Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಡಿಮೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ಪವರ್ ಫುಲ್ ಮನೆಮದ್ದು
ನೀವು ಹಾಸಿಗೆಯಿಂದ ಬೆಳಗ್ಗೆ ಎದ್ದ ಕೂಡಲೆ ತಲೆ ಸುತ್ತು, ಸುಸ್ತು, ನಾಸಿಯಾ ಮತ್ತು ಮಂದ ದೃಷ್ಟಿಯ ಸಮಸ್ಯೆಗಳು ಕಾಣಿಸಿಕೊಂಡರೆ, ನೀವು ತಪ್ಪದೆ ವೈದ್ಯರನ್ನು ಕಾಣಬೇಕಾಗುತ್ತದೆ. ಏಕೆಂದರೆ ಈ ಲಕ್ಷಣಗಳು ಕಡಿಮೆ ರಕ್ತದೊತ್ತಡ ಅಥವಾ ಹೈಪರ್‌ಟೆನ್ಶನ್‌ನ ಕಾರಣದಿಂದಾಗಿ ಬಂದಿರಬಹುದು. ಹಲವಾರು ಬಾರಿ ನಾವು ಈ ಸಮಸ್ಯೆಗಳನ್ನು ಮರೆತಿರುತ್ತೇವೆ ಇಲ್ಲವೇ ಈ ರೋಗದ ಲಕ್ಷಣಗಳನ್ನು ಉದಾಸೀನ ಮಾಡಿರುತ್ತೇವೆ.
ಸಾಮಾನ್ಯವಾಗಿ ನಮ್ಮ ರಕ್ತದೊತ್ತಡವು 120/80 ಮಿ.ಮೀ ಎಚ್‌ಜಿ ಗಿಂತ ಕಡಿಮೆಯಿದ್ದಲ್ಲಿ ಅದನ್ನು ಕಡಿಮೆ ರಕ್ತದೊತ್ತಡ ಎಂದು ಕರೆಯುತ್ತಾರೆ. ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದ್ದಲ್ಲಿ (ಅಂದರೆ ಹೈಪೊಟೆನ್ಶನ್) ಅಥವಾ ಹೆಚ್ಚಿದ್ದಲ್ಲಿ (ಹೈಪರ್‌ಟೆನ್ಶನ್) ಅದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ
ಆದ್ದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದ ಆರೋಗ್ಯಕರ ರಕ್ತದೊತ್ತಡವನ್ನು ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಕೆಲವೊಂದು ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ರಕ್ತದೊತ್ತಡವನ್ನು ಶೀಘ್ರವಾಗಿ ಹೆಚ್ಚಿಸುತ್ತವೆಯಂತೆ. ಇದಕ್ಕಾಗಿ ನಮ್ಮ ಮನೆಯ ಅಡುಗೆ ಮನೆಯಲ್ಲಿ ನಮಗೆ ಹಲವಾರು ಪದಾರ್ಥಗಳು ದೊರೆಯುತ್ತವೆ. ಕಡಿಮೆ ರಕ್ತದೊತ್ತಡವನ್ನು ನಿವಾರಿಸಿಕೊಳ್ಳಲು ಇವು ನಮಗೆ ತಕ್ಷಣ ಉಪಶಮನವನ್ನು ನೀಡುತ್ತವೆ. ಬನ್ನಿ ಅವು ಯಾವುವು ಎಂದು ನೋಡೋಣ...

ಕಾಫಿ
ಒಂದು ವೇಳೆ ನಿಮಗೆ ರಕ್ತದೊತ್ತಡವು ಕಡಿಮೆಯಾಗಿದೆ ಎಂದು ಅನಿಸಿದಲ್ಲಿ, ಒಂದು ಅರ್ಧ ಕಪ್ ಸ್ಟ್ರಾಂಗ್ ಕಾಫಿಯನ್ನು ಸೇವಿಸಿ. ಇದು ನಿಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಸಹಕರಿಸುತ್ತದೆ.

ಬೀಟ್‌ರೂಟ್ ಜ್ಯೂಸ್
ಬೀಟ್‌ರೂಟ್ ಜ್ಯೂಸ್ ಕಡಿಮೆ ರಕ್ತದೊತ್ತಡಕ್ಕೆ ಉತ್ತಮ ಪರಿಹಾರವಾಗಿದೆ. ಎರಡು ಲೋಟ ಬೀಟ್‌ರೂಟ್ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ, ರಕ್ತದೊತ್ತಡವನ್ನು ಸರಿಪಡಿಸಿಕೊಳ್ಳಬಹುದು. ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

ಒಣ ದ್ರಾಕ್ಷಿ
ರಾತ್ರಿಯ ಹೊತ್ತು 10-20 ಒಣ ದ್ರಾಕ್ಷಿಯನ್ನು ನೆನೆಸಿಕೊಳ್ಳಲು. ಬೆಳಗ್ಗೆ ಎದ್ದ ಕೂಡಲೆ ಈ ನೆನೆಸಿದ ಒಣ ದ್ರಾಕ್ಷಿಯನ್ನು ಸೇವಿಸಿ. ಇದನ್ನು ಒಂದು ವಾರ ಕಾಲ ಮಾಡಿ.

ಉಪ್ಪು ನೀರು
ಒಂದು ವೇಳೆ ನಿಮಗೆ ಕಡಿಮೆ ರಕ್ತದೊತ್ತಡ ಇದ್ದಲ್ಲಿ, ಉಪ್ಪು ನೀರು ನಿಮಗೆ ಸಹಾಯ ಮಾಡುತ್ತದೆ. ಒಂದು ಲೋಟ ನೀರಿಗೆ ಅರ್ಧ ಟೀ ಸ್ಪೂನ್ ಉಪ್ಪನ್ನು ಬೆರೆಸಿಕೊಂಡು ದಿನಕ್ಕೆ ಎರಡು ಬಾರಿ ಸೇವಿಸಿ.

ಜೇನು ತುಪ್ಪ
ನಿಮ್ಮ ರಕ್ತದೊತ್ತಡವು ಕುಸಿದಾಗ ನಿಮಗೆ ತಲೆ ಸುತ್ತುವ ಅನುಭವ ಉಂಟಾಗಬಹುದು. ಆಗ ಒಂದು ಲೋಟ ನೀರಿಗೆ ಒಂದು ಟೀಸ್ಪೂನ್ ಭರ್ತಿ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸಿ, ಸರಿ ಹೋಗುತ್ತದೆ.

ತುಳಸಿ ಎಲೆಗಳು
ತುಳಸಿ ಎಲೆಗಳು ಕಡಿಮೆ ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದಕ್ಕಾಗಿ ತುಳಸಿ ಎಲೆಗಳನ್ನು ಜಜ್ಜಿ ಅಥವಾ ಜ್ಯೂಸ್ ರೀತಿ ಮಾಡಿಕೊಂಡು ಸೇವಿಸಿ. ಈ ಜ್ಯೂಸಿಗೆ ಒಂದು ಟೀಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಇದನ್ನು ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ದಾಳಿಂಬೆ
ದಾಳಿಂಬೆಯು ಕಡಿಮೆ ರಕ್ತದೊತ್ತಡವನ್ನು ಶೀಘ್ರವಾಗಿ ನಿವಾರಿಸಲು ಸಹಾಯ ಮಾಡುತದೆ. ಇದಕ್ಕಾಗಿ ನೀವು ಹಣ್ಣನ್ನಾದರು ಸೇವಿಸಬಹುದು ಅಥವಾ ಜ್ಯೂಸನ್ನಾದರು ಸೇವಿಸಬಹುದು.



Click it and Unblock the Notifications
