For Quick Alerts
ALLOW NOTIFICATIONS  
For Daily Alerts

ನಟಿ ಶ್ರೀದೇವಿಗೆ ಆದ ಹೃದಯ ಸ್ತಂಭನ-ಪ್ರತಿಯೊಬ್ಬರೂ ಅರಿತಿರಬೇಕಾದ 10 ಸಂಗತಿಗಳು

|

ಖ್ಯಾತ ಬಾಲಿವುಡ್ ನಟಿ ಹಾಗೂ ಹಿರಿಯ ಬಹುಭಾಷಾ ಕಲಾವಿದೆ ಶ್ರೀದೇವಿಯವರ ಅಕಾಲಿಕ ನಿಧನ ಎಲ್ಲಾ ಜನರಿಗೆ ಆಘಾತಕಾರಿ ಸುದ್ದಿಯಾಗಿ ಎರಗಿದೆ. ಆಕೆಯ ಅಭಿಮಾನಿಗಳಿಗಂತೂ ನಂಬಲಾರದ ಆಘಾತವಾಗಿದೆ. ಮೂವತ್ತರ ಯುವತಿಯರನ್ನೂ ನಾಚಿಸುವ ಸೌಂದರ್ಯ, ಆರೋಗ್ಯ ಹಾಗೂ ಅಪಾರ ಪ್ರತಿಭೆಯನ್ನು ಹೊಂದಿದ್ದ ಕೇವಲ ಐವತ್ತನಾಲ್ಕರ ಹರೆಯದ ಶ್ರೀದೇವಿಯವರು ದುಬೈಯಲ್ಲಿ ತಂಗಿದ್ದ ಹೋಟೆಲ್ ಕೋಣೆಯಲ್ಲಿ ಅಕಸ್ಮಿಕವಾಗಿ ನಿಧನರಾಗಿದ್ದಾರೆ.

ವರದಿಗಳ ಪ್ರಕಾರ ಇವರ ನಿಧನಕ್ಕೆ ಹೃದಯ ಸ್ತಂಭನವೇ ಕಾರಣವಾಗಿದೆ ಹಾಗೂ ಈ ಸುದ್ದಿ ವಿಶ್ವದಾದ್ಯಂತ ಆಘಾತದ ಅಲೆಯನ್ನೇ ಹರಡಿಸಿದೆ. ಹೃದಯ ಸ್ತಂಭನವೇ ಹಾಗೆ, ಯಾವುದೇ ಸುಳಿವನ್ನೂ ನೀಡದೇ ಒಮ್ಮೆಲೇ ಆವರಿಸಿ ರೋಗಿಯನ್ನು ಮಿಸುಕಾಡಲೂ ಅವಕಾಶ ನೀಡದೇ ಮೃತ್ಯುಪಾಶ ಬೀರುತ್ತದೆ.

ಹೃದಯ ಸ್ತಂಭನ ಎಂದರೇನು? ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸಂಘಟನೆಯ ಪ್ರಕಾರ ಓರ್ವ ವ್ಯಕ್ತಿಗೆ ಯಾವುದೇ ಹೃದ್ರೋಗವಿಲ್ಲದಿದ್ದರೂ ಯಾವುದೋ ಕಾರಣದಿಂದ ಒಮ್ಮೆಲೇ ಹೃದಯ ಸ್ಥಗಿತಗೊಳ್ಳುವ ಮೂಲಕ ಸಾವು ಸಂಭವಿಸುವುದನ್ನೇ ಹೃದಯ ಸ್ತಂಭನ ಅಥವಾ ಹಾರ್ಟ್ ಅರೆಸ್ಟ್ ಎಂದು ಕರೆಯಲಾಗುತ್ತದೆ. ಜೀವಮಾನವಿಡೀ ಮಿಡಿದ ಹೃದಯ ಒಮ್ಮೆಲೇ ಮಿಡಿತವನ್ನು ನಿಲ್ಲಿಸುತ್ತದೆ ಹಾಗೂ ರಕ್ತ ಸಂಚಾರ ಹರಿಯುವುದೂ ನಿಲ್ಲುತ್ತದೆ.

ಇವೇ ಹೃದಯ ಸ್ತಂಭನದ ಲಕ್ಷಣಗಳು! ಯಾವುದಕ್ಕೂ ನಿರ್ಲಕ್ಷಿಸದಿರಿ....

ಮೊದಲಿಗೆ ಮೆದುಳಿಗೆ ಹರಿಯುವ ರಕ್ತ ನಿಲ್ಲುತ್ತದೆ, ಕ್ರಮೇಣ ಒಂದೊಂದಾಗಿ ದೇಹದ ಇತರ ಎಲ್ಲಾ ಅಂಗಗಳಿಗೆ ರಕ್ತಪೂರೈಕೆ ನಿಲ್ಲುತ್ತಾ ಹೋಗುತ್ತದೆ. ಹೃದಯದ ಕೆಲಸ ನಿಲ್ಲಲಿಕ್ಕೆ ಇನ್ನೊಂದು ಕಾರಣವೂ ಇದೆ. ಇದೇ ಹೃದಯಾಘಾತ. ಹೃದಯ ಸ್ತಂಭನ ಹಾಗೂ ಹೃದಯಾಘಾತಗಳು ಬೇರೆಬೇರೆಯಾಗಿವೆ. ಹೃದಯ ಸ್ತಂಭನ ಸಂಭವಿಸುವ ಮುನ್ನ ದೇಹ ಕೆಲವಾರು ಸೂಚನೆಗಳನ್ನು ನೀಡುತ್ತದೆ. ಏಕಾ ಏಕಿ ಕುಸಿದು ಬೀಳುವುದು, ಉಸಿರಾಟ ನಿಲ್ಲುವುದು, ಪ್ರಜ್ಞೆ ತಪ್ಪುವುದು, ತಲೆ ತಿರುಗುವುದು, ಕಣ್ಣು ಕತ್ತಲೆ ಮೂಡುವುದು, ನಿಃಶಕ್ತಿ ಆವರಿಸುವುದು ಹಾಗೂ ಉಬ್ಬರವಿಳಿತ ಹೆಚ್ಚುವುದು ಮೊದಲಾದವು ಕಂಡುಬರುತ್ತವೆ. ಬನ್ನಿ, ಹೃದಯ ಸ್ತಂಭನಕ್ಕೆ ಏನೆಲ್ಲಾ ಕಾರಣಗಳಿವೆ ಎಂಬುದನ್ನು ನೋಡೋಣ....

 ಕಾರ್ಡಿಯೋಮಯೋಪಥಿ

ಕಾರ್ಡಿಯೋಮಯೋಪಥಿ

ಈ ಸ್ಥಿತಿಯಲ್ಲಿ ಹೃದಯದ ಸ್ನಾಯುಗಳು ಸಾಮಾನ್ಯಕ್ಕಿಂತಲೂ ಹೆಚ್ಚು ದಪ್ಪನಾಗುತ್ತವೆ ಹಾಗೂ ಅಗತ್ಯವಿರುವಷ್ಟು ಪ್ರಮಾಣಕ್ಕೆ ಸಂಕುಚನಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಸ್ನಾಯುಗಳಿಗೆ ಅಗತ್ಯವಿರುವಷ್ಟು ರಕ್ತ ಸರಬರಾಜು ಆಗುವುದಿಲ್ಲ. ಈ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಾ ಹೃದಯದ ಕ್ಷಮತೆಯನ್ನು ಕ್ಷೀಣಿಸುತ್ತಾ ಹೋಗುತ್ತದೆ. ಹೃದಯ ಪ್ರತಿ ಮಿಡಿತದಿಂದ ಹೊರದಬ್ಬುವ ರಕ್ತದ ಪ್ರಮಾಣ ಯಾವಾಗ ಸಾಮಾನ್ಯ ಕ್ಷಮತೆಯ 30ಕ್ಕೂ ಕಡಿಮೆಯಾಯಿತೋ ಆಗ ಈ ವ್ಯಕ್ತಿಗಳಿಗೆ ಹೃದಯ ಸ್ತಂಭನದ ಸಾಧ್ಯತೆ ಹೆಚ್ಚುತ್ತದೆ.

ಶಿಥಿಲ ಹೃದಯದ ವೈಫಲ್ಯ (Congestive Heart failure)

ಶಿಥಿಲ ಹೃದಯದ ವೈಫಲ್ಯ (Congestive Heart failure)

ನಮ್ಮ ದೇಹದ ಎಲ್ಲಾ ಅಂಗಗಳಿಗೆ ಮತ್ತು ಅಂಗಾಂಶಗಳಿಗೆ ರಕ್ತಪೂರೈಸಲು ಹೃದಯ ಒಂದು ಒತ್ತಡದಲ್ಲಿ ಸದಾ ರಕ್ತವನ್ನು ಹೊರದೂಡಬೇಕಾಗುತ್ತದೆ. ಕೆಲವೊಮ್ಮೆ ಹೃದಯದ ಕ್ಷಮತೆ ಕಡಿಮೆಯಾಗುವ ಮೂಲಕ ಅಂಗಗಳಿಗೆ ಮತ್ತು ಅಂಗಾಂಶಗಳಿಗೆ ಪೂರ್ಣ ಪ್ರಮಾಣದಲ್ಲಿ ರಕ್ತ ಒದಗಿಸಲು ಸಾಧ್ಯವಾಗುವುದಿಲ್ಲ ಹಾಗೂ ಇತರ ಅಂಗಗಳಿಂದ ಶ್ವಾಸಕೋಶಗಳಿಗೆ ತಲುಪುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ ಹಾಗೂ ಪರಿಣಾಮವಾಗಿ ರಕ್ತನಾಳಗಳಲ್ಲಿ ರಕ್ತದ ಕೊರತೆಯಿಂದ ನೀರು ಸೋರಲು ಪ್ರಾರಂಭವಾಗುತ್ತದೆ.

ಪರಿಧಮನಿ ರೋಗ (Coronary Artery Disease)

ಪರಿಧಮನಿ ರೋಗ (Coronary Artery Disease)

ಹೃದಯಕ್ಕೆ ರಕ್ತ ಒದಗಿಸುವ ನಾಳಗಳು ಸಾಮಾನ್ಯವಾಗಿ ಮೃದುವಾಗಿರುತ್ತವೆ. ಆದರೆ ಇದರೊಳಗೆ ಸಿಲುಕಿಕೊಂಡ ಜಿಡ್ದು ಒಳಗಿನ ವ್ಯಾಸವನ್ನು ಕಿರಿದಾಗಿಸುತ್ತದೆ. ಪರಿಣಾಮವಾಗಿ ಇದರೊಳಗಿನಿಂದ ಹರಿಯುವ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ ಹಾಗೂ ಹೃದಯದ ಸ್ನಾಯುಗಳಿಗೆ ತಲುಪಬೇಕಾದಷ್ಟು ರಕ್ತ ತಲುಪುವುದಿಲ್ಲ. ಈ ಸ್ಥಿತಿಯೂ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ಬ್ರುಗಡಾ ಸಿಂಡ್ರೋಮ್ (Brugada Syndrome)

ಬ್ರುಗಡಾ ಸಿಂಡ್ರೋಮ್ (Brugada Syndrome)

ಇದೊಂದು ಅಪರೂಪದ, ಅನುವಂಶಿಕವಾಗಿ ಬರುವಂತಹ ಹೃದಯದ ತೊಂದರೆಯಾಗಿದೆ. ಈ ತೊಂದರೆಯ ಲಕ್ಷಣಗಳೆಂದರೆ ಹೃದಯದ ಒಂದು ಲಯವನ್ನು ಕಾಯ್ದುಕೊಳ್ಳುವ ವಿದ್ಯುತ್ ವ್ಯವಸ್ಥೆಯ ಕುಸಿಯುವಿಕೆ. ಪರಿಣಾಮವಾಗಿ ಹೃದಯದ ಬಡಿತ ಯಾವುದೇ ತಾಳಮೇಳವಿಲ್ಲದೇ ಬಡಿದುಕೊಳ್ಳುವುದು. ಇದಕ್ಕೆ ತಕ್ಷಣವೇ ಚಿಕಿತ್ಸೆ ದೊರಕದೇ ಇದ್ದರೆ ಇದು ಹೃದಯ ಸ್ತಂಭನಕ್ಕೂ ಕಾರಣವಾಗಬಲ್ಲುದು.

ಮರ್ಫಾನ್ ಸಿಂಡ್ರೋಮ್ (Marfan Syndrome)

ಮರ್ಫಾನ್ ಸಿಂಡ್ರೋಮ್ (Marfan Syndrome)

ಇದೂ ಸಹಾ ಇನ್ನೊಂದು ಅನುವಂಶಿಕವಾಗಿ ಬರುವಂತಹ ಹೃದ್ರೋಗವಾಗಿದೆ. ಈ ತೊಂದರೆಯಲ್ಲಿ ದೇಹದ ಹಲವು ಅಂಗಾಂಶಗಳನ್ನು ಬಂಧಿಸುವ ಸ್ನಾಯುಗಳು ( connective tissues) ಬಾಧೆಗೊಳಗಾಗುತ್ತವೆ. ಹೃದಯ, ರಕ್ತನಾಳಗಳು, ಕಣ್ಣುಗಳು ಮತ್ತು ಅಸ್ತಿಪಂಜರ ಮೊದಲಾದ ಪ್ರಮುಖ ಅಂಗಗಳು ಈ ತೊಂದರೆಯ ಮೊದಲ ಗುರಿಯಾಗುತ್ತವೆ. ಈ ತೊಂದರೆಯಲ್ಲಿಯೂ ಎರಡು ವಿಧಗಳಿವೆ ಟೈಪ್ 1 ಹಾಗೂ ಟೈಪ್ 2.

ಜನ್ಮಜಾತ ಹೃದಯದ ಕಾಯಿಲೆ (Congenital Heart Disease)

ಜನ್ಮಜಾತ ಹೃದಯದ ಕಾಯಿಲೆ (Congenital Heart Disease)

ಈ ತೊಂದರೆ ಮಗುವಿನ್ನೂ ತಾಯಿಯ ಗರ್ಭದಲ್ಲಿರುವಾಗಲೇ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಮಗುವಿನ ಬೆಳವಣಿಗೆಯ ಹಂತದಲ್ಲಿ ಏನಾದರೂ ಏರುಪೇರಾದರೆ ಮಗುವಿನ ಹೃದಯದ ಬೆಳವಣಿಗೆ ಅಗತ್ಯವಿರುವಷ್ಟು ಮಟ್ಟಿಗೆ ಆಗುವುದಿಲ್ಲ. ವಿಶೇಷವಾಗಿ ತಾಯಿ ಗರ್ಭವತಿಯಾಗಿದ್ದಾಗ ಮಧುಮೇಹಿಯಾಗಿದ್ದರೆ ಅಥವಾ ಗರ್ಭಾವಸ್ಥೆಯಲ್ಲಿ ಸೇವಿಸಿದ ಔಷಧಿಗಳ ಅಡ್ಡಪರಿಣಾಮಗಳಿಂದ ಮಗುವಿನ ಆರೋಗ್ಯವೂ ಅಪಾಯಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಗಳಲ್ಲಿ ಹೃದಯದ ಕಾಯಿಲೆ ಒಳಗೊಳ್ಳುವುದೂ ಒಂದು.

ಹೃದಯದ ಔಷಧಿಗಳು

ಹೃದಯದ ಔಷಧಿಗಳು

ಹೃದಯದ ಆರೋಗ್ಯವೃದ್ದಿಗಾಗಿ ನೀಡಲಾಗುವ ಕೆಲವು ಔಷಧಿಗಳು ಹೃದಯಬಡಿತದ ಲಯವನ್ನು ಏರುಪೇರಾಗಿಸುವ (arrhythmia)ಸಾಧ್ಯತೆಯನ್ನು ಹೆಚ್ಚಿಸುವ ಗುಣ ಹೊಂದಿದೆ. ಒಂದು ವೇಳೆ ಈ ಲಯಬದ್ದತೆಯ ಏರುಪೇರು ವಿಪರೀತಕ್ಕೇರಿದರೆ ಹೃದಯ ಸ್ತಂಭನಕ್ಕೂ ಕಾರಣವಾಗಬಹುದು. ಈ ಏರುಪೇರನ್ನು ಸರಿಪಡಿಸುವ ಔಷಧಿಗಳು (Anti-arrhythmic medicines) ಹೃದಯದ ಕೆಳಗಿನ ಗವಾಕ್ಷಿಗಳ ಲಯವನ್ನು ಅಪಾಯಕರ ಮಟ್ಟಕ್ಕೇರಿಸಬಹುದು (dangerous ventricular arrhythmias). ಈ ಕ್ರಿಯೆಯಿಂದ ರಕ್ತದಲ್ಲಿ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಮಟ್ಟಗಳು ಅತಿಹೆಚ್ಚೇ ಏರುತ್ತವೆ. ಈ ಪ್ರಮಾಣದ ಏರಿಕೆಯೂ ಮಾರಣಾಂತಿಕವಾಗಿದೆ.

ಹಿಂದಿನ ಹೃದಯಾಘಾತಗಳು

ಹಿಂದಿನ ಹೃದಯಾಘಾತಗಳು

ಒಂದು ವೇಳೆ ವ್ಯಕ್ತಿ ಈಗಾಗಲೇ ಲಘು ಹೃದಯಾಘಾತವನ್ನು ಹಿಂದೆ ಅನುಭವಿಸಿದ್ದಿದ್ದರೆ ಹೃದಯ ಸ್ತಂಭನದ ಸಾಧ್ಯತೆಯೂ ಇವರಿಗೆ ಹೆಚ್ಚಾಗಿರುತ್ತದೆ. ಲಘು ಹೃದಯಾಘಾತವಾದ ನಂತರದ ಆರು ತಿಂಗಳುಗಳು ಇವರಿಗೆ ಅತ್ಯಂತ ಮುಖ್ಯವಾಗಿದ್ದು ಈ ಅವಧಿಯಲ್ಲಿ ಹೃದಯ ಸ್ತಂಭನವಾಗುವ ಸಾಧ್ಯತೆಯೂ ಗರಿಷ್ಟವಾಗಿರುತ್ತದೆ.

ರಕ್ತನಾಳಗಳಲ್ಲಿನ ಅಸಹಜತೆಗಳು

ರಕ್ತನಾಳಗಳಲ್ಲಿನ ಅಸಹಜತೆಗಳು

ಹೃದ್ರೋಗದಿಂದ ಮರಣ ಹೊಂದಿದ ಕೆಲವು ಯುವಕರ ಹೃದಯ ಮತ್ತು ರಕ್ತನಾಳಗಳನ್ನು ಪರಿಶೀಲಿಸಿದಾಗ ಇವರ ಪರಿಧಮನಿಯ ಅಪಧಮನಿ (coronary arteries) ಹಾಗೂ ಮಹಾಪಧಮನಿ (aorta) ಗಳಲ್ಲಿ ಕೆಲವು ಅಸಹಜತೆ ಕಂಡುಬಂದಿದೆ. ತೀವ್ರವಾದ ದೈಹಿಕ ವ್ಯಾಯಾಮ ಅಥವಾ ಕ್ರೀಡಾಚಟುವಟಿಕೆಯಲ್ಲಿ ದೇಹವನ್ನು ಅತಿಯಾಗಿ ದಂಡಿಸಿದಾಗ ಬಿಡುಗಡೆಯಾಗುವ ಅಡ್ರಿನಲಿನ್ ತಕ್ಷಣವೇ ಹಲವಾರು ತೀವ್ರಗತಿಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಅಸಹಜತೆ ಹೊಂದಿರುವ ವ್ಯಕ್ತಿಗಳಿಗೆ ಈ ತೀವ್ರಗತಿಯ ಪರಿಣಾಮಗಳನ್ನು ಎದುರಿಸುವಷ್ಟು ಸಾಮರ್ಥ್ಯವಿಲ್ಲದೇ ತಕ್ಷಣವೇ ಹೃದಯಸ್ತಂಭನ ಎದುರಾಗಬಹುದು.

ಹೃದಯದ ಕವಾಟಗಳ ಕಾಯಿಲೆ (Heart Valve Disease)

ಹೃದಯದ ಕವಾಟಗಳ ಕಾಯಿಲೆ (Heart Valve Disease)

ಒಂದು ವೇಳೆ ವ್ಯಕ್ತಿಯ ಹೃದಯದ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಕವಾಟಗಳು ಘಾಸಿಗೊಂಡಿದ್ದರೆ ಇದು ಹೃದಯದ ಮೂಲಕ ಹರಿಯುವ ರಕ್ತಕ್ಕೆ ಅಡ್ಡಿಯುಂಟುಮಾಡಬಲ್ಲುದು. ಇದರಿಂದ ಹೃದಯದ ಬಡಿತಕ್ಕೂ ಮೊದಲು ಕೆಲವು ಕವಾಟಗಳು ಪೂರ್ಣವಾಗಿ ಮುಚ್ಚಿ ಕೆಲವು ಕವಾಟಗಳು ಪೂರ್ಣವಾಗಿ ತೆರೆಯಲು ಸಾಧ್ಯವಾಗದೇ ಬಡಿತದ ಸಮಯದಲ್ಲಿ ಘಾಸಿಗೊಳಗಾಗಿದ್ದ ಕವಾಟದಿಂದ ಮಲಿನ ರಕ್ತ ಹಿಂದೆ ಸರಿಯಬಲ್ಲುದು. ಪರಿಣಾಮವಾಗಿ ರಕ್ತನಾಳಗಳಲ್ಲಿ ಅಗತ್ಯಪ್ರಮಾಣದ ರಕ್ತ ಸರಬರಾಜು ಆಗುವುದಿಲ್ಲ. ಹಿಂದೆ ಸರಿಯುವ ರಕ್ತದ ಪ್ರಮಾಣ ಹೆಚ್ಚಿದಷ್ಟೂ ಹೃದಯ ಸ್ತಂಭನದ ಸಾಧ್ಯತೆಯೂ ಹೆಚ್ಚು.

English summary

10-causes-of-cardiac-arrest-you-should-know

As per reports, Sridevi died of a sudden cardiac arrest and her death has left the world in a complete state of shock. Since cardiac arrest strikes immediately without any warnings, it is considered as deadly. So what is exactly a cardiac arrest? According to the American Heart Association, cardiac arrest is the sudden loss of heart function and a person may or may not have been diagnosed with a heart disease.
X
Desktop Bottom Promotion