For Quick Alerts
ALLOW NOTIFICATIONS  
For Daily Alerts

ಈ 5 ಪ್ರಮುಖ ಪ್ರಯೋಜನ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಮಾತ್ರ ಸಿಗುವುದು

|

ನೀವು ಅಡುಗೆಗೆ ಮಣ್ಣಿನ ಪಾತ್ರೆ ಬಳಸುತ್ತೀರಾ? ಮಣ್ಣಿನ ಪಾತ್ರೆ ಬಳಸುವವರಾದರೆ ಅದರಲ್ಲಿ ಮಾಡುವ ಅಡುಗೆಯ ರುಚಿ ಇತರ ಪಾತ್ರೆಯಲ್ಲಿ ಮಾಡುವ ಅಡುಗೆಗಿಂತ ಹೇಗೆ ಭಿನ್ನವಾಗಿರುತ್ತೆ ಎಂಬುವುದು ಖಂಡಿತ ಗೊತ್ತಿರುತ್ತದೆ.

ಇಲ್ಲದಿದ್ದರೆ ಇನ್ನು ಕೆಲ ರೆಸ್ಟೋರೆಂಟ್‌ಗಳಲ್ಲಿ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಬಿರಿಯಾನಿ ಅಥವಾ ಕರಿ ಎಂದು ಸ್ಪೆಷಲ್‌ ಆಗಿ ಹೈಲೈಟ್‌ ಮಾಡಿರುತ್ತಾರೆ, ಅಂಥ ಹೋಟೆಲ್‌ಗಳಲ್ಲಿ ಆಹಾರದ ರುಚಿ ನೋಡಿರುತ್ತೀರಿ...

ಈ ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆ ರುಚಿಯಲ್ಲಿ ಮಾತ್ರವಲ್ಲ, ಇನ್ನಿತರ ವಿಷಯಗಳಲ್ಲೂ ಬೇರೆ ಪಾತ್ರೆಗಳಲ್ಲಿ ಮಾಡುವ ಅಡುಗೆಗಿಂತ ತುಂಬಾನೇ ವಿಶೇಷವಾಗಿರುತ್ತೆ. ಹೇಗೆ ಎಂದು ನೋಡೋಣ ಬನ್ನಿ:

1. ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಆಹಾರದ ಪೋಷಕಾಂಶಗಳು ಹಾಳಾಗಲ್ಲ

1. ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಆಹಾರದ ಪೋಷಕಾಂಶಗಳು ಹಾಳಾಗಲ್ಲ

ಮಣ್ಣಿನ ಪಾತ್ರೆ ಇತರ ಅಲ್ಯುಮಿನಿಯಂ, ನಾನ್‌ಸ್ಟಿಕ್‌ ಪಾತ್ರೆಗೆ ಹೋಲಿಸಿದರೆ ನಿಧಾನಕ್ಕೆ ಬಿಸಿಯಾಗುತ್ತೆ, ಅಲ್ಲದೆ ಆಹಾರದಲ್ಲಿ ಬಿಸಿ ಒಂದೇ ರೀತಿ ಹರಡುತ್ತದೆ. ಇದರಿಂದಾಗಿ ಇತರ ಪಾತ್ರೆಗಳಲ್ಲಿ ಮಾಡಿದ ಅಡುಗೆಗಿಂತ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಪೋಷಕಾಂಶ ಹೆಚ್ಚಿರುತ್ತದೆ.

 2. ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು

2. ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದಾಗ ಅದರಲ್ಲಿರುವ ನೀರಿನಂಶ, ಎಣ್ಣೆಯಂಶ ಎಲ್ಲಾ ಆಹಾರ ಬೇಯುವಾಗ ಬಳಕೆಯಾಗುತ್ತೆ, ಇತರ ಪಾತ್ರೆಯಲ್ಲಿ ಬಳಸುವ ಎಣ್ಣೆಗಿಂತ ಸ್ವಲ್ಪ ಎಣ್ಣೆ ಹಾಕಿದರೆ ಸಾಕಾಗುತ್ತೆ. ಎಣ್ಣೆ ಸ್ವಲ್ಪ ಬಳಸಿದಾಗ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

3. ಆಹಾರದಲ್ಲಿ PH ಸಮತೋಲನ ಮಾಡುತ್ತದೆ

3. ಆಹಾರದಲ್ಲಿ PH ಸಮತೋಲನ ಮಾಡುತ್ತದೆ

ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ PH ಸಮತೋಲನದಲ್ಲಿರುತ್ತದೆ. ಆದ್ದರಿಂದ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಗೆ ರುಚಿ ಮಾತ್ರವಲ್ಲ ಒಳ್ಳೆಯ ಸುವಾಸನೆ ಕೂಡ ಇರುತ್ತದೆ.

4. ಖನಿಜಾಂಶಗಳಿರುತ್ತದೆ

4. ಖನಿಜಾಂಶಗಳಿರುತ್ತದೆ

ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆಯಲ್ಲಿ ಕಬ್ಬಿಣದಂಶ, ಮೆಗ್ನಿಷ್ಯಿಯಂ ಮುಂತಾದ ಖನಿಜಾಂಶಗಳಿರುತ್ತದೆ. ಆಹಾರದಲ್ಲಿರುವ ಎಲ್ಲಾ ಖನಿಜಾಂಶಗಳು ಹಾಳಾಗದೆ ನಿಮಗೆ ಸಿಗುತ್ತದೆ.

5. ಪರಿಸರಕ್ಕೂ ಒಳ್ಳೆಯದು

5. ಪರಿಸರಕ್ಕೂ ಒಳ್ಳೆಯದು

ಇನ್ನು ಮಣ್ಣಿನ ಪಾತ್ರೆ ಒಡೆದಾಗ ಬಿಸಾಡಿದರೆ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಅಡುಗೆ ಮಾಡಿದರೆ ಆರೋಗ್ಯಕ್ಕೆ ಒಳ್ಲೆಯದು, ಬಿಸಾಡಿದಾಗ ಪರಿಸರಕ್ಕೂ ಒಳ್ಳೆಯದು. ಒಟ್ಟಿನಲ್ಲಿ ಮಣ್ಣಿನ ಪಾತ್ರೆ ಹಾಗೂ ಅದರ ದಿ ಬೆಸ್ಟ್....

English summary

Benefits of Using Clay Pots for Cooking in Kannada

Here are amazing benefits of clay pot for cooking, read on...
Story first published: Friday, July 1, 2022, 19:58 [IST]
X
Desktop Bottom Promotion