For Quick Alerts
ALLOW NOTIFICATIONS  
For Daily Alerts

ನಿಮಗೆ ಹೃದಯ ಸಮಸ್ಯೆ ಇದೆ ಎಂದು ಎಚ್ಚರಿಕೆ ನೀಡುವ ಸೂಚನೆಗಳಿವು

|

ಮನುಷ್ಯ ಎಷ್ಟೇ ಆರೋಗ್ಯಕರವಾಗಿದ್ದರೂ ಇದ್ದಕ್ಕಿಂದ್ದಂತೆ ಕುಸಿದು ಪ್ರಾಣಬಿಟ್ಟ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಎಲ್ಲರ ಮುಂದೆ ಆರೋಗ್ಯಕರವಾಗಿಯೇ ಕಾಣುವ ವ್ಯಕ್ತಿಯ ಜೀವನಶೈಲಿ, ಅವರ ಹವ್ಯಾಸ ಕ್ರಮ, ಕೆಟ್ಟ ಚಟಗಳಿಂದಾಗಿ ಆಂತರಿಕವಾಗಿ ಕಾಯಿಲೆ ಇದ್ದರೂ ಮುಂದೆ ನೋಡಲು ಆರೋಗ್ಯಕರವಾಗಿಯೇ ಇರುತ್ತಾರೆ.

123

ಅದರಲ್ಲೂ ಈ ಹೃದ್ರೋಗ ಇನ್ನೂ ಗಂಭೀರ ರೂಪವನ್ನು ಪಡೆಯದೇ, ಅಂತಿಮ ಕ್ಷಣದವರೆಗೂ ಅಗೋಚರವಾಗಿಯೇ ಇರುತ್ತದೆ. ಇದರ ಬಗ್ಗೆ ನಮಗೆ ಅರಿವೇ ಇರುವುದಿಲ್ಲ.
ನಾವಿಂದು ಈ ಲೇಖನದಲ್ಲಿ ನಮಗೆ ಹೃದಯ ಸಮಸ್ಯೆ ಇರುವುದರ ಬಗ್ಗೆ ನಮ್ಮ ದೇಹ ನಡುವ ಕೆಲವು ಸೂಚನೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ:
ಉಸಿರಾಟದಲ್ಲಿ ತೊಂದರೆ

ಉಸಿರಾಟದಲ್ಲಿ ತೊಂದರೆ

ಉಸಿರಾಡಲು ತೊಂದರೆ ಇದ್ದರೆ ಇದು ಹೃದಯದ ಅಸಮರ್ಪಕ ಬಡಿತ, ಹೃದಯದ ಸ್ತಂಭನ ಅಥವಾ ವೈಫಲ್ಯವನ್ನು ಪ್ರಕಟಿಸಬಹುದು. ಒಂದು ವೇಳೆ ಉಸಿರಾಟ ಸರಾಗವಾಗಿ ಆಗದೇ ಇದ್ದರೆ, ಅದರಲ್ಲೂ ಮಲಗಿದ್ದರೂ ಸುಲಭ ಉಸಿರಾಟ ಸಾಧ್ಯವಾಗದೇ ಇದ್ದರೆ ತಕ್ಷಣವೇ ವೈದ್ಯರ ನೆರವು ಪಡೆಯಬೇಕು.

ಕೈಹಿಡಿತದ ಬಿಗಿ ಕಡಿಮೆಯಾಗುವುದು

ಕೈಹಿಡಿತದ ಬಿಗಿ ಕಡಿಮೆಯಾಗುವುದು

ಹಸ್ತದಲ್ಲಿ ಹಿಡಿಯುವ ಒತ್ತಡ ಕಡಿಮೆಯಾದರೆ ಇದು ಹೃದಯದ ಕ್ಷಮತೆ ಕುಂದಿರುವುದನ್ನು ಸೂಚಿಸುತ್ತದೆ. ಈ ಬಗ್ಗೆ ನಡೆದ ಸಂಶೋಧನೆಗಳ ಮೂಲಕ ಏನನ್ನಾದರೂ ಹಿಂಡುವ ಸಾಮರ್ಥ್ಯ ಕಡಿಮೆಯಾದರೆ ಅಥವಾ ಲೇಖನಿಯನ್ನು ಒತ್ತಿ ಬರೆಯುವ ಕ್ಷಮತೆ ಕುಂದಿದರೆ ನಿಮಗೆ ಅಗೋಚರವಾದ ಹೃದ್ರೋಗ ಇರಬಹುದು.

ಬೆರಳುಗಳ ಸಂಧುಗಳ ಬಳಿ ಚರ್ಮ ಉಬ್ಬಿರುವುದು

ಬೆರಳುಗಳ ಸಂಧುಗಳ ಬಳಿ ಚರ್ಮ ಉಬ್ಬಿರುವುದು

ಒಂದು ವೇಳೆ ನಿಮ್ಮ ರಕ್ತದಲ್ಲಿ ಅತಿ ಹೆಚ್ಚೇ ಪ್ರಮಾಣದ ಟ್ರೈಗ್ಲಿಸರೈಡುಗಳು ಸಂಗ್ರಹಗೊಂಡಿದ್ದರೆ ಇದು ಕೆಲವು ಸೂಕ್ಷ್ಮಭಾಗಗಳ ಮೂಲಕ ಹೊರಚೆಲ್ಲುತ್ತದೆ. ರಕ್ತದಲ್ಲಿ ಹೆಚ್ಚಾಗಿರುವ ಕೊಬ್ಬು ದೇಹದ ತುದಿಭಾಗಗಳಾದ ಕೈಬೆರಳು ಮತ್ತು ಕಾಲು ಬೆರಳುಗಳ ಸಂಧುಗಳಲ್ಲಿ ನರಗಳ ಚರ್ಮದಲ್ಲಿ ಉಬ್ಬಿದಂತೆ ಕಾಣಿಸಿಕೊಳ್ಳುತ್ತವೆ. ಈ ಉಬ್ಬಿದ ಭಾಗಗಳು ಎಷ್ಟು ಹೆಚ್ಚಿರುತ್ತವೆಯೋ ಅಷ್ಟೂ ಹೃದಯದ ಮೇಲಿನ ಒತ್ತಡ ಹಾಗೂ ಅಪಾಯ ಹೆಚ್ಚು.

ಉಗುರುಗಳ ಅಡಿಯಲ್ಲಿ ಕಪ್ಪು ಕಲೆಗಳು

ಉಗುರುಗಳ ಅಡಿಯಲ್ಲಿ ಕಪ್ಪು ಕಲೆಗಳು

ಪೆಟ್ಟಿನ ಹೊರತಾಗಿಯೂ ಬೆರಳುಗಳ ಉಗುರುಗಳ ಅಡಿಯಲ್ಲಿ ಕಪ್ಪುಕಲೆಗಳಿದ್ದರೆ ಇದು ಈ ಭಾಗದಲ್ಲಿ ರಕ್ತ ಒಸರಿರುವುದನ್ನು ಸೂಚಿಸುತ್ತದೆ. ಇದು ನಿಮ್ಮ ಹೃದಯದ ಒಳಭಾಗ ಅಥವಾ ಕವಾಟಗಳಲ್ಲಿ ಇರುವ ಸೋಂಕಿನ ಸೂಚನೆಯಾಗಿರಬಹುದು. ವಿಶೇಷವಾಗಿ ಮಧುಮೇಹಿಗಳಲ್ಲಿ ಈ ಸೂಚನೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣ ಇರುವ ವ್ಯಕ್ತಿಗಳಲ್ಲಿ ಹೃದ್ರೋಗ ಇರುವ ಸಾಧ್ಯತೆ ಉಳಿದವರಿಗಿಂತ ನಾಲ್ಕು ಪಟ್ಟು ಹೆಚ್ಚಿರುತ್ತದೆ.

ತಲೆ ಸುತ್ತುವಿಕೆ

ತಲೆ ಸುತ್ತುವಿಕೆ

ಕಾರಣವಿಲ್ಲದೇ ಎದುರಾಗುವ ತಲೆ ಸುತ್ತುವಿಕೆ ನಿಮ್ಮ ಹೃದಯದ ತೊಂದರೆಯ ಸೂಚನೆಯಾಗಿರಬಹುದು. ಹೃದಯದ ಬಡಿತ ಏಕಪ್ರಕಾರವಾಗಿಲ್ಲದಿದ್ದರೂ ಇದು ಎದುರಾಗಬಹುದು. ಹೃದಯದ ಸ್ನಾಯುಗಳು ತಮ್ಮ ಶಕ್ತಿ ಕಳೆದುಕೊಳ್ಳುವುದರಿಂದಲೂ ಇದು ಎದುರಾಗಬಹುದು.

ನಿದ್ದೆಯಲ್ಲಿ ಉಸಿರಾಟದ ಸಮಸ್ಯೆ

ನಿದ್ದೆಯಲ್ಲಿ ಉಸಿರಾಟದ ಸಮಸ್ಯೆ

ಗಾಢ ನಿದ್ದೆ ಆವರಿಸಿದ್ದಾಗ ಗೊರಕೆ ತೀವ್ರಗೊಳ್ಳುವುದು ಮತ್ತು ಒಂದು ಕ್ಷಣದಲ್ಲಿ ಉಸಿರಾಟ ನಿಂತಂತಾಗಿ ಎಚ್ಚರಾಗುವ ಸ್ಥಿತಿಗೆ ಸ್ಲೀಪ್ ಆಪ್ನಿಯಾ ಎಂದು ಕರೆಯುತ್ತಾರೆ. ಗೊರಕೆಯ ಸಮಯದಲ್ಲಿ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ದೊರಕದೇ ಇದ್ದರೆ ಹೃದಯಕ್ಕೆ ಇದು ಹೆಚ್ಚಿನ ರಕ್ತ ಪೂರೈಕೆ ಮಾಡಲು ಸೂಚನೆ ನೀಡುತ್ತದೆ. ಪರಿಣಾಮವಾಗಿ ಹೃದಯ ಅಗತ್ಯಕ್ಕೂ ಹೆಚ್ಚಿನ ಒತ್ತಡದಿಂದ ರಕ್ತವನ್ನು ಒತ್ತಿ ಕೊಡಬೇಕಾಗುತ್ತದೆ. ಅಂದರೆ, ಈ ಮೂಲಕ ಹೃದಯದ ಬಡಿತದ ಗತಿ ಹೆಚ್ಚು ಕಡಿಮೆಯಾಗುವುದು, ಹೃದಯದ ಸ್ತಂಭನ ಮತ್ತು ಹೃದಯಾಘಾತ ಎದುರಾಗಬಹುದು.

ಲೈಂಗಿಕ ಅಸಾಮರ್ಥ್ಯತೆ

ಲೈಂಗಿಕ ಅಸಾಮರ್ಥ್ಯತೆ

ಲೈಂಗಿಕ ನಿಶಕ್ತಿಯೂ ನಿಮಗೆ ಹೃದ್ರೋಗ ಇರುವ ಸೂಚನೆಯಾಗಿರಬಹುದು. ಈ ವ್ಯಕ್ತಿಗಳಿಗೆ ಹೃದಯ ಸ್ತಂಭನ ಅಥವಾ ಹೃದಯಾಘಾತ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಲೈಂಗಿಕ ನಿಶಕ್ತಿ ಅಧಿಕ ರಕ್ತದೊತ್ತಡ ಅಥವಾ ನರಗಳು ಅತಿ ಸಪೂರವಾಗಿರುವುದು ಅಥವಾ ಕೊಲೆಸ್ಟ್ರಾಲ್ ಸಂಗ್ರಹ ಅತಿಯಾಗಿರುವ ಸೂಚನೆಯಾಗಿದೆ.

ಒಸಡುಗಳಲ್ಲಿ ರಕ್ತಸ್ರಾವ

ಒಸಡುಗಳಲ್ಲಿ ರಕ್ತಸ್ರಾವ

ಒಸಡುಗಳಲ್ಲಿ ರಕ್ತಸ್ರಾವದ ತೊಂದರೆಗೂ ಹೃದ್ರೋಗಕ್ಕೂ ಸಂಬಂಧ ಇದೆ. ಆದರೆ ಅಧ್ಯಯನಗಳ ಮೂಲಕ ಒಸಡುಗಳಲ್ಲಿ ರಕ್ತಸ್ರಾವ ಮತ್ತು ಊದಿಕೊಂಡಿರುವುದಕ್ಕೂ ಹೃದಯಕ್ಕೂ ಸಂಬಂಧ ಇದೆ ಎಂದು ಸಾಬೀತುಪಡಿಸಲಾಗಿದೆ. ಒಂದು ತರ್ಕದ ಪ್ರಕಾರ, ಒಸಡಿನಲ್ಲಿರುವ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಹೃದಯ ತಲುಪಿ ಅಲ್ಲಿ ಉರಿಯೂತವನ್ನು ಪ್ರಾರಂಭಿಸುತ್ತವೆ. ಒಸಡಿನ ಸೋಂಕಿನಿಂದ ಹಲ್ಲು ಸಡಿಲವಾಗಿ ಬೀಳಬಹುದು. ಜೊತೆಗೇ ಇದು ಹೃದ್ರೋಗ ಇರುವ ಸೂಚನೆಯೂ ಹೌದು.

ಕಾಲಿನ ಕೆಳಭಾಗ ಊದಿಕೊಳ್ಳುವುದು

ಕಾಲಿನ ಕೆಳಭಾಗ ಊದಿಕೊಳ್ಳುವುದು

ಹೆಚ್ಚು ಹೊತ್ತು ನಿಂತಿದ್ದಾಗ ಅಥವಾ ಕುಳಿತಿದ್ದಾಗ ಪಾದಗಳು ಮತ್ತು ಮಣಿಕಟ್ಟಿನ ಭಾಗದಲ್ಲಿ ಊತ ಕಂಡುಬಂದರೆ ಇದು ಹೃದ್ರೋಗದ ತೊಂದರೆಯನ್ನು ಸೂಚಿಸುತ್ತದೆ. ಸರಿಸುಮಾರು ಇದೇ ಸೂಚನೆಯನ್ನು ಗರ್ಭಾವಸ್ಥೆಯಲ್ಲಿಯೂ ಗಮನಿಸಬಹುದು.

ಬಳಲಿಕೆ

ಬಳಲಿಕೆ

ಯಾವುದೇ ದೈಹಿಕ ಚಟುವಟಿಕೆ ಇಲ್ಲದಿದ್ದರೂ ಬಳಲಿಕೆ ಇದ್ದರೆ ಇದಕ್ಕೆ ನಿದ್ದೆಯ ಕೊರತೆ ಎಂದು ಏಕಾಏಕಿ ನಿರ್ಧರಿಸಬಾರದು. ಹೃದಯದ ವೈಫಲ್ಯದ ಕಾರಣದಿಂದ ಅತೀವ ಸುಸ್ತು ಮತ್ತು ಶಕ್ತಿ ಉಡುಗಿದಂತಾಗುತ್ತದೆ. ಏಕೆಂದರೆ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ರಕ್ತವನ್ನು ಈಗ ಹೃದಯಕ್ಕೆ ನೀಡಲು ಸಾಧ್ಯವಾಗದೇ ಹೋಗುವುದು ಇದಕ್ಕೆ ಕಾರಣ.

English summary

Early symptoms of Heart Disease in kannada

Here we are discussing about Heart Disease Clues You must know. Read more.
X
Desktop Bottom Promotion