For Quick Alerts
ALLOW NOTIFICATIONS  
For Daily Alerts

ಮೌಖಿಕ ಸೆಕ್ಸ್ ವೇಳೆ ಸೋಂಕು ತಡೆಯುವ ಡೆಂಟಲ್ ಡ್ಯಾಂ ಬಗ್ಗೆ ನಿಮಗೆಷ್ಟು ಗೊತ್ತು?

|

ನಿಸರ್ಗ ನಿಯಮಗಳಲ್ಲಿ ಸಂತಾನೋತ್ಪತ್ತಿಯೂ ಒಂದಾಗಿದೆ. ಹೆಣ್ಣು ಜೀವಿಯ ಗರ್ಭದಲ್ಲಿ ಗಂಡು ಜೀವಿಯ ಅಂಶವನ್ನು ಸೇರಿಸಿದಾಗ ಅಂಕುರಗೊಳ್ಳುವ ಹೊಸಜೀವ ಈ ನಿಯಮವನ್ನು ಮುಂದುವರೆಸಿಕೊಂಡು ಹೋಗುತ್ತದೆ. ಈ ಕ್ರಿಯೆಯನ್ನು ಸಾಧ್ಯವಾಗಿಸಲು ಗಂಡು ಹೆಣ್ಣುಗಳ ನಡುವೆ ಲೈಂಗಿಕ ಸಂಪರ್ಕ ಅಗತ್ಯವಾಗಿದೆ. ಲೈಂಗಿಕ ಕ್ರಿಯೆಗೂ ಮುನ್ನ ಜೀವಿಗಳು ಲೈಂಗಿಕವಾಗಿ ಸಿದ್ಧಗೊಳ್ಳುವುದೇ ಉದ್ರೇಕತೆ ಹಾಗೂ ಇದನ್ನು ಸಾಧಿಸಲು ಕೆಲವಾರು ಕ್ರಮಗಳಿವೆ. ಮುನ್ನಲಿವು ಹಾಗೂ ಮುಖರತಿ (ಮೌಖಿಕ ಸೆಕ್ಸ್) ಇದರ ಕೆಲವು ವಿಧಗಳು.

ನಾಗರೀಕತೆ ಮುಂದುವರೆಯುತ್ತಿದ್ದಂತೆಯೇ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹಲವಾರು ಲೈಂಗಿಕ ಕಾಯಿಲೆಗಳು ಹರಡುವ ಸಂಭವವೂ ಹೆಚ್ಚುತ್ತಿದೆ ಹಾಗೂ ಇದನ್ನು ನಿಯಂತ್ರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಅತಿ ಪ್ರಮುಖವಾದುದು ಕಾಂಡಂ. ಇದರಿಂದ ಲೈಂಗಿಕ ಸಂಪರ್ಕಕ್ಕೆ ಯಾವುದೇ ತೊಂದರೆಯಿಲ್ಲವಾದರೂ ಗರ್ಭಧಾರಣೆಯ ಅಥವಾ ಲೈಂಗಿಕ ಕಾಯಿಲೆ ಹರಡುವ ಸಾಧ್ಯತೆಯನ್ನು ಸಾಕಷ್ಟು ಮಟ್ಟಿಗೆ ಇಲ್ಲವಾಗಿಸಬಹುದು. ಆದರೆ ಮುಖರತಿಯ ವಿಷಯ ಬಂದಾಗ ತುಟಿಯಿಂದ ತುಟಿಗೆ ಅಥವಾ ತುಟಿಯಿಂದ ಗೋಪ್ಯಭಾಗಗಳಿಗೆ ಹರಡಬಹುದಾದ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಲೈಂಗಿಕ ರೋಗ ಪೀಡಿತ ವ್ಯಕ್ತಿಯ ಜೊಲ್ಲು ಹಾಗೂ ಗುಪ್ತಾಂಗಗಳಲ್ಲಿರುವ ದ್ರವವೂ ಸೋಂಕುಪೀಡಿತವಾಗಿದ್ದು ಇವರೊಂದಿಗೆ ನಡೆಸುವ ಮುಖರತಿಯಿಂದಲೂ ಲೈಂಗಿಕ ರೋಗ ಹರಡುವ ಸಾಧ್ಯತೆ ನಿಚ್ಚಳವಾಗಿದೆ.

ಈ ಸಾಧ್ಯತೆಯನ್ನು ತಡೆಯಲು ವಿಶ್ವದ ಹಲವೆಡೆ ನಡೆಸಿದ ಹಲವಾರು ಸಂಶೋಧನೆಗಳ ಬಳಿಕ ಸಿಕ್ಕಿದ ಪರಿಹಾರವೇ ಡೆಂಟಲ್ ಡ್ಯಾಂ. ಇದಕ್ಕೆ ಕನ್ನಡದ ಸೂಕ್ತಪದವಾಗಿ ಹಲ್ಲಿನ ಅಣೆಕಟ್ಟು ಎಂದರೆ ಅಪಾರ್ಥವಾಗುತ್ತದೆ. ಹಾಗಾಗಿ, ಡೆಂಟಲ್ ಡ್ಯಾಂ ಎಂಬ ಪದವನ್ನೇ ಬಳಸೋಣ.

ಡೆಂಟಲ್ ಡ್ಯಾಂ ಹೇಗಿರುತ್ತದೆ?

ಡೆಂಟಲ್ ಡ್ಯಾಂ ಹೇಗಿರುತ್ತದೆ?

ಕಾಂಡಮ್ಮುಗಳಿಗೆ ಬಳಸುವ ಲ್ಯಾಟೆಕ್ಸ್ ಎಂಬ ರಬ್ಬರ್ ಕಚ್ಚಾವಸ್ತುವನ್ನು ಒಂದು ಕರ್ಚೀಫಿನಷ್ಟು ಅಗಲಕ್ಕೆ ಅತಿ ತೆಳುವಾಗಿ ನಿರ್ಮಿಸಿದರೆ ಡೆಂಟಲ್ ಡ್ಯಾಂ ಸಿದ್ಧ. ಇದನ್ನು ಬಳಸಿ ಮುಖದಿಂದ ಮುಖಕ್ಕೆ ಅಥವಾ ಮುಖದಿಂದ ಗುಪ್ತಾಂಗಗಳಿಗೆ ಅಥವಾ ಮುಖರತಿಯ ಸಂದರ್ಭದಲ್ಲಿ ನೇರಸಂಪರ್ಕವನ್ನು ತಪ್ಪಿಸಬಹುದು. ಈ ಮೂಲಕ ಲೈಂಗಿಕವಾಗಿ ಹರಡಬಹುದಾದ ರೋಗಗಳನ್ನು ತಡೆಗಟ್ಟಬಹುದು. ಇದರಿಂದ ಚಂದ್ರನಾಡಿ ಅಥವಾ ಗುದಭಾಗದ ಉದ್ರೇಕತೆಯಲ್ಲಿ ಯಾವುದೇ ಕೊರತೆಯುಂಟಾಗುವುದಿಲ್ಲ. ಈ ವಿಧಾನವನ್ನು ಜನತೆಗೆ ಪರಿಚಯಿಸುವ ಮುನ್ನ ತಜ್ಞರು ಹಲವಾರು ಬಗೆಯ ಪರೀಕ್ಷೆಗಳನ್ನು ನಡೆಸಿ ಸುರಕ್ಷಿತವೆಂದು ಖಾತರಿಪಡಿಸಿದ ಬಳಿಕವೇ ಈಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಅಚ್ಚರಿ ಎಂದರೆ ಈ ಬಗೆಯ ಸುರಕ್ಷತಾ ವಿಧಾನವಿರುವುದೇ ನಮಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲ.

ಇವು ಯಾವ ಬಗೆಯ ರೋಗಗಳಿಂದ ರಕ್ಷಣೆ ಒದಗಿಸುತ್ತವೆ?

ಇವು ಯಾವ ಬಗೆಯ ರೋಗಗಳಿಂದ ರಕ್ಷಣೆ ಒದಗಿಸುತ್ತವೆ?

ಸಿಫಿಲಿಸ್

ಗೋನೋರಿಯಾ

ಕ್ಲಾಮೈಡಿಯಾ

ಹೆಪಟೈಟಿಸ್

ಹೆಚ್ ಐ ವಿ (ಏಡ್ಸ್)

ಕೆಲವರಿಗೆ ಸಹಜಸಂಪರ್ಕಕ್ಕೂ ಮಿಗಿಲಾಗಿ ಅಸಹಜವೆನಿಸುವ ಸಂಪರ್ಕಕ್ಕೆ ಒಲವಿದ್ದರೂ ಸ್ವಚ್ಛತೆಯ ಕಾರಣ ಈ ಬಯಕೆಯನ್ನು ಪೂರೈಸಿಕೊಳ್ಳಲು ಸಾಧ್ಯವಿರುವುದಿಲ್ಲ. ದಂಪತಿಗಳ ನಡುವೆಯೂ ಈ ಬಯಕೆಗಳು ಬಂದಿದ್ದರೂ, ಇದು ಸಾಧ್ಯವಾಗದೇ ಹೋಗಿದ್ದ ಸಂದರ್ಭದಲ್ಲಿ ಡೆಂಟಲ್ ಡ್ಯಾಂ ನೆರವಿಗೆ ಬರುತ್ತದೆ. ವಿಶೇಷವಾಗಿ ಗುದರತಿಯ ಸಂದರ್ಭದಲ್ಲಿ ಎದುರಾಗುವ ಮಲಿನದ ಅಸ್ವಚ್ಛತೆಯಿಂದ ಎದುರಾಗುವ ಸೋಂಕು ಅತಿ ಹೆಚ್ಚು ಸೋಂಕುಕಾರಕವಾಗಿದೆ. ಏಕೆಂದರೆ ಈ ಭಾಗದಲ್ಲಿ ಈ ಕೊಲೈ ಮತ್ತು ಷಿಗೆಲ್ಲಾ ಎಂಬ ಅತಿ ಸೋಂಕುಕಾರಕ ಬ್ಯಾಕ್ಟೀರಿಯಾಗಳಿರುತ್ತವೆ ಅಲ್ಲದೇ ನಮ್ಮ ಕರುಳುಗಳಲ್ಲಿಯೂ ಕೆಲವಾರು ಪರಾವಲಂಬಿ ಕ್ರಿಮಿಗಳಿರುತ್ತವೆ. ಹಾಗಾಗಿ ಅಸುರಕ್ಷಿತವಾದ ಸಂಪರ್ಕದಿಂದ ಈ ಕ್ರಿಮಿಗಳಿಂದ ಎದುರಾಗುವ ಸೋಂಕುಗಳಿಂದ ರಕ್ಷಿಸಲು ಹಾಗೂ ಮನೋಬಯಕೆಯನ್ನು ಪೂರೈಸಿಕೊಳ್ಳಲು ಡೆಂಟಲ್ ಡ್ಯಾಂ ಸೂಕ್ತವಾದ ಆಯ್ಕೆಯಾಗಿದೆ.

ಆದರೆ ಈ ವಿಧಾನವೂ ಪರಿಪೂರ್ಣವಾಗಿ ಸುರಕ್ಷಿತವಲ್ಲ. ಏಕೆಂದರೆ ಡೆಂಟಲ್ ಡ್ಯಾಂ ಕೇವಲ ದ್ರವರೂಪದ ಸೋಂಕುಗಳನ್ನು ತಡೆಗಟ್ಟಬಲ್ಲುದೇ ವಿನಃ ದೇಹದ ಇತರ ಭಾಗಗಳಿಗೆ ಪರಸ್ಪರ ತಗಲುವ ಚರ್ಮಗಳ ಮೂಲಕ, ವಿಶೇಷವಾಗಿ ಬೆವರಿನ ಮೂಲಕ ಹರಡುವ ಸೋಂಕುಗಳಿಂದ ರಕ್ಷಣೆ ಒದಗಿಸಲಾರವು.

ಈ ವ್ಯಾಪ್ತಿಗೆ ಸೇರುವ ಸೋಂಕು ಎಂದರೆ

ಈ ವ್ಯಾಪ್ತಿಗೆ ಸೇರುವ ಸೋಂಕು ಎಂದರೆ

ಹೆಚ್ ಪಿ ವಿ (Human papilloma virus (HPV). ಇದು ಬೆವರಿನ ಮೂಲಕ ಅತಿ ಶೀಘ್ರವಾಗಿ ಹರಡುತ್ತವೆ. ವಿಶೇಷವಾಗಿ ಓರ್ವ ವ್ಯಕ್ತಿಯಲ್ಲಿ ಕೀವುಗುಳ್ಳೆಗೆಳಿದ್ದರೆ ಹಾಗೂ ಸಂಪರ್ಕದ ಸಮಯದಲ್ಲಿ ಇವು ಒಡೆದು ಕೀವು ಹೊರಬಂದು ಇನ್ನೋರ್ವ ವ್ಯಕ್ತಿಯ ಚರ್ಮಕ್ಕೆ ದಾಟಿಕೊಂಡರೆ ಸೋಂಕು ದಾಟುವ ಸಾಧ್ಯತೆ ಹೆಚ್ಚು.

ಹರ್ಪಿಸ್: ಇದೊಂದು ಮೇಹರೋಗವಾಗಿದ್ದು ಚರ್ಮದಲ್ಲಿ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳಾಗಿರುತ್ತವೆ. ಇವುಗಳಿಂದ ಒಸರಿದ ದ್ರವವೂ ಸೋಂಕುಕಾರಕವಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಯಿದ್ದು ಡೆಂಟಲ್ ಡ್ಯಾಂ ಇದಕ್ಕೆ ರಕ್ಷಣೆ ಒದಗಿಸಲಾರದು.

ಹೇನುಗಳು: ಕೆಲವು ವ್ಯಕ್ತಿಗಳ ತಲೆಗೂದಲು ಹಾಗೂ ದೇಹದ ಇತರ ಭಾಗದ ಕೂದಲ ನಡುವೆಯೂ ಚಿಕ್ಕ ಮತ್ತು ದೊಡ್ಡ ಗಾತ್ರದ ಹೇನುಗಳಿರುತ್ತವೆ. ಈ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ವ್ಯಕ್ತಿಗೂ ಈ ಹೇನುಗಳು ಸುಲಭವಾಗಿ ದಾಟಿಕೊಂಡು ತಮ್ಮ ಬಿಡಾರವನ್ನು ಹೊಸ ಸ್ಥಳದಲ್ಲಿ ನಿರ್ಮಿಸಿಕೊಳ್ಳುತ್ತವೆ.

ಡೆಂಟಲ್ ಡ್ಯಾಂ ಎಲ್ಲಿ ಸಿಗುತ್ತದೆ?

ಡೆಂಟಲ್ ಡ್ಯಾಂ ಎಲ್ಲಿ ಸಿಗುತ್ತದೆ?

ಕಾಂಡಮ್ಮುಗಳಷ್ಟು ಡೆಂಟಲ್ ಡ್ಯಾಂ ಇನ್ನೂ ಹೆಸರು ಪಡೆದಿರದ ಕಾರಣ ಎಲ್ಲಾ ಕಡೆ ಇದಕ್ಕೆ ಬೇಡಿಕೆ ಕುದುರಿಲ್ಲ. ಸ್ವಾಭಾವಿಕವಾಗಿಯೇ ಬೇಡಿಕೆ ಇಲ್ಲದೆಡೆ ಇವು ಲಭ್ಯವಿಲ್ಲ. ಹಾಗಾಗಿ ಸಧ್ಯಕ್ಕೆ ಇವು ಕೇವಲ ವಯಸ್ಕರ ಆಟಿಕೆಗಳ ಅಂಗಡಿಯಲ್ಲಿ ಮತ್ತು ಆನ್ಲೈನ್ ಮೂಲಕವೇ ಲಭ್ಯವಿವೆ. ಇವು ವಿವಿಧ ಬಣ್ಣ, ಗಾತ್ರಗಳಲ್ಲಿ ಲಭ್ಯವಿವೆ. ಲ್ಯಾಟೆಕ್ಸ್ ಹೊರತಾಗಿ ಪಾಲಿಯುರಿಥೇನ್ ನಿಂದಲೂ ನಿರ್ಮಿಸಲ್ಪಟ್ಟ ಡೆಂಟಲ್ ಡ್ಯಾಂ ಲಭ್ಯವಿವೆ.

ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾಗಿಲ್ಲದ ಕಾರಣ ಬೆಲೆಯೂ ಕೊಂಚ ದುಬಾರಿಯೇ ಇದೆ. ಸಾಮಾನ್ಯವಾಗಿ ಒಂದು ಡೆಂಟಲ್ ಡ್ಯಾಂ ಬೆಲೆ ಒಂದರಿಂದ ಎರಡು ಡಾಲರ್ ವರೆಗೆ ಇರುತ್ತದೆ. ಕೆಲವು ಸಂಸ್ಥೆಗಳು ಇವನ್ನು ಜನಪ್ರಿಯಗೊಳಿಸಲು ಪ್ರಾರಂಭಿಕ ಕೊಡುಗೆಯಾಗಿ ಉಚಿತವಾಗಿ ನೀಡಲು ಆರಂಭಿಸಿದ್ದರೆ ಅಚ್ಚರಿಪಡಬೇಕಾಗಿಲ್ಲ. (ಕಾಫಿಯನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಸುಮಾರು ಒಂದೆರಡು ವರ್ಷಕ್ಕೂ ಹೆಚ್ಚು ಕಾಲ ಇಡಿಯ ಭಾರತದಲ್ಲಿ ಜನರಿಗೆ ಕಾಫಿಯನ್ನು ಪುಕ್ಕಟೆಯಾಗಿ ಕುಡಿಸಲಾಗಿತ್ತು. ಅದರ ಪರಿಣಾಮವೇನೆಂದು ಇಂದು ವಿವರಿಸುವ ಅಗತ್ಯವಿಲ್ಲ. ಕಾಫಿಗೂ ಹಿಂದೆ ಕಷಾಯವೇ ಭಾರತೀಯರ ಪೇಯವಾಗಿತ್ತು. ಈಗ ಕಷಾಯವೆಷ್ಟು ಮಾರಾಟವಾಗುತ್ತಿದೆ, ಕಾಫಿ ಎಷ್ಟು ಮಾರಾಟವಾಗುತ್ತಿದೆ ಎಂದರೆ ಈ ಕ್ರಮದ ಪರಾಕ್ರಮವನ್ನು ಅರಿಯಬಹುದು)

ಲ್ಯಾಟೆಕ್ಸ್ ಒಳ ಉಡುಪು

ಡೆಂಟಲ್ ಡ್ಯಾಂ ನ ವಿಸ್ತ್ರತ ರೂಪವಾಗಿ ಹೆಚ್ಚೂಕಡಿಮೆ ಪಾರದರ್ಶಕವಾದ ಲ್ಯಾಟೆಕ್ಸ್ ಅಥವಾ ಪಾಲಿಯೂರಿಥೇನ್ ನಿಂದ ನಿರ್ಮಿಸಲ್ಪಟ್ಟ ಒಳ ಉಡುಪುಗಳೂ ಈಗ ಲಭ್ಯವಿವೆ. ಇವು ಧರಿಸಲು ಸುಲಭ ಹಾಗೂ ಲೈಂಗಿಕ ರೋಗದಿಂದ ರಕ್ಷಣೆಯನ್ನೂ ಒದಗಿಸುತ್ತವೆ.

ಬಳಕೆಯ ವಿಧಾನ

ಮೊದಲು ಡೆಂಟಲ್ ಡ್ಯಾಂ ಇರುವ ಪೊಟ್ಟಣವನ್ನು ತೆರೆದು ಒಳಗಿನ ಮಡಚಿದ್ದ ಡೆಂಟಲ್ ಡ್ಯಾಂ ಅನ್ನು ಸಾವಕಾಶವಾಗಿ ಬಿಡಿಸಿಕೊಳ್ಳಿ. ಆದರೆ ಬಿಡಿಸುವ ಭರದಲ್ಲಿ ಉಗುರು ಅಥವಾ ಇನ್ನೇನಾದರೂ ತಾಗಿ ತೂತು ಬೀಳದಂತೆ ಎಚ್ಚರ ವಹಿಸಿ. ಇದು ಸಾಮಾನ್ಯ ಕಾಗದದ ನೂರಕ್ಕೊಂದರಷ್ಟು ತೆಳುವಾಗಿರುವ ಕಾರಣ ಚೂಪಾದ ವಸ್ತುಗಳಿಗೆ ಸುಲಭವಾಗಿ ಹರಿಯುತ್ತದೆ. ಪೂರ್ಣವಾಗಿ ಬಿಡಿಸಿರುವ ಡೆಂಟಲ್ ಡ್ಯಾಂ ಅನ್ನು ಸಂಗಾತಿಯ ಯಾವ ಭಾಗವನ್ನು ಉದ್ರೇಕಿಸುವ ಉದ್ದೇಶವಿದೆಯೋ ಅದರ ಮೇಲೆ ಪೂರ್ಣವಾಗಿ ಆವರಿಸುವಂತೆ ಹರಡಿ. ಸಾಮಾನ್ಯವಾಗಿ ಡೆಂಟಲ್ ಡ್ಯಾಂ ಚೌಕಾಕಾರ ಅಥವಾ ಆಯತಾಕಾರದಲ್ಲಿದ್ದು ಸಾಕಷ್ಟು ವಿಸ್ತಾರ ಹೊಂದಿರುತ್ತದೆ.

ಇದನ್ನು ಸೆಳೆಯದಿರಿ ಅಥವಾ ಚರ್ಮಕ್ಕೆ ವಿಪರೀತವೆನಿಸುವಷ್ಟು ಅಂಟಿಸದಿರಿ. ಸಾಮಾನ್ಯವಾಗಿ ಚರ್ಮದ ಮೇಲಿರುವ ತೇವಾಂಶ ಹಾಗೂ ಸ್ಥಿತಿಸ್ಥಾಪಕತ್ವದ ಗುಣದಿಂದಲೇ ಇದು ಚರ್ಮದ ಮೇಲೆ ಹೊಸಚರ್ಮದ ಪದರದಂತೆ ಸಹಜವಾಗಿ ಅಂಟಿಬಿಡುತ್ತದೆ. ಮನೋಬಯಕೆ ಪೂರ್ಣಗೊಳ್ಳುವವರೆಗೂ ಡೆಂಟಲ್ ಡ್ಯಾಂ ಹಾಗೇ ಇರಲಿ. ಬಳಿಕವೇ ಇದನ್ನು ನಿವಾರಿಸಿ ಚರ್ಮಕ್ಕಂಟಿದ್ದ ಭಾಗ ಒಳಬರುವಂತೆ ಮಡಚಿ ಕಸದ ಬುಟ್ಟಿಗೆ ಹಾಕಿ. ಕೆಲವೊಮ್ಮೆ ಕ್ರೀಡೆಯ ಭರದಲ್ಲಿ ಇದು ನುಜ್ಜುಗುಜ್ಜಾಗಬಹುದು. ಹಾಗಾದರೆ ತಕ್ಷಣವೇ ಇದನ್ನು ವಿಸರ್ಜಿಸಿ ಹೊಸ ಡೆಂಟಲ್ ಡ್ಯಾಂ ಉಪಯೋಗಿಸಿ.

ಅತಿ ಹೆಚ್ಚಿನ ಪ್ರಯೋಜನಕ್ಕೆ

ಅತಿ ಹೆಚ್ಚಿನ ಪ್ರಯೋಜನಕ್ಕೆ

ಒಬ್ಬರೇ ಇದನ್ನು ಅಂಟಿಸುವ ಬದಲು ಇಬ್ಬರೂ ತಮ್ಮಿಬ್ಬರ ಕೈಗಳಿಂದ ನಾಲ್ಕೂ ಮೂಲೆಗಳನ್ನು ಹಿಡಿದು ಅತಿ ಸಮರ್ಪಕವಾಗಿ ಅಳವಡಿಸುವುದು ಹೆಚ್ಚು ಫಲದಾಯಕವಾಗಿದೆ. ಅಲ್ಲದೇ ಡೆಂಟಲ್ ಡ್ಯಾಂ ಅನ್ನು ಪೂರ್ಣವಾಗಿ ತೆರೆದು ಪೂರ್ಣವಿಸ್ತಾರದ ಭಾಗ ಸಂಗಾತಿಯ ಉದ್ರೇಕಭಾಗವನ್ನು ಕೇಂದ್ರೀಕರಿಸುವಂತೆ ಹರಡುವುದು ಅವಶ್ಯಕ. ಜಾರುವಿಕೆ ಹೆಚ್ಚಲು ಜಾರುಕದ್ರವವನ್ನೂ ಬಳಸಬಹುದು. ಇದಕ್ಕಾಗಿ ನೀರು ಅಥವಾ ಸಿಲಿಕೋನ್ ಆಧಾರಿತ ಉತ್ಪನ್ನವನ್ನೇ ಬಳಸಿ. ತೈಲಾಧಾರಿತ ಉತ್ಪನ್ನಗಳು ಲ್ಯಾಟೆಕ್ಸ್ ಪದರವನ್ನು ಹರಿಯಲು ಕಾರಣವಾಗಬಹುದು ಹಾಗೂ ಕೆಲವರಿಗೆ ಕಣ್ಣೀರನ್ನೂ ತರಿಸಬಹುದು.

ನಿಮ್ಮದೇ ಸ್ವಂತ ಡೆಂಟಲ್ ಡ್ಯಾಂ ತಯಾರಿಸುವ ವಿಧಾನ

ಡೆಂಟಲ್ ಡ್ಯಾಂ ಬಗ್ಗೆ ಕುತೂಹಲ ಮೂಡಿದ್ದು ಇದನ್ನು ಕೊಳ್ಳಲು ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯೇ ಸ್ವತಃ ತಯಾರಿಸಿಕೊಳ್ಳಬಹುದು. ಇದಕ್ಕಾಗಿ,

* ನಿಮ್ಮ ಅಯ್ಕೆಯ ಕಾಂಡಂ ಒಂದನ್ನು ತೆರೆದು ಸುತ್ತಿರುವ ಸುರುಳಿಯನ್ನು ತೆರೆಯುತ್ತಾ ಪೂರ್ಣ ಕೊಳವೆಯನ್ನಾಗಿಸಿ

* ಎರಡೂ ತುದಿಗಳನ್ನು ಕತ್ತರಿಯಿಂದ ಕತ್ತರಿಸಿ

* ಈಗ ಕತ್ತರಿಯಿಂದ ಕೊಳವೆಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಕತ್ತರಿಸಿ ಬಿಡಿಸಿ ವಿಸ್ತಾರವಾಗಿ ಹರಡಿ

* ಡೆಂಟಲ್ ಡ್ಯಾಂ ನಷ್ಟಲ್ಲದಿದ್ದರೂ ಸಾಕಷ್ಟು ದೊಡ್ಡ ಡೆಂಟಲ್ ಡ್ಯಾಂ ಸಿದ್ಧವಾಗಿದೆ

ಒಂದು ವೇಳೆ ಕಾಂಡಂ ಸಹಾ ಇಲ್ಲದಿದ್ದರೆ, ಆಹಾರವನ್ನು ಸುತ್ತುವ ಅತಿ ತೆಳ್ಳಗಿನ ಕ್ಲಿಂಗ್ ಫಿಲ್ಮ್ ಸಹಾ ನಡೆಯುತ್ತದೆ. ಆದರೆ ಇದು ಲೈಂಗಿಕ ರೋಗ ತಡೆಗಟ್ಟಲು ನಿರ್ಮಿಸಲಾದ ಉತ್ಪನ್ನವೇ ಅಲ್ಲ ಎಂಬುದನ್ನು ಗಮನದಲ್ಲಿರಿಸಬೇಕು. ಆದರೆ ಸುರಕ್ಷತೆಯ ವಿಷಯದಲ್ಲಿ ಈ ಕ್ಲಿಂಗ್ ಫಿಲ್ಮ್ ಸಹಾ ಸಾಕಷ್ಟು ಪರಿಣಾಮಕಾರಿಯಾಗಿದೆ. ಆದರೆ ಪ್ಲಾಸ್ಟಿಕ್ ದಪ್ಪನಿದ್ದಷ್ಟೂ ಸ್ಪರ್ಶಾನುಭವವೂ ಕಡಿಮೆಯಾಗುತ್ತದೆ.

ಡೆಂಟಲ್ ಡ್ಯಾಂ ಮರುಬಳಕೆ ಸಾಧ್ಯವೇ?

ಡೆಂಟಲ್ ಡ್ಯಾಂ ಮರುಬಳಕೆ ಸಾಧ್ಯವೇ?

ಇಲ್ಲ, ಎಂದೆಂದಿಗೂ ಕೂಡದು. ಪ್ರತಿ ಡೆಂಟಲ್ ಡ್ಯಾಂ ಬಳಕೆ ಒಮ್ಮೆ ಮಾತ್ರ. ಏಕೆಂದರೆ ಒಂದು ಬಾರಿ ಇದು ವ್ಯಕ್ತಿಯ ಸಂಪರ್ಕಕ್ಕೆ ಬಂದ ಬಳಿಕ ಇದಕ್ಕೆ ಲೈಂಗಿಕ ರೋಗ ಹರಡಬಹುದಾದ ಸೂಕ್ಷ್ಮಜೀವಿಗಳು ಅಂಟಿಕೊಂಡಿರುವ ಸಾಧ್ಯತೆ ಅತಿ ಹೆಚ್ಚಾಗಿದ್ದು ಇದರ ಮರುಬಳಕೆಯಿಂದ ಈ ವಿಧಾನದ ಮೂಲ ಉದ್ದೇಶವೇ ವಿರುದ್ದವಾಗಿ ಆಕ್ರಮಣ ಮಾಡುವ ಅಪಾಯವಿದೆ.

English summary

Everything You Need to Know About Using a Dental Dam

A dental dam is a thin, flexible piece of latex that protects against direct mouth-to-genital or mouth-to-anus contact during oral sex. This reduces your risk for sexually transmitted infections (STIs) while still allowing for clitoral or anal stimulation. They’re an effectiveTrusted Source form of protection, but odds are you’ve never even heard of them. Safe-sex measures typically focus on penetrative sex, which is why condoms are so readily available. But that’s not the only type of intercourse that spreads bacteria and infections.
Story first published: Monday, September 23, 2019, 19:00 [IST]
X