For Quick Alerts
ALLOW NOTIFICATIONS  
For Daily Alerts

ಹೃದಯಾಘಾತ ತಡೆಯುವ ಶಕ್ತಿ ಲೈಂಗಿಕತೆಗೆ ಇದೆ!

By ಲೇಖಕ
|

ದೇಹದಲ್ಲಿನ ಆರೋಗ್ಯದ ಏರುಪೇರುಗಳಿಂದ ಹಲವಾರು ಸಮಸ್ಯೆಗಳು ನಮ್ಮನ್ನು ಆವರಿಸುತ್ತವೆ. ಕೆಲವನ್ನು ನಿವಾರಿಸಬಹುದಾದರೆ ಇನ್ನೂ ಕೆಲವು ಜೀವನ ಪರ್ಯಂತ ಅನುಭವಿಸಬೇಕಾದಂಥಹವು !

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಾಮದಾಟ ತಡೆಯುವುದು ಅನೇಕ ರೋಗಗಳ ಕಾಟ

ಹೃದಯ ಸಂಬಂಧಿ ಖಾಯಿಲೆಗಳಾದ ಹೃದಯದ ಒತ್ತಡ, ಹೃದಯಾಘಾತ ಮೊದಲಾದವುಗಳನ್ನು ಆರಂಭದಲ್ಲಿಯೇ ತಡೆಯದಿದ್ದರೆ ಅಥವಾ ಪೂರ್ವಾಲೋಚಿತ ಚಿಕಿತ್ಸೆಗಳನ್ನು ಪಡೆಯದಿದ್ದರೆ ಅಪಾಯ ಖಂಡಿತ. ಆದ್ದರಿಂದ ಹೃದಯಾಘಾತವನ್ನು ತಡೆಯಲು ಇಲ್ಲಿ ಕೆಲವು ವಿಧಾನಗಳನ್ನು ಹೇಳಲಾಗಿದೆ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೃದಯಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

1. ವ್ಯಾಯಾಮ

1. ವ್ಯಾಯಾಮ

ನಿಯಮಿತವಾದ ವ್ಯಾಯಾಮ ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ವ್ಯಾಯಾಮ ಮಾಡುವ ಅಭ್ಯಾಸದಿಂದ ಹೃದಯಾಘಾತ ಮತ್ತು ಹೃದಯ ನಾಳದ ರೋಗಳನ್ನು ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.

2. ಚಾಕಲೇಟ್

2. ಚಾಕಲೇಟ್

ಚಾಕಲೇಟ್ ಗಳು ಪ್ಲೇವೋನೈಡ್ಸ್ ಒಳಗೊಂಡಿರುವುದರಿಂದ ಅಪಧಮನಿಯ ಬಾಗುವಿಕೆಯನ್ನು ತಡೆಯುತ್ತದೆ. ಇದರ ಹೊರತಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹ ಡಾರ್ಕ್ ಚಾಕಲೇಟ್ ಸಹಾಯಕಾರಿ. ಡಾರ್ಕ್ ಚಾಕಲೇಟುಗಳು ರಕ್ತದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ಭೌತಿಕ ಆಘಾತಗಳಿಂದ ಚೇತರಿಕೆಕೊಳ್ಳಲು ಸಹಕಾರಿಯಾಗಿದೆ.

3. ಬಿಯರ್

3. ಬಿಯರ್

ಸ್ವಲ್ಪ ಬಿಯರ್ ಕುಡಿಯುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಪ್ರತಿದಿನ ಒಂದು ಬಿಯರ್ ಕುಡಿಯುವುದು ಒಳ್ಳೆಯದು. ಆದರೆ ಇದು ಅತಿಯಾದರೆ ಆರೋಗ್ಯ ಹಾಳಾಗುವುದು. ಬಿಯರ್ ಸೇವಿಸುವ ಸಂದರ್ಭದಲ್ಲಿ ಮಿತವಾದ ವ್ಯಾಯಾಮ ಮಾಡುವುದೂ ಉತ್ತಮ.

4. ವಿಟಮಿನ್ ಬಿ ಕಾಂಪ್ಲೆಕ್ಸ್

4. ವಿಟಮಿನ್ ಬಿ ಕಾಂಪ್ಲೆಕ್ಸ್

ಜೀವಸತ್ವ ಬಿ ಕಾಂಪ್ಲೆಕ್ಸ್ ಪೂರಕಗಳ ನಿಯಮಿತ ಸೇವನೆ, ಹೃದಯ ರೋಗಗಳು ಅಪಾಯಗಳನ್ನು ತಡೆಗಟ್ಟುತ್ತವೆ. ರಕ್ತ ನಾಳಗಳ ಪರಿಚಲನೆಗಳಿಗೂ ಇದು ಸೂಕ್ತ.

5. ಗೊರಕೆ ಹೊಡೆದಿರಿ ಜೋಕೆ!

5. ಗೊರಕೆ ಹೊಡೆದಿರಿ ಜೋಕೆ!

ನಿದ್ರಾವಸ್ಥೆಯಲ್ಲಿ ಕೆಲವರು ಗೊರಕೆಯನ್ನು ಹೊಡೆಯುತ್ತಾರೆ. ನಿದ್ರಾವಸ್ಥೆಯಲ್ಲಿರುವಾಗ ಉಸಿರುಗಟ್ಟಿದಂತಾಗಿ ಗೊರಕೆ ಹೊಡೆಯುವುದರಿಂದ ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಿತ್ತವೆ.

6. ನಿದ್ರೆ

6. ನಿದ್ರೆ

ದಿನದಲ್ಲಿ 7 ಗಂಟೆಗಳಷ್ಟು ಕಾಲ ನಿದ್ರಿಸದಿರುವವರಲ್ಲಿ ಹೆಚ್ಚಿನ ಜನರು ಹೃದಯ ಕಾಯಿಲೆಗಳ ಹೆಚ್ಚಿನ ಅಪಾಯವನ್ನು ಅನುಭವಿಸುತ್ತಾರೆ. ನಿರಂತರ ನಿದ್ರೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಂಪೂರ್ಣವಾಗಿ ಅತ್ಯಗತ್ಯ.

7. ಮೀನು

7. ಮೀನು

ಮೀನಿನಲ್ಲಿ ರಕ್ತದಲ್ಲಿ ಸರಿಯಾದ ಕೊಲೆಸ್ಟ್ರಾಲ್ ನ್ನು ಕಾಪಾಡಿಕೊಳ್ಳಲು ಮತ್ತು ಅಪಧಮನಿಯ ಜೀವಕೋಶದ ನವೀಕರಣಕ್ಕೆ ಸಹಾಯ ಮಾಡುವಂತಹ ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತವೆ.

8. ಹೆಚ್ಚಿನ ನಾರಿನಂಶವಿರುವ ಆಹಾರ ಪದಾರ್ಥಗಳು

8. ಹೆಚ್ಚಿನ ನಾರಿನಂಶವಿರುವ ಆಹಾರ ಪದಾರ್ಥಗಳು

ಬೆಳಗಿನ ಉಪಹಾರ ಚಯಾಪಚಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೃದಯ ಕಾಯಿಲೆಗಳನ್ನು 23% ಕಡಿಮೆ ಮಾಡುವ ಸಾಧ್ಯತೆಯನ್ನು ಹೊಂದಿದೆ.

9. ಅಗಸದ ಬೀಜ

9. ಅಗಸದ ಬೀಜ

ಅಗಸೆ ಬೀಜಗಳು ರಕ್ತನಾಳದ ಆರೋಗ್ಯಕ್ಕೆ ಪವಾಡ ಮಾತ್ರೆಗಳಂತೆ ಕೆಲಸ ಮಾಡುತ್ತವೆ. ಇದರಲ್ಲಿ ನಾರಿನಂಶ ಮತ್ತು ಒಮೆಗಾ 3 ಕೊಬ್ಬಿನಂಶವಿದೆ.

10. ಬೆಳ್ಳುಳ್ಳಿ

10. ಬೆಳ್ಳುಳ್ಳಿ

ಕಟು ರುಚಿಯ ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಅತ್ಯುತ್ತಮ ಔಷಧವಾಗಿದೆ. ಇದು ಹಾರ್ಮೋನ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಬೆಳ್ಳುಳ್ಳಿ ಅಥವಾ ಲವಂಗಗಳನ್ನು ಸೇವಿಸುವುದರಿಂದ ದೈನಂದಿನ ನಿಮ್ಮ ಹೃದಯದ ಅತ್ಯುತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

11. ಚಹಾ

11. ಚಹಾ

ಬ್ಲ್ಯಾಕ್ ಟೀ ಆಥವಾ ಗ್ರೀನ್ ಟೀ ಹೃದಯರಕ್ತನಾಳದ ಆರೋಗ್ಯಕ್ಕೆ ನೆರವಾಗುತ್ತದೆ. ಇದನ್ನು ಪ್ರತಿದಿನ ಕುಡಿಯುವುದರಿಂದ ಪಾರ್ಶ್ವವಾಯುವಿಗೆ ಗುರಿಯಾಗುವುದನ್ನು 11% ತಪ್ಪಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

12. ಲೈಂಗಿಕತೆ

12. ಲೈಂಗಿಕತೆ

ಲೈಂಗಿಕ ಕ್ರಿಯೆ ನಮ್ಮ ದೇಹವನ್ನು ಸದೃಢವಾಗಿರುವಂತೆ ಮಾಡುತ್ತದೆ. ಈ ಕ್ರಿಯೆಯಿಂದ ಉತ್ಪತ್ತಿಯಾಗುವ ಹಾರ್ಮೋನ್ ಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತವೆ. ವಾರದಲ್ಲಿ ಕನಿಷ್ಟ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸುವವರಿಗೆ ಹೃದಯಾಘಾತ ಬರುವ ಸಾಧ್ಯತೆ ಕಡಿಮೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ.

13. ಚೆರ್ರಿಗಳು

13. ಚೆರ್ರಿಗಳು

ಸಿಹಿಯಾಗಿರುವ ಚೆರ್ರಿ ಹಣ್ಣುಗಳು ಹೃದಯ ಕಾಯಿಲೆಯ ಅಪಾಯವನ್ನು ತಪ್ಪಿಸುವ ಅದ್ಭುತ ಹಣ್ಣುಗಳು. ಇದರಲ್ಲಿರುವ ಯೂರಿಕ್ ಆಮ್ಲ ರಕ್ತ ನಾಳದ ಆರೋಗ್ಯಕ್ಕೆ ದಿವ್ಯ ಔಷಧಿ.

14. ಬೀನ್ಸ್

14. ಬೀನ್ಸ್

ಬೀನ್ಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೋಲಿಕ್ ಆಮ್ಲ ಇದ್ದು ರಕ್ತದ ನಿರ್ವಹಣೆಗೆ ಅಗತ್ಯ. ಪ್ರತಿದಿನ ಬೀನ್ಸ್ ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತದೆ.

15. ಕಿತ್ತಳೆ

15. ಕಿತ್ತಳೆ

ಕಿತ್ತಳೆಯಲ್ಲಿ ವಿಟಮಿನ್ ಸಿಯ ಅಂಶಗಳಿರುವುದರಿಂದ ಇದು ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ. ಕಿತ್ತಳೆ ಹಣ್ಣನ್ನು ಹಾಗೇಯೇ ಅಥವಾ ರಸವನ್ನು ತಯಾರಿಸಿ ಸೇವಿಸಬಹುದು.

16. ನೀರು

16. ನೀರು

ನೀರನ್ನು ಪ್ರತಿದಿನ ಕನಿಷ್ಠ 2.5 ಲೀಟರ್ ದಿನವೂ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಮತ್ತು ದೇಹವು ಸದಾ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ.

17. ಶುಂಠಿ

17. ಶುಂಠಿ

ಉರಿಯೂತ ಹೃದಯಕ್ಕೆ ಸಂಬಂಧಿಸಿದ ಪ್ರಮುಖ ಖಾಯಿಲೆಗಳಲ್ಲಿ ಒಂದು ಈ ಉರಿಯೂತದ ಪ್ರಮಾಣವನ್ನು ಕಡಿಮೆ ಮಾಡುವ ಶುಂಠಿಯನ್ನು ಸದಾ ಸೇವಿಸಬೇಕು.

18. ಸಕಾಲಿಕ ಮೂತ್ರ ಹಾಗೂ ಮಲ ವಿಸರ್ಜನೆ

18. ಸಕಾಲಿಕ ಮೂತ್ರ ಹಾಗೂ ಮಲ ವಿಸರ್ಜನೆ

ಕೆಲವರು ಮಲ ಮೂತ್ರವನ್ನು ತಡೆಯುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹೃದಯದ ಬಡಿತ ಜಾಸ್ತಿಯಾಗಿ ತೊಂದರೆಗಳು ಸಂಭವಿಸುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಮಲ ಮೂತ್ರ ವಿಸರ್ಜನೆ ಮಾಡುವುದೂ ಕೂಡಾ ದೇಹಾರೋಗ್ಯಕ್ಕೆ ಅಗತ್ಯ.

19. ರಜಾದಿನಗಳು

19. ರಜಾದಿನಗಳು

ಕೇವಲ ಕೆಲಸವನ್ನು ಮಾಡುತ್ತ ದೇಹಕ್ಕೆ ವಿಶ್ರಾಂತಿ ಕೊಡದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ಕೆಲಸದ ನಡುವೆ ದೇಹಕ್ಕೆ ಹೆಚ್ಚು ಒತ್ತಡ ನೀಡದಂತೆ ರಜೆಗಳನ್ನು ತೆಗೆದುಕೊಳ್ಳುವುದು ಉತ್ತಮ.

20. ಧೂಮಪಾನ ಮಾಡಬಾರದು

20. ಧೂಮಪಾನ ಮಾಡಬಾರದು

ಧೂಮಪಾನ ಹೃದಯ ಸಂಬಂಧಿ ಖಾಯಿಲೆಗಳಿಗೆ ಆಹ್ವಾನವನ್ನು ನೀಡುತ್ತದೆ.ಇದರಿಂದ 25% ಹೆಚ್ಚಿನ ಜನ ಪಾರ್ಶ್ವವಾಯುವಿನಿಂದ ಬಳಲುತ್ತಾರೆ. ಆದ್ದರಿಂದ ಧೂಮಪಾನದಿಂದ ಆದಷ್ಟು ದೂರವಿರುವುದು ಒಳಿತು.

21. ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿ

21. ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿ

ಕೊಲೆಸ್ಟ್ರಾಲ್ ತಪಾಸಣೆಗಳನ್ನು ಮಾಡಿಸುವುದು ಅತ್ಯಗತ್ಯ. ವೈದ್ಯರು ಹೇಳಿದ ಚಿಕಿತ್ಸೆಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಸೇವಿಸಿದರೆ ಹೃದಯಾಘಾತ ಸಮಸ್ಯೆಯಿಂದ ಪಾರಾಗಬಹುದು.

22. ಮಾನಸಿಕ ಒತ್ತಡ

22. ಮಾನಸಿಕ ಒತ್ತಡ

ಮಾನಸಿಕ ಒತ್ತಡದಿಂದಾಗಿ ನಮ್ಮ ಹಾರ್ಮೋನ್ ಗಳಲ್ಲಿ ಏರುಪೇರಾಗುತ್ತದೆ. ಮಾನಸಿಕ ಒತ್ತಡ ತೀವ್ರವಾದರೆ ಹೃದಯಾಘಾತ ಉಂಟಾಗಬಹುದು. ಆದ್ದರಿಂದ ಮನಸ್ಸಿನಲ್ಲಿರುವ ಚಿಂತೆಯನ್ನು ಹೊರದಬ್ಬುವತ್ತ ನಿಮ್ಮ ಪ್ರಯತ್ನಿವಿರಲಿ.

English summary

ways To Prevent A Heart Attack | Tips For heart Health | ಹೃದಯಾಘಾತ ತಡೆಗಟ್ಟಲು ಕ್ರಮಗಳು | ಹೃದಯದ ಆರೋಗ್ಯಕ್ಕಾಗಿ ಕೆಲ ಸಲಹೆಗಳು

The benefits of regular exercise have been unanimous in promoting physical health. Studies have shown that regular workouts have reduced the risks of heart attacks and other cardiovascular ailments.
X
Desktop Bottom Promotion