Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
ಧೂಮಪಾನಿಗಳ ಶ್ವಾಸಕೋಶದ ಆರೋಗ್ಯಕ್ಕೆ ಪವರ್‌ಫುಲ್ ರೆಸಿಪಿ
ಹೊಗೆ ಎನ್ನುವ ರಾಕ್ಷಸನನ್ನು ತನ್ನೊಳಗೆ ಬಿಟ್ಟುಕೊಳ್ಳುವುದೇ ಧೂಮಪಾನ ಎನ್ನಬಹುದೇನೋ. ರಾಕ್ಷಸ ಹೊಗೆ ದೇಹದೊಳಗೆ ಹೋಗಿ ಹಲವಾರು ರೀತಿಯ ಸಮಸ್ಯೆಗಳನ್ನು ಉಂಟುಮಾಡುವುದು. ಸಿಗರೇಟ್‌ನ ಬಾಕ್ಸ್ ಮತ್ತು ಬೀಡಿಯ ಪ್ಯಾಕೆಟ್ ನಲ್ಲಿ ಧೂಮಪಾನದಿಂದ ಯಾವ ರೀತಿ ಹಾನಿಯುಂಟಾಗುತ್ತದೆ ಎಂದು ಚಿತ್ರ ಸಹಿತ ಅಚ್ಚು ಹಾಕಿದ್ದರೂ ಅದನ್ನು ಬಿಡಲು ಯಾರೂ ತಯಾರಿಲ್ಲ.

ಧೂಮಪಾನವು ನಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ತಿಳಿಯುವ ಹೊತ್ತಿಗೆ ತುಂಬಾ ವಿಳಂಬವಾಗಿರುತ್ತದೆ. ಧೂಮಪಾನವು ಕೆಲವೊಂದು ವ್ಯಕ್ತಿಗಳಲ್ಲಿ ಎಷ್ಟರ ಮಟ್ಟಿಗೆ ವ್ಯಾಪಿಸಿದೆಯೆಂದರೆ ಅದನ್ನು ಬಿಟ್ಟಿರಲು ಅವರಿಂದ ಸಾಧ್ಯವೇ ಆಗುವುದಿಲ್ಲ. ನಿತ್ರಾಣ, ಕ್ಷಯ, ಕಫ ಮತ್ತು ಶ್ವಾಸಕೋಶದ ಕ್ಯಾನ್ಸರ್ ಧೂಮಪಾನದಿಂದ ಆಗುವಂತಹ ಅಡ್ಡಪರಿಣಾಮಗಳು. ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವುದು ಮಾತ್ರವಲ್ಲದೆ ಮಾನಸಿಕವಾಗಿಯೂ ಸಿಗರೇಟ್ ವ್ಯಕ್ತಿಯ ಮೇಲೆ ಹಿಡಿತವನ್ನು ಸಾಧಿಸಬಹುದು. ನಿಮ್ಮಿಂದ ಧೂಮಪಾನ ಬಿಡಿಸುವ ಪವರ್ ಈ ಆಹಾರಗಳಲ್ಲಿದೆ!
ಧೂಮಪಾನದಿಂದಾಗಿ ವ್ಯಕ್ತಿಯು ದೈನಂದಿನ ದಿನಚರಿಗಳಾದ ಜಾಗಿಂಗ್ ಮತ್ತು ವ್ಯಾಯಾಮವನ್ನು ಮರೆತು ಬಿಡಬಹುದು. ಇದರಿಂದಾಗಿ ಶ್ವಾಸಕೋಶದ ಸಮಸ್ಯೆ ಗಾಢವಾಗಿ ಕಾಣಿಸಿಕೊಳ್ಳಬಹುದು. ಧೂಮಪಾನ ಮಾಡುವ ವ್ಯಕ್ತಿಯ ಶ್ವಾಸಕೋಶದಲ್ಲಿ ಹೊಗೆ ಮತ್ತು ಧೂಳು ತುಂಬಿಕೊಳ್ಳುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಬಳಿಕ ಇದು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು.
ಧೂಮಪಾನವನ್ನು ತ್ಯಜಿಸಿ ಶ್ವಾಸಕೋಶದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಧೂಮಪಾನಿ ಮತ್ತು ವ್ಯಕ್ತಿಯ ಕರ್ತವ್ಯವಾಗಿದೆ.
ಶ್ವಾಸಕೋಶದಲ್ಲಿ ತುಂಬಿರುವ ವಿಷವನ್ನು ಹೊರಗೆ ತೆಗೆಯಲು ಶ್ವಾಸಕೋಶದ ವ್ಯಾಯಾಮ, ಯೋಗ ಇತ್ಯಾದಿ ಮಾಡುತ್ತಿರಬೇಕು. ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಶ್ವಾಸಕೋಶದ ವಿಷವನ್ನು ತೆಗೆದುಹಾಕಬಹುದು ಎನ್ನುವುದು ನಿಮಗೆ ತಿಳಿದಿದೆಯಾ? ಇದರ ಬಗ್ಗೆ ನೀವು ತಿಳಿದುಕೊಳ್ಳಿ. ಧೂಮಪಾನ ತ್ಯಜಿಸುವಂತೆ ಮಾಡುವ ಗಿಡಮೂಲಿಕೆಗಳು
ಶ್ವಾಸಕೋಶದ ವಿಷವನ್ನು ತೆಗೆದುಹಾಕಲು ಬೇಕಾಗುವ ಸಾಮಗ್ರಿಗಳು
*ತಾಜಾ ಶುಂಠಿಯ ಕೆಲವೊಂದು ತುಂಡುಗಳು
*2 ಚಮಚ ಅರಿಶಿನ, ಬೆಳ್ಳುಳ್ಳಿಯ ಕೆಲವು ಎಸಲು
*2 ಚಮಚ ಸಕ್ಕರೆ ಇವುಗಳನ್ನು ಮಿಶ್ರಣ ಮಾಡಿಕೊಂಡು ಕುಡಿದರೆ ನಿಮ್ಮ ಶ್ವಾಸಕೋಶದಲ್ಲಿ ಹೊಗೆಯಿಂದಾಗಿ ನಿರ್ಮಾಣವಾಗಿರುವ ಗ್ರೀಸ್ ನಂತಹ ವಸ್ತುವನ್ನು ತೆಗೆದುಹಾಕುತ್ತದೆ.
ಅಲ್ಲದೆ, ಈ ಮಿಶ್ರಣವು ಶ್ವಾಸಕೋಶದಲ್ಲಿ ಇರುವ ವಿಷವನ್ನು ಹೊರಹಾಕಿ ಶ್ವಾಸಕೋಶದ ಆರೋಗ್ಯವು ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣಗಳು ಸೋಂಕಿನಿಂದಾಗಿ ಉಂಟಾಗಬಹುದಾದ ಕಫ ಮತ್ತು ಇತರ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುವುದು. ಸಕ್ಕರೆಯು ಈ ಮಿಶ್ರಣಕ್ಕೆ ಸಿಹಿಯನ್ನು ತರುವುದು.
ತಯಾರಿಸುವ ವಿಧಾನ
*ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ಕುದಿಸಿ. ಕುದಿಯುತ್ತಿರುವ ನೀರಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.
*ಎಲ್ಲಾ ಸಾಮಗ್ರಿಗಳೂ 15 ನಿಮಿಷ ಕುದಿಯಲು ಬಿಡಿ. ಕುದಿಯುವ ನೀರನ್ನು ಒಂದು ಲೋಟಕ್ಕೆ ಹಾಕಿಕೊಳ್ಳಿ.
*ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಕುಡಿಯಿರಿ. ಬೆಳಿಗ್ಗೆ ಹಾಗೂ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ನೀರನ್ನು ಕುಡಿಯಿರಿ.
*ಉತ್ತಮ ಫಲಿತಾಂಶಕ್ಕಾಗಿ ಎರಡು ತಿಂಗಳು ಹೀಗೆ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications










