For Quick Alerts
ALLOW NOTIFICATIONS  
For Daily Alerts

ಹೃದಯ ಸ್ತಂಭನಕ್ಕೆ ಕಾರಣಗಳು, ಲಕ್ಷಣಗಳು ಹಾಗೂ ಚಿಕಿತ್ಸೆ

|

ಹೃದಯ ಸ್ತಂಭನ ಎಂದರೆ ಹೃದಯ ದೇಹದ ನರಗಳಿಗೆ ರಕ್ತ ಕಳುಹಿಸುವ ತನ್ನ ಕಾರ್ಯವನ್ನು ತಕ್ಷಣ ನಿಲ್ಲಿಸಿಬಿಡುವುದು. ಹೃದಯ ಸ್ತಂಭನದಲ್ಲಿ ಶರೀರದಲ್ಲಿಯ ವಿದ್ಯುತ್ ಅಸಮರ್ಪಕ ಕಾರ್ಯ ನಿರ್ವಹಣೆಯಿಂದಾಗಿ ಹೃದಯ ಬಡಿತ ಏಕಾಏಕಿ ನಿಂತು ಹೋಗುತ್ತದೆ. ಹೃದಯ ಸ್ತಂಭನ ಉಂಟಾದಾಗ ಮಿದುಳು ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ರಕ್ತಪೂರೈಕೆ ಏಕಾಏಕಿ ನಿಂತು ಹೋದಾಗ ಪ್ರಜ್ಞೆ ತಪ್ಪುವುದು, ನಾಡಿಮಿತ ಕ್ಷೀಣವಾಗುವುದು, ಈ ರೀತಿ ಉಂಟಾದಾಗ ತಕ್ಷಣವೇ ತುರ್ತು ಚಿಕಿತ್ಸೆ ದೊರೆತರೆ ಮಾತ್ರ ವ್ಯಕ್ತಿ ಬದುಕಿಳಿಯುವ ಸಾಧ್ಯತೆ ಇದೆ. ಇನ್ನು ಹೃದಯಾಘಾತಕ್ಕೆ ಹೋಲಿಸಿದರೆ ಹೃದಯ ಸ್ತಂಭನದ ಅಪಾಯ ಹೆಚ್ಚು. ಹೃದಯ ಸ್ತಂಭನ ಉಂಟಾದಾಗ ಬ ಹೃದಯಾಘಾತ ಕೂಡ ಸಂಭವಿಸಬಹುದು. ಇವೆಲ್ಲಾ ಕೆಲವೇ ಕ್ಷಣಗಳಲ್ಲಿ ನಡೆದು ಹೋಗುವುದರಿಂದ, ಎಷ್ಟೋ ಜನರಿಗೆ ಹೃದಯ ಸ್ತಂಭನ ಉಂಟಾದಾಗ ತುರ್ತು ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಾರೆ. ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ,ಒಬೆಸಿಟಿ, ಅಧಿಕ ರಕ್ತದೊತ್ತಡಸಮಸ್ಯೆ ಇರುವವರಿಗೆ ಹೃದಯ ಸ್ತಂಭವ ಬರುವ ಅಪಾಯ ಹೆಚ್ಚು.

Heart

ಹೃದಯ ಸ್ತಂಭನಕ್ಕೆ ಕಾರಣವೇನು?

ಹೃದಯ ಸಂಬಂಧಿ ಕಾಯಿಗಳಿದ್ದಾಗ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮುಂತಾದ ಸಮಸ್ಯೆ ಉಂಟಾದಾಗ ಹೃದಯಿಂದ ದೇಹದ ಯಾವುದೇ ಭಾಗಗಳಿಗೆ ರಕ್ತ ಸಂಚಾರವಾಗುವುದಿಲ್ಲ, ಇದರಿಂದ ಹೃದಯ ದುರ್ಬಲವಾಗಿ ಹೃದಯ ಸ್ತಂಭನ ಉಂಟಾಗುವುದು. ಹೃದಯ ಸ್ತಂಭನ ಎಡ ಹೃದಯ ಭಾಗ ಅಥವಾ ಬಲ ಹೃದಯ ಭಾಗದಲ್ಲಿ ಸಂಭವಿಸಬಹುದು. ಕೆಲವೊಮ್ಮೆ ಹೃದಯ ದೇಹಕ್ಕೆ ರಕ್ತಸಂಚಾರ ಮಾಡುವುದನ್ನು ಒಂದು ಕ್ಷಣ ನಿಲ್ಲಿಸಿ ಬಿಟ್ಟು, ನಂತರ ಸರಿ ಹೋಗುತ್ತದೆ, ಆದರೆ ತೀವ್ರ ಹೃದಯ ಸ್ತಂಭನದಲ್ಲಿ ದೇಹದ ಭಾಗಗಳಿಗೆ ರಕ್ತ ಸಂಚಾರ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡುತ್ತದೆ.

ಹೃದಯ ಸ್ತಂಭನ 4 ರೀತಿಯಾಗಿ ಕಂಡು ಬರುತ್ತದೆ

ಹೃದಯ ಸ್ತಂಭನ 4 ರೀತಿಯಾಗಿ ಕಂಡು ಬರುತ್ತದೆ

* ಹೃದಯದ ಎಡ ಭಾಗದಲ್ಲಿ ಹೃದಯ ಸ್ತಂಭನ: ಈ ರೀತಿಯ ಹೃದಯ ಸ್ತಂಭನ ಹೆಚ್ಚಾಗಿ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಅಭಿದಮನಿಗೆ ದೇಹಕ್ಕೆ ರಕ್ತ ಪೂರೈಕೆ ಮಾಡಲು ಅಸಾಧ್ಯವಾಗುವುದು

* ಹೃದಯದ ಬಲಭಾಗದಲ್ಲಿ ಹೃದಯ ಸ್ತಂಭನ: ಈ ಸಂದರ್ಭದಲ್ಲಿ ಹೃದಯದ ಎಡ ಭಾಗದಲ್ಲಿರುವ ಅಭಿದಮನಿಗೆ ಶ್ವಾಸಕೋಶಕ್ಕೆ ರಕ್ತವನ್ನು ಪೂರೈಸಿ, ಆಮ್ಲಜನಕವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.

* ಸಿಸ್ಟೋಲಿಕ್ ಹೃದಯ ಸ್ತಂಭನ: ಆಮ್ಲನಜಕವಿರುವ ರಕ್ತವನ್ನ ದೇಹದ ಇತರ ಭಾಗಗಳಿಗೆ ಪೂರೈಸಲು ವಿಫಲವಾದಾಗ ಈ ರೀತಿಯ ಹೃದಯ ಸ್ತಂಭನ ಉಂಟಾಗುವುದು. ಹೃದಯದಲ್ಲಿ ಊತ ಉಂಟಾದಾಗ, ಹೃದಯ ದುರ್ಬಲವಾದಾಗ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಈ ರೀತಿಯ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

* ಡಯಾಸ್ಟೋಲಿಕ್ ಹೃದಯ ಸ್ತಂಭನ

ಹೃದಯದ ಕಾಯಿಲೆಯಿಂದಾಗಿ ಹೃದಯದ ಸ್ನಾಯುಗಳ ಮೇಲೆ ಅಧಿಕ ಒತ್ತಡ ಬಿದ್ದಾಗ ದೇಹದ ಇತರ ಅಂಗಗಳಿಗೆ ರಕ್ತಪೂರೈಕೆಯಾಗದೆ ಹೃದಯ ಸ್ತಂಭನ ಉಂಟಾಗುವುದು.

ಈ ಕಾಯಿಲೆ ಇರುವವರಲ್ಲಿ ಹೃದಯ ಸ್ತಂಭನ ಉಂಟಾಗುವ ಸಾಧ್ಯತೆ ಇದೆ

ಈ ಕಾಯಿಲೆ ಇರುವವರಲ್ಲಿ ಹೃದಯ ಸ್ತಂಭನ ಉಂಟಾಗುವ ಸಾಧ್ಯತೆ ಇದೆ

* ರಕ್ತಹೀನತೆ

* ಒಬೆಸಿಟಿ

* ಹೈಪರ್‌ ಥೈರಾಯ್ಡ್

* ಹೈಪೋಥೈರಾಯ್ಡ್

* ಹೃದಯದ ನರಗಳಿಗೆ ಸಂಬಂಧಿಸಿದ ಕಾಯಿಲೆ

* ಅತ್ಯಧಿಕ ರಕ್ತದೊತ್ತಡ

* ಮಧುಮೇಹ

* ಹೃದಯಾಘಾತ

* ನಿದ್ರಾಹೀನತೆ

* ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ

*ತಂಬಾಕು ಹಾಗು ಮದ್ಯಪಾನದ ಚಟ ಇರುವವರಲ್ಲಿ

ಹೃದಯ ಸ್ತಂಭನದಿಂದಾಗಿ ಹೃದಯವು ದೇಹದ ಇತರ ಭಾಗಗಳಿಗೆ ಸರಿಯಾದ ರೀತಿಯಲ್ಲಿ ರಕ್ತವನ್ನು ಪೂರೈಕೆ ಮಾಡದಿದ್ದರೆ ಈ ಸಮಸ್ಯೆಗಳು ಕಂಡು ಬರುವುದು

ಕಿಡ್ನಿಗೆ ಹಾನಿಯುಂಟಾಗುವುದು: ಹೃದಯ ಸ್ತಂಭನದಿಂದಾಗಿ ಕಿಡ್ನಿಗೆ ಸರಿಯಾಗಿ ರಕ್ತ ಸಂಚಾರವಾಗದೆ, ಕಿಡ್ನಿಗೆ ಹಾನಿಯುಂಟಾಗುವುದು.

ಉಸಿರಾಟದಲ್ಲಿ ವ್ಯತ್ಯಾಸ: ಹೃದಯ ಸ್ತಂಭನದಿಂದಾಗಿ ಉಸಿರಾಟ ತೀವ್ರವಾಗಬಹುದು, ಇಲ್ಲಾ ನಿಧಾನವಾಗಬಹುದು.

*ಹೃದಯದ ಕಾರ್ಯದಲ್ಲಿ ವ್ಯತ್ಯಾಸ: ಹೃದಯ ಸ್ತಂಭನ ಉಂಟಾದಾಗ ಹೃದಯದ ಕಾರ್ಯಗಳಿಗೆ ಅಡಚಣೆ ಉಂಟಾಗುತ್ತದೆ.

* ಲಿವರ್‌ಗೆ ಹಾನಿಯುಂಟಾಗುವುದು: ಹೃದಯ ಸ್ತಂಭನ ಉಂಟಾದಾಗ ಉಂಟಾಗುವ ದ್ರವವು ಕರುಳಿನ ಮೇಲೆ ಹೆಚ್ಚು ಒತ್ತಡ ಹಾಕುವುದರಿಂದ ಕರುಳಿಗೆ ಹಾನಿಯುಂಟಾಗುತ್ತದೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು

ಎದೆ ಭಾಗದಲ್ಲಿ ನೋವು, ತಲೆಸುತ್ತು. ಉಸಿರಾಟದಲ್ಲಿ ವ್ಯತ್ಯಾಸ ಕಂಡು ಬಂದರೆ ಕ್ಷಣವೂ ತಡಮಾಡದೆ ವೈದ್ಯರನ್ನು ಭೇಟಿಯಾಗಿ. ಹೃದಯ ಸ್ತಂಭನದ ಲಕ್ಷಣಗಳು ಕಾಣಿಸಿದಾಗ ಅಥವಾ ಹೃದಯ ಸ್ತಂಭನ ಉಂಟಾದಾಗ ಕೂಡಲೇ ತುರ್ತು ಚಿಕಿತ್ಸೆ ದೊರೆತರೆ ಬದುಕಿಳಿಯುವ ಸಾಧ್ಯತೆ ಇದೆ.

 ಹೃದಯ ಸಂಭನ ಪತ್ತೆ ಹಚ್ಚುವುದು ಹೇಗೆ?

ಹೃದಯ ಸಂಭನ ಪತ್ತೆ ಹಚ್ಚುವುದು ಹೇಗೆ?

ವೈದ್ಯರನ್ನು ಬೇಟಿ ಮಾಡಿದಾಗ ಅವರು ನಿಮ್ಮ ಮನೆಯಲ್ಲಿನ ಯಾರಿಗಾದರೂ ಹೃದಯ ಸಮಸ್ಯೆ ಇದೆಯೇ, ನಿಮಗೆ ಇದೆಯೇ ಎಂಬ ಮಾಹಿತಿ ಪಡೆಯುತ್ತಾರೆ, ನಂತರ ನಿಮ್ಮನ್ನು ಈ ಕೆಳಗಿನ ಕೆಲವೊಂದು ಪರೀಕ್ಷೆ ಮಾಡಿಸಲು ಸೂಚಿಸುತ್ತಾರೆ.

* ರಕ್ತಪರೀಕ್ಷೆ: ಹೃದಯಕ್ಕೆ ಹಾನಿಗೆ ಏನು ಕಾರಣ ಎಂಬುವುದು ತಿಳಿಯುತ್ತದೆ

* ಎಕ್ಸ್‌ರೇ: ಹೃದಯ ಹಾಗೂ ಶ್ವಾಸಕೋಶದ ಸ್ಥಿತಿ ಹೇಗಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ.

* ಇಸಿಜಿ: ದೇಹದಲ್ಲಿನ ವಿದ್ಯುತ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ತಿಳಿಯಲು ಸಹಾಯಬಮಾಡುತ್ತದೆ.

* ಸಿಟಿ ಸ್ಕ್ಯಾನ್: ನಿಮ್ಮ ಹೃದಯ ಹಾಗೂ ಎದೆಯ ಚಿತ್ರಗಳನ್ನು ತೆಗೆಯಲಾಗುವುದು

* ಎಂ ಆರ್‌ ಐ: ನಿಮ್ಮ ಹೃದಯ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಈ ಚಿತ್ರಗಳ ಮೂಲಕ ತಿಳಿಯುತ್ತದೆ.

* ಎಕೋಕಾರ್ಡಿಯೋಗ್ರಾಮ್: ಹೃದಯದ ಗಾತ್ರದಲ್ಲಿ ಏನಾದರೂ ವ್ಯತ್ಯಾಸವಾಗಿದೆಯೇ ಎಂದು ತಿಳಿಯಲು ಸಹಾಯ ಮಾಡುತ್ತದೆ.

* ಮೈಕೋಕಾರ್ಡಿಯಲ್ ಬಯೋಸ್ಪೈ: ನಿಮ್ಮ ಕೈಯ ನರಗಳ ಮೂಲಕ ಕೆಥೇಟರ್‌ ಬಿಟ್ಟು ಹೃದಯದ ಸ್ನಾಯುಗಳ ಚಿಕ್ಕ ತುಂಡು ಸಂಗ್ರಹಿಸಿ, ಪರೀಕ್ಷೆ ಮಾಡುವ ಒಂದು ಪ್ರಕ್ರಿಯೆ ಇದಾಗಿದೆ.

ಹೃದಯ ಸ್ತಂಭನಕ್ಕೆ ಚಿಕಿತ್ಸೆ

ಹೃದಯ ಸ್ತಂಭನಕ್ಕೆ ಚಿಕಿತ್ಸೆ

ಶಸ್ತ್ರಕ್ರಿಯೆ: ಕೆಲವರಿಗೆ ಬೈಪಾಸ್‌ ಸರ್ಜರಿ ಮಾಡಿ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಚಿಕಿತ್ಸೆಯಲ್ಲಿ ಹಾನಿಗೊಳಗಾದ ಅಪಧಮನಿಯ ಜಾಗಕ್ಕೆ ಆರೋಗ್ಯಕರ ಅಪಧಮನಿ ಜೋಡಿಸಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಲಾಗುವುದು.

ಏಂಜಿಯೋಪ್ಲಾಸ್ಟಿ

ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಯ ಹೃದಯ ಮತ್ತು ಸುತ್ತಲಿನ ರಕ್ತನಾಳಗಳ ಅಂಗರಚನೆ ಮತ್ತು ಕಾರ್ಯವಿಧಾನವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಕ್ಯಾಥಟರೈಸೇಶನ್ ಮತ್ತು ಏಂಜಿಯೋಪ್ಲಾಸ್ಟಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಚಿಕಿತ್ಸೆಯಲ್ಲಿ ಕ್ಯಾಥೆಟರ್ (ಟೊಳ್ಳು ನಳಿಕೆ)ಗಳನ್ನು ಹೃದಯದೊಳಗಿರಿಸುವ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.

ಪೇಸ್‌ಮೇಕರ್ಸ್: ಇದೊಂದು ಚಿಕ್ಕ ಸಾಧನವಾಗಿದ್ದು ಇದನ್ನು ಹೃದಯದಲ್ಲಿ ಅಳವಡಿಸುವುದರಿಂದ ಉಸಿರಾಟ ಪ್ರಕ್ರಿಯೆ ಸರಾಗವಾಗಿ ನಡೆಯುವುದು. ವೇಗವಾಗಿ ಉಸಿರಾಡುತ್ತಿದ್ದರೆ ಉಸಿರಾಟದ ತೀವ್ರತೆ ಕಡಿಮೆ ಮಾಡಬಹುದು, ನಿಧಾನಕ್ಕೆ ಉಸಿರಾಡುತ್ತಿದ್ದರೆ ಉಸಿರಾಟದ ವೇಗವನ್ನು ಹೆಚ್ಚಿಸಲು ಈ ಸಾಧನದಿಂದ ಸಾಧ್ಯವಾಗುವುದು.

ಹೃದಯ ಸ್ತಂಭನ ತಡೆಗಟ್ಟುವುದು ಹೇಗೆ?

ಹೃದಯ ಸ್ತಂಭನ ತಡೆಗಟ್ಟುವುದು ಹೇಗೆ?

* ಧೂಮಪಾನ ಚಟ ಬಿಡಬೇಕು

* ಮದ್ಯಪಾನ ಹೆಚ್ಚು ಮಾಡಬಾರದು

* ದಿನದಲ್ಲಿ 6-8 ಗಂಟೆ ನಿದ್ದೆ ಮಾಡಿ

* ಅಧಿಕ ಕೊಬ್ಬಿನಂಶವಿರುವ ಆಹಾರಗಳಿಂದ ದೂರವಿರಿ

* ಸದೃಢವಾದ ಮೈಕಟ್ಟು ಹೊಂದಿ

* ವ್ಯಾಯಾಮ ಮಾಡಿ

* ಮಾನಸಿಕ ಒತ್ತಡವನ್ನು ಹೊರಹಾಕಿ

English summary

Heart Failure Causes, Types, Symptoms And Treatment

Heart failure is a condition that weakens your heart's ability to pump adequate blood to the body. Here are information about reason for heart failure, symptoms of heart failure and how to treat and prevenet it.
X
Desktop Bottom Promotion