For Quick Alerts
ALLOW NOTIFICATIONS  
For Daily Alerts

ಈ ಟೈಮ್‌ನಲ್ಲಿ ಊಟ ಮಾಡಿದರೆ ಮೈ ತೂಕ ಹೆಚ್ಚುವುದು

|

ನಾವು ಏನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಅದರ ಪ್ರಭಾವ ನಮ್ಮ ದೇಹದ ಮೇಲೆ ಬೀಳುವುದು ಎಂಬುವುದು ಎಲ್ಲರಿಗೆ ಗೊತ್ತಿರುವ ಅಂಶವೇ... ಆದರೆ ನಮ್ಮಲ್ಲಿ ಅನೇಕರಿಗೆ ತಿಳಿಯದೇ ಇರುವ ಅಂಶವೆಂದರೆ ನಾವು ತಿನ್ನುವ ಸಮಯಕ್ಕೂ ಹಾಗೂ ದೇಹದ ತೂಕಕ್ಕೆ ಸಂಬಂಧವಿದೆ ಎನ್ನುವುದು.

ಕೆಲವರು ಹೇಳುತ್ತಾರೆ ನಾನು ದಪ್ಪಗಾಗುತ್ತಿದ್ದೇನೆ ಆದ್ದರಿಂದ ಬೆಳಗ್ಗಿನ ಆಹಾರ ತಿನ್ನುತ್ತಿಲ್ಲ, ಇನ್ನು ಕೆಲವರು ರಾತ್ರಿ ಏನೂ ತಿನ್ನುವುದಿಲ್ಲ ಹಾಗೇ ಮಲಗುತ್ತೇನೆ ಎಂದು ಹೇಳುತ್ತಾರೆ. ಈ ರೀತಿ ಉಪವಾಸ ಇರುವುದರಿಂದ ದೇಹದ ತೂಕ ಕಡಿಮೆ ಮಾಡಬಹುದೇ? ಖಂಡಿತ ಇಲ್ಲ, ಒಂದು ಹೀಗೆ ಕೆಲವು ಹೊತ್ತು ಊಟ ಬಿಟ್ಟು ಇರುವುದರಿಂದ ತೆಳ್ಳಗಾದರು ಅದು ಶಾಶ್ವತವಲ್ಲ, ಏಕೆಂದರೆ ನಮಗೆ ತುಂಬಾ ಸಮಯದವರೆಗೆ ಉಪವಾಸ ಇರಲು ಸಾಧ್ಯವಿಲ್ಲ, ಒಂದು ವೇಳೆ ದೀರ್ಘಕಾಲ ಒಂದು ಅಥವಾ ಊಟವನ್ನು ಬಿಡುತ್ತಾ ಬಂದರೆ ಕಾಯಿಲೆ ಬೀಳುವಿರಿ.

ಆದ್ದರಿಂದ ಊಟವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುವುದು ಮುಖ್ಯವಾಗಿರುತ್ತದೆ. ಇಲ್ಲಿ ನಾವು ಯಾವ ಹೊತ್ತಿನಲ್ಲಿ ಊಟ ತಿನ್ನುವುದರಿಂದ ಮೈ ತೂಕ ಹೆಚ್ಚಾಗುತ್ತದೆ, ಇದರ ಕುರಿತು ಸಂಶೋಧನೆಗಳು ಏನು ಹೇಳಿವೆ ಎಂದು ಹೇಳಿದ್ದೇವೆ ನೋಡಿ:

ಸಂಜೆಯ ನಂತರ ಕ್ಯಾಲೋರಿ ಆಹಾರ ಗಮನದಲ್ಲಿರಲಿ

ಸಂಜೆಯ ನಂತರ ಕ್ಯಾಲೋರಿ ಆಹಾರ ಗಮನದಲ್ಲಿರಲಿ

ಬೆಳಗ್ಗೆಗಿಂತ ಸಂಜೆಯ ನಂತರ ಎಷ್ಟು ಕ್ಯಾಲೋರಿ ಆಹಾರ ಸೇವಿಸುತ್ತೇವೆ ಎನ್ನುವುದು ಗಮನಿಸಿದರೆ ಒಳ್ಳೆಯದು. ಏಕೆಂದರೆ ಕೆಲವರು ಬೆಳಗ್ಗೆ ಏನೂ ತಿನ್ನುವುದಿಲ್ಲ, ಇದರ ಪರಿಣಾಮ ಮಧ್ಯಾಹ್ನ ಹೊತ್ತಿಗೆ ತುಂಬಾ ಹಸಿವು ಉಂಟಾಗುವುದು, ಆಗ ನಮಗೆ ತಿಳಿಯದೆಯೇ ಅಧಿಕ ಪ್ರಮಾಣದ ಆಹಾರ ಸೇವಿಸುತ್ತೇವೆ. ಇದರಿಂದಾಗಿ ಅಧಿಕ ಕ್ಯಾಲೋರಿ ಹೊಟ್ಟೆಯನ್ನು ಸೇರುವುದು.

ಅಧ್ಯಯನ ವರದಿ

ಅಧ್ಯಯನ ವರದಿ

2020ರಲ್ಲಿ ಬೊಜ್ಜಿನ ಮೇಲೆ ಯುರೋಪಿಯನ್ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಿತು. ಇದರಲ್ಲಿ ನಡೆಸಿದ ಅಧ್ಯಯನ ವರದಿ ಪ್ರಕಾರ ಯಾರು ಮಧ್ಯಾಹ್ನದ ನಂತರ ಅಧಿಕ ಕ್ಯಾಲೋರಿ ಆಹಾರ ಅವರ ಮೈತೂಕ ಹೆಚ್ಚಾಗುವುದು ಎಂದು ಹೇಳಿದೆ. ಯುಕೆಯಲ್ಲಿ 2012-17ರವರೆಗೆ ನ್ಯಾಷನಲ್ ಡಯಟ್ ಅಂಡ್ ನ್ಯೂಟ್ರಿಷಿಯನ್ ಸರ್ವೇ ನಡೆಯಿತು. ಅದರಲ್ಲ ಭಾಗವಹಿಸಿದವರಲ್ಲಿ ಶೇ. 39.8 ಜನರ ಮೈ ತೂಕಕ್ಕೆ ಪ್ರಮುಖ ಕಾರಣ ಮಧ್ಯಾಹ್ನದ ಬಳಿಕ ಅಧಿಕ ಕ್ಯಾಲೋರಿಯ ಆಹಾರ ತೆಗೆದುಕೊಳ್ಳುವುದಾಗಿದೆ.

ಯಾವ ಆಹಾರ ಶೈಲಿ ತುಂಬಾನೇ ಕೆಟ್ಟದ್ದು

ಯಾವ ಆಹಾರ ಶೈಲಿ ತುಂಬಾನೇ ಕೆಟ್ಟದ್ದು

ಸಂಜೆ ಸ್ನ್ಯಾಕ್ಸ್ ಅಥವಾ ಡಿನ್ನರ್‌ಗೆ ತುಂಬಾ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನುಅಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಒಳ್ಳೆಯದು, ಆದರೆ ಡಿನ್ನರ್‌ಗೆ ಅಥವಾ ಸಂಜೆ ಸ್ನ್ಯಾಕ್ಸ್‌ಗೆ ಅಧಿಕ ಕ್ಯಾಲೋರಿ ಇರುವ ಆಹಾರ ತೆಗೆದುಕೊಳ್ಳುವುದು ಮೈ ತೂಕ ಹೆಚ್ಚುವುದು.

ಎಷ್ಟು ಹೊತ್ತಿಗೆ ಡಿನ್ನರ್ ಮುಗಿಸುವುದು ಒಳ್ಳೆಯದು?

ಎಷ್ಟು ಹೊತ್ತಿಗೆ ಡಿನ್ನರ್ ಮುಗಿಸುವುದು ಒಳ್ಳೆಯದು?

ಇನ್ನು ಮೈ ತೂಕ ಹೆಚ್ಚಾಗಬಾರದೆಂದು ನೀವು ಬಯಸುವುದಾದರೆ ರಾತ್ರಿ ನೀವು ಊಟ ಮಾಡುವ ಸಮಯವನ್ನು ಬದಲಾಯಿಸುವುದು ಒಳ್ಳೆಯದು. ಕೆಲವರು 10 ಗಂಟೆ, ಹನ್ನೊಂದು ಗಂಟೆಗೆ ಊಟ ಮಾಡುತ್ತಾರೆ, ಹೀಗೆ ತಡವಾಗಿ ಊಟ ಮಾಡುವುದರಿಂದ ಮೈ ತೂಕ ಹೆಚ್ಚಾಗುವುದು. ನೀವು ಮೈ ತೂಕ ಹೆಚ್ಚಾಗಬಾರದೆಂದು ಬಯಸುವುದಾದರೆ 7 ಗಂಟೆಯ ಒಳಗೆ ರಾತ್ರಿ ಊಟ (ಕಡಿಮೆ ಕ್ಯಾಲೋರಿಯ) ಮುಗಿಸಿ.

English summary

Study Finds Eating At This Time of the Day Cause Weight Gain

There is link between eating food time and weight gain, Study Finds Eating at this time cause weight gain, read on...
X
Desktop Bottom Promotion