ಆಹಾರದಲ್ಲಿ ಹೆಚ್ಚಿನ ಉಪ್ಪಿನಂಶವಿದ್ದರೆ ಹೃದಯಾಘಾತದ ಅಪಾಯ ಹೆಚ್ಚು!!

By Manu
Subscribe to Boldsky

ಉಪ್ಪು ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದು ಎನ್ನುವುದರಲ್ಲಿ ಯಾವುದೇ ಮಾತಿಲ್ಲ. ಉಪ್ಪು ಇಲ್ಲದೆ ಯಾವುದೇ ಖಾದ್ಯ ಮಾಡಿದರೂ ಅದು ಬಾಯಿಗೆ ರುಚಿಸದು. ಉಪ್ಪು ಹಿತಮಿತವಾಗಿ ತಿಂದರೆ ಒಳ್ಳೆಯದು. ಅದೇ ಉಪ್ಪನ್ನು ಅತಿಯಾಗಿ ತಿಂದರೆ ಅದರಿಂದ ತೊಂದರೆಯಾಗಬಹುದು. ಉಪ್ಪು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲದೆ, ಹೃದಯಾಘಾತವಾಗುವ ಅಪಾಯವು ಹೆಚ್ಚಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಪ್ರತಿನಿತ್ಯ 13.7 ಗ್ರಾಂಕ್ಕಿಂತ ಹೆಚ್ಚಿನ ಉಪ್ಪು ಸೇವನೆ ಮಾಡುವವರು ಹೃದಯಾಘಾತದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಎರಡು ಪಟ್ಟು. ಅದೇ 6.8 ಗ್ರಾಂಕ್ಕಿಂತ ಕಡಿಮೆ ಉಪ್ಪು ಸೇವಿಸುವವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಕಡಿಮೆ ಇದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಓ) ಪ್ರಕಾರ ದಿನಕ್ಕೆ ಐದು ಗ್ರಾಂನಷ್ಟು ಉಪ್ಪು ಸೇವಿಸಬಹುದು. ಮಾನಸಿಕವಾಗಿ ಎರಡರಿಂದ ಮೂರು ಗ್ರಾಂನಷ್ಟು ಬೇಕಷ್ಟೇ. 

heart pain

ಹೃದಯಕ್ಕೆ ಉಪ್ಪು ಇಷ್ಟವಿಲ್ಲ. ಅತಿಯಾದ ಉಪ್ಪು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲದೆ ಹೃದಯದ ಕಾಯಿಲೆ ಮತ್ತು ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಫಿನ್ ಲ್ಯಾಂಡ್ ನ ನ್ಯಾಶನಲ್ ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್ ಆ್ಯಂಡ್ ವೆಲ್ತ್ ನ ಪ್ರೊಫೆಸರ್ ಪೆಕ್ಕಾ ಜುಸಿಲಾಹಿಟಿ ತಿಳಿಸಿದರು.

ಫಿನ್ ಲ್ಯಾಂಡ್‌ನಲ್ಲಿ ಸುಮಾರು 12 ವರ್ಷಗಳ ಕಾಲ 25ರಿಂದ 64 ವಯಸ್ಸಿನ ಸುಮಾರು 4,630 ಮಹಿಳೆಯರು ಹಾಗೂ ಪುರುಷರನ್ನು ಈ ಅಧ್ಯಯನಕ್ಕಾಗಿ ಒಳಪಡಿಸಲಾಯಿತು. ಉಪ್ಪಿನ ಸೇವನೆಯನ್ನು ಪರೀಕ್ಷೆ ಮಾಡಲು ಅವರ ಮೂತ್ರ ಪರೀಕ್ಷೆ ಮಾಡಲಾಗುತ್ತಾ ಇತ್ತು. ಅಧ್ಯಯನದ ವೇಳೆ ಸುಮಾರು 121 ಮಂದಿ ಪುರುಷರು ಹಾಗೂ ಮಹಿಳೆಯರು ಮೊದಲ ಸಲ ಹೃದಯಾಘಾತಕ್ಕೆ ಒಳಗಾದರು.

salt

ಅಧ್ಯಯನದಿಂದ ತಿಳಿದುಬಂದ ವಿಚಾರವೆಂದರೆ ಹೆಚ್ಚು ಉಪ್ಪು ಸೇವಿಸುವವರಲ್ಲಿ ಸುಮಾರು 2.1 ಸಲ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಗುಂಪಿನಲ್ಲಿ 10.96-13.7 ಗ್ರಾಂನಷ್ಟು ಉಪ್ಪು ಸೇವನೆ ಮಾಡಿರುವುದು ಎರಡನೇ ಅತೀ ಹೆಚ್ಚು ಸೇವನೆಯಾಗಿತ್ತು. ಇವರಲ್ಲಿ 1.7 ರಷ್ಟು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯಿತ್ತು. ಬಾರ್ಸಿಲೋನಾದಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ ನಲ್ಲಿ ಈ ಅಧ್ಯಯನ ವರದಿಯನ್ನು ಪ್ರಸ್ತುತಪಡಿಸಲಾಯಿತು.

For Quick Alerts
ALLOW NOTIFICATIONS
For Daily Alerts

    English summary

    high-salt-intake-doubles-heart-failure-risk

    It isn't just high blood pressure but high intake of salt also doubles the risk of heart failure. A recent study showed how people who consume more than 13.7 grams of salt daily may be at two times higher risk of heart failure compared to those consuming less than 6.8 grams.According to the World Health Organisation (WHO), the daily intake of salt should be maximum five grams per day and the physiological need is two-three grams per day.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more