Lose Weight

ಮೈ ತೂಕ ಬೇಗನೆ ಕರಗಲು ಸಹಾಯ ಮಾಡುವ ಪಾನೀಯಗಳು

 1. ಹರ್ಬಲ್‌ ಡಿಟಾಕ್ಸ್ ಟೀ

1. ಹರ್ಬಲ್‌ ಡಿಟಾಕ್ಸ್ ಟೀ

ಬೆಳಗ್ಗೆ ನಿಮ್ಮ ದಿನವನ್ನು ಹರ್ಬಲ್‌ ಡಿಟಾಕ್ಸ್ ಟೀ ಜೊತೆ ಪ್ರಾರಂಭಿಸಿದರೆ ನಿಮ್ಮ ತೂಕ ಇಳಿಕೆಯ ಜರ್ನಿಗೆ ಸಹಕಾರಿಯಾದೀತು. ಈ ಟೀ ದೇಹವನ್ನು ಡಿಟಾಕ್ಸ್ ಮಾಡುವುದು ಮಾತ್ರವಲ್ಲ ಹೊಟ್ಟೆ ಹಸಿವು ನಿಯಂತ್ರಿಸುತ್ತದೆ. ಅಲ್ಲದೆ ಚಯಚಪಯ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ, ಹಾಗಾಗಿ ತೂಕ ಇಳಿಕೆಗೆ ಸಹಕಾರಿ.

ಬೇಕಾಗುವ ಸಾಮಗ್ರಿ

2 ಕಪ್ ನೀರು

1 ಚಮಚ ಕಾಳುಮೆಣಸಿನ ಪುಡಿ

1.2 ಚಮಚ ಶುಂಠಿ

1 ಏಲಕ್ಕಿ

2 ಎಲೆ ತುಳಸಿ

2 ಕಪ್‌ ನೀರಿಗೆ ಅರ್ಧ ಕಪ್‌ ನೀರು ಬಿಸಿ ಮಾಡಿ ಅದರಲ್ಲಿ ಎಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ಬೆಲ್ಲ ಹಾಕಿ ಕುದಿಸಿ, ಅದನ್ನು ಕುಡಿಯಿರಿ.

2. ಅರಿಶಿಣ ನೀರು

2. ಅರಿಶಿಣ ನೀರು

ನೀವು ಕುಡಿಯುವ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿದರೆ ಉರಿಯೂತ ಕಡಿಮೆ ಮಾಡಿ ದೇಹದ ತೂಕ ಕಡಿಮೆ ಮಾಡಲು ಸಹಕಾರಿ. ಬಿಸಿ ನೀರಿಗೆ ಅರಿಶಿಣ ಹಾಕಿ ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು, ಹೊಟ್ಟೆ ಉಬ್ಬುವ ಸಮಸ್ಯೆ ಕಡಿಮೆಯಾಗುವುದು.

3. ಬಿಸಿ ನೀರಿಗೆ ತುಪ್ಪ ಹಾಕಿ ಕುಡಿಯುವುದು

3. ಬಿಸಿ ನೀರಿಗೆ ತುಪ್ಪ ಹಾಕಿ ಕುಡಿಯುವುದು

ತೂಕ ಇಳಿಕೆಗೆ ತುಪ್ಪ ಸಹಕಾರಿ. ಇದು ಅರೋಗ್ಯಕರ ಕೊಬ್ಬಿನಂಶವಾಗಿದ್ದು ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ತುಪ್ಪ ಹಾಕಿ ಕುಡಿದರೆ ಆರೋಗ್ಯಕರ ಮೈ ತೂಕ ಹೊಂದಲು ಸಹಾಯವಾಗುವುದು, ತುಪ್ಪ ಹಾಕಿದ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೆ ಹಸಿವನ್ನು ನಿಯಂತ್ರಿಸಲು ಸಹಕಾರಿ.

 4. ಆ್ಯಪಲ್ ಸಿಡರ್‌ ವಿನೆಗರ್‌

4. ಆ್ಯಪಲ್ ಸಿಡರ್‌ ವಿನೆಗರ್‌

ಆ್ಯಪಲ್ ಸಿಡರ್‌ ವಿನೆಗರ್ ಕೂಡ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಬಿಸಿ ನೀರಿಗೆ ಸ್ವಲ್ಪ ಆ್ಯಪಲ್ ಸಿಡರ್ ವಿನೆಗರ್‌ ಹಾಗೂ ನಿಂಬೆರಸ, ಜೇನು ಹಾಕಿ ಬೆಳಗ್ಗೆ ಕುಡಿದರೆ ಮೈ ತೂಕ ಕರಗುವುದು ಹಾಗೂ ಹೊಟ್ಟೆ ಉಬ್ಬುವ ಸಮಸ್ಯೆ ಕಡಿಮೆಯಾಗುವುದು. ಅಲ್ಲದೆ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ.

ಆ್ಯಪಲ್ ಸಿಡರ್‌ ವಿನೆಗರ್‌

ಒಂದು ಲೋಟ ನೀರಿಗೆ 2 ಚಮಚ ವಿನೆಗರ್ ಹಾಕಿ ಕುಡಿಯಿರಿ, ಈ ರೀತಿ ಕುಡಿಯುತ್ತಿದ್ದರೆ ಒಂದೆರಡು ತಿಂಗಳಿನಲ್ಲಿ ಮೈ ತೂಕ ಕಡಿಮೆಯಾಗುವುದು.

5. ನಿಂಬೆರಸ

5. ನಿಂಬೆರಸ

ನಿಂಬೆರಸ ಕೂಡ ಮೈ ತೂಕ ಕಡಿಮೆ ಮಾಡಲು ಸಹಕಾರಿ. ಬೆಳಗ್ಗೆ ಬಿಸಿ ನೀರಿಗೆ ನೀವು ಅರ್ಧ ನಿಂಬೆರಸ ಹಾಕಿ ಕುಡಿದರೆ ಮೈ ತೂಕ ಕಡಿಮೆ ಮಾಡಲು ಸಹಕಾರಿ. ಇನ್ನು ನೀವು ಕುಡಿಯುವ ನೀರಿಗೆ ಸ್ವಲ್ಪ ನಿಂಬೆ ತುಂಡು, 2 ಪುದೀನಾ ಎಲೆ ಹಾಗೂ ಸ್ವಲ್ಪ ಸೌತೆಕಾಯಿ ಹಾಕಿ ಆ ನೀರನ್ನು ಕುಡಿಯಿರಿ.

ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವಾಗ ಸ್ವಲ್ಪ ಜೇನು ಸೇರಿಸಿದರೆ ತೂಕ ಇಳಿಕೆಗೆ ಸಹಕಾರಿ.

ಇವುಗಳ ಜೊತೆಗೆ ಆಹಾರಕ್ರಮದ ಕಡೆಗೆ ಗಮನ ನೀಡಿ

ನೀವು ಈ ಪಾನೀಯಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮದ ಕಡೆಗೆ ಗಮನ ನೀಡಿ.

* ಬ್ರೇಕ್‌ಪಾಸ್ಟ್‌ ತಿನ್ನದೇ ಇರಬೇಡಿ

* ಆರೋಗ್ಯಕರ ಆಹಾರವನ್ನು ಸರಿಯಾದ ಹೊತ್ತಿಗೆ ತೆಗೆದುಕೊಳ್ಳಿ

* ಸಾಕಷ್ಟು ಹಣ್ಣು ಹಾಗೂ ತರಕಾರಿಗಳನ್ನು ತಿನ್ನಿ

* ದೈಹಿಕವಾಗಿ ಚಟುವಟಿಕೆಯಿಂದ ಇರಿ

* ಸಾಕಷ್ಟು ನೀರು ಕುಡಿಯಿರಿ

* ಅತ್ಯಧಿಕ ನಾರಿನಂಶ ಇರುವ ಆಹಾರ ಸೇವಿಸಿ

* ಚಿಕ್ಕ ಪ್ಲೇಟ್‌ನಲ್ಲಿ ಆಹಾರ ಸೇವಿಸಿ

* ನಿಮಗೆ ಇಷ್ಟವಾದ ಆಹಾರ ತಿನ್ನಿ. ಹಾಗಂತ ಜಂಕ್‌ ಆಹಾರ ತಿನ್ನಬೇಡ

* ಮದ್ಯಪಾನ ಮಿತಿಯಲ್ಲಿ ಮಾಡಿ

ಸೂಚನೆ: ಈ ಪಾನೀಯಗಳನ್ನು ಮಿತಿಯಲ್ಲಿ ಕುಡಿಯಿರಿ, ಅತಿಯಾದರೆ ಅಡ್ಡಪರಿಣಾಮ ಬೀರುವುದು.

English summary

Homemade Drinks To Lose Weight : Drinks to start your day with during your weight-loss journey

These drinks helps to loose weight, here are more information read on...
X
Desktop Bottom Promotion