For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯ, ಸದೃಢ ಮೈಕಾಯ ಆದರೂ ಹೃದಯಾಘಾತ ಸಂಭವಿಸುವುದು ಹೇಗೆ?

|

ಇತ್ತೀಚೆಗೆ ಹಿಂದಿ ಬಿಗ್‌ಬಾಸ್‌ ಸೀಸನ್‌ 13ನ ವಿಜೇತ ಸಿದ್ಧಾರ್ಥ್‌ ಶುಕ್ಲ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿಯನ್ನು ನಂಬಲು ಅನೇಕರಿಗೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಫಿಟ್ನೆಸ್‌ ಕಡೆ ತುಂಬಾ ಗಮನ ಕೊಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ ಉಂಟಾಗಲು ಹೇಗೆ ಸಾಧ್ಯ ಎಂಬುವುದೇ ಅನೇಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ಪ್ರಾಯದವರಿಗೆ ಹೃದಯಾಘಾತ ಉಂಟಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅವರೇನು ಬೊಜ್ಜಿನ ಮೈ ಹೊಂದಿರುವುದಿಲ್ಲ, ಕೆಲವರಂತೂ ಜಿಮ್‌ಗೆ ಹೋಗಿ ಒಳ್ಳೆಯ ಕಟ್ಟುಮಸ್ತಾದ ದೇಹವನ್ನು ಹೊಂದಿರುತ್ತಾರೆ. ಆರೋಗ್ಯಕರ ಆಹಾರ ಶೈಲಿ ಪಾಲಿಸುತ್ತಿರುತ್ತಾರೆ, ಅಂಥವರೂ ಹೃದಯಾಘಾತದಿಂದ ಬಲಿಯಾಗಿದ್ದಾರೆ. ಹಾಗಾದರೆ ಚಿಕ್ಕ ಪ್ರಾಯದವರಲ್ಲಿ ಈ ರೀತಿ ಹೃದಯಾಘಾತ ಉಂಟಾಗಲು ಕಾರಣವೇನು? ಎಂಬ ಪ್ರಶ್ನೆಗೆ ಇಂಡಿಯಾ ಟುಡೇಯೊಂದಿಗಿನ ಸಮದರ್ಶನದಲ್ಲಿ ಡಾ. ಅಂಬುಜ್ ರಾಯ್‌ ಕೆಲವೊಂದು ಅಂಶಗಳನ್ನು ವಿವರಿಸಿದ್ದಾರೆ, ಅವುಗಳೇನು ಎಂದು ನೋಡೋಣ:

ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಎಲ್ಲಾ ಮಾಡಿದರೂ ಹೃದಯಾಘಾತ ಏಕೆ ಬರುತ್ತಿದೆ?

ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಎಲ್ಲಾ ಮಾಡಿದರೂ ಹೃದಯಾಘಾತ ಏಕೆ ಬರುತ್ತಿದೆ?

ನಾವು ಆರೋಗ್ಯವಾಗಿರಲು ಆರೋಗ್ಯಕರ ಆಹಾರ ಹಾಗೂ ದಿನಾ ಸ್ವಲ್ಪ ವ್ಯಾಯಾಮ ಮಾಡಬೇಕು. ಆದರೆ ಅದರ ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಅನೇಕ ಜನರಿಗೆ ಅತ್ಯಧಿಕ ಮಾನಸಿಕ ಒತ್ತಡದಿಂದಾಗಿ ಹೃದಯಾಘಾತ ಉಂಟಾಗುತ್ತಿದೆ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಹೆಚ್ಚಿನವರು ತುಂಬಾ ಹೊತ್ತು ಕೆಲಸ ಮಾಡುತ್ತಾರೆ, ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದೇ ಇಲ್ಲ ಈ ಕಾರಣದಿಂದಾಗಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ.

ವಂಶವಾಹಿಯಾಗಿಯೂ ಕಂಡು ಬರುತ್ತಿದೆ

ವಂಶವಾಹಿಯಾಗಿಯೂ ಕಂಡು ಬರುತ್ತಿದೆ

ಡಾ. ರಾಯ್ ಅವರು ಈ ಹೃದಯಘಾತ ಸಮಸ್ಯೆ ನಮ್ಮ ದೇಶದಲ್ಲಿ ಹೆಚ್ಚಾಗಿ ವಂಶವಾಹಿಯಾಗಿ ಕಂಡು ಬರುತ್ತಿದೆ, ಏಷ್ಯಾದ ಜನರಿಗೆ ಈ ಹೃದಯ ಸಂಬಂಧಿ ಸಮಸ್ಯೆ ಜೀನ್‌ನಲ್ಲಿಯೇ ಇದೆ, ಪಾಶ್ಚಿಮಾತ್ಯ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಅನೇಕ ಯುವ ಯುವ ಜನರಿಗೆ ಈ ಹೃದಯಾಘಾತ ಸಮಸ್ಯೆ ಉಂಟಾಗುತ್ತಿದೆ.

ಹೃದಯಾಘಾತ ತಡೆಗಟ್ಟುವುದು ಹೇಗೆ?

ಹೃದಯಾಘಾತ ತಡೆಗಟ್ಟುವುದು ಹೇಗೆ?

* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು: ಅತ್ಯಧಿಕ ಮಾನಸಿಕ ಒತ್ತಡದ ಕೆಲಸ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬೇಕು. ಯೋಗ, ಧ್ಯಾನ ಇವೆಲ್ಲಾ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ.

* ಧೂಮಪಾನ ವರ್ಜಿಸಬೇಕು: ಹೃದಯಾಘಾತಕ್ಕೆ ಒತ್ತಡದ ಜೊತೆಗೆ ಮತ್ತೊಂದು ಕಾರಣ ಧೂಮಪಾನ. ಈ ಚಟದಿಂದ ಹೊರಬರಬೇಕು.

* ನಿಯಮಿತ ಆರೋಗ್ಯ ತಪಾಸಣೆ: ಕಾಯಿಲೆ ಬಂದ ಮೇಲೆಯೇ ಆಸ್ಪತ್ರೆಗೆ ಹೋಗುವುದು ಎಂದು ಕೂರಬೇಡಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ. ಈ ರೀತಿ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ.

FAQ's
  • ಹೃದಯಾಘಾತದ ಮುನ್ಸೂಚನೆಗಳಾವುವು?

    ಹೃದಯಾಘಾತದ ಮುನ್ಸೂಚನೆಗಳು ಕೆಲವೊಮ್ಮೆ ಮೊದಲಿಗೆ ಕಂಡು ಬರುತ್ತವೆ. ಆ ಲಕ್ಷಣಗಳು ಕಂಡು ಬಂದಾಗ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರೆ ಹೃದಯಾಘಾತ ಅಪಾಯವನ್ನು ತಪ್ಪಿಸಬಹುದು.
    * ಎದೆಯಲ್ಲಿ ನೋವು: ಎದೆಯ ಮಧ್ಯಭಾಗದಲ್ಲಿ ನೋವು ಕಂಡು ಬರುವುದು. ಈ ನೋವು ಸ್ವಲ್ಪ ಹೊತ್ತು ಕಂಡು ಬರುವುದು. ಈ ರೀತಿಯ ನೋವು ಬಂದು-ಹೋಗುವುದು ಮಾಡ್ತಾ ಇರುತ್ತದೆ. ಎದೆ ಒಂಥರಾ ಹಿಂಡಿದಂಥ ನೋವಾಗುವುದು.
    * ದೇಹದ ಮೇಲ್ಭಾಗದಲ್ಲಿ ನೋವು: ಎದೆಯಲ್ಲಿ ನೋವು ಅಥವಾ ಹಿಡಿದಂಥ ಅನುಭವದ ಜೊತೆಗೆ ಭುಜ, ಬೆನ್ನು, ದವಡೆ, ಹೊಟ್ಟೆ ಈ ಭಾಗದಲ್ಲೂ ನೋವು ಕಂಡು ಬರಬಹುದು.
    * ಉಸಿರಾಟದಲ್ಲಿ ತೊಂದರೆ: ಈ ರೀತಿಯ ಲಕ್ಷಣ ಎದೆ ನೋವು ಇದ್ದಾಗ ಅಥವಾ ಇಲ್ಲದೇ ಇದ್ದಾಗ ಕೂಡ ಬರಬಹುದು.
    ಇತರ ಲಕ್ಷಣಗಳು: ಮೈ ಬೆವರುವುದು, ತಲೆಸುತ್ತು ಅಥವಾ ಮೆಲ್ಲನೆ ತಲೆನೋವು ಈ ರೀತಿಯ ಲಕ್ಷಣಗಳು ಕಂಡು ಬರುವುದು.
    ಈ ರೀತಿಯ ಲಕ್ಷಣಗಳು ಕಂಡರೆ ಆಸ್ಪತ್ರೆಗೆ ದಾಖಲಾಗಿ.

  • ಹೃದಯಾಘಾತಕ್ಕೆ ಪ್ರಾಥಮಿ ಚಿಕಿತ್ಸೆಯೇನು?

    ಹೃದಯಾಘಾತದ ಲಕ್ಷಣಗಳು ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಬದುಕುವ ಸಾಧ್ಯತೆ ಹೆಚ್ಚು. ಆದರೆ ಸಾಮಾನ್ಯ ಕೇಸ್‌ಗಳಲ್ಲಿ ಹೃದಯಾಘಾತದ ಲಕ್ಷಣಗಳು ಕಾಣಿಸಿ 2-3 ಘಂಟೆ ಹಾಗೇ ಇರುತ್ತಾರೆ, ಇದರಿಂದಾಗಿ ವ್ಯಕ್ತಿ ಆಸ್ಪತ್ರೆಗೆ ತಲುಪುವ ಮುನ್ನ ಸಾವನ್ನಪ್ಪಿರುತ್ತಾರೆ.

  • ಹೃದಯಾಘಾತದ ಲಕ್ಷಣಗಳು ಕಂಡು ಬಂದಾಗ ಏನು ಮಾಡಬೇಕು?

    * ಸಮೀಪದ ಆಸ್ಪತ್ರೆಗೆ ಕರೆ ಮಾಡಿ.
    * ನಿಮ್ಮ ಗಾಡಿಯಲ್ಲಿಅಥವಾ ನೀವೇ ಡ್ರೈವ್ ಮಾಡಿ ಹೋಗುವುದಕ್ಕಿಂದ ಆಂಬ್ಯುಲೆನ್ಸ್‌ನಲ್ಲಿ ಹೋದರೆ ಬೇಗನೆ ತಲುಪಬಹುದು.
    * ಆಸ್ಪತ್ರೆಗೆ ವ್ಯಕ್ತಿಯನ್ನು ತಲುಪಿಸುವ ಮುನ್ನವೇ ಕರೆ ಮಾಡಿ, ಆಗ ರೋಗಿಗೆ ಸೂಕ್ತ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿಟ್ಟಿರುತ್ತಾರೆ.
    ಹೃದಯಾಘಾತವಾದಾಗ ವ್ಯಕ್ತಿಗೆ ಎಷ್ಟು ತುರ್ತಾಗಿ ಚಿಕಿತ್ಸೆ ದೊರೆಯುವುದೋ ಅಷ್ಟು ಬದುಕಿಳಿಯುವ ಸಾಧ್ಯತೆ ಹೆಚ್ಚು.

English summary

Reason For Cardiac Arrest At Young Age, What Expert Says

Reason for cardiac arrest at young age, what expert says...
Story first published: Tuesday, September 7, 2021, 10:28 [IST]
X
Desktop Bottom Promotion