For Quick Alerts
ALLOW NOTIFICATIONS  
For Daily Alerts

World Heart Day 2022: ಮಹಿಳೆಯರಲ್ಲಿ ಕಂಡುಬರುವ ಹೃದಯಾಘಾತದ 10 ಲಕ್ಷಣಗಳು

By Hemanth P
|

ಪುರುಷರಿಗಿಂತ ಮಹಿಳೆಯರು ಭಿನ್ನ ಎಂಬುವುದು ಅಕ್ಷರಶಃ ಸತ್ಯ. ಆದರೆ ಹೃದಯಾಘಾತದ ವಿಷಯಕ್ಕೆ ಮಾತ್ರ ಇದರಲ್ಲಿ ಇಬ್ಬರು ಸಮಾನರು. ಹಿಂದೆಲ್ಲಾ ಹೃದಯಾಘಾತವೆನ್ನುವುದು ಕೇವಲ ಪುರುಷರ ಸ್ವತ್ತಾಗಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಹೃದಯಾಘಾತ ಯಾರಿಗೂ ಬರಬಹುದು.

2013ರಲ್ಲಿ ರೊಸಿ ಒ ಡೊನ್ನೆಲ್ ಅವರಿಗೆ ಹೃದಯಾಘಾತವಾಗಿತ್ತು ಮತ್ತು ಎಲ್ಲಾ ಮಹಿಳೆಯರಂತೆ ಆಕೆಗೆ ಸಿನೆಮಾಗಳಲ್ಲಿ ನಟ, ನಟಿಯರಿಗೆ ಆಗುವಂತಹ ಯಾವುದೇ ದೊಡ್ಡ ಆಘಾತವಾಗಲಿಲ್ಲ. ಆಕೆಯ ಭುಜ ಮತ್ತು ಹೃದಯದಲ್ಲಿ ಸೆಳೆತ ಕಾಣಿಸಿಕೊಂಡು, ವಾಕರಿಕೆ ಮತ್ತು ಬೆವರಲು ಶುರುವಾಯಿತು. ಹೃದಯದ ಕಾಯಿಲೆಯು ಮಹಿಳೆಯರ ಪ್ರಾಣ ತೆಗೆಯುವುದರಲ್ಲಿ ನಂಬರ್ ವನ್ ಆಗಿದೆ. ಹೃದಯಾಘಾತದ ಕೆಲವೊಂದು ಲಕ್ಷಣಗಳನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ.

ಸೆಪ್ಟೆಂಬರ್ 29 ವಿಶ್ವ ಹೃದಯ ದಿನ, ಈ ದಿನದ ವಿಶೇಷ ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ:

ಹೃದಯಾಘಾತ ತಡೆಯುವ ಶಕ್ತಿ ಲೈಂಗಿಕತೆಗೆ ಇದೆ!

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಉಸಿರಾಟದ ತೊಂದರೆಯಿಂದಾಗಿ ಶೇ.42ರಷ್ಟು ಮಹಿಳೆಯರಲ್ಲಿ ಹೃದಯಾಘಾತವು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳಿವೆ. ಪುರುಷರಲ್ಲೂ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆದರೆ ಮಹಿಳೆಯರಲ್ಲಿ ಹೆಚ್ಚಾಗಿ ಎದೆ ನೋವು ಕಾಣಿಸಿಕೊಳ್ಳುವ ಬದಲು ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಹಠಾತ್ ಆಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಕಾರಣವಿಲ್ಲದೆ ಮತ್ತು ಯಾವುದೇ ಕಠಿಣ ಶ್ರಮವಿಲ್ಲದ ಕೆಲಸ ಮಾಡುವಾಗಲು ಬರಬಹುದು.

ದೇಹದ ಮೇಲ್ಭಾಗದಲ್ಲಿ ನೋವು

ದೇಹದ ಮೇಲ್ಭಾಗದಲ್ಲಿ ನೋವು

ಕುತ್ತಿಗೆ, ಬೆನ್ನು, ದವಡೆ, ಹಲ್ಲು, ಕೈ(ಸಾಮಾನ್ಯವಾಗಿ ಎಡ) ಮತ್ತು ಭುಜದ ಬದಿಯಲ್ಲಿ ನೋವು ಕಾಣಿಸಿಕೊಳ್ಳುವುದು ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳಾಗಿವೆ. ಇದನ್ನು ರೇಡಿಯೇಟಿಂಗ್ ಪೈನ್ ಎನ್ನಲಾಗುತ್ತದೆ. ಹೃದಯವು ಹೆಚ್ಚಿನ ನರತುದಿಗಳನ್ನು ಹೊಂದಿರುವ ಕಾರಣ ಹೀಗಾಗುತ್ತದೆ. ಬೆರಳ ತುದಿಗಳಲ್ಲಿ ಕೂಡ ಇದನ್ನು ಕಾಣಬಹುದು. ಹೃದಯಕ್ಕೆ ಯಾವುದೇ ಗಾಯವಾದಾಗ ಅದರ ನೋವು ದೇಹದ ಇತರ ಭಾಗಗಳಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಹೃದಯಾಘಾತಕ್ಕೆ ಸಂಬಂಧಿಸಿದ ನೋವು ದೇಹದ ಮೇಲ್ಭಾಗದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಇದು ಸೊಂಟಕ್ಕಿಂತ ಕೆಳಗೆ ಇಳಿಯುವುದಿಲ್ಲ.

ವಾಕರಿಕೆ, ವಾಂತಿ ಮತ್ತು ಹೊಟ್ಟೆಯ ತಳಮಳ

ವಾಕರಿಕೆ, ವಾಂತಿ ಮತ್ತು ಹೊಟ್ಟೆಯ ತಳಮಳ

ಮಹಿಳೆಯರಲ್ಲಿ ಹೃದಯಾಘಾತವಾದಾಗ ವಾಕರಿಕೆ, ವಾಂತಿ ಅಥವಾ ಅಜೀರ್ಣದಂತಹ ಸಮಸ್ಯೆಗಳಾದ ಎದೆಯುರಿ ಪುರುಷರಿಗಿಂತ ದ್ವಿಗುಣ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯ. ಯಾಕೆಂದರೆ ಹೃದಯದ ಕೆಳಭಾಗದವರೆಗೆ ವಿಸ್ತರಿಸಿಕೊಂಡಿರುವ ಬಲ ಪರಿಧಮನಿಗೆ ಹೋಗುವ ರಕ್ತವು ಬ್ಲಾಕ್ ಆಗಿರುತ್ತದೆ.

ಆಯಾಸ ಮತ್ತು ನಿದ್ರೆಯ ಸಮಸ್ಯೆ

ಆಯಾಸ ಮತ್ತು ನಿದ್ರೆಯ ಸಮಸ್ಯೆ

ಹೆಚ್ಚಿನ ಮಹಿಳೆಯರಿಗೆ ಹಠಾತ್ತಾಗಿ ಯಾವುದೇ ಕಾರಣವಿಲ್ಲದೆ ಬಳಲಿಕೆ ಉಂಟಾಗುವುದರಿಂದ ಹೃದಯಾಘಾತದ ಅನುಭವವಾಗುತ್ತದೆ. ಹೃದಯಾಘಾತಕ್ಕೆ ಒಳಗಾದ 515 ಮಹಿಳೆಯರನ್ನು ಪರೀಕ್ಷೆಗೊಳಪಡಿಸಿದಾಗ ಶೇ. 70.7ರಷ್ಟು ಮಹಿಳೆಯರಿಗೆ ಹೃದಯಾಘಾತವಾಗುವ ಒಂದು ತಿಂಗಳ ಮೊದಲು ಬಳಲಿಕೆ ಕಂಡುಬಂದಿದೆ. ಅರ್ಧದಷ್ಟು ಮಹಿಳೆಯರಿಗೆ ನಿದ್ರೆಯ ಸಮಸ್ಯೆ ಕಾಡಿದೆ ಎಂದು ಇದೇ ಅಧ್ಯಯನದಿಂದ ತಿಳಿದುಬಂದಿದೆ. ನಿದ್ರೆಯಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಎಚ್ಚರಿಕೆಯ ಕರೆಗಂಟೆಯಾಗಬಹುದು.

ಜ್ವರದಂತಹ ಲಕ್ಷಣಗಳು

ಜ್ವರದಂತಹ ಲಕ್ಷಣಗಳು

ಜೀವಕ್ಕೆ ಅಪಾಯವಾಗುಂತಹ ಹೃದಯಾಘಾತದ ಮತ್ತೊಂದು ಲಕ್ಷಣವೆಂದರೆ ಬಳಲಿಕೆಯೊಂದಿಗೆ ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುವುದು. ಇದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣವಾಗಿದೆ.

ಶೀತ ಬೆವರುವಿಕೆ

ಶೀತ ಬೆವರುವಿಕೆ

ನಿಮಗೆ ಇದು ಋತುಚಕ್ರದ ಸಮಯವಲ್ಲದಿದ್ದರೂ ಹಠಾತ್ ಆಗಿ ಶೀತ ಬೆವರುವಿಕೆ ಉಂಟಾಗುತ್ತದೆ. ಈ ಲಕ್ಷಣವು ಮುಂದೆ ನಿಮ್ಮನ್ನು ಆಸ್ಪತ್ರೆಯ ಬೆಡ್ ಮೇಲೆ ಮಲಗಿಸಬಹುದು. 1,000 ರೋಗಿಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ ಶೀತ ಬೆವರುವಿಕೆ ಉಂಟಾದರೆ ಅವರು ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು.

ಎದೆನೋವು ಮತ್ತು ಒತ್ತಡ

ಎದೆನೋವು ಮತ್ತು ಒತ್ತಡ

ಸಾಮಾನ್ಯ ಎದೆನೋವು ಮಹಿಳೆಯರ ಹೃದಯಾಘಾತದ ಲಕ್ಷಣವಾಗದೆ ಇರಬಹುದು. ಆದರೆ ಕೆಲವೊಮ್ಮೆ ಹೀಗಾಗುತ್ತದೆ. ಲಕ್ಷಣ ಏನೇ ಆಗಿದ್ದರೂ ನಿಮ್ಮ ದೇಹವು ಯಾವುದಾದರೂ ಹೊಸತನ್ನು ಅನುಭವಿಸಿದಂತಾದರೆ ಆಗ ನೀವು ಬೇಗನೆ ಪರೀಕ್ಷೆಗೊಳಪಡುವುದು ತುಂಬಾ ಮುಖ್ಯವೆಂದು ಡಾ. ಹೇಯ್ಸ್ ಹೇಳುತ್ತಾರೆ.

ತಲೆ ತಿರುಗುವಿಕೆ ಅಥವಾ ಲಘುತಲೆನೋವು

ತಲೆ ತಿರುಗುವಿಕೆ ಅಥವಾ ಲಘುತಲೆನೋವು

ತಲೆ ತಿರುಗುವಿಕೆ ಅಥವಾ ಲಘುತಲೆನೋವು ಹೃದಯಾಘಾತದ ಮತ್ತೊಂದು ಅಪರಿಚಿತ ಲಕ್ಷಣ. ಶೇ.39ರಷ್ಟು ಮಹಿಳೆಯರಿಗೆ ಹೃದಯಾಘಾತವಾದಾಗ ಇಂತಹ ಭಾವನೆಯಾಗಿದೆ ಎಂದು ವರದಿಯಾಗಿದೆ. ಪುರುಷರಿಗಿಂತ ಮಹಿಳೆಯರು ಕೇವಲ ತಲೆ ತಿರುಗುವಿಕೆ ಅನುಭವ ಪಡುವುದಲ್ಲದೆ ಜಡತ್ವವೂ ಆವರಿಸುತ್ತದೆ. ಹೃದಯವನ್ನು ಸಂಪರ್ಕಿಸುವ ರಕ್ತನಾಳಗಳಲ್ಲಿ ಯಾವುದಾದರೊಂದು ಬ್ಲಾಕ್ ಆದಾಗ ಇಂತಹ ಅನುಭವವಾಗುತ್ತದೆ.

ದವಡೆ ನೋವು

ದವಡೆ ನೋವು

ನಿಮಗೆ ಹೃದಯಾಘಾತ ಕಂಡುಬಂದರೆ ಆಗ ದವಡೆ ನೋವು ಕಾಣಿಸುತ್ತದೆ. ಯಾಕೆಂದರೆ ಇದನ್ನು ಸಂಪರ್ಕಿಸುವ ನರಗಳು ಹೃದಯದ ಪಕ್ಕದಲ್ಲೇ ಹಾದು ಬರುತ್ತದೆ. ನೋವು ನಿರಂತರವಾಗಿದ್ದರೆ ಹಲ್ಲಿನ ಸಮಸ್ಯೆಯಿರಬಹುದು. ಬಿಟ್ಟುಬಿಟ್ಟು ಬಂದು ಉಲ್ಭಣಿಸಿದರೆ ಆಗ ಹೃದಯಾಘಾತಕ್ಕೆ ಸಂಬಂಧಿಸಿ ಸಮಸ್ಯೆಯೆಂದರ್ಥ.

ಅಸ್ವಸ್ಥತೆ, ಎದೆ ಅಥವಾ ಬೆನ್ನು ಉರಿ

ಅಸ್ವಸ್ಥತೆ, ಎದೆ ಅಥವಾ ಬೆನ್ನು ಉರಿ

ಬಿಗಿತ, ಭಾರ, ಒತ್ತಡ ಅಥವಾ ಹಿಸುಕಿದಂತೆ ಸಂವೇದನೆಯನ್ನು ಮಹಿಳೆಯರು ಹೃದಯಾಘಾತವೆಂದು ಮಹಿಳೆಯರು ವರ್ಣಿಸುತ್ತಾರೆ. ನೋವು ತೀವ್ರಸ್ವರೂಪ ಅಥವಾ ಹಠಾತ್ತಾಗಿರುವುದಿಲ್ಲ. ಇದು ಬಂದು ಹೋಗುತ್ತಿರಬಹುದು. ಇದನ್ನು ಅಜೀರ್ಣ ಅಥವಾ ಎದೆಉರಿಯೆಂದು ಕಡೆಗಣಿಸಲಾಗುತ್ತದೆ. ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಇದು ಬರದಿದ್ದರೆ, ನಿಮಗೆ ಅಜೀರ್ಣದ ಸಮಸ್ಯೆಯಿಲ್ಲದಿದ್ದರೆ ಅಥವಾ ವಾಕರಿಕೆಯಂತಹ ಲಕ್ಷಣಗಳಿದ್ದರೆ ಆಗ ವೈದ್ಯರಿಂದ ತಪಾಸಣೆಗೊಳಗಾಗುದು ತುಂಬಾ ಮುಖ್ಯ.

English summary

Heart attack symptoms in women

It's true, Women are different from men, not least of all when it comes to heart attack symptoms. Heart disease is now the No. 1 killer of women. Know the signs of heart attack, and take necessary steps to
X
Desktop Bottom Promotion