For Quick Alerts
ALLOW NOTIFICATIONS  
For Daily Alerts

ದೀರ್ಘಾಯುಷ್ಯಕ್ಕಾಗಿ ಈ 'ಲಾಂಗ್ವಿಟಿ ಡಯೆಟ್' ಪಾಲಿಸುವುದು ಬೆಸ್ಟ್!

|

ಹೆಚ್ಚು ಕಾಲ ಬದುಕೋಕೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳೀ??? ಅದ್ರೆ ಈಗಿನ ಅನಾರೋಗ್ಯಕರ ಜೀವನಶೈಲಿಯಿಂದ ವಯಸ್ಸಲ್ಲದ ವಯಸ್ಸಲ್ಲಿ ಪ್ರಾಣ ಬಿಡುತ್ತಿರುವ ಘಟನೆಗಳು ಪ್ರತಿದಿನ ನೋಡುತ್ತಲೇ ಇರುತ್ತೇವೆ. ಆದ್ರೆ ಸದ್ಯ ನಡೆದಿರುವ ಸಂಶೋಧನೆಯ ಪ್ರಕಾರ, ನೀವು ಈ 100ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕಬಹುದಂತೆ..! ಆದ್ರೆ ಅದಕ್ಕೆ ನೀವು ಲಾಂಗ್ವಿಟಿ ಡಯೆಟ್ ಅಥವಾ ದೀರ್ಘಾಯುಷ್ಯದ ಆಹಾರ ಪದ್ಧತಿಯನ್ನು ಪಾಲಿಸಬೇಕು. ಅರೇ ಇದೇನಪ್ಪ ಲಾಂಗ್ವಿಟಿ ಡಯೆಟ್ ಅಂತ ಯೋಚನೆ ಮಾಡ್ತಿದ್ದೀರಾ? ಇಲ್ಲಿದೆ ನಿಮಗಾಗಿ ಕಂಪ್ಲೀಟ್ ರಿಪೋರ್ಟ್.

ಆಯುಷ್ಯ ಹೆಚ್ಚಿಸುವ ಲಾಂಗ್ವಿಟಿ ಡಯೆಟ್ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ:

ಲಾಂಗ್ವಿಟಿ ಡಯಟ್ ಅಥವಾ ದೀರ್ಘಾಯುಷ್ಯದ ಆಹಾರ ಎಂದರೇನು​?:

ಲಾಂಗ್ವಿಟಿ ಡಯಟ್ ಅಥವಾ ದೀರ್ಘಾಯುಷ್ಯದ ಆಹಾರ ಎಂದರೇನು​?:

ವಾಲ್ಟರ್ ಲಾಂಗೋ ಎಂಬ ಜೀವರಸಾಯನಶಾಸ್ತ್ರಜ್ಞ ಹಾಗೂ ಅವರ ತಂಡ ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿ 'ಲಾಂಗ್ವಿಟಿ ಡಯಟ್' ಅನ್ನು ಪರಿಚಯಿಸಿದ್ದು, ಈ ಆಹಾರ ಪದ್ಧತಿಯು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಇವರು ನಿಮ್ಮ ಜೀನ್‌ಗಳ ಮೇಲೆ ಪೋಷಕಾಂಶಗಳ ಪರಿಣಾಮಗಳು ಮತ್ತು ಉಪವಾಸದ ಫಲಿತಾಂಶಗಳ ಕುರಿತು ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದು, ಸದ್ಯ ಫಲಿತಾಂಶ ಆಧಾರದ ಮೇಲೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ದೀರ್ಘಾಯುಷ್ಯದ ಆಹಾರವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ 120 ವರ್ಷಗಳವರೆಗೆ ಬದುಕಲು ಲಾಂಗೋ ಯೋಜಿಸಿದ್ದಾರೆ.

ಯಾರು ಈ ಡಯೆಟ್ ಮಾಡಬಹುದು​​?:

ಯಾರು ಈ ಡಯೆಟ್ ಮಾಡಬಹುದು​​?:

ಈ ಆಹಾರವನ್ನು ಮುಖ್ಯವಾಗಿ ವಯಸ್ಸಾದವರಿಗಾಗಿ ತಯಾರಿಸಲಾಗಿದೆ. ಆದರೆ, ಯುವಕರು ಕೂಡ ಈ ಡಯೆಟ್ ಪಾಲಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಡಯೆಟ್‌ ನಲ್ಲಿ ಏನಿದೆ?:

ಈ ಡಯೆಟ್‌ ನಲ್ಲಿ ಏನಿದೆ?:

ನಿಮ್ಮ ಆಯಸ್ಸು ಹೆಚ್ಚಿಸಕೊಳ್ಳಲು, ದೀರ್ಘಕಾಲ ಬದುಕಲು ಈ ಲಾಂಗ್ವಿಟಿ ಅಥವಾ ದೀರ್ಘಾಯುಷ್ಯದ ಡಯೆಟ್ ಪಾಲಿಸಬೇಕು. ಅಂದಹಾಗೇ ಈ ಡಯೆಟ್‌ನಲ್ಲಿ ಏನಿದೆ ಅಂತ ನೋಡೋದಾದ್ರೆ, ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು, ಬೀನ್ಸ್, ಬಾದಾಮಿ, ಆಲಿವ್ ಎಣ್ಣೆ ಮತ್ತು ಪಾದರಸದಲ್ಲಿ ಕಡಿಮೆ ಇರುವ ಸಮುದ್ರಾಹಾರ. ಈ ಸಸ್ಯ ಆಧಾರಿತ ಆಹಾರಗಳಲ್ಲಿ ಜೀವಸತ್ವ, ಖನಿಜ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಲವಣಗಳು ಕಡಿಮೆ ಇರುತ್ತವೆ. ಆದ್ದರಿಂದ ಈ ಸಸ್ಯ ಆಧಾರಿತ ಆಹಾರವನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ಹಸುವಿನ ಹಾಲಿನ ಬದಲು ಮೇಕೆ ಅಥವಾ ಕುರಿ ಹಾಲನ್ನು ನಿಮ್ಮ ಡಯೆಟ್‌ನಲ್ಲಿ ಸೇರಿಸಿಕೊಳ್ಳಬಹದು. ಅಷ್ಟೇ ಅಲ್ಲ, ಬೆಣ್ಣೆ ಹಾಗೂ ಮೊಸರು ಕೂಡ ನಿಮ್ಮ ಈ ಡಯೆಟ್‌ನಲ್ಲಿ ಸೇರಿಸಿಕೊಳ್ಳಬೇಕು.

ಎಷ್ಟು ದಿನ ಈ ಡಯಟ್​ ಮಾಡಬೇಕು?:

ಎಷ್ಟು ದಿನ ಈ ಡಯಟ್​ ಮಾಡಬೇಕು?:

ನಿರ್ದಿಷ್ಟ ಅವಧಿಗೆ ಉಪವಾಸ ಮಾಡುವುದು ಈ ಡಯೆಟ್‌ನ ಪ್ರಮುಖ ಅಂಶವಾಗಿದೆ. ಪ್ರತಿದಿನ ನಾವು ತೆಗೆದುಕೊಳ್ಳುವ ಎಲ್ಲಾ ಆಹಾರವನ್ನು ಕೇವಲ 12 ಗಂಟೆಗಳ ಒಳಗೆ ತಿನ್ನಬೇಕು. ಉದಾಹರಣೆಗೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ). ಮಲಗುವ 3-4 ಗಂಟೆಗಳ ಮೊದಲು ಏನನ್ನೂ ತಿನ್ನಬಾರದು.

ಇನ್ನೊಂದು ವಿಧಾನವೆಂದರೆ ವಾರದಲ್ಲಿ ಎರಡು ದಿನಗಳವರೆಗೆ ಕಡಿಮೆ ತಿನ್ನುವುದು ಮತ್ತು ಇತರ 5 ದಿನಗಳು ಸಾಮಾನ್ಯವಾಗಿ ತಿನ್ನಬೇಕು. ಇದರಿಂದ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಕಾರಣವಾಗುತ್ತದೆ. ಟೈಪ್ -2 ಮಧುಮೇಹ, ಸ್ಥೂಲಕಾಯತೆ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಏನನ್ನು ತಿನ್ನಬಾರದು?:

ಏನನ್ನು ತಿನ್ನಬಾರದು?:

ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಅತಿಯಾಗಿ ಸೇವಿಸಬಾರದು.

ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆ ಅಂಶ ಇರುವ ಆಹಾರ ಬೇಡ.

ಇವುಗಳ ಸೇವನೆಯಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ, ಹೃದಯ ಸಮಸ್ಯೆ ಹಾಗೂ ಬೊಜ್ಜಿನಂತಹ ಸಮಸ್ಯೆಗಳನ್ನು ನಿಮಗೆ ದಯಪಾಲಿಸಬಹುದು.

ಎಷ್ಟು ಪ್ರೋಟೀನ್ ತೆಗೆದುಕೊಳ್ಳಬೇಕು?:

ಎಷ್ಟು ಪ್ರೋಟೀನ್ ತೆಗೆದುಕೊಳ್ಳಬೇಕು?:

ಈ ವಿಧಾನದಲ್ಲಿ, ಪ್ರೋಟೀನ್ ಪ್ರಮಾಣವು ವ್ಯಕ್ತಿಯ ದೇಹದ ತೂಕವನ್ನು ಅವಲಂಬಿಸಿರುತ್ತದೆ. ದಿನಕ್ಕೆ ಪ್ರತಿ ಕೆಜಿಗೆ 0.68-0.80 ಗ್ರಾಂ ಪ್ರೋಟೀನ್​​ಗಿಂತ ಹೆಚ್ಚು ಸೇವಿಸಬೇಡಿ. ಉದಾಹರಣೆಗೆ, ಒಬ್ಬ ವ್ಯಕ್ತಿಯು 70 ಕೆಜಿ ತೂಕವನ್ನು ಹೊಂದಿದ್ದರೆ ದಿನಕ್ಕೆ 47 ರಿಂದ 56 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ಸೇವಿಸಬಾರದು.

ಅಡ್ಡ ಪರಿಣಾಮಗಳಿವೆಯೇ?:

ಈ ಆಹಾರದಲ್ಲಿ ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಮಲ್ಟಿವಿಟಮಿನ್​​ಗಳು ಮತ್ತು ಖನಿಜಯುಕ್ತ ಪೂರಕಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ ವೈದ್ಯರ ಮಾಹಿತಿ ಇಲ್ಲದೆ ಅವುಗಳನ್ನು ಸೇವಿಸುವುದು ಸೂಕ್ತವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆ ಪೂರಕಗಳನ್ನು ಅತಿಯಾಗಿ ಸೇವಿಸಿದರೆ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ಅಗತ್ಯವಿರುವ ಪೂರಕಗಳನ್ನು ಪಡೆಯಿರಿ.

English summary

What's this 'longevity' diet, and will it really make you live longer?

Here we talking about What's this 'longevity' diet, and will it really make you live longer?, read on
Story first published: Saturday, September 24, 2022, 15:55 [IST]
X
Desktop Bottom Promotion