ಆಹಾರಕ್ರಮ ಹೀಗಿದ್ದರೆ, 'ಶ್ವಾಸಕೋಶದ ಕ್ಯಾನ್ಸರ್‌' ದೂರ-ಬಲುದೂರ!

By: Arshad
Subscribe to Boldsky

ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಧೂಮಪಾನ. ಈ ದುರ್ವ್ಯಸನಕ್ಕೆ ಗುಡ್ ಬೈ ಹೇಳುವುದು ಈ ಕ್ಯಾನ್ಸರ್ ತಡೆಗಟ್ಟಲು ಕೈಗೊಳ್ಳಬೇಕಾದ ದೊಡ್ಡ ಹೆಜ್ಜೆ. ಸಾಮಾನ್ಯವಾಗಿ ಧೂಮಪಾನಿಗಳು ಈ ಹಿತವಚನವನ್ನು ಕಡೆಗಣಿಸುವುದು ಮಾತ್ರವಲ್ಲ, ಹೀಗೆ ಹೇಳಿದವರ ಮುಖಕ್ಕೇ ಹೊಗೆ ಬಿಟ್ಟು ಏನೋ ಸಾಧಿಸಿದ ಮಾನಸಿಕ ತೃಪ್ತಿಯಿಂದ ಬೀಗುವುದುಂಟು. ಆದರೆ ವಾಸ್ತವದಲ್ಲಿ ಹೀಗೆ ಬೀಗಿದವರಲ್ಲಿ 85% ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿರುವುದು ನಿಚ್ಚಳವಾದ ಸತ್ಯವಾಗಿದ್ದು ಇದನ್ನು ವೈದ್ಯಕೀಯ ಅಂಕಿ ಅಂಶಗಳೇ ದೃಢಪಡಿಸಿವೆ. ಶ್ವಾಸಕೋಶದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು

ಕ್ಯಾನ್ಸರ್ ಬಂದ ಬಳಿಕ ಈ ಹಮ್ಮು ಬಿಗುಮಾನಗಳು ಥಟ್ಟನೇ ನೆಲಮಟ್ಟಕ್ಕಿಳಿದು 'ಅಯ್ಯೋ ಡಾಕ್ಟ್ರೇ, ಹೇಗಾದರೂ ಮಾಡಿ ನನ್ನನ್ನು ಉಳಿಸಿ, ನನಗೆ ಚಿಕ್ಕ ಮಕ್ಕಳಿದ್ದಾರೆ' ಎಂದೆಲ್ಲಾ ಗೋಗರೆಯುವುದನ್ನೂ ಈ 85% ಜನರಲ್ಲಿ ಕಾಣಬಹುದು. ಬರೇ ಧೂಮಪಾನಿಗಳು ಮಾತ್ರವಲ್ಲ. ಗುಟ್ಕಾ, ತಂಬಾಕು ಸೇವಿಸುವವರಲ್ಲಿಯೂ ಕ್ಯಾನ್ಸರ್ ತಗಲುವ ಸಾಧ್ಯತೆ ಹೆಚ್ಚೇ ಆಗಿದೆ.  ಧೂಮಪಾನ ಬಿಟ್ಟರೆ-ಶ್ವಾಸಕೋಶದ ಕ್ಯಾನ್ಸರ್ ಬಲು ದೂರ!

ಆದರೆ ಧೂಮಪಾನಿಗಳು ಎಷ್ಟೋ ವರ್ಷಗಳ ಕಾಲ ಯಾವುದೇ ಹೆದರಿಕೆಯಿಲ್ಲದೇ, ತನ್ನ ರೋಗ ನಿರೋಧಕ ಸಾಮರ್ಥ್ಯ ಕ್ಯಾನ್ಸರ್ ಅನ್ನು ಕಷ್ಟಪಟ್ಟು ತಡೆಗಟ್ಟಿರುವುದನ್ನು ತಮ್ಮ ಸಾಮರ್ಥ್ಯವೆಂದೇ ತಿಳಿದು ರಾಜಾರೋಶವಾಗಿ ಇನ್ನಷ್ಟು ಹೆಚ್ಚಿಸುತ್ತಾ ಒಂದು ದಿನ ಥಟ್ಟನೇ ಈ ರೋಗ ನಿರೋಧಕ ವ್ಯವಸ್ಥೆ ಕುಸಿದು ಕ್ಯಾನ್ಸರ್ ಸಹಿತ ಇನ್ನೂ ಹಲವಾರು ರೋಗಗಳು ಒಮ್ಮೆಲೇ ರೋಗಿಯನ್ನು ಆವರಿಸಿಬಿಡುತ್ತವೆ. ಈ ಧೂಮಪಾನಿಗಳಿಗೆ ನಿಜವಾದ ಪಶ್ಚಾತ್ತಾಪವಾಗುವುದು ಆಗಲೇ!

ಒಂದು ವೇಳೆ ನೀವು ಧೂಮಪಾನಿಯಾಗಿದ್ದು ನೀವೂ ನಿಮ್ಮ 'ಸಾಮರ್ಥ್ಯ' ದ ಮೇಲೆ ಅಪಾರವಾದ ಹೆಮ್ಮೆ ಹೊಂದಿದ್ದು ಹಿತವಚನ ಹೇಳುವ ನಿಮ್ಮ ಹಿರಿಯರು ಮತ್ತು ಮಕ್ಕಳ ಮುಖದ ಮೇಲೇ ಹೊಗೆಯುಗುಳುವವರಾಗಿದ್ದರೆ ಈ ಲೇಖನ ನಿಮಗಾಗಿ. ಹಿರಿಯರ ಹಿತವಚನ ಎಂದಿಗೂ ತಪ್ಪಾಗದು. ಧೂಮಪಾನಿಗಳ ಶ್ವಾಸಕೋಶದ ಆರೋಗ್ಯಕ್ಕೆ ಪವರ್‌ಫುಲ್ ರೆಸಿಪಿ

ಆದ್ದರಿಂದ ಕೊಂಚ ಮನಸ್ಸು ಬದಲಿಸಿ ಧೂಮಪಾನ ತ್ಯಜಿಸುವ ಮೂಲಕ ಹಾಗೂ ಈಗಾಗಲೇ ಹಿಂದಿನ ಧೂಮಪಾನದ ಮೂಲಕ ಹಾಳಾಗಿ ಕ್ಯಾನ್ಸರ್ ಸಾಧ್ಯತೆಯನ್ನು ಹೆಚ್ಚಿಸಿರುವ ಅಂಶಗಳನ್ನು ಕಡಿಮೆ ಮಾಡಲು ಕೆಲವು ಆಹಾರಗಳು ನೆರವಾಗುತ್ತವೆ. ಇವು ಯಾವುವು ಎಂದು ನೋಡೋಣ...   

ಪಪ್ಪಾಯಿ

ಪಪ್ಪಾಯಿ

ಧೂಮಪಾನದ ಕಾರಣ ಕೊಂಚ ಶಿಥಿಲವಾಗಿರುವ ಶ್ವಾಸಕೋಶ ಮತ್ತು ಇತರ ಶ್ವಾಸಸಂಬಂಧಿ ಅಂಗಗಳ ಮರುಪೂರಣೆಗಾಗಿ ಕ್ಯಾರೋಟೀನುಗಳ ಅವಶ್ಯಕತೆ ಇದೆ. ಇವು ಪೊಪ್ಪಾಯಿ, ಕಿತ್ತಳೆ, ಪೀಚ್ ಹಣ್ಣುಗಳು, ಕ್ಯಾರೆಟ್ ಹಾಗೂ bell peppers ಎಂಬ ಹಣ್ಣುಗಳಲ್ಲಿವೆ. ಇವುಗಳನ್ನು ಹೆಚ್ಚಾಗಿ ಸೇವಿಸಬೇಕು.

ದಳಗಳುಳ್ಳ ತರಕಾರಿಗಳು (Cruciferous Vegetables)

ದಳಗಳುಳ್ಳ ತರಕಾರಿಗಳು (Cruciferous Vegetables)

ಹೂಕೋಸು, ಎಲೆಕೋಸು, ಬ್ರೋಕೋಲಿ ಮೊದಲಾದವುಗಳಲ್ಲಿ sulforaphane ಎಂಬ ಪೋಷಕಾಂಶವಿದ್ದು ಕ್ಯಾನ್ಸರ್ ತಡೆಗಟ್ಟಲು ಉತ್ತಮವಾಗಿರುವ ಕಾರಣ ಈ ತರಕಾಗಿಗಳನ್ನೂ ಸಾಕಷ್ಟು ಸೇವಿಸಬೇಕು.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಸಾಲ್ಮನ್ ಬಂಗಡೆ, ಬೂತಾಯಿ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿವೆ. ವಿಶೇಷವಾಗಿ ಇವು ಮಾಂಸಾಹಾರಿಗಳು, ಧೂಮಪಾನಿಗಳೂ ಆಗಿರುವ ವ್ಯಕ್ತಿಗಳಿಗೆ ಹೆಚ್ಚು ಅಗತ್ಯವಾಗಿದೆ. ಆದ್ದರಿಂದ ಧೂಮಪಾನ ತ್ಯಜಿಸಿ ಮಾಂಸಾಹಾರದ ಬದಲಿಗೆ ಈ ಮೀನುಗಳನ್ನು ಸೇವಿಸುವುದು ಉತ್ತಮ.

ಪಾಲಕ್ ಮತ್ತು ಬಸಲೆ

ಪಾಲಕ್ ಮತ್ತು ಬಸಲೆ

ಧೂಮಪಾನದ ಪರಿಣಾಮವನ್ನು ಹಿಮ್ಮೆಟ್ಟಿಸಲು ಫೋಲೇಟ್ ನ ಅಗತ್ಯವಿದೆ. ಇವು ಕೇಲ್ ಎಲೆಗಳು, ಪಾಲಕ್, ಬಸಲೆ ಸೊಪ್ಪು ಮತ್ತು ಬೀನ್ಸ್ ಬಳಲ್ಲಿ ಹೇರಳವಾಗಿವೆ. ಸಂಶೋಧನೆಗಳ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಈ ಫೋಲೇಟ್ ಉತ್ತಮವಾಗಿದ್ದು ಧೂಮಪಾನ ಮತ್ತು ಮದ್ಯಪಾನದಿಂದ ಈ ಅಂಶಗಳು ದೇಹದಿಂದ ವಿಸರ್ಜಿಸಲ್ಪಡುತ್ತವೆ.

ಕೆಂಪು ಮಾಸಕ್ಕೆ ಗುಡ್ ಬೈ ಹೇಳಿ

ಕೆಂಪು ಮಾಸಕ್ಕೆ ಗುಡ್ ಬೈ ಹೇಳಿ

ಧೂಮಪಾನಕ್ಕೆ ಹೇಗೆ ಗುಡ್ ಬೈ ಹೇಳುತ್ತೀರೋ ಹಾಗೇ ಕೆಂಪು ಮಾಸಕ್ಕೂ ಗುಡ್ ಬೈ ಹೇಳುವ ಮೂಲಕ ಶ್ವಾಸಕೋಶದ ಕ್ಯಾನ್ಸರ್ ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

English summary

Foods to Reduce the Risk of Lung Cancer

Quit smoking! Only then, it is possible to minimise the risk of lung cancer! Statistics say that more than 85% of the deaths caused by lung cancer are due to smoking. Apart from staying away from tobacco, is there anything else to do in order to miniseries the chances of falling prey to lung cancer? Yes. Up your intake of veggies and fruits. They have many anti-cancer compounds. Read on to know about a few tips to minimise lung cancer chances.
Subscribe Newsletter