For Quick Alerts
ALLOW NOTIFICATIONS  
For Daily Alerts

ಸಿಕ್ಕಾಪಟ್ಟೆ ತಿಂತೀರಾ, ಹಾಗಿದ್ರೆ ಈ ರೀತಿ ಆಹಾರ ಅಭ್ಯಾಸ ಮಾಡಿಕೊಳ್ಳಿ ಹಸಿವೇ ಆಗಲ್ಲ

|

ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಆದರೆ ತಿನ್ನುವುದೇ ಚಟವಾಗಿಬಿಟ್ಟರೆ. ಬಾಯಿ ಚಪಲ ಅಂದರೆ ಹಾಗೇ ಇಷ್ಟಪಟ್ಟಿದ್ದೆಲ್ಲಾ, ತಿನ್ನುವ ಆಸೆ. ಆದರೆ ಮುಂದೊಂದು ದಿನ ತಿನ್ನುವುದೇ ನಮ್ಮ ಆರೋಗ್ಯಕ್ಕೆ ಕುತ್ತಾದರೆ, ಇದೇ ನಮ್ಮ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟರೆ.

Top 10 Foods To Suppress Your Desire To Eat Food

ಅನಾರೋಗ್ಯಕರ ಜೀವನಶೈಲಿ, ಮನಸ್ಥಿತಿ ಬದಲಾವಣೆ, ಖಿನ್ನತೆ, ಬೇಸರ, ಒತ್ತಡ, ಆತಂಕ ಮತ್ತು ವಿವಿಧ ಭಾವನಾತ್ಮಕ ಅಂಶಗಳಿಂದಾಗಿ ದೈಹಿಕವಾಗಿ ಪ್ರಭಾವ ಬೀರಿ, ಜನರಲ್ಲಿ ಹಸಿವನ್ನು ಹೆಚ್ಚಿಸಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಋತುಚಕ್ರಕ್ಕೂ ಮುನ್ನ ಕಾಡುವ ನೋವು, ಹೈಪರ್ ಥೈರಾಯ್ಡಿಸಮ್, ಗ್ರೇವ್ಸ್ ಕಾಯಿಲೆ, ಹೈಪೊಗ್ಲಿಸಿಮಿಯಾ, ಮಧುಮೇಹ ಮತ್ತು ಗರ್ಭಧಾರಣೆಯಂತಹ ಕೆಲವು ಸಮಸ್ಯೆಗಳು ಸಹ ಹಸಿವನ್ನು ಹೆಚ್ಚಿಸಲು ಕಾರಣವಾಗಬಹುದು. ನೀವು ಆರೋಗ್ಯವಾಗಿರಲು ಪ್ರಯತ್ನಿಸುತ್ತಿರಲಿ, ತೂಕ ಇಳಿಸಿಕೊಳ್ಳಲು ಅಥವಾ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಬೇಕೆಂದಿದ್ದರೆ ನಿಮ್ಮ ಹಸಿವನ್ನು ಗಮನದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ.

ಅತಿಯಾಗಿ ತಿನ್ನುವುದು ಅಥವಾ ತಿನ್ನದೇ ಇರುವುದು ಈ ಎರಡರ ನಡುವೆ ಒಂದು ಅಂತರವಿದೆ. ಆರೋಗ್ಯಕರ ಹಸಿವು ಒಳ್ಳೆಯದೇ, ಅದರೆ ಪದೇ ಪದೇ ಹಸಿವಾದರೆ, ಹಸಿವಾದಾಕ್ಷಣ ಸೇವಿಸುವ ಅಭ್ಯಾಸ ತರವಲ್ಲ. ಕಡಿಮೆ ಆಹಾರ ಸೇವಿಸುವುದು ಒಂದು ರೀತಿ ಸಮಸ್ಯೆಯಾದರೆ, ಆತಿಯಾಗಿ ಸೇವಿಸುವುದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊತ್ತದೆ. ನೋಡಿದ್ದೆಲ್ಲಾ ತಿನ್ನುವ ಆಸೆ ಇರುವವರು ತಪ್ಪದೇ ಈ ಲೇಖನ ಓದಲೇಬೇಕು.

ಹಸಿವನ್ನು ನಿಗ್ರಹಿಸಲು ಅನೇಕ ತಂತ್ರಗಳಿವೆ. ನಿಮ್ಮ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡಲು ಕೆಲವು ಆಹಾರಗಳನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಈ ಲೇಖನದಲ್ಲಿ ಹಸಿವನ್ನು ತಡೆಯಲು ಸಾಧ್ಯವಾಗಿಸುವ ಆಹಾರಗಳು ಯಾವುವು, ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿಸಿದ್ದೇವೆ ನೋಡಿ:

1. ಓಟ್ ಮೀಲ್

1. ಓಟ್ ಮೀಲ್

ಒಂದು ಬಟ್ಟಲು ಓಟ್‌ಮೀಲ್‌ ನಿಮ್ಮ ಹಸಿವನ್ನು ಸಾಕಷ್ಟು ಸಮಯ ತಡೆಯುತ್ತದೆ. ಓಟ್‌ಮೀಲ್ ಫೈಬರ್ ಅಂಶವನ್ನು ಹೊಂದಿದೆ (ಕರಗಬಲ್ಲ ಮತ್ತು ಕರಗದ ಎರಡೂ) ಮತ್ತು ಇದು ದೇಹದಲ್ಲಿ ಕೊಲೆಸಿಸ್ಟೊಕಿನಿನ್ ಎನ್ನುವ ಹಸಿವನ್ನು ನಿಯಂತ್ರಿಸುವ ಹಾರ್ಮೋನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಜೊತೆಗೆ, ಓಟ್‌ಮೀಲ್ ನಿಧಾನವಾಗಿ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಆಗಿದ್ದು, ಕೊಬ್ಬನ್ನು ಕೊಲ್ಲುವ ಪ್ರಕ್ರಿಯೆಯನ್ನು ವೇಗಗೊಳಿಸುವಾಗ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಅನ್ನು ಗರಿಷ್ಠ ಮಟ್ಟದಲ್ಲಿಡಲು ಸಹಾಯ ಮಾಡುತ್ತದೆ.

2. ಆಪಲ್

2. ಆಪಲ್

ಆಪಲ್‌ ಕರಗಬಲ್ಲ ಫೈಬರ್-ಭರಿತ ಆಹಾರವಾಗಿದ್ದು, ಇದರ ಸೇವನೆಯಿಂದ ಶೀಘ್ರವೇ ಹೊಟ್ಟೆ ತುಂಬಿದಂಥ ಅನುಭವವಾಗುತ್ತದೆ ಮತ್ತು ಆಗಾಗ್ಗೆ ತಿನ್ನುವುದನ್ನು ಸಹ ತಡೆಯುತ್ತದೆ. ಸೇಬಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವಿದೆ, ಇದು ಹಸಿವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಜೊತೆಗೆ, ಸೇಬಿನಲ್ಲಿರುವ ಪೆಕ್ಟಿನ್ ಅಂಶ ತೂಕ ಇಳಿಕೆಗೆ ಸಹ ಸಹಾಯ ಮಾಡುತ್ತದೆ ಮತ್ತು ಹಸಿವನ್ನು ಹೆಚ್ಚಿಸುವ ರಕ್ತದಲ್ಲಿನ ಸಕ್ಕರೆ ಹೆಚ್ಚಳವನ್ನು ತಡೆಯುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ನೀವು ಯಾವುದೇ ವಿಧದ ಸೇಬುಗಳನ್ನು ತಿನ್ನಬಹುದು, ಆದರೆ ನೆನಪಿರಲಿ ಸೇಬನ್ನು ಸಿಪ್ಪೆಯ ಸಮೇತವೇ ತಿನ್ನಬೇಕು ಮತ್ತು ಸರಿಯಾಗಿ ಅಗಿಯಲು ಮರೆಯದಿರಿ. ಬೆಳಿಗ್ಗೆ ಅಥವಾ ಮಧ್ಯಾಹ್ನ ತಿಂಡಿ ಊಟದ ನಂತರ ಸೇಬನ್ನು ತಿಂದರೆ ಒಳ್ಳೆಯದು.

3. ಅಗಸೆಬೀಜಗಳು

3. ಅಗಸೆಬೀಜಗಳು

ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಅಗಸೆಬೀಜಗಳು ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರ. ಇದು ಹೆಚ್ಚು ಸಮಯದವರೆಗೆ ನಿಮಗೆ ಸಂತೃಪ್ತಿ ನೀಡುತ್ತದೆ. ಕಾರಣ ಇದು ಒಮೆಗಾ -6 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ ಮತ್ತು ಹಸಿವು-ನಿಗ್ರಹಿಸುವ ಹಾರ್ಮೋನ್ ಕೊಲೆಸಿಸ್ಟೊಕಿನಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಮೊಳಕೆ ಕಾಳುಗಳ ಜತೆ, ಮೊಸರು, ಸಲಾಡ್‌ಗಳ ಮೇಲೆ ಅಗಸೆಬೀಜವನ್ನು ಹಾಕಿಕೊಂಡು ಸೇವಿಸಬಹುದು. ಅತ್ತುತ್ತಮ ಫಲಿತಾಂಶಕ್ಕೆ ಬೆಳಗಿನ ಹೊತ್ತು ಹಾಲಿನ ಜತೆ ಅಗಸೆ ಬೀಜ ಅಥವಾ ಅಗಸೆ ಬೀಜದ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿದರೆ ಒಳ್ಳೆಯದು.

4. ಬೆಣ್ಣೆಹಣ್ಣು

4. ಬೆಣ್ಣೆಹಣ್ಣು

ಹಸಿವನ್ನು ನಿಗ್ರಹಿಸುವ ಮತ್ತು ಅತಿಯಾಗಿ ತಿನ್ನಬೇಕು ಎನ್ನುವ ಹಂಬಲವನ್ನು ಕಡಿಮೆ ಮಾಡುವಲ್ಲಿ ಬೆಣ್ಣೆಹಣ್ಣು (ಅವಕಾಡೊ) ಪವರ್‌ಫುಲ್‌. ಹೃದಯ-ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಕರಗಬಲ್ಲ ನಾರುಗಳಿಂದ ಸಮೃದ್ಧವಾಗಿರುವ ಬೆಣ್ಣೆಹಣ್ಣನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ, ಆವಕಾಡೊದಲ್ಲಿನ ಒಲೀಕ್ ಆಮ್ಲವು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಕಾರಿಯಾಗಿದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಬೆಣ್ಣೆಹಣ್ನಿನಲ್ಲಿ ಹೆಚ್ಚಿನ ಕ್ಯಾಲೊರಿ ಮತ್ತು ಕೊಬ್ಬು ಇರುವುದರಿಂದ ಮಿತವಾಗಿ ಸೇವಿಸಿ.

5. ಹಸಿರು ಚಹಾ

5. ಹಸಿರು ಚಹಾ

ತಣ್ಣನೆಯ ಅಥವಾ ಬಿಸಿಯಾದ ಹಸಿರು ಚಹಾ ಯಾವುದೇ ಆಗಿರಲಿ ಹಸಿವನ್ನು ನಿಗ್ರಹಿಸಲು ಉತ್ತಮ ಪಾನೀಯವಾಗಿದೆ. ಹಸಿರು ಚಹಾದಲ್ಲಿ ಇಜಿಸಿಜಿಯಂತಹ ಫೈಟೊನ್ಯೂಟ್ರಿಯೆಂಟ್‌ಗಳಿವೆ, ಇದು ಕೊಲೆಸಿಸ್ಟೊಕಿನಿನ್ ಎಂಬ ಹಾರ್ಮೋನ್ ಅನ್ನು ಹೆಚ್ಚಿಸುತ್ತದೆ, ಇದು ಹಸಿವೆ ಆಗದಂತೆ ತಡೆಯುತ್ತದೆ.

ಹಸಿರು ಚಹಾದಲ್ಲಿನ ಕ್ಯಾಟೆಚಿನ್‌ಗಳು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಹೆಚ್ಚಿನ ಇನ್ಸುಲಿನ್, ಕೊಬ್ಬಿನ ಸಂಗ್ರಹವನ್ನು ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹಸಿವಿನ ಆಸೆಯನ್ನು ಸ್ಥಿರಗೊಳಿಸುತ್ತದೆ.

ಇದಲ್ಲದೆ, ಹಸಿರು ಚಹಾವು ವಿಟಮಿನ್ ಸಿ, ಕ್ಯಾರೊಟಿನಾಯ್ಡ್‌ಗಳು, ಸತು, ಸೆಲೆನಿಯಮ್, ಕ್ರೋಮಿಯಂ ಮತ್ತು ಇತರ ಖನಿಜಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ.

6. ಬಾದಾಮಿ

6. ಬಾದಾಮಿ

ಬಾದಾಮಿ ಪಾಲಿಅನ್‌ಸಾಚುರೇಟೆಡ್ ಮತ್ತು ಮೊನೊಸಾಚುರೇಟೆಡ್‌ನಂತಹ ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿದೆ, ಇದು ತಿನ್ನು ಬಯಕೆಯನ್ನು ತಡೆಯುತ್ತದೆ. ಇದರಲ್ಲಿರುವ ಆರೋಗ್ಯಕರ ಕೊಬ್ಬು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಅಲ್ಲದೆ, ಬಾದಾಮಿ ಹಸಿವನ್ನು ಕಡಿಮೆ ಮಾಡುವ ನಾರಿನ ಉತ್ತಮ ಮೂಲವಾಗಿದೆ, ಇದು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ನೀವು ಬೇಗನೆ ಹಸಿವನ್ನು ಅನುಭವಿಸುವುದಿಲ್ಲ.

ತಿನ್ನುವ ಅತಿಯಾದ ಬಯಕೆ ಇರುವವರು ಪ್ರತಿದಿನ ನಾಲ್ಕು ಕಪ್ ಬಾದಾಮಿ ತಿನ್ನಬಹುದು. ಹುರಿದ ಅಥವಾ ನೆನೆಸಿದ ಬಾದಾಮಿ ಸೇವನೆ ಉತ್ತಮ ಆಯ್ಕೆ.

7. ಹಸಿರು ಎಲೆ ತರಕಾರಿಗಳು

7. ಹಸಿರು ಎಲೆ ತರಕಾರಿಗಳು

ಹಸಿರು ಎಲೆಗಳ ತರಕಾರಿಗಳಲ್ಲಿ ಫೈಬರ್ ಮತ್ತು ನೀರು ಅಧಿಕವಾಗಿರುತ್ತದೆ, ಇದು ನಿಮ್ಮ ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ. ಇನ್ನೂ ಮುಖ್ಯವಾಗಿ ಹಸಿರು ಎಲೆ ತರಕಾರಿಗಳು ನಿಮ್ಮ ಮೆದುಳಿಗೆ ಹಸಿವಿನ ಸಂಕೇತಗಳನ್ನು ಕಳಿಸುವುದನ್ನೇ ನಿದಾನಗೊಳಿಸುತ್ತದೆ. ಕಡಿಮೆ ಕ್ಯಾಲೋರಿಯ ಈ ತರಕಾರಿಗಳನ್ನು ಪ್ರತಿದಿನ ಸೇವಿಸಿದಾಗ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯಬಹುದು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

8. ಮೊಟ್ಟೆಗಳು

8. ಮೊಟ್ಟೆಗಳು

ಹಸಿವನ್ನು ನೀಗಿಸುವಲ್ಲಿ ಮೊಟ್ಟೆಗಳು ಸಹ ನಿಮಗೆ ಸಹಾಯ ಮಾಡುತ್ತವೆ. ಅವುಗಳಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್‌ನಿಂದ ದೇಹಕ್ಕ ನಿರಂತರ ಶಕ್ತಿಯನ್ನು ನೀಡುತ್ತದೆ.

ಬೆಳಗಿನ ಉಪಾಹಾರದ ಜತೆ ಮೊಟ್ಟೆ ತಿನ್ನುವುದರಿಂದ ಮಧ್ಯದ ಹಸಿವನ್ನು ದೂರವಾಗಿಸಬಹುದು. ಹಳದಿ ಲೋಳೆಗಳಿಗಿಂತ ಮೊಟ್ಟೆಯ ಬಿಳಿಭಾಗವನ್ನು ಹೆಚ್ಚು ತಿನ್ನಲು ಸೂಚಿಸಲಾಗುತ್ತದೆ ಏಕೆಂದರೆ ಅವು ಕ್ಯಾಲೊರಿಗಳು ಬಹಳ ಕಡಿಮೆ, ಕೊಲೆಸ್ಟ್ರಾಲ್ ಮುಕ್ತವಾಗಿರುತ್ತವೆ ಮತ್ತು ವಾಸ್ತವಿಕವಾಗಿ ಕೊಬ್ಬು ಮುಕ್ತವಾಗಿರುತ್ತವೆ. ಮೊಟ್ಟೆಯ ಹಳದಿ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ.

English summary

Top 10 Foods To Suppress Your Desire To Eat Food

Here we are discussing about Top 10 Foods To Suppress Your Desire To Eat Food. Having a healthy appetite is good, but an unnecessary increase in appetite can be problematic. Read more.
X
Desktop Bottom Promotion