For Quick Alerts
ALLOW NOTIFICATIONS  
For Daily Alerts

ಹೃದಯಾಘಾತ ಬರದಂತೆ ತಡೆಯಬೇಕೆ?

|

ಹೃದಯದ ಆರೋಗ್ಯದ ಬಗ್ಗೆ ನೀವೆಷ್ಟು ಗಮನ ಹರಿಸುತ್ತಿದ್ದೀರಿ? ನಾವೆಲ್ಲರೂ ಅಷ್ಟೇ, ಈ ಅಂಗ ಆರೋಗ್ಯವಾಗಿರುವಾಗ ಅದರ ಆರೋಗ್ಯವನ್ನು ಹಾಗೇ ಕಾಪಾಡಿಕೊಂಡು ಹೋಗುವತ್ತ ಚಿಂತಿಸುವುದೂ ಇಲ್ಲ, ಆದ್ದರಿಂದಲೇ ಹೃದಯಾಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಬಂದ ಮೇಲಷ್ಟೇ 'ನಾವು ಜೀವಿಸಲು ಅವಶ್ಯಕವಾದ ಅಂಗವಿದು' ಎಂಬ ಅಂಶ ನಮ್ಮ ಗಮನಕ್ಕೆ ಬರುತ್ತದೆ.

ಈಗೆಲ್ಲಾ ಹೃದಯಾಘಾತ ದೊಡ್ಡವರಲ್ಲಿ ಮಾತ್ರವಲ್ಲ, ತುಂಬಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ, ಇದಕ್ಕೆ ಜೀವನ ಶೈಲಿ ಮತ್ತು ನಮ್ಮ ಫಾಸ್ಟ್ ಫುಡ್ ಕಲ್ಚರ್ ಬಹು ಮುಖ್ಯವಾದ ಕಾರಣಗಳಾಗಿವೆ.

ನಿಮ್ಮ ಹೃದಯದ ಬಡಿತ ಆರೋಗ್ಯಕರವಾಗಿರಲು ನೀವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಬಯಸುವುದಾದರೆ ದಿನದಲ್ಲಿ ಅರ್ಧಗಂಟೆ ವ್ಯಾಯಾಮ ಮಾಡಲು, ಹೃದಯದ ಆರೋಗ್ಯ ಕಾಪಾಡುವ ಆಹಾರಗಳನ್ನು ತಿನ್ನಲು ಮರೆಯಬೇಡಿ.

ಇಲ್ಲಿ ನಾವು ಹೃದಯದ ಸ್ವಾಸ್ಥ್ಯ ಹೆಚ್ಚಿಸುವ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

 ಮೊಸರು

ಮೊಸರು

ಪ್ರತೀದಿನ ಮೊಸರು ನಿಮ್ಮ ಆಹಾರಕ್ರಮದಲ್ಲಿ ಇರುವುದೇ? ಇಲ್ಲವೆಂದರೆ ಇವತ್ತಿನಿಂದಲೇ ಮೊಸರನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಮೊಸರಿನಲ್ಲಿ ವಿಟಮಿನ್ ಬಿ12 ಇದ್ದು, ಇದು ಹೃದಯದ ನರಗಳಿಗೆ ಶಕ್ತಿಯನ್ನು ಒದಗಿಸುತ್ತದೆ.

 ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣಿನಲ್ಲಿ ಪೊಟಾಷ್ಯಿಯಂ ಅಂಶ ಅಧಿಕವಿದೆ. ನಿಮ್ಮ ಮಿದುಳು ಮತ್ತು ಹೃದಯದ ನಡುವೆ ಸಂವಹನಕ್ಕೆ ಪೊಟಾಷ್ಯಿಯಂ ಅವಶ್ಯಕ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬೆಳ್ಳುಳ್ಳಿನಲ್ಲಿರುವ ಎಲಿಸಿನ್(allicin) ಅಂಶ ನಿಮ್ಮ ಹೃದಯದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ.

 ಉಪ್ಪು

ಉಪ್ಪು

ಉಪ್ಪನ್ನು ಮಿತಿಯಲ್ಲಿ ತಿಂದರೆ ಹೃದಯದ ಬಡಿತವನ್ನು ಸಮತೋಲನದಲ್ಲಿ ಇಡಬಹುದು. ಉಪ್ಪನ್ನು ತುಂಬಾ ತಿಂದರೆ ಹೃದಯದ ಬಡಿತ ಹೆಚ್ಚಾಗುವುದು, ಕಮ್ಮಿ ತಿಂದರೂ ಹೃದಯ ಬಡಿತ ಕೂಡ ಕಮ್ಮಿಯಾಗುವುದು, ಆದ್ದರಿಂದ ಮಿತಿಯಲ್ಲಿ ತಿನ್ನಿ.

ಟೋಫು

ಟೋಫು

ಟೋಫುವಿನಲ್ಲಿ ಕ್ಯಾಲ್ಸಿಯಂ ಅಧಿಕ ಇರುವುದರಿಂದ ಹೃದಯದ ಮತ್ತು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೀನು

ಮೀನು

ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬೆಸ್ಟ್ ಫುಡ್ ಇದಾಗಿದೆ. ಆದರೆ ಇದನ್ನು ಫ್ರೈ ಮಾಡಿ ತಿನ್ನಬೇಡಿ, ಸಾರು, ಗ್ರಿಲ್ಡ್ ಮಾಡಿದ ಮೀನು ಮಾತ್ರ ಹೃದಯ ಆರೋಗ್ಯಕ್ಕೆ ಒಳ್ಳೆಯದು.

ಒಣದ್ರಾಕ್ಷಿ

ಒಣದ್ರಾಕ್ಷಿ

ಒಣದ್ರಾಕ್ಷಿ ತಿನ್ನುವುದರಿಂದ ಹೃದಯದ ಬಡಿತವನ್ನು ಸಮತೋಲನದಲ್ಲಿ ಇಡಬಹುದು. ಹೃದಯಾಘಾತವಾಗಿ ಚೇತರಿಸಿ ಕೊಳ್ಳುತ್ತಿರುವವರು ಇದನ್ನು ತಿನ್ನುವುದರಿಂದ ಹೃದಯದ ಬಡಿತವನ್ನು ಸಮತೋಲನಕ್ಕೆ ತರಬಹುದು.

ಓಟ್ಸ್

ಓಟ್ಸ್

ಕೊಲೆಸ್ಟ್ರಾಲ್ ಅಧಿಕವಿರುವವರಿಗೆ ಹೃದಯಾಘಾತ ಬರುವ ಸಾಧ್ಯತೆ ಹೆಚ್ಚು. ಓಟ್ಸ್ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯಬಹುದು.

 ಪುದೀನಾ

ಪುದೀನಾ

ಪುದೀನಾ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಿ, ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ.

ಕುಂಬಳಕಾಯಿ

ಕುಂಬಳಕಾಯಿ

ಕುಂಬಳಕಾಯಿಯಲ್ಲಿ ಮ್ಯಾಗ್ನಿಷಿಯಂ ಅಂಶವಿದೆ. ಮ್ಯಾಗ್ನಿಷಿಯಂ ಕೂಡ ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕವಾದ ಖನಿಜಾಂಶವಾಗಿದೆ.

English summary

Foods That Regulate Your Heartbeat

These heart healthy foods have a natural calming effects on your heart. Foods that regulate heartbeat work from within to bring a rhythm in your heart.
X
Desktop Bottom Promotion