For Quick Alerts
ALLOW NOTIFICATIONS  
For Daily Alerts

ಕೆಸುವಿನ ಗೆಡ್ಡೆಯಲ್ಲಿವೆ ಈ ಅದ್ಭುತ ಗುಣಗಳು

|

ಕೆಸುವಿನ ಗೆಡ್ಡೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ದಕ್ಷಿಣ ಭಾರತದಲ್ಲಿ ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಹಳ್ಳಿಗಳಲ್ಲಿ ಇದನ್ನು ಬೆಳೆಯುವುದಾದರೂ ನಗರದ ತರಕಾರಿ ಅಂಗಡಿಗಳಲ್ಲಿ ಇದು ಸಿಕ್ಕೇ ಸಿಗುತ್ತದೆ. ಹಳ್ಳಿಗಳಲ್ಲಿ ಬಹುತೇಕರ ಮನೆಗಳಲ್ಲಿ ಇರುವುದರಿಂದ ಇದರ ಬೆಲೆ ಅಷ್ಟಾಗಿ ಗೊತ್ತಿರುವುದಿಲ್ಲ, ಅದೇ ನಗರಗಳಲ್ಲಿ ಕೆಜಿಗೆ ಕೆಲವೊಮ್ಮೆ ರೂ. 100 ಇರುವುದರಿಂದ ದುಬಾರಿ ತರಕಾರಿಯೆಂದೇ ಹೇಳಬಹುದು.

ಇದರ ಸಿಪ್ಪೆ ಸುಲಿಯುವಾಗ ಕೆಲವೊಮ್ಮೆ ತುರಿಜೆ ಉಂಟಾಗುವುದು, ಆದರೆ ಬೇಯಿಸಿದ ಮೇಲೆ ಆಲೂಗಡ್ಡೆಯಂತೆ ಮೆತ್ತಗೆ ಇರುತ್ತದೆ. ಇದರಿಮದ ಸಾರು, ಗೊಜ್ಜು ಹೆಚ್ಚಾಗಿ ಮಾಡಲಾಗುವುದು. ಈ ಕೆಸುವಿನ ಗೆಡ್ಡೆ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ನಾವಿಲ್ಲಿ ಕೆಸುವಿನ ಗೆಡ್ಡೆಯಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳ ಬಗ್ಗೆ ತಿಳಿಸಲಿದ್ದೇವೆ:

ನಾರಿನಂಶ ಹಾಗೂ ಇತರ ಪೋಷಕಾಂಶಗಳು ಅಧಿಕವಿದೆ

ನಾರಿನಂಶ ಹಾಗೂ ಇತರ ಪೋಷಕಾಂಶಗಳು ಅಧಿಕವಿದೆ

ಬೇಯಿಸಿದ ಒಂದು ಕಪ್ ಕೆಸುವಿನ ಗಡ್ಡೆಯಲ್ಲಿ 187 ಕ್ಯಾಲೋರಿ, ಅಧಿಕ ಕಾರ್ಬ್ಸ್ ಹಾಗೂ ಒಂದು ಗ್ರಾಂಗಿಂತಲೂ ಕಡಿಮೆ ಪ್ರೊಟೀನ್ ಹಾಗೂ ಕೊಬ್ಬಿನಂಶವಿರುತ್ತದೆ.

ಇದರಲ್ಲಿ ಈ ಕೆಳಗಿನ ಪೋಷಕಾಂಶಗಳಿರುತ್ತದೆ

ನಾರಿನಂಶ 6.7ಗ್ರಾಂ

ದಿನದಲ್ಲಿ ಅವಶ್ಯವಿರುವ ಶೇ.30ರಷ್ಟು ಮ್ಯಾಂಗನೀಸ್

ವಿಟಮಿನ್ ಬಿ6

ವಿಟಮಿನ್ ಇ

ಪೊಟಾಷ್ಯಿಯಂ

ತಾಮ್ರ

ರಂಜಕ

ಮೆಗ್ನಿಷ್ಯಿಯಂ

ವಿಟಮಿನ್ ಸಿ

ವಿಟಮಿನ್‌ ಇ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕೆಸುವಿನ ಗೆಡ್ಡೆಯಲ್ಲಿ ಪಿಷ್ಠ ಅಂಶ ಅಧಿಕವಿದ್ದರೂ ಇದರಲ್ಲಿ ಎರಡು ಬಗೆಯ ಕಾರ್ಬೋಹೈಡ್ರೇಟ್ಸ್ ಇದ್ದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ನಾರಿನಂಶದ ಕಾರ್ಬೋಹೈಡ್ರೇಟ್ಸ್ ಜೀರ್ಣವಾಗುವುದಿಲ್ಲ, ಆದ್ದರಿಂದಾಗಿ ದೇಹ ಇದನ್ನು ಹೀರಿಕೊಳ್ಳುವುದಿಲ್ಲ, ಹಾಗಾಗಿ ರಕ್ತದಲ್ಲಿನ ಸಕ್ಕರೆಯಂಶದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ನಿಧಾನವಾಗಿಸುವುದರಿಂದ ಇತರ ಕಾರ್ಬ್ಸ್ ಅನ್ನು ದೇಹ ನಿಧಾನಕ್ಕೆ ಹೀರಿಕೊಳ್ಳುತ್ತದೆ, ಇದರಿಂದಾಗಿ ಇದನ್ನು ತಿಂದ ಬಳಿಕ ದೇಹದಲ್ಲಿ ಸಕ್ಕರೆಯಂಶ ತುಂಬಾ ಹೆಚ್ಚಾಗುವುದಿಲ್ಲ.

ಆದ್ದರಿಂದ ಕೆಸುವಿನ ಗೆಡ್ಡೆಯಿಂದ ಮಧುಮೇಹಿಗಳು ಕೂಡ ತಿನ್ನಬಹುದು ಎಂದು ಸಂಶೋಧನೆಗಳು ಹೇಳಿವೆ.

ಹೃದಯದ ಕಾಯಿಲೆಯ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ

ಹೃದಯದ ಕಾಯಿಲೆಯ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ

ಇದರಲ್ಲಿರುವ ನಾರಿನಂಶ ಹಾಗೂ ಪಿಷ್ಠದ ಅಂಶ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧಿಕ ನಾರಿನಂಶವಿರುವ ಆಹಾರವನ್ನು ತಿಂದಷ್ಟೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದು ಕಡಿಮೆ ಎಂದು ಸಂಶೋಧನೆಗಳು ಹೇಳಿವೆ.

ಒಂದು ಸಂಶೋಧನೆ ಪ್ರಕಾರ ದಿನದಲ್ಲಿ ಸೇವಿಸಬೇಕಾದ ನಾರಿನಂಶಕ್ಕಿಂತ 10ಗ್ರಾಂ ಅಧಿಕ ನಾರಿನಂಶದ ಆಹಾರ ತಿಂದರೆ ಹೃದಯ ಸಂಬಂಧಿ ಕಾಯಿಲೆ ಕಾಡುವುದು ಶೇ. 17ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಿದೆ.

1 ಕಪ್‌ನಷ್ಟು ಕೆಸುವಿನ ಗೆಡ್ಡೆ ಸೇವಿಸಿದರೆ 6ಗ್ರಾಂ ನಾರಿನಂಶ ದೊರೆಯುತ್ತದೆ ಅಂದರೆ ಆಲೂಗಡ್ಡೆಯಲ್ಲಿ ನಿರುವುದಕ್ಕಿಂತ ಎರಡು ಪಟ್ಟು ಅಧಿಕವಾಗಿದೆ. ಆದ್ದರಿಂದ ಇದು ಅತ್ಯುತ್ತಮವಾದ ನಾರಿನಂಶವಿರುವ ಆಹಾರವಾಗಿದೆ.

ಕ್ಯಾನ್ಸರ್ ಕಣಗಳ ವಿರುದ್ಧವೂ ಹೋರಾಡುತ್ತದೆ

ಕ್ಯಾನ್ಸರ್ ಕಣಗಳ ವಿರುದ್ಧವೂ ಹೋರಾಡುತ್ತದೆ

ಗೆಡ್ಡೆ ಬೆಳೆಯುವ ಗಿಡಗಳಲ್ಲಿ ಪಾಲಿಪೀನೋಲ್ಸ್ ಅಂಶವಿದ್ದು, ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಕ್ಯಾನ್ಸರ್ ತಡೆಗಟ್ಟುವ ಸಾಮಾರ್ಥ್ಯ ಹೊಂದಿದೆ. ಇದರಲ್ಲಿ ಈರುಳ್ಳಿ, ಸೇಬು ಇವುಗಳಲ್ಲಿ ಇರುವಂಥ quercetin ಎಂಬ ಪಾಲಿಫೀನೋಲ್ ಅಂಶವೂ ಇದೆ. ಈ ಅಂಶವು ದೇಹದಲ್ಲಿರುವ ಬೇಡದ ಕಶ್ಮಲ ಹಾಗೂ ರಾಸಾಯನಿಕಗಳನ್ನು ಹೊರಹಾಕುವುದರಿಂದ ಕ್ಯಾನ್ಸರ್ ಅಪಾಯ ಕಡಿಮೆ.

 ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ನಾರಿನಂಶ ಅಧಿಕವಿರುವ ತರಕಾರಿಗಳು ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಯಾರು ತೂಕ ಕಡಿಮೆಮಾಡಬೇಕೆಂದು ಬಯಸುತ್ತಾರೋ ಅವರು ತಮ್ಮ ಆಹಾರಕ್ರಮದಲ್ಲಿ ಅತ್ಯಧಿಕ ನಾರಿನಂಶವಿರುವ ಆಹಾರ ಸೇರಿಸಬೇಕು. ನಾರಿನಂಶವಿರುವ ಆಹಾರ ನಿಧಾನಕ್ಕೆ ಜೀರ್ಣವಾಗುವುದರಿಂದ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದ ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೋರಿ ಪ್ರಮಾಣವೂ ಕಡಿಮೆಯಾಗುತ್ತದೆ ಹೀಗಾಗಿ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಹೊಟ್ಟೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು

ಹೊಟ್ಟೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು

ಇದರಲ್ಲಿರುವ ಪಿಷ್ಠ ಅಂಶ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೆಸುವಿನ ಗೆಡ್ಡೆ ತಿಂದಾಗ ನಮ್ಮ ದೇಹದವು ಅದರಲ್ಲಿರುವ ನಾರಿನಂಶವನ್ನು ಜೀರ್ಣಿಸಿಕೊಳ್ಳುವುದಿಲ್ಲ, ಶದ್ದರಿಂದ ಅದು ನಮ್ಮ ಜಠರದಲ್ಲಿ ಉಳಿದು ನಂತರ ಕರುಳನ್ನು ತಲುಪಿ ಆರೋಗ್ಯಕರ ಬ್ಯಾಕ್ಟಿರಿಯಾ ಉತ್ಪತ್ತಿಗೆ ಸಹಕಾರಿಯಾಗಿದೆ. ಅಲ್ಲದೆ ಇದು ಕರುಳಿನ ಕ್ಯಾನ್ಸರ್ ಹಾಗೂ ಉರಿಯೂತ ತಪ್ಪಿಸುತ್ತದೆ.

English summary

Taro Root Or Kesuvina Gedde in Kannada health Benefits

Here are health benefits of taro root or kesuvina gedde in kannada rean on...
Story first published: Saturday, September 5, 2020, 13:17 [IST]
X
Desktop Bottom Promotion