For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ ತಿಂದು ಕ್ಯಾನ್ಸರ್‌ ಕಣ ಇಲ್ಲವಾಗಿಸಬಹುದು

|
ಹಾಗಲಕಾಯಿ ಸಾರ ಕ್ಯಾನ್ಸರ್ ನಿವಾರಣೆಗೆ ಪರಿಣಾಮಕಾರಿ | Bittter gourd | Oneindia Kannada

ಕಹಿ ಎನ್ನುವುದು ಯಾವತ್ತಿಗೂ ನಾಲಗೆಗೆ ಇಷ್ಟವಾಗದು, ಅದಕ್ಕೆ ಸಿಹಿ ಅಥವಾ ರುಚಿಯಾಗಿರುವುದು ಬೇಕು. ಯಾವುದು ನಾಲಗೆಗೆ ಕಹಿಯಾಗಿ ಇರುತ್ತದೆಯಾ ಅದು ದೇಹದ ಆರೋಗ್ಯಕ್ಕೆ ಒಳ್ಳೆಯದು ಎಂದು ಆಯುರ್ವೇದವು ಹೇಳಿದೆ. ಇದರಿಂದ ಕಹಿಯಾಗಿರುವಂತಹ ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳು ನಮಗೆ ಪಥ್ಯವಾಗದೆ ಇರುವುದು. ಆದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದನ್ನು ಮರೆತುಬಿಡುತ್ತೇವೆ. ಇಂತಹ ಒಂದು ತರಕಾರಿಯಲ್ಲಿ ಹಾಗಲಕಾಯಿಯು ಒಂದಾಗಿದೆ. ಹಾಗಲಕಾಯಿ ತುಂಬಾ ಕಹಿ. ಇದನ್ನು ಇಷ್ಟಪಡುವವರು ತುಂಬಾ ಕಡಿಮೆ. ಆದರೆ ಇದನ್ನು ವಿವಿಧ ರೀತಿಯಲ್ಲಿ ಅಡುಗೆಯಲ್ಲಿ ಬಳಸಿಕೊಂಡರೆ ಆಗ ಅದರ ಕಹಿಯು ಕಡಿಮೆ ಆಗುವುದು.

bitter melon treat cancer

ಹಾಗಲಕಾಯಿ ಜ್ಯೂಸ್ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರಿಂದ ಹಾಗಲಕಾಯಿಯನ್ನು ಇತ್ತೀಚೆಗೆ ಬಳಕೆ ಮಾಡಲು ಜನರು ಆರಂಭಿಸಿದ್ದಾರೆ. ಹಾಗಲಕಾಯಿ ಮೇಲೆ ನಡೆಸಿರುವಂತಹ ಕೆಲವೊಂದು ಸಂಶೋಧನೆಗಳಿಂದ ಕಂಡುಕೊಂಡಿರುವ ವಿಚಾರವೆಂದರೆ ಹಾಗಲಕಾಯಿಯು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಹಾಲಕಾಯಿಯು ಯಾವ ರೀತಿಯಲ್ಲಿ ಕ್ಯಾನ್ಸರ್ ತಡೆಗೆ ಸಹಕಾರಿ ಆಗಬಲ್ಲದು ಎಂದು ಈ ಲೇಖನ ಮೂಲಕ ತಿಳಿಯುವ.

ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು

ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು

ಹಾಗಲಕಾಯಿ ತಿನ್ನುವುದಾದರೆ ಆಗ 100 ಗ್ರಾಂ ಹಾಗಲಕಾಯಿಯಲ್ಲಿ 49 ಕೆಸಿಎಎಲ್ ಶಕ್ತಿ, 89.93ಗ್ರಾಂ ನೀರಿನಾಂಶವಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ 0.8 ಗ್ರಾಂ ಪ್ರೋಟೀನ್, 9 ಮಿ.ಗ್ರಾಂ.ಕ್ಯಾಲ್ಸಿಯಂ, 15 ಮಿ.ಗ್ರಾಂ. ಮೆಗ್ನಿಶಿಯಂ, 0.37 ಮಿ.ಗ್ರಾಂ ಕಬ್ಬಿಣ, 305 ಮಿ.ಗ್ರಾಂ.ಪೊಟಾಶಿಯಂ, 31.6 ಮಿ.ಗ್ರಾಂ. ವಿಟಮಿನ್ ಸಿ, 0.55 ಮಿ.ಗ್ರಾಂ.ವಿಟಮಿನ್ ಇ, ವಿಟಮಿನ್ ಕೆ, ಕೊಬ್ಬಿನಾಮ್ಲ ಮತ್ತು ವಿಟಮಿನ್ ಎ ಇದೆ.

ಅಧ್ಯಯನ ಏನು ಹೇಳುತ್ತದೆ?

ಅಧ್ಯಯನ ಏನು ಹೇಳುತ್ತದೆ?

ಹಾಗಲಕಾಯಿ ಸಾರವು ಕ್ಯಾನ್ಸರ್ ನಿವಾರಣೆಗೆ ಪರಿಣಾಮಕಾರಿ ಆಗಿದೆ. ಇದನ್ನು ಮನುಷ್ಯರಲ್ಲಿ ಕಂಡುಬರುವಂತಹ ಬಾಯಿಯ ಕ್ಯಾನ್ಸರ್ ನಿವಾರಣೆಗೆ ಬಳಸಬಹುದು. ಇದು ಕ್ಯಾನ್ಸರ್ ಕೋಶಗಳು ದೇಹಕ್ಕೆ ಹಬ್ಬದಂತೆ ತಡೆಯುವುದು ಮತ್ತು ಕ್ಯಾನ್ಸರ್ ಕೋಶಗಳನ್ನು ಮಾತ್ರ ಕೊಲ್ಲುವ ಮೂಲಕ ಇದು ತುಂಬಾ ಪರಿಣಾಮಕಾರಿ ಆಗಿದೆ ಎಂದು ಸೆಲ್ ಕಮ್ಯೂನಿಕೇಶನ್ ಆ್ಯಂಡ್ ಸಿಗ್ನಲಿಂಗ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯು ಹೇಳಿದೆ.

ಈ ಅಧ್ಯಯನ ವೇಳೆ ಹಾಗಲಕಾಯಿ ಸಾರವನ್ನು ಬಳಸಿಕೊಂಡು ವಿವಿಧ ಕ್ಯಾನ್ಸರ್ ಕೋಶಗಳು (ಸ್ತನ, ತಲೆ, ಕುತ್ತಿಗೆ ಮತ್ತು ಪ್ರಾಸ್ಟ್ರೇಟ್) ಮೇಲೆ ಪ್ರಯೋಗ ಮಾಡಲಾಯಿತು. ಈ ಸಾರವು ಕ್ಯಾನ್ಸರ್ ಕೋಶಗಳ ಮೇಲೆ ತುಂಬಾ ಪರಿಣಾಮಕಾರಿ ಎಂದು ಕಂಡುಬಂದಿದೆ. ಯಾಕೆಂದರೆ ಇದು ಕೋಶಗಳು ದ್ವಿಗುಣವಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಹಾಗಲಕಾಯಿ ಬಳಸಿಕೊಂಡು ಕ್ಯಾನ್ಸರ್ ತಡೆಯುವ ಬಗ್ಗೆ ಹೆಚ್ಚು ಅಧ್ಯಯನ ನಡೆಸಲು ಪ್ರೊಪೆಸರ್ ರತ್ನಾ ರೇ ಮತ್ತವರ ತಂಡಕ್ಕೆ ಸಾಧ್ಯವಾಗಿದೆ.

ತಂಡವು ಹಾಗಲಕಾಯಿ ಸಾರವನ್ನು ಬಾಯಿ ಮತ್ತು ನಾಲಗೆ ಕ್ಯಾನ್ಸರ್ ಗೆ ಇಲಿಗಳ ಮೇಲೆ ಪ್ರಯೋಗ ಮಾಡಿತು. ಈ ವೇಳೆ ಕಂಡುಕೊಂಡ ವಿಚಾರವೆಂದರೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಇದು ತಡೆದಿರುವುದು ಮಾತ್ರವಲ್ಲದೆ, ಅದನ್ನು ಕೊಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಇದೇ ಪ್ರಯೋಗವನ್ನು ಮಾನವರ ಮೇಲೆ ಕೂಡ ಮಾಡಲು ಅವರು ತಯಾರಾಗಿದ್ದಾರೆ.

ಸ್ತನದ ಕ್ಯಾನರ್ ಗೂ ಮದ್ದು ಈ ಹಾಗಲ

ಸ್ತನದ ಕ್ಯಾನರ್ ಗೂ ಮದ್ದು ಈ ಹಾಗಲ

ಇನ್ನೊಂದು ಅಧ್ಯಯನದ ಪ್ರಕಾರ ಹಾಲಕಾಯಿಯು ಸ್ತನದ ಕ್ಯಾನರ್ ನ ಕೋಶಗಳನ್ನು ಬೆಳೆಯದಂತೆ ಮತ್ತು ಅದು ಸಾಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಪತ್ತೆ ಮಾಡಲಾಗಿದೆ. ಇದರಿಂದಾಗಿ ಸ್ತನದ ಕ್ಯಾನ್ಸರ್ ಕೋಶಗಳು ತುಂಬಾ ಕಡಿಮೆ ಆಗಿದೆ ಎಂದು ಫಲಿತಾಂಶವು ಹೇಳಿದೆ.

ಅಧ್ಯಯನದ ವೇಳೆ ಸ್ತನದ ಕ್ಯಾನ್ಸರ್ ನ ಎರಡು ವಿಧದ ಕೋಶಗಳಾದ ಎಂಸಿಎಫ್-7 ಮತ್ತು ಎಂಡಿಎ-ಎಂಬಿ231 ನ್ನು ಪರೀಕ್ಷಿಸಲಾಯಿತು. ಹಾಗಲಕಾಯಿಯ ಜ್ಯೂಸ್ ನ್ನು ತೆಗೆದು ಅದನ್ನು ಈ ಕೋಶಗಳ ಮೇಲೆ ಪ್ರಯೋಗ ಮಾಡಲಾಯಿತು. ಇದರ ಲಾಭವೆಂದರೆ 48 ಗಂಟೆಗಳಲ್ಲಿ ಕ್ಯಾನ್ಸರ್ ಕೋಶಗಳು ಶೇ.80ರಷ್ಟು ಸತ್ತು ಹೋಗಿದ್ದವು ಮತ್ತು ಕ್ಯಾನ್ಸರ್ ಕಾರಕವಲ್ಲದ ಕೋಶಗಳು ಹಾಗೆ ಉಳಿದುಕೊಂಡಿದ್ದವು.

ಹಾಗಲಕಾಯಿಯ ಸಾರದಿಂದಾಗಿ ಕ್ಯಾನ್ಸರ್ ಕಾರಕ ಕೋಶಗಳು ಮಾತ್ರ ಸತ್ತಿದ್ದವು. ಆದರೆ ಕ್ಯಾನ್ಸರ್ ಕಾರಕವಲ್ಲದ ಕೋಶಗಳು ಹಾಗೆ ಕೆಲಸ ಮಾಡುತ್ತಿತ್ತು. ಇದು ಪ್ರಯೋಗಾಲಯದಲ್ಲಿ ಮಾಡಿರುವಂತಹ ಪರೀಕ್ಷೆಯಾಗಿದೆ ಮತ್ತು ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿ ಸರಿಯಾದ ಫಲಿತಾಂಶ ಪಡೆಯಬೇಕಾಗಿದೆ.

ಹಾಗಲಕಾಯಿಯ ಆರೋಗ್ಯಕಾರಿ ಜ್ಯೂಸ್

ಹಾಗಲಕಾಯಿಯ ಆರೋಗ್ಯಕಾರಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು

2 ಸಿಪ್ಪೆ ತೆಗೆದಿರುವ ಹಾಗಲಕಾಯಿ

ರುಚಿಗೆ ತಕ್ಕಷ್ಟು ಉಪ್ಪು

ಅರ್ಧ ಲಿಂಬೆ

ವಿಧಾನ

ಹಾಗಲಕಾಯಿಯನ್ನು ಎರಡು ತುಂಡು ಮಾಡಿಕೊಂಡು ಬೀಜ ಹಾಗೂ ಅದರ ಸಿಪ್ಪೆ ತೆಗೆಯಿರಿ. ಇದನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ತಣ್ಣೀರಿನಲ್ಲಿ ನೆನೆಸಿ.

ಇದರ ಬಳಿಕ ಹಾಗಲಕಾಯಿಗೆ ಉಪ್ಪು, ಲಿಂಬೆರಸ ಸೇರಿಸಿಕೊಂಡು ರುಬ್ಬಿಕೊಳ್ಳಿ.

ಕಹಿ ಕಡಿಮೆ ಮಾಡಲು ಜೇನುತುಪ್ಪ ಅಥವಾ ಸೇಬಿನಂತಹ ಸಿಹಿ ಹಣ್ಣು ಬಳಸಬಹುದು.

ಖಾಲಿ ಹೊಟ್ಟೆಯಲ್ಲಿ ಇದನ್ನು ನೀವು ಕುಡಿಯಿರಿ.

English summary

Bitter Melon Can Help Treat Cancer: New Study

Bitter melon, also known as bitter gourd or 'karela' in hindi is among the most common and healthy vegetables cooked in almost every house. A lot of people are aware of the fact that bitter melon is strongly recommended for diabetics, however, new research suggests that the vegetable is also very helpful in fighting against cancer.
X
Desktop Bottom Promotion