For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಮೂತ್ರಸೋಂಕನ್ನು ತಡೆಗಟ್ಟಲು ಪರಿಣಾಮಕಾರಿ ಮಾರ್ಗ

|

ಮಹಿಳೆಯರು ಆಗಾಗ ಮೂತ್ರನಾಳದ ಸೋಂಕು ಅಥವಾ ಯುಟಿಐನ್ನು ಅನುಭವಿಸುತ್ತಾರೆ. ನೈರ್ಮಲ್ಯದ ಕೊರತೆ ಸೇರಿದಂತೆ ಇದಕ್ಕೆ ಕಾರಣಗಳು ಹಲವಾರಿರುತ್ತವೆ. ಆದರೆ ಇತ್ತೀಚಿನ ವರದಿಯೊಂದು ಮೂತ್ರನಾಳದ ಸೋಂಕಿಗೆ ನಿರ್ಜಲೀಕರಣ ಕಾರಣವೆಂದು ತಿಳಿಸಿದೆ.

 UTI means,

ಹೌದು, ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ, ಜಲಸಂಚಯನದ ಕೊರತೆಯು ಮಹಿಳೆಯರಲ್ಲಿ ಯುಟಿಐಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದೆ. ಹಾಗಾದರೆ ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯನ್ನು ಹೇಗೆ ದೂರವಿಡಬಹುದು ಎಂಬುದನ್ನು ಇಲ್ಲಿ ನೋಡೋಣ.

ಏನಿದು ಅಧ್ಯಯನ?:

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿರ್ಜಲೀಕರಣವು ಮೂತ್ರದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇದು ಗೊಂದಲ, ತಲೆಸುತ್ತುವಿಕೆ, ಕಿಡ್ನಿಯಲ್ಲಿ ತೀವ್ರವಾದ ಗಾಯ ಸೇರಿದಂತೆ ಹಲವಾರು ಸಮಸ್ಯೆಗೆ ಕಾರಣವಾಗಬಹುದು. ವಯಸ್ಸಾದ ಮಹಿಳೆಯರಲ್ಲಿ ಯುಟಿಐಗೆ ನಿರ್ಜಲೀಕರಣವು ಸಾಮಾನ್ಯ ಕಾರಣವೆಂದು ಅಧ್ಯಯನವು ತಿಳಿಸುತ್ತದೆ. ಆದ್ದರಿಂದ ಯುಟಿಐ ಅಥವಾ ಮೂತ್ರನಾಳದ ಸೋಂಕಿನಿಂದ ದೂರವಿರಲು ಮುಖ್ಯವಾಗಿ ಮಹಿಳೆಯರು ಹೆಚ್ಚೆಚ್ಚು ನೀರು ಕುಡಿಯುವುದು ಉತ್ತಮ.

ಯುಟಿಐ(UTI) ಎಂದರೇನು?:
ತಜ್ಞರ ಪ್ರಕಾರ, ಯುಟಿಐ ಎಂದರೆ ಮೂತ್ರಪಿಂಡಗಳು, ಮೂತ್ರನಾಳ, ಮೂತ್ರಕೋಶ, ಅಂದರೆ ಮೂತ್ರದ ವ್ಯವಸ್ಥೆಯ ಯಾವುದೇ ಭಾಗದಲ್ಲಿನ ಸೋಂಕು ಎನ್ನಬಹುದು. ಆದರೆ ಸಾಮಾನ್ಯವಾಗಿ ಮೂತ್ರಕೋಶ ಹಾಗೂ ಮೂತ್ರನಾಳಗಳಲ್ಲಿ ಈ ಸೋಂಕು ಕಂಡುಬರುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಯುಟಿಐಗಳಿಂದ ಬಳಲುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಏಕೆಂದರೆ ಮಹಿಳೆಯರು ಸಣ್ಣ ಮೂತ್ರನಾಳವನ್ನು ಹೊಂದಿರುತ್ತಾರೆ.

ಯುಟಿಐ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಿಮ್ಮ ಮೂತ್ರಪಿಂಡಗಳಿಗೆ ಯುಟಿಐ ಹರಡಿದರೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಜ್ವರ, ಶೀತ ಮತ್ತು ಪಾರ್ಶ್ವ ನೋವು ನಿರ್ಜಲೀಕರಣದಿಂದ ಉಂಟಾಗುವ ಯುಟಿಐ ಲಕ್ಷಣಗಳಾಗಿರಬಹುದು. ಆದ್ದರಿಂದ, ಸಾಕಷ್ಟು ನೀರು ಕುಡಿಯುವುದು ಉತ್ತಮ ಹಾಗೂ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಯುಟಿಐನ ಲಕ್ಷಣಗಳು:
ಆಗಾಗ್ಗೆ ಮೂತ್ರ ವಿಸರ್ಜಿಸುವ ಪ್ರಚೋದನೆ
ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುವ ಸಂವೇದನೆ
ನೋವಿನಿಂದ ಕೂಡಿರುವ ಮೂತ್ರ ವಿಸರ್ಜನೆ
ಗಾಢ ಬಣ್ಣದ ಮೂತ್ರ
ದುರ್ವಾಸನೆಯುಕ್ತ ಮೂತ್ರ
ಶ್ರೋಣಿ ಕುಹರದ ನೋವು
ನೀವು ಈ ರೋಗಲಕ್ಷಣಗಳನ್ನು ಹೊಂದಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆಯನ್ನು ಆರಿಸಿಕೊಳ್ಳುವುದು ಉತ್ತಮ.

ನೀರು ಹೆಚ್ಚು ಕುಡಿಯುವುದರಿಂದ ಮಹಿಳೆಯರಲ್ಲಿ ಯುಟಿಐಗಳನ್ನು ಹೇಗೆ ತಡೆಯಬಹುದು?
ತಜ್ಞರ ಪ್ರಕಾರ, ಕುಡಿಯುವ ನೀರು ನಿಮ್ಮ ಮೂತ್ರವನ್ನು ದುರ್ಬಲಗೊಳಿಸಿ, ಹೆಚ್ಚು ಬಾರಿ ಮೂತ್ರ ವಿಸರ್ಜಿಸುವಂತೆ ಮಾಡುತ್ತದೆ. ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ಮೂತ್ರನಾಳದಿಂದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಸೋಂಕು ಮತ್ತಷ್ಟು ಹರಡುವುದನ್ನು ತಡೆಯುತ್ತದೆ. ಮಹಿಳೆಯರು ಪ್ರತಿದಿನ ಕನಿಷ್ಠ 2-3 ಲೀಟರ್ ನೀರನ್ನು ಕುಡಿಯುವುದು ಅತ್ಯಗತ್ಯ ಏಕೆಂದರೆ ನೀರಿನ ಸರಿಯಾದ ಸೇವನೆಯು ಮೂತ್ರನಾಳದ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇಂತಹ ಸೋಂಕಿನಿಂದ ದೂರವಿರಲು ಸಾಕಷ್ಟು ನೀರು ಕುಡಿಯಿರಿ. ಮೂತ್ರನಾಳದ ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮತ್ತು ಆರೋಗ್ಯವಾಗಿರುವುದು ಅತ್ಯಗತ್ಯವಾಗಿದೆ. ಇದರ ಜೊತೆಗೆ ಈ ಕೆಳಗಿನ ಸಲಹೆಗಳು ಸಹಾಯಕ್ಕೆ ಬರಬಹುದು.

ಯುಟಿಐ ತಡೆಗಟ್ಟುವುದು ಹೇಗೆ?
- ಯುಟಿಐ ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ.
- ದೈಹಿಕ ಸಂಬಂಧ ಮಾಡುವ ಮೊದಲು ಮತ್ತು ನಂತರ ಶೌಚಕ್ಕೆ ಹೋಗಿ ಬನ್ನಿ
- ನಿಮ್ಮ ಖಾಸಗಿ ಭಾಗಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
- ಯಾವುದೇ ರೀತಿಯ ನೈರ್ಮಲ್ಯ ಸ್ಪ್ರೇ ಬಳಸಬೇಡಿ.
- ಸ್ನಾನದಲ್ಲಿ ಬಾತ್ ಟಬ್ ಬಳಕೆ ಕಡಿಮೆ ಮಾಡಿ.
- ಮೂತ್ರವನ್ನು ದೀರ್ಘಕಾಲ ತಡೆಯಬೇಡಿ

English summary

Effective Ways to Help Prevent UTIs at bay in kannada

Here we talking about Effective Ways to Help Prevent UTIs at bay in kannada, read on
Story first published: Sunday, December 18, 2022, 16:40 [IST]
X
Desktop Bottom Promotion