For Quick Alerts
ALLOW NOTIFICATIONS  
For Daily Alerts

ಅರಿಶಿಣ ಹೆಚ್ಚು ಸೇವಿಸಿದರೆ ಈ ಅಪಾಯಗಳಿವೆ, ಈ ಔಷಧ ತೆಗೆದುಕೊಳ್ಳುತ್ತಿದ್ದರೆ ಎಚ್ಚರವಹಿಸಿ

|

ಅರಿಶಿಣ ಎಷ್ಟೊಂದು ಪ್ರಯೋಜನಕಾರಿ ಎಂಬುವುದು ನಮಗೆಲ್ಲಾಗೊತ್ತಿರುವ ವಿಷಯವೇ... ಕ್ಯಾನ್ಸರ್‌ನಂಥ ಅಪಾಯಕಾರಿ ತಡೆಗಟ್ಟುವ ಸಾಮರ್ಥ್ಯ ಅರಿಶಿಣಕ್ಕಿದೆ. ಗಾಯ ಒಣಗಿಸುವುದರಿಂದ ಹಿಡಿದು ಸೌಂದರ್ಯವರ್ಧಕವಾಗಿ ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುವುದು.

Turmeric Side Affects

ಆದರೆ 'ಅತಿಯಾದರೆ ಅಮೃತವೂ ವಿಷ ಅನ್ನುತ್ತಾರಲ್ಲ' ಹಾಗೆಯೇ ಅರಿಶಿಣ ಅತಿಯಾಗಿ ದೇಹವನ್ನು ಸೇರಿದರೆ ಕೂಡ ಒಳ್ಳೆಯದಲ್ಲ. ಅತೀ ಹೆಚ್ಚು ಅರಿಶಿಣ ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು, ನಾವು ಅರಿಶಿಣ ಜಾಸ್ತಿ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಯುವುದು ಹೇಗೆ, ಎಷ್ಟು ಡೋಸ್‌ ಅರಿಶಿಣ ತೆಗೆದುಕೊಳ್ಳಬೇಕು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಮೊದಲಿಗೆ ಅರಿಶಿಣದ ಪ್ರಯೋಜನಗಳ ಬಗ್ಗೆ ಕ್ವಿಕ್ ಆಗಿ ಕಣ್ಣಾಡಿಸೋಣ:

* ತ್ವಚೆ ಹಾಗೂ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
* ಮೈಕೈ ನೋವು ಕಡಿಮೆ ಮಾಡುತ್ತದೆ
* ಸ್ನಾಯುಗಳ ಊತ, ಉರಿಯೂತ ಕಡಿಮೆ ಮಾಡುತ್ತದೆ
* ಸೋಂಕು, ಕೆಟ್ಟ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುತ್ತದೆ.

ಅರಿಶಿಣ ಹೆಚ್ಚಾದರೆ ಈ ಅಡ್ಡಪರಿಣಾಮಗಳಾಗುತ್ತೆ ಹುಷಾರ್‌!

* ಆ್ಯಸಿಡ್ ರಿಫ್ಲೆಕ್ಸ್
* ಹೊಟ್ಟೆ ಹಾಳಾಗುವುದು
* ಅಜೀರ್ಣ ಸಮಸ್ಯೆ ಕಾಡುವುದು
* ಕಿಡ್ನಿ ಸಮಸ್ಯೆಯಿದ್ದರೆ ಮತ್ತಷ್ಟು ಹೆಚ್ಚಾಗುವುದು
* ಇನ್ನು ಪ್ರತಿದಿನ ತುಂಬಾ ಅರಿಶಿಣ ಸೇವಿಸಿದರೆ ಇದರಿಂದ * ಲಿವರ್‌ ಆರೋಗ್ಯ ಹಾಳಾಗುತ್ತದೆ
* ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುವವರಿಗೆ ಅಪಾಯಕಾರಿ
* ಅರಿಶಿಣ ಹೆಚ್ಚು ಬಳಸಿದರೆ ರಕ್ತಸ್ರಾವ ಅಧಿಕವಾಗುವುದು
* ಹೊಟ್ಟೆ ಉಬ್ಬುವ ಸಮಸ್ಯೆ ಕಂಡು ಬರುವುದು
* ಬೇಧಿ ಉಂಟಾಗಬಹುದು

ಈ ಬಗೆಯ ಔಷಧ ತೆಗೆದುಕೊಳ್ಳುವಾ ಗ ಅರಿಶಿಣ ಹೆಚ್ಚು ಸೇವಿಸುವುದು ಒಳ್ಳೆಯದಲ್ಲ:
* ಆ್ಯಂಟಿ ಬಯೋಟಿಕ್‌ ತೆಗೆದುಕೊಳ್ಳುತ್ತಿದ್ದರೆ (antibiotics)
* ಖಿನ್ನತೆಗೆ ಔಷಧ ತೆಗೆದುಕೊಳ್ಳುತ್ತಿದ್ದರೆ (antidepressants)

* ರಕ್ತ ಹೆಪ್ಪುಗಟ್ಟಲು ಔಷಧ ತೆಗೆದುಕೊಳ್ಳುತ್ತಿದ್ದರೆ (anticoagulants)
* ಆ್ಯಂಟಿಇಸ್ತಾಮೈನ್ಸ್ (ಅಲರ್ಜಿಗೆ ನೀಡುವ ಔಷಧ) (antihistamines)
* ಹೃದಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರೆ (cardiovascular drugs)
* ಕೀಮೋ ಮಾಡಿಸಿದ್ದರೆ (chemotherapeutic agents)

ಎಷ್ಟು ಪ್ರಮಾಣದ ಅರಿಶಿಣ ಅತೀ ಹೆಚ್ಚು ಎಂದು ಪರಿಗಣಿಸಬಹುದು?
ಇಷ್ಟೇ ಅರಿಶಿಣ ತೆಗೆದುಕೊಳ್ಳಬೇಕು ಎಂಬ ನಿಯವೇನೂ ಇಲ್ಲದಿದ್ದರೂ ತಜ್ಞರ ಪ್ರಕಾರ ಒಬ್ಬರು ದಿನದಲ್ಲಿ 500-2,000 mg ಒಳಗೆ ಸೇವಿಸುವುದು ಒಳ್ಳೆಯದು.

ಇನ್ನು ಮೇಲೆ ಹೇಳಿದಂತೆ ನೀವು ಏನಾದರೂ ಔಷಧ ಸೇವಿಸುತ್ತಿದ್ದರೆ ಅರಿಶಿಣ ತೆಗೆದುಕೊಳ್ಳುವುದು ಕಡಿಮೆ ಮಾಡಿ.

English summary

What Happened When You Consume Too Much Turmeric In Kannada

What are the side affects of having too much turmeric, read on...
X
Desktop Bottom Promotion