Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ
ಹೊಟ್ಟೆಯ ಕ್ಯಾನ್ಸರ್ ಕೂಡ ಅಪಾಯಕಾರಿಯಾದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತವನ್ನು ಹೊಟ್ಟೆನೋವಿನ ಇತರ ಕಾರಣಗಳಿರಬಹುದೆಂದು ತಿಳಿದು ಚಿಕಿತ್ಸೆ ನೀಡುವ ಮೂಲಕ ಅಮೂಲ್ಯವಾದ ಸಮಯವನ್ನು ಕಳೆದು ಉಲ್ಬಣಾವಸ್ಥೆ ತಲುಪಲು ಸಾಧ್ಯವಾಗಬಹುದು
ಕ್ಯಾನ್ಸರ್ ಎಂದರೆ ಮರಣದ ಮುನ್ನಾರೂಪವೆಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಕ್ಯಾನ್ಸರ್ ಹಂತ ಹಂತಗಳಲ್ಲಿ ಆವರಿಸುತ್ತಾ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಪ್ರಾರಂಭಿಕ ಹಂತದಲ್ಲಿ ಈ ರೋಗ ಇರುವುದು ಖಚಿತವಾದರೆ ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್
ಹೊಟ್ಟೆಯ ಕ್ಯಾನ್ಸರ್ ಸಹಾ ಒಂದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತವನ್ನು ಹೊಟ್ಟೆನೋವಿನ ಇತರ ಕಾರಣಗಳಿರಬಹುದೆಂದು ತಿಳಿದು ಚಿಕಿತ್ಸೆ ನೀಡುವ ಮೂಲಕ ಅಮೂಲ್ಯವಾದ ಸಮಯವನ್ನು ಕಳೆದು ಉಲ್ಬಣಾವಸ್ಥೆ ತಲುಪಲು ಸಾಧ್ಯವಾಗಬಹುದು. ಹೊಟ್ಟೆಯ ಕ್ಯಾನ್ಸರ್ ಮೊದಲು ಹೊಟ್ಟೆಯ ಒಳಪದರದ ಒಳಗೆ ಪ್ರಾರಂಭಗೊಂಡು ಗಡ್ಡೆಯ ರೂಪ ಪಡೆದು ನಂತರ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ
ಹೊಟ್ಟೆಯ ಒಳಪದರ ಅತ್ಯಂತ ಆಮ್ಲೀಯವಾಗಿದ್ದು ಈ ಪದರವೂ ಸತತವಾಗಿ ಹೊಸದಾಗಿ ರೂಪುಗೊಳ್ಳುತ್ತಾ ಇರುತ್ತದೆ. ಈ ಪದರದ ಜೀವಕೋಶಗಳು ಈ ಆಮ್ಲೀಯ ವಾತಾವರಣದಲ್ಲಿಯೇ ಅನಿಯಂತ್ರಿತವಾಗಿ ವೃದ್ಧಿಗೊಂಡು ಕ್ಯಾನ್ಸರ್‌ಗೆ ತಿರುಗಬೇಕಾದರೆ ಯಾವ ಕಾರಣಗಳಿವೆ ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ.....

ಮಾಹಿತಿ #1
ಒಂದು ವೇಳೆ ನೀವು ಅತಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಯಾಗಿದ್ದರೆ ನಿಮ್ಮ ಹೊಟ್ಟೆಯ ಒಳಗೆ ಉರಿಯೂತವಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಉರಿ ಆಗಾಗ ಬರುತ್ತಿದ್ದರೆ ಇದಕ್ಕೆ ಆಮ್ಲೀಯತೆಯ ಹೊರತಾಗಿ ಕ್ಯಾನ್ಸರ್‌ನ ಸಾಧ್ಯತೆಯೂ ಇಲ್ಲದಿಲ್ಲ. ತಕ್ಷಣ ತಪಾಸಣೆಗೊಳಪಡುವುದು ಅವಶ್ಯಕ.

ಮಾಹಿತಿ #2
ಒಂದು ವೇಳೆ ಕುಟುಂಬದ ಹಿರಿಯರಲ್ಲಿಯೂ ಈ ಕ್ಯಾನ್ಸರ್ ಇದ್ದ ಹಿನ್ನಲೆ ಇದ್ದರೆ ಈ ಕಾಯಿಲೆ ಕುಟುಂಬದ ಸದಸ್ಯರಿಗೆ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಕಾಯಿಲೆ ಅನುವಂಶಿಯವಾಗಿ ಬರುವ ಸಾಧ್ಯತೆ ಹೆಚ್ಚು.

ಮಾಹಿತಿ #3
ಕೆಲವು ಬಗೆಯ ಬ್ಯಾಕ್ಟೀರಿಯಾಗಳು (ಉದಾಹರಣೆಗೆ H. Pylori) ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಅಸಮರ್ಪಕ ಆಹಾರಕ್ರಮ, ಸ್ಥೂಲಕಾಯ ಮೊದಲಾದವೂ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು.

ಮಾಹಿತಿ #4
ಹೊಟ್ಟೆಯ ಕ್ಯಾನ್ಸರ್‌ನ ಪ್ರಾರಂಭಿಕ ಹಂತದಲ್ಲಿ ಆಹಾರವನ್ನು ನುಂಗುವಾಗ ಕಷ್ಟವಾಗುವುದು ಮತ್ತು ಹೊಟ್ಟೆಯಲ್ಲಿ ತೀಕ್ಷ್ಣವಾದ ನೋವಾಗುವುದು ಕಂಡುಬರುತ್ತದೆ.

ಮಾಹಿತಿ #5
ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ, ತೂಕದಲ್ಲಿ ಭಾರೀ ಇಳಿಕೆಯಾಗುವುದು ಅತಿ ಕಡಿಮೆ ಊಟ ಮಾಡಿದರೂ ತುಂಬಾ ತಿಂದ ಬಳಿಕ ಆಗುವಂತೆ ಹೊಟ್ಟೆ ಉಬ್ಬರಿಸುವುದು ಸಹಾ ಕ್ಯಾನ್ಸರ್‌ನ ಪ್ರಾರಂಭಿಕ ಹಂತದ ಲಕ್ಷಣಗಳಾಗಿವೆ.

ಮಾಹಿತಿ #6
ಕೆಲವು ಸಂದರ್ಭಗಳಲ್ಲಿ ಕೆಲವು ದಿನಗಳವರೆಗೆ ಸತತವಾಗಿ ವಾಂತಿಯೂ ಆಗಬಹುದು.

ಮಾಹಿತಿ #7
ಒಂದು ವೇಳೆ ವಾಂತಿ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ಇದು ನಿಮ್ಮ ಜೀರ್ಣವ್ಯವಸ್ಥೆಯಲ್ಲಿ ಏನೋ ತೊಂದರೆ ಇರುವುದನ್ನು ಸೂಚಿಸುತ್ತದೆ. ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆಗೊಳಪಡುವುದು ಅಗತ್ಯವಾಗಿದೆ.



Click it and Unblock the Notifications