ಇವೇ ಹೃದಯ ಸ್ತಂಭನದ ಲಕ್ಷಣಗಳು! ಯಾವುದಕ್ಕೂ ನಿರ್ಲಕ್ಷಿಸದಿರಿ....

By: manu
Subscribe to Boldsky

ನಮ್ಮ ದೇಹದ ಅತ್ಯಂತ ಅಮೂಲ್ಯವಾದ ಅಂಗವೆಂದರೆ ಹೃದಯ. ಇದು ನಿಂತರೆ ಜೀವವೇ ನಿಲ್ಲುತ್ತದೆ. ಆದ್ದರಿಂದ ಬೇರೆ ಯಾವುದೇ ಅಂಗಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೃದಯಕ್ಕೆ ನೀಡಬೇಕು. ಆದರೆ ಕೆಲವಾರು ಕಾರಣಗಳಿಂದ ರಕ್ತನಾಳಗಳ ಒಳಗೆ ಗಡ್ಡೆ ಕಟ್ಟಿಕೊಂಡು ಹೃದಯದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ. ಇದರಿಂದ ಹೃದಯ ದುರ್ಬಲವಾಗುತ್ತಾ ಹೋಗುತ್ತದೆ.

ಯಾವುದೋ ಘಳಿಗೆಯಲ್ಲಿ ಗಡ್ಡೆಕಟ್ಟಿಕೊಂಡಿದ್ದ ಭಾಗ ಒಳಗಿನಿಂದ ತೆರೆದು ರಕ್ತವನ್ನು ಹೆಪ್ಪುಗಟ್ಟಿಸಿ ರಕ್ತ ಸಾಗದಂತೆ ತಡೆಯುತ್ತದೆ. ಇದೇ ಹೃದಯ ಸ್ತಂಭನ. ಈ ಸ್ಥಿತಿ ಬರುವುದಕ್ಕೂ ಮುನ್ನ ನಮ್ಮ ದೇಹ ಹಲವಾರು ಸೂಚನೆಗಳ ಮೂಲಕ ಗಟ್ಟೆ ಕಟ್ಟಿರುವುವದನ್ನು ಸೂಚಿಸುತ್ತದೆ. ಇವನ್ನು ಎಷ್ಟು ಬೇಗನೇ ಕಂಡುಕೊಳ್ಳುತ್ತೇವೆಯೋ ಅಷ್ಟೂ ಬೇಗನೇ ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.   ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

ನಮ್ಮ ಸೋಮಾರಿತನ ತುಂಬಿದ ಜೀವನಕ್ರಮ, ಹಿಂದಿನ ದಿನಗಳಲ್ಲಿ ಹೃದಯದ ಒತ್ತಡವಿರುವುದು, ಅನಾರೋಗ್ಯಕರ ಆಹಾರ ಕ್ರಮ, ಕ್ರಮಬದ್ಧವಲ್ಲದ ನಿದ್ದೆ ಮೊದಲಾದವು ಹೃದಯದ ಆರೋಗ್ಯವನ್ನು ಬಹುವಾಗಿ ಬಾಧಿಸಬಲ್ಲವು. ಆದರೆ ಸೂಕ್ತ ಬದಲಾವಣೆಗಳೊಂದಿಗೆ ಹೃದಯ ಸ್ತಂಭನದ ಸಾಧ್ಯತೆಯನ್ನು ಸಾಕಷ್ಟು ಮುಂದಕ್ಕೆ ಹಾಕಿ ಆರೋಗ್ಯವನ್ನು ವೃದ್ಧಿಸಬಹುದು.  ಹೃದಯಾಘಾತ ಬರದಂತೆ ತಡೆಯಬೇಕೆ?

ಹೃದಯದಲ್ಲಿ ಅಥವಾ ನರಗಳಲ್ಲಿ ತೊಂದರೆ ಇರುವುದು ಖಚಿತಗೊಂಡರೆ ವೈದ್ಯರಿಗೂ ನಿಮಗೆ ಸೂಕ್ತ ಔಷಧಿಗಳು ಮತ್ತು ವ್ಯಾಯಾಮಗಳನ್ನು ಸೂಚಿಸಲು ನೆರವಾಗುತ್ತದೆ. ನಮ್ಮ ದೇಹ ನೀಡುವ ಸೂಚನೆಗಳನ್ನು ಗಮನಿಸಿ ಈ ವಿವರಗಳನ್ನು ವೈದ್ಯರಿಗೆ ನೀಡುವ ಮೂಲಕ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಬನ್ನಿ, ಈ ಸೂಚನೆಗಳು ಯಾವುವು ಎಂಬುದನ್ನು ನೋಡೋಣ....  

ಉಸಿರು ಕಟ್ಟುವುದು

ಉಸಿರು ಕಟ್ಟುವುದು

ನಮ್ಮ ಶ್ವಾಸಕೋಶಗಳು ಗಾಳಿಯಿಂದ ಆಮ್ಲಜನಕವನ್ನು ಹೀರಿ ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ಒದಗಿಸುತ್ತವೆ. ಅಂತೆಯೇ ಮಲಿನ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ವಿಸರ್ಜಿಸಲು ರವಾನಿಸುತ್ತವೆ. ಒಂದು ವೇಳೆ ರಕ್ತನಾಳಗಳ ಒಳಗೆ ಗಡ್ಡೆ ಕಟ್ಟಿಕೊಂಡಿದ್ದರೆ ಶ್ವಾಸಕೋಶದಿಂದ ಸರಬರಾಜಾಗುವ ರಕ್ತದಲ್ಲಿ ಕಡಿಮೆಯಾಗಿ ಇನ್ನಷ್ಟು ರಕ್ತ ಬೇಕೆಂದು ದೇಹ ಬೇಡಿಕೆ ಇಡುತ್ತದೆ.

ಉಸಿರು ಕಟ್ಟುವುದು

ಉಸಿರು ಕಟ್ಟುವುದು

ಕಟ್ಟಿಕೊಂಡಿದ್ದ ನಾಳದಿಂದ ರಕ್ತ ಮುಂದೆ ಹೋಗದೇ, ಇದರಿಂದ ಹಿಂದೆ ರಕ್ತ ನಿಂತು ಬಿಡುತ್ತದೆ. ಆಗ ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡ ಬೀರಿ ಉಸಿರಾಟ ಕಷ್ಟಕರವಾಗುತ್ತದೆ. ಇದನ್ನೇ ಉಸಿರು ಕಟ್ಟುವುದು ಎನ್ನುತ್ತೇವೆ. ಒಂದು ವೇಳೆ ಕೊಂಚ ನಡೆದರೂ ಅಥವಾ ಕುಳಿತಲ್ಲಿಯೇ ಉಸಿರು ಕಟ್ಟಿದರೆ ಇದು ಹೃದಯ ತೊಂದರೆಯಲ್ಲಿದೆ ಎಂದು ಸೂಚಿಸುವ ಸ್ಪಷ್ಟ ಸೂಚನೆಯಾಗಿದೆ.

ಸತತ ಕೆಮ್ಮು ಮತ್ತು ಉಸಿರಾಟ ಕಷ್ಟಕರವಾಗುವುದು

ಸತತ ಕೆಮ್ಮು ಮತ್ತು ಉಸಿರಾಟ ಕಷ್ಟಕರವಾಗುವುದು

ಒಂದು ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡರೆ ಆಗ ಉಸಿರಾಟ ಕಷ್ಟಕರ ಹಾಗೂ ಸತತವಾಗಿ ಕೆಮ್ಮು ಆವರಿಸುತ್ತದೆ. ಇದು ಸಹಾ ಹೃದಯ ಸ್ತಂಭನದ ಸಾಧ್ಯತೆಯ ಸೂಚನೆಯಾಗಿದೆ.

ಪಾದಗಳು ಊದಿಕೊಳ್ಳುವುದು

ಪಾದಗಳು ಊದಿಕೊಳ್ಳುವುದು

ರಕ್ತಸಂಚಾರ ಬಾಧೆಗೊಂಡರೆ ದೇಹದ ತುದಿಭಾಗಗಳು ಅತಿ ಹೆಚ್ಚು ಪ್ರಭಾವಕ್ಕೊಳಗಾಗುತ್ತವೆ. ಮುಖ್ಯವಾಗಿ ಪಾದಗಳಿಗೆ ರಕ್ತ ಸಿಗದೇ ಇರುವ ಕಾರಣ ಅಲ್ಲಿನ ಜೀವಕೋಶಗಳಲ್ಲಿ ನೀರು ತುಂಬಿಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಪಾದಗಳು ಊದಿಕೊಳ್ಳತೊಡಗುತ್ತವೆ. ನಿಧಾನವಾಗಿ ಇದು ಮೇಲೇರುತ್ತಾ ಕಾಲುಗಳು ಮತ್ತು ಹೊಟ್ಟೆಯವರೆಗೂ ತುಂಬಿಕೊಳ್ಳುವಂತೆ ಮಾಡುತ್ತದೆ. ಸೊಂಟದ ಮೇಲೇರಿದ ಊತ ಪ್ರಾಣಾಂತಿಕವಾಗಿದೆ.

ತೂಕದಲ್ಲಿ ಥಟ್ಟನೇ ಏರಿಕೆ

ತೂಕದಲ್ಲಿ ಥಟ್ಟನೇ ಏರಿಕೆ

ಸದಾ ಒಂದೇ ರೀತಿಯಾಗಿದ್ದ ತೂಕ ಥಟ್ಟನೇ ಒಂದು ಅಥವಾ ಎರಡು ಕೇಜಿಗಳವರೆಗೆ ಹೆಚ್ಚುವುದು ಸಹಾ ಹೃದಯ ವೈಫಲ್ಯದ ಸೂಚನೆಯಾಗಿದೆ. ಏಕೆಂದರೆ ರಕ್ತ ಸರಬರಾಜು ಬಾಧೆಗೊಂಡಿರುವ ಕಾರಣ ಜೀವಕೋಶಗಳು ವಿಸರ್ಜಿಸುವ ನೀರನ್ನು ಕೊಂಡೊಯ್ಯದೇ ಅಲ್ಲಿಯೇ ಉಳಿದುಬಿಡುತ್ತದೆ. ಪ್ರತಿ ಜೀವಕೋಶದ ನೀರನ್ನು ಪರಿಗಣಿಸಿದರೆ ಇಡಿಯ ದೇಹದ ಜೀವಕೋಶಗಳ ಒಟ್ಟಾರೆ ನೀರು ಸುಮಾರು ಒಂದು ಕೇಜಿಗೂ ಮೀರಿರುತ್ತದೆ.

ಹಸಿವಿಲ್ಲದಿರುವುದು

ಹಸಿವಿಲ್ಲದಿರುವುದು

ಯಾವಾಗ ಹೃದಯ ಸ್ತಂಭನದತ್ತ ವಾಲುತ್ತಾ ಹೋಯಿತೋ, ಆಗ ಹಸಿವು ಹಾರಿಹೋಗುತ್ತದೆ. ಹೊಟ್ಟೆ ತುಂಬಿರುವಂತೆ, ಈಗ ಏನನ್ನೂ ತಿನ್ನಲು ಮನಸ್ಸಾಗದೇ ಇರುವ ಅನುಭವವಾಗುತ್ತದೆ.

ಸುಸ್ತು ಮತ್ತು ಬಳಲಿಕೆ ಎದುರಾಗುತ್ತದೆ

ಸುಸ್ತು ಮತ್ತು ಬಳಲಿಕೆ ಎದುರಾಗುತ್ತದೆ

ಯಾವಾಗ ಹೃದಯ ತನ್ನ ಕ್ಷಮತೆಯನ್ನು ಕಡಿಮೆ ಮಾಡಿಕೊಂಡಿತೋ ಆಗ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಪೂರೈಸಲು ಸಾಧ್ಯವಾಗದೇ ಎಲ್ಲಾ ಭಾಗಗಳು ತಮ್ಮ ಪಾಲಿನ ಕರ್ತವ್ಯವನ್ನು ಪೂರೈಸಲು ಹೆಣಗಾಡುತ್ತವೆ. ಇದು ಸುಸ್ತು ಮತ್ತು ಬಳಲಿಕೆಗೆ ಕಾರಣವಾಗುತ್ತದೆ. ಇದು ಸಹಾ ಹೃದಯ ಸ್ತಂಭನದ ಸಾಧ್ಯತೆಯನ್ನು ಸೂಚಿಸುತ್ತದೆ.

ಹೃದಯದ ಬಡಿತ ಏರುವುದು

ಹೃದಯದ ಬಡಿತ ಏರುವುದು

ರಕ್ತನಾಳಗಳಲ್ಲಿ ತಡೆಯುಂಟಾಗಿದ್ದರೆ ರಕ್ತ ಮುಂದೆ ಹರಿದುಹೋಗಲು ಸಾಧ್ಯವಾಗದೇ ಹೆಚ್ಚಿನ ಒತ್ತಡವನ್ನು ಹಿಂದೆ ಹೇರುತ್ತದೆ. ಈ ರಕ್ತವನ್ನು ಮುಂದೆ ಸಾಗಿಸಲು ಹೃದಯ ತೀವ್ರವಾಗಿ ಬಡಿದುಕೊಳ್ಳಲು ಪ್ರಾರಂಭಿಸುತ್ತದೆ. ಇದು ಸಹಾ ಹೃದಯ ಸ್ತಂಭನದ ಸಾಧ್ಯತೆಯ ಸ್ಪಷ್ಟ ಸೂಚನೆಯಾಗಿದೆ.

 
English summary

Warning Signs Of Cardiac Arrest

The heart is one of the vital organs on which rests the life of a person. Once the heart stops beating, the person dies. So how do we keep our hearts healthy? Are there any symptoms which indicate your heart condition is depleting? Today at Boldsky we will be explaining about a few of the warning signs of heart failure. Certain changes in lifestyle, pre-exisiting health conditions like high blood pressure, food habits and sleep pattern affect the functioning of the heart.
Please Wait while comments are loading...
Subscribe Newsletter